ತಾಜಾ ಸುದ್ದಿ

ಉಡುಪಿ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಹೆಚ್ಚಳ: ಜನರಲ್ಲಿ ಆತಂಕ

ಉಡುಪಿ: ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿ ಮರೆಯುವ ನಾಗರಿಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಿವಿಲ್‌ ಬೈಲಾವನ್ನು ಉಡುಪಿ ನಗರಸಭೆಗೆ ಕರಡು ಪ್ರತಿ ತಯಾರಿಸಿ ಸಲ್ಲಿಸಲಾಗಿದೆ. ಇದನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಜೂನ್ 25ರವರೆಗೆ ಒಟ್ಟು 164 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಉಡುಪಿ- 102, ಕುಂದಾಪುರ- 35, ಕಾರ್ಕಳ- 25 ಪ್ರಕರಣಗಳು ಕಂಡುಬಂದಿವೆ. ಅದೇ …

Read More »

ಹಿಜಾಬ್ ಬ್ಯಾನ್ ಮಾಡಿದ ಮುಂಬೈ ಕಾಲೇಜಿನ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮುಂಬೈ: ಕಾಲೇಜು ಆವರಣದಲ್ಲಿ ಹಿಜಾಬ್‌ಗಳು, ಬುರ್ಖಾಗಳು ಮತ್ತು ನಖಾಬ್‌ಗಳನ್ನು ಧರಿಸುವುದನ್ನು ನಿಷೇಧಿಸಿರುವ ನಗರ ಶಿಕ್ಷಣ ಸಂಸ್ಥೆಯೊಂದರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಎನ್.ಜಿ.ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ಮತ್ತು ಮೂರನೇ ವರ್ಷಕ್ಕೆ ದಾಖಲಾಗಿರುವ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದಾರೆ. ಹೊಸ ಡ್ರೆಸ್ ಕೋಡ್ ನೀತಿಯು ತಮ್ಮ ಧರ್ಮ, ಗೌಪ್ಯತೆ ಮತ್ತು ಆಯ್ಕೆಯನ್ನು ಅಭ್ಯಾಸ ಮಾಡುವ ಮೂಲಭೂತ ಹಕ್ಕುಗಳನ್ನು …

Read More »

ಪ್ಯಾರಸಿಟಮಾಲ್ ಸೇರಿ 52 ಔಷಧಿಗಳ ಗುಣಮಟ್ಟ ಕಳಪೆ

ನವದೆಹಲಿ: ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಸಿಟಮಾಲ್, ಪ್ಯಾಂಟೊಪ್ರಜೋಲ್ ಮತ್ತು ಕೆಲವು ಆ್ಯಂಟಿಬಯೊಟಿಕ್ಸ್ ಸೇರಿದಂತೆ 52 ಔಷಧಿಗಳ ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಶೇಷನ್ (ಸಿಡಿಎಸ್ಸಿಒ) ಇತ್ತಿಚೇಗೆ ವರದಿಯನ್ನು ಬಿಡುಗಡೆ ಮಾಡಿದ್ದು, 52 ಔಷಧಿಗಳು ಪರೀಕ್ಷೆಯಲ್ಲಿ ನಿರೀಕ್ಷಿತ ಗುಣಮಟ್ಟ ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿದುಬಂದಿದೆ. ಸಿಡಿಎಸ್ಸಿಒ ಪ್ರಮುಖ ಔಷಧ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಔಷಧಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ. ಈ ಕಳಪೆ ಔಷಧಗಳ ಪೈಕಿ 22 ಔಷಧಗಳನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಹಿಮಾಚಲ ಪ್ರದೇಶವಲ್ಲದೆ, ಗುಜರಾತ್, ಆಂಧ್ರಪ್ರದೇಶ ಮತ್ತು ಇಂದೋರ್‌ನ ಜೈಪುರ, …

Read More »

ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ವಾಸುದೇವ ತಂತ್ರಿ ಅವರಿಗೆ ತೃತೀಯ ಸ್ಥಾನ

ಬೆಂಗಳೂರು: ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಉಡುಪಿ ಎಸ್.ಎಮ್ಎಸ್.ಪಿ.ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ದೇರೆಬೈಲು ವಾಸುದೇವ ತಂತ್ರಿ ಇವರಿಗೆ ದಿನಾಂಕ ೨೪-೦೬-೨೦೨೪ರಂದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಛಂದ್ ಗೆಹ್ಲೋಟವರು ಬೆಂಗಳೂರಿನ  ರಾಜಭವನದಲ್ಲಿ ಸನ್ಮಾನಿಸಿದರು. ಮಾರ್ಚ್ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ  ಶಾಸ್ತ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ  ರಾಜ್ಯವು ವಿಜಯವೈಜಯಂತಿ ಪುರಸ್ಕಾರವನ್ನು ಪಡೆದಿತ್ತು. ಕರ್ನಾಟಕದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುವ  ಶ್ರೀಮತಿ ಅಹಲ್ಯಾ ಶರ್ಮಾ ಇವರು ಉಪಸ್ಥಿತರಿದ್ದರು.

Read More »

ಮಂಗಳೂರು: ಮನೆಯ ಕಾಂಪೌಂಡ್ ಕುಸಿತ: ಒಂದೇ ಕುಟುಂಬದ ನಾಲ್ವರು ಮೃತ್ಯು

ಮಂಗಳೂರು:  ಮನೆಯ ಆವರಣದ ಕಾಂಪೌಂಡ್ ಕುಸಿದು ಮನೆಯ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದಲ್ಲಿ ನಡೆದಿದೆ. ಮೃತರನ್ನು ಯಾಸಿರ್ (45), ಅವರ ಪತ್ನಿ ಮರಿಯಮ್ಮ (40) ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ನೆರೆಮನೆಯ ಅಬೂಬಕ್ಕರ್ ಎಂಬವರ ಮನೆಯ ಕಾಂಪೌಂಡ್ ಬುಧವಾರ ಬೆಳಗ್ಗೆ ಏಕಾಏಕಿ ಕುಸಿದು ಯಾಸಿರ್ ಅವರ ಮನೆಯ ಗೋಡೆಯ ಮೇಲೆ ಬಿದ್ದಿದೆ. ಇದರಿಂದಾಗಿ ಯಾಸಿರ್ ಅವರ ಮನೆಯ ಗೋಡೆಯೂ ಕೂಡಾ …

Read More »

ಬೆಳ್ತಂಗಡಿ : ನೇಣು ಬಿಗಿದು ವಿದ್ಯಾ ಆತ್ಮಹತ್ಯೆ

ಬೆಳ್ತಂಗಡಿ : ಮಿತ್ತಬಾಗಿಲು ಗ್ರಾಮದ ಕುಕ್ಕಾವಿ ಸಮೀಪದ ಕೊಳಂಬೆ ಉಮೇಶ್ ಗೌಡರವರ ಪುತ್ರಿ ವಿದ್ಯಾ(22 ವರ್ಷ) ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ(25) ಸಂಜೆ ವರದಿಯಾಗಿದೆ. ಮನೆಯಲ್ಲಿಯೇ ಇರುತ್ತಿದ್ದ ಇವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Read More »

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ ಯುವಕನ ಶವ ಇಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ತುಮಕೂರು ಜಿಲ್ಲೆ ತಿಪಟೂರಿನ ಟಿ.ಆರ್‌. ಯೋಗೀಶ್‌ (23) ಎನ್ನಲಾಗಿದೆ. ಕಳೆದ ಬುಧವಾರ ಜೂನ್ 19 ರ ಸಂಜೆ 6.45ರ ಸುಮಾರಿಗೆ ಸಮುದ್ರಪಾಲಾಗಿದ್ದ. ಕೋಟೇಶ್ವರ ಸಮೀಪದ ದಾರಸ್‌ ಮನೆ ಸಮೀಪದ ಬೀಚ್‌ಗೆ ಯೋಗೀಶ್‌ ಹಾಗೂ ಸಂದೀಪ್‌ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್‌ ನೀರಿಗಿಳಿದಿದ್ದಾರೆ. ಅಲೆಯಬ್ಬರಕ್ಕೆ …

Read More »

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ನಂದಿನಿ ಹಾಲಿನ ದರ ಹೆಚ್ಚಳ..!

ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿತಟ್ಟಿದೆ. ಮೊನ್ನೆತಾನೇ ಪೆಟ್ರೋಲ್‌, ಡಿಸೇಲ್‌ ಮೇಲಿನ ಸೆಸ್‌ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಈಗ ಮತ್ತೆ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ. ಪ್ರತಿ ಲೀಟರ್‌ ಹಾಲಿನ ದರವನ್ನು 2.10 ರೂಗೆ ಹೆಚ್ಚಿಸಿ ಕೆಎಂಎಫ್‌ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿರುವ ರಾಜ್ಯದ ಜನತೆ ಮತ್ತೆಕಿಸೆಗೆ ಬಾರವಾಗುವುದರಲ್ಲಿ ಅನುಮಾನವಿಲ್ಲ. ದರ ವಿಚಾರವಾಗಿ ಆಗುತ್ತಿರುವ ನಷ್ಟದ ಬಗ್ಗೆ ಸಭೆಯಲ್ಲಿ ಒಕ್ಕೂಟಗಳು ತಮ್ಮ ಸಮಸ್ಯೆಯನ್ನು ಸಿಎಂ ಮುಂದೆ ಹೇಳಿಕೊಂಡಿದ್ದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು …

Read More »

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ : ಇಂದು ಸಂಜೆ ಆರೋಗ್ಯ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ |

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಸಂಜೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಇಲಾಕೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದು, ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಭೆ ಬಳಿಕ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ವರ್ಷ ಜೂನ್​ನಲ್ಲಿ​ ರಾಜ್ಯಾದ್ಯಂತ 4886 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ಜನರಿಗೆ ಡೆಂಗ್ಯೂ …

Read More »

ಶಶಿರಾಜ್ ಕಾವೂರು ಇವರಿಗೆ ಸಿಜಿಕೆ ರಂಗ ಪುರಸ್ಕಾರ-2024

ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿ ಜಿ ಕೆ ರಂಗಪುರಸ್ಕಾರ’ -2024 ಕ್ಕೆ ಮಂಗಳೂರು ಜಿಲ್ಲೆಯಿಂದ ನಾಟಕಕಾರ ನಿರ್ದೇಶಕ ಸಂಘಟಕ ಶಶಿರಾಜ್ ಕಾವೂರು ಆಯ್ಕೆಯಾಗಿರುತ್ತಾರೆ. ಇವರು ವೃತ್ತಿಯಲ್ಲಿ ನ್ಯಾಯವಾದಿ. ಪ್ರವೃತ್ತಿಯಲ್ಲಿ ನಾಟಕಕಾರ, ನಟ, ಸಂಘಟಕ ಮತ್ತು ಗೀತರಚನೆಕಾರ ಬರೆದ ನಾಟಕಗಳು- ಏಕಾದಶಾನನ, ಬರ್ಬರೀಕ, ನೆಮ್ಮದಿ ಅಪಾರ್ಟ್‌ಮೆಂಟ್ ಫ್ಲಾಟ್ ನಂಬರ್ 252, ಐಸಿಯು, ಸರದಾರನ ಸ್ವಗತ, ಸಂಪಿಗೆನಗರ ಪೋಲೀಸ್ ಸ್ಟೇಶನ್, ದಾಟ್ಸ್ ಆಲ್ ಯುವರ್ ಆನರ್, ಮಿನುಗೆಲೆ ಮಿನುಗೆಲೆ ನಕ್ಷತ್ರ, ವ್ಯೂಹ, ಮರಗಿಡಬಳ್ಳಿ, ಪರಶುರಾಮ, …

Read More »

You cannot copy content of this page.