ತಾಜಾ ಸುದ್ದಿ

ಉಡುಪಿ: ದರ್ಶನ ಸೇವೆಯ ಮೂಲಕ ದೈವದಲ್ಲಿ ಸಂಕಷ್ಟಕ್ಕೆ ಪರಿಹಾರ ಕೇಳಿದ ಪಾಕಿಸ್ತಾನ ಮೂಲದ ಕುಟುಂಬ..!

ಉಡುಪಿ: ಉಡುಪಿಯ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಪಾಕಿಸ್ತಾನ ಮೂಲದ ಕುಟುಂಬವೊಂದು ಇಂದು ಆಗಮಿಸಿ ಪೂಜೆ ಸಲ್ಲಿಸಿದೆ.ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ ವಲಸೆ ಬಂದಿದ್ದ ಕುಟುಂಬ ಇದಾಗಿದೆ.ಯೂಟ್ಯೂಬ್ ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಇಲ್ಲಿಗೆ ಆಗಮಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಕುಟುಂಬವು ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಆಗಮಿಸಿ ದೈವಕ್ಕೆ ಸೇವೆ ಸಲ್ಲಿಸಿತು.ಈ ಕುಟುಂಬದ ಸದಸ್ಯನೊಬ್ಬ ದೈಹಿಕ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಆದಿತ್ಯ ಸಿಂಘಾನಿಯಾ ಎಂಬ ಹೆಸರಿನ ಯುವಕ ಎಂಬಿಎ ಪದವೀಧರನಾಗಿದ್ದು ಕಾಯಿಲೆಯಿಂದಾಗಿ ಉದ್ಯೋಗ ಮಾಡುತ್ತಿಲ್ಲ.ಇದೇ ಕಾರಣಕ್ಕೆ …

Read More »

ʻಗೃಹಲಕ್ಷ್ಮಿʼ ಪಟ್ಟಿಯಿಂದ ಈ ಮಹಿಳೆಯರ ಹೆಸರು ಡಿಲೀಟ್‌ : ಇನ್ಮುಂದೆ ಸಿಗಲ್ಲ 2,000 ರೂ.!

ಬೆಂಗಳೂರು : ಅನರ್ಹ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಸಿಎಂ ಸಿದ್ದರಾಮಯ್ಯ ಬಿಗ್‌ ಶಾಕ್‌ ನೀಡಿದ್ದು, ಶೀಘ್ರವೇ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ನೀಡಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಂಡ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಸ್ಥಗಿತವಾಗಲಿದೆ ಎನ್ನಲಾಗಿದೆ.   ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಬಿದ್ದಿದ್ದು, ಕೆಲ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ. ಕಾರಣ ರಾಜ್ಯಾದ್ಯಂತ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ರಾಜ್ಯ ಸರ್ಕಾರ …

Read More »

ಕುಂದಾಪುರ: ಜಾಹೀರಾತು ಬ್ಯಾರಿಕೇಡ್ ತಂದ ಅವಾಂತರ – ನಿಯಂತ್ರಣ ತಪ್ಪಿ ಕಾರು ಪಲ್ಟಿ

ಕುಂದಾಪುರ: ಅತಿ ವೇಗದಿಂದ ಬಂದ‌ ಕಾರೊಂದು ಬ್ಯಾರಿಕೇಡ್ ಸಮೀಪ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಜಾಡಿ ಕ್ರಾಸ್ ಎದುರು ಧನಲಕ್ಷ್ಮಿ ಹಾರ್ಡವೇರ್ ಸಮೀಪ‌ ನಡೆದಿದೆ. ಘಟನೆಯಲ್ಲಿ ಹುಂಡೈ ಐ 10 ಕಾರು ನಾಲ್ಕು ಪಲ್ಟಿಯಾಗಿ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ 407 ಟ್ರಕ್‌ಗೆ ಗುದ್ದಿ, ಮೇಲ್ಮುಖವಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ವೇಗವಾಗಿ ಬಂದ ಕಾರು ಚಾಲಕನಿಗೆ ಅಲ್ಲಿ ಹಾಕಿದ ಬ್ಯಾರಿಕೇಡ್ ಕಂಡು ಹಠಾತ್ತನೆ ಬ್ರೇಕ್ …

Read More »

ಉಡುಪಿ: ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ಯುವತಿ ಶಫಿರಾ ಅರೆಸ್ಟ್..!

ಉಡುಪಿ: ಮಣಿಪಾಲದಲ್ಲಿ ಗ್ಯಾಂಗ್ ವಾರ್ ನಡಸಿ ಅರೆಸ್ಟ್ ಅಗಿರುವ ಕಾಪುವಿನ ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಮೂಲದ ಉಪ್ಪಿನಂಗಡಿಯ 21 ವರ್ಷದ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಉಪ್ಪಿನಂಗಡಿ ಮೂಲದ ಶಫೀರಾ (21) ಎಂದು ಗುರುತಿಸಲಾಗಿದೆ. ಬಂಧಿತೆಯು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಬಂಧಿತೆ ಶಫೀರಾ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. …

Read More »

ಕುಂದಾಪುರ: ಖಾಸಗಿ ಬಸ್ – ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು..!

ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕ್‌ನ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕುಂದಾಪುರದ ಪುರಸಭೆಯ ಪೌರ ಕಾರ್ಮಿಕ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದುರ್ಗಾಂಬ ಬಸ್ ಡಿಪೋ ಎದುರುಗಡೆ ನಡೆದಿದೆ. ಬಾರ್ಕೂರಿನ ಬಂಡಿ ಮಠ ನಿವಾಸಿ ಶಂಕರ ಹಾಗೂ ಬೀಚು ಎಂಬುವರ ಪುತ್ರ ಸುಂದರ್ (39) ಮೃತ ಕುಂದಾಪುರದ ಪೌರಕಾರ್ಮಿಕ ಎಂದು ಗುರುತಿಸಲಾಗಿದೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕುಂದಾಪುರದ ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸುಂದರ್, ಗುರುವಾರ ಸಂಜೆ ತನ್ನ ಮನೆಯಾದ ಬಂಡಿಮಠದಿಂದ ಬೈಕ್‌ನಲ್ಲಿ ಕುಂದಾಪುರಕ್ಕೆ …

Read More »

ಸುಳ್ಯ: ಕುಡುಕರನ್ನು ಓಡಿಸಲು‌ ತಾವೇ ಕುಡಿದು ಬಂದ ಹೊಯ್ಸಳ ಪೊಲೀಸರು..! ವಿಡಿಯೋ ವೈರಲ್

ಸುಳ್ಯ: ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ಅಲ್ಲಿಂದ ಓಡಿಸಲು ಬಂದ ಪೊಲೀಸರೇ ಕುಡಿದು ಬಂದಿದ್ದರೆಂದು ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರನ್ನೇ ಪ್ರಶ್ನಿಸಿದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುತ್ತಿದೆ. ಬುಧವಾರ ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಕುಡಿದು ಮಲಗಿದ್ದವರಿಂದ ತೊಂದರೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ದೂರು ಹೇಳಿದ್ದರು. ಬಸ್ ನಿಲ್ದಾಣದಲ್ಲಿದ್ದ ಆ ಕುಡುಕರು ಅಲ್ಲಿ ಬಾಟಲಿ ಒಡೆದು ಬಾಟಲಿ ಚೂರುಗಳನ್ನು ಚೆಲ್ಲಿದ್ದರಿಂದ ಸಾರ್ವಜನಿಕರಿಗೆ …

Read More »

ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ನಟಿ ಅಪರ್ಣಾ ಅವರು ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ, ಇತ್ತೀಚೆಗೆ ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದರು. ಹೀಗಾಗಿ ಹಲವು ದಿನಗಳ ವಿಶ್ರಾಂತಿ ಪಡೆದಿದ್ದರು. ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.  ಕಿರುತೆರೆಯಲ್ಲಿ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಅಪರ್ಣಾ ನಟಿಸಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್​ನಲ್ಲಿ ಅವರು ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ …

Read More »

ಮಣಿಪಾಲ: ಹಫ್ತಾ ನೀಡುವಂತೆ ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ – ದೂರು ದಾಖಲು

ಮಣಿಪಾಲ: ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಉದ್ಯಾವರ ಕಂಪನ್‌ಬೆಟ್ಟು ನಿವಾಸಿ ಮೊಹಮ್ಮದ್‌ ಪರ್ವೇಜ್‌ ಉಮರ್‌ (25)ಗೆ ಪರಿಚಯದ ಪೈಝಲ್‌ ಕರೆ ಮಾಡಿ ನಿನ್ನ ಬಳಿ ಮಾತನಾಡಲು ಇದೆ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಪೈಝಲ್‌ ಜತೆಗೆ ದಾವುದ್‌ ಇಬ್ರಾಹಿಂ, ಇಸಾಕ್‌ ಮೂವರು ಜತೆಗೆ ಸೇರಿ ಪರ್ವೇಜ್‌ ಉಮರ್‌ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದಿದ್ದಾರೆ. ಅನಂತರ ಪರ್ವೇಜ್‌ ಉಮರ್‌ಗೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು …

Read More »

ಇದು ರಾಜ್ಯವೇ ಖುಷಿಪಡುವ ಸುದ್ದಿ: ನಿರೂಪಕಿ ದಿವ್ಯ ವಸಂತ ಅರೆಸ್ಟ್‌..!

ಬೆಂಗಳೂರು: ಇದು ರಾಜ್ಯವೇ ಖುಷಿಪಡುವ ಸುದ್ದಿ ಎಂದು ಖ್ಯಾತಿ ಪಡೆ ಖಾಸಗಿ ವಾಹಿನಿಯ ನಿರೂಪಕಿ ದಿವ್ಯ ವಸಂತ ವಂಚನೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ದಿವ್ಯ ವಸಂತ ಮತ್ತು ಗ್ಯಾಂಗ್‌ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಚೆದರಿಕೆ ಹಾಕಿ ಹಣ ಸುಲಿಗೆ ಯತ್ನ ಪ್ರಕರಣ ಇದಾಗಿದ್ದು, ಈ ಕೇಸ್‌ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ ದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸದ್ಯ ಕೇರಳದಿಂದ ಬಂಧಿಸಿ ಕರೆತಂದಿರುವ ಜೀವನ್‌ ಭೀಮಾನಗರ ಪೊಲೀಸರು …

Read More »

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ ; ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು..!

ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬ ಸುದ್ದಿ ಹಾಗೂ ವದಂತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರು ರೇಷನ್ ಕಾರ್ಡ್ ನೋಂದಣಿ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ. ಆಹಾರ ಇಲಾಖೆ ಸ್ಪಷ್ಟನೆ ಆಹಾರ ಇಲಾಖೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭಿಸಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರು ಗ್ರಾಮ್ ಒನ್ ಕೇಂದ್ರ, ನೋಂದಣಿ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ. ಇದಕ್ಕೆ ಆಹಾರ ಇಲಾಖೆ ಸ್ಪಷ್ಟನೆ ನೀಡಿದ್ದು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ …

Read More »

You cannot copy content of this page.