ತಾಜಾ ಸುದ್ದಿ

15 ವರ್ಷ ಹಳೆಯದಾದ ವಾಹನಗಳಿಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ..!

15 ವರ್ಷ ಹಳೆಯದಾದ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ವಾಹನಗಳನ್ನು ಗುಜರಿಗೆ ಹಾಕಲಿದ್ದು, ಬದಲಾಗಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಶೇಕಡಾ 10 ರಿಂದ 12 ರಷ್ಟು ಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿರುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಈ ಯೋಜನೆಯ ಕಡತಕ್ಕೆ ಗುರವಾರದಂದು ಸಹಿ ಹಾಕಿದ್ದಾರೆ. ರಾಜ್ಯಗಳಿಗೂ ಈ ಯೋಜನೆಯ ಮಾಹಿತಿಯನ್ನು ಕಳುಹಿಸಿಕೊಡಲಾಗಿದ್ದು, ಇದನ್ನು ತಮ್ಮ ತಮ್ಮ …

Read More »

‘ಕಾಂಗ್ರೆಸ್ ನಾಯಕ’ನ ‘ಬರ್ತಡೇ ಪಾರ್ಟಿ’ಯಲ್ಲಿ ‘ನಂಗನಾಚ್’: ಅರೆಬೆತ್ತಲೆ ಕುಣಿತ, ನೋಟುಗಳ ಸುರಿಮಳೆ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ತವರು ಜಿಲ್ಲೆಯಲ್ಲಿ, ರಾಜಕೀಯ ಪ್ರತಿಷ್ಠೆಗಾಗಿ ಕೈ ನಾಯಕನೊಬ್ಬ ಹುಟ್ಟು ಹಬ್ಬ ಆಚರಿಸಿಕೊಂಡಿರೋದು ಮಾತ್ರ ನಂಗನಾಚ್ ಡ್ಯಾನ್ಸ್ ಮೂಲಕವಾಗಿದೆ. ಈಗ ವೀಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕನ  ಇಂತಹ ಬರ್ತಡೇ ಪಾರ್ಟಿ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.   ರಾಮನಗರ ನಗರಸಭೆಯ 19ನೇ ವಾರ್ಡ್ ನ ಸದಸ್ಯ ದೌಲತ್ ಷರೀಫ್ ಎಂಬುವರೇ ಹೀಗೆ ತಮ್ಮ ಬರ್ತಡೇ ಪಾರ್ಟಿಯನ್ನು ಯುವತಿಯ ಅರೆಬೆತ್ತಲೆ ಕುಣಿತದೊಂದಿಗೆ ನಂಗನಾಚ್ ಮೂಲಕ ಆಚರಿಸಿಕೊಂಡಿರುವವರು ಆಗಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ನಗರದ …

Read More »

BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ

ಪುಣೆ: ಹಿರಿಯ ನಟ ವಿಕ್ರಮ್ ಗೋಖಲೆ ( Veteran actor Vikram Gokhale ) ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಮರಾಠಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟ ವಿಕ್ರಮ್ ಗೋಖಲೆ ನಟಿಸಿದ್ದರು. ಈ ಕುರಿತಂತೆ ಅವರ ಸ್ನೇಹಿತರು ಮಾಹಿತಿ ನೀಡಿದ್ದು, ಹಿರಿಯ ನಟ ವಿಕ್ರಮ್ ಗೋಖಲೆ ಅವರು, ಇಂದು ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ನಟ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು. ಇಂತಹ ಅವರು ಇದೀಗ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆಯ

Read More »

ಮಂಗಳೂರು: ಧಗಧಗನೆ ಹೊತ್ತಿ ಉರಿದ ಪಾರ್ಕಿಂಗ್ ಮಾಡಿದ್ದ ಕಾರು

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರೊಂದು ಬೆಂಕಿಗಾಹುತಿಯಾಧ ಘಟನೆ ಮಂಗಳೂರು ಜ್ಯೋತಿ ಜ್ಯೂಸ್‌ ಜಂಕ್ಷನ್‌ ಮುಂಭಾಗದಲ್ಲಿ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಫೋರ್ಡ್‌ ಕಂಪೆನಿಯ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಬಹುತೇಕ ಸುಟ್ಟು ಹೋಗಿದೆ. ಕಾರಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಬೆಂಕಿ ಹಿಡಿದ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ನೀರು ಹಾಕಿ ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿ ದಟ್ಟವಾದ ಹೊಗೆ ಕೂಡಾ ಆವರಿಸಿದ್ದು, ಆತಂಕದ ವಾತಾವರಣ ಉಂಟಾಗಿತ್ತು. ಟ್ರಾಫಿಕ್‌ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭ ರಸ್ತೆ …

Read More »

BIGG NEWS : ಕಣ್ಣು ತೆರೆದು ಪವಾಡ ಸೃಷ್ಟಿಸಿದ ‘ಶಿವಲಿಂಗ’ : ‘ವಿಸ್ಮಯ’ ನೋಡಲು ಮುಗಿಬಿದ್ದ ಭಕ್ತರು..!

ಬೆಂಗಳೂರು : ದೇವರು ಕಣ್ಣು ಬಿಡುವುದು, ದೇವರು ಪ್ರತ್ಯಕ್ಷವಾಗಿ ಭಕ್ತರ ಕಣ್ಣಿಗೆ ಕಾಣಿಸಿಕೊಳ್ಳುವುದು..ಇವನ್ನೆಲ್ಲಾ ಸಿನಿಮಾದಲ್ಲಿ ನಾವು ನೋಡುತ್ತಿರುತ್ತೇವೆ, ಆದರೆ ಪವಾಡ ಎಂಬಂತೆ ಶಿವಲಿಂಗ ಕಣ್ಣು ಬಿಟ್ಟು ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಸುದ್ದಿ ರಾಮನಗರದಲ್ಲಿ ಹರಡಿದೆ. ಹೌದು, ರಾಮನಗರ ಜಿಲ್ಲೆಯ ಮಾಗಡಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪವಿರುವ ಪುರಾತನ ಕಾಲದ ಉಮಾಮಹೇಶ್ವರಿ ದೇಗುಲದಲ್ಲಿ ಇಂತಹದ್ದೊಂದು ಪವಾಡ ನಡೆದಿದೆ. ಸಂಜೆ ವೇಳೆಗೆ ಪೂಜೆ ಸಮಯದಲ್ಲಿ ಶಿವಲಿಂಗದ ಮೇಲ್ಬಾಗದಲ್ಲಿ ಕಣ್ಣುಗಳ ಆಕಾರ ಕಾಣಿಸಿಕೊಂಡು , ಸ್ವಲ್ಪ ಸಮಯದ ನಂತರ ಕಣ್ಣು ಮುಚ್ಚಿದೆ ಎನ್ನಲಾಗಿದೆ. ಇನ್ನೂ …

Read More »

ದೇವರಿಗೆ ಪ್ರಸಾದ ತಯಾರಿಸಲು ಹೋದಾಗ ಅಗ್ನಿ ಅವಘಡ; ಗಂಭೀರ ಗಾಯಗೊಂಡ ಅರ್ಚಕ ಸಾವು

ಬೆಂಗಳೂರು: ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡ ಸಂಭವಿಸಿ ಅರ್ಚಕ‌ರೊಬ್ಬರು ಮೃತಪಟ್ಟಿದ್ದಾರೆ. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾಗಿದ್ದ ನಾಗಯ್ಯ ಸಿ. (61) ಮೃತರು. ನವೆಂಬರ್‌ 18 ರಂದು ಎಂದಿನಂತೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ನಾಗಯ್ಯ ಅವರು, ದೇವಸ್ಥಾನದ ಹಿಂಭಾಗದ ಕೋಣೆಯಲ್ಲಿ ಪ್ರಸಾದ ಮಾಡಲು ಹೋಗಿದ್ದರು. ಈ ವೇಳೆ ಗ್ಯಾಸ್ ಆನ್ ಮಾಡಿ ಲೈಟರ್ ಹುಡುಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಟ್ಟಡದ ಮೇಲ್ಭಾಗದ ರೂಂನಲ್ಲಿದ್ದ ಬೆಂಕಿಪೊಟ್ಟಣ ತೆಗೆದುಕೊಂಡು ಬರಲು ಹೋಗಿದ್ದಾರೆ. ಗ್ಯಾಸ್‌ ಸ್ಟೌ ಆನ್‌ ಮಾಡಿರುವುದನ್ನು ಮರೆತು ಹೋಗಿದ್ದು, ಅಷ್ಟರಲ್ಲಿ ಗ್ಯಾಸ್ ಲೀಕ್ ಆಗಿದೆ. …

Read More »

ಅತಿದೊಡ್ಡ ಮೂತ್ರಕೋಶದ ಕಲ್ಲು ಹೊರ ತೆಗೆದ ಮಣಿಪಾಲ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞರ ತಂಡ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಯಶಸ್ವಿಯಾಗಿ ತೆಗೆದುಹಾಕಿದೆ. 60 ವರ್ಷ ವಯಸ್ಸಿನ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರ ದೂರುಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ರೋಗಲಕ್ಷಣಗಳ ಪ್ರತಿ ಭೇಟಿಯಲ್ಲಿ ಮೂತ್ರನಾಳದ ಸೋಂಕಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗೆ ಸರಳ ಸಿ ಟಿ ಸ್ಕ್ಯಾನ್ ಮಾಡಲಾಯಿತು, ಇದು ಸಂಪೂರ್ಣ ಮೂತ್ರಕೋಶವನ್ನು ಆಕ್ರಮಿಸಿಕೊಂಡಿರುವ ಗಮನಾರ್ಹವಾದ ವಸ್ತು ಇರುವುದನ್ನು ಬಹಿರಂಗಪಡಿಸಿತು. ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು …

Read More »

ಪುತ್ತೂರು: ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ..!

ಪುತ್ತೂರು: ಮಹಿಳೆಯೋರ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬ್ರದಲ್ಲಿ ನಡೆದಿದೆ. ನಬೀಸ ಎಂಬವರು ನ.25 ರಂದು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ನ.26ರಂದು ಬೆಳಿಗ್ಗೆ ಮನೆಯ ಮುಂಭಾಗದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಬೀಸ ಅವರೇ ಬೆಂಕಿ ಹಚ್ಚಿಕೊಂಡರೆ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತೇ ಎಂಬ ವಿಚಾರ ತನಿಖೆ ನಂತರವಷ್ಟೇ ತಿಳಿಯಬೇಕಿದೆ. ನಬೀಸ ಅವರು ಅಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಮೃತರು ಪತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Read More »

ಉಡುಪಿ: ಮುದ್ರಾ ಲೋನ್ ಹೆಸರಿನಲ್ಲಿ 2 ಲಕ್ಷ ರೂ. ವಂಚನೆ

ಉಡುಪಿ : ಮುದ್ರಾ ಲೋನ್ ಹೆಸರಿನಲ್ಲಿ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಜಿಲ್ಲೆಯ ನಿವಾಸಿ ಸತೀಶ್ ಜೈನ್ ಅವರಿಗೆ ಅಪರಿಚಿತನೋರ್ವ ಮುದ್ರಾ ಲೋನ್ ಸಂಸ್ಥೆಯ ಮ್ಯಾನೇಜರ್ ಎಂದು ಕರೆ ಮಾಡಿ ಮುದ್ರಾ ಲೋನ್ ನೀಡುವುದಾಗಿ ತಿಳಿಸಿದ್ದ. ಲೋನ್ ಗೆ ಸಂಬಂಧಿಸಿ ದಾಖಲೆಗಳನ್ನು ಪಡೆದು, ನೋಂದಣಿ ಶುಲ್ಕ 3,200 ರೂ. ಜಮೆ ಮಾಡುವಂತೆ ತಿಳಿಸಿದ್ದ. ಶುಲ್ಕ ಪಾವತಿಸಿದ ಅನಂತರ ಪ್ರೊಸೆಸ್ ಚಾರ್ಜ್, ಇನ್ಸುರೆನ್ಸ್, ಚಾರ್ಜ್, ಎನ್‌ಒಸಿ, ಆರ್‌ಬಿಐ ಟ್ಯಾಕ್ಸ್ ಎಂದು ನಂಬಿಸಿ ಹಣ ಕಟ್ಟುವಂತೆ ತಿಳಿಸಿದ್ದ. ಸತೀಶ್ ಜೈನ್ …

Read More »

ಪಡುಬಿದ್ರಿ: ರುಂಡ ಕತ್ತರಿಸಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

 ಪಡುಬಿದ್ರಿ: ಪಡುಬಿದ್ರಿ ಪಾದೆಬೆಟ್ಟುವಿನ ರೈಲ್ವೆ ಬ್ರಿಡ್ಜ್ ಬಳಿಯ ರೈಲ್ವೆ ಹಳಿಯಲ್ಲಿ ಯುವಕನ ಶವವೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಪಕ್ಕದ ಕಲೋನಿಯ ನಿವಾಸಿ ಸುರೇಶ್ (33) ಮೃತ ಪಟ್ಟ ಯುವಕ. ಇದು ಆಕಸ್ಮಿಕವೊ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯ ಬೇಕಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

You cannot copy content of this page.