ತಾಜಾ ಸುದ್ದಿ

ಕಟಪಾಡಿ: ಟಿಪ್ಪರ್ ಡಿಕ್ಕಿ- ದ್ವಿಚಕ್ರ ಸಹಸವಾರ ಸಾವು

ಕಾಪು: ತಾಲೂಕಿನ ಕಟಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ಬಳಿ ಟಿಪ್ಪರ್ ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಸಂಭವಿಸಿದೆ. ಉದ್ಯಾವರ ಬೊಳ್ಳೆಯ ಸುಶಿಕ್ಷಿತ್(20) ಮೃತ ಯುವಕನಾಗಿದ್ದಾನೆ. ಅಪಘಾತದಿಂದ ಗಾಯಗೊಂಡಿರುವ ಬೈಕ್ ಸವಾರ ಜಯದೀಪ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಉದ್ಯಾವರದಿಂದ ಪಡುಬಿದ್ರೆ ಕಡೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುಶಿಕ್ಷಿತ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು …

Read More »

ಉಡುಪಿ: ಡಾಕ್ಟರ್ ಎಂದು ನಂಬಿಸಿ ಪ್ರೀತಿ ನಾಟಕ- ಮಹಿಳೆಗೆ 6.9 ಲಕ್ಷ ರೂ. ವಂಚನೆ

ಉಡುಪಿ: ಡಾಕ್ಟರ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಮಹಿಳೆಯೊಬ್ಬರಿಗೆ ವಂಚಕರು 6,91,000 ರೂ. ವಂಚಿಸಿದ ಘಟನೆ ನಡೆದಿದೆ. ಕಳೆದ ಸೆಪ್ಟಂಬರ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ತಾನು ಸ್ಕಾಟ್ಲೆಂಡ್‌ನಲ್ಲಿ ಡಾಕ್ಟರ್‌ ಎಂಬುದಾಗಿ ಬಿಂಬಿಸಿದ್ದ. ಆನಂತರ ಮಹಿಳೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ಚಾಟಿಂಗ್ ನಡೆಸಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ನವೆಂಬರ್ ಮೊದಲ ವಾರದಲ್ಲಿ ಕೊರಿಯರ್ ಮೂಲಕ ಪಾರ್ಸೆಲ್ ಗಿಫ್ಟ್ ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ ವ್ಯಕ್ತಿ, ಬಳಿಕ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಪೌಂಡ್ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ …

Read More »

ಹೃದಯ ವಿದ್ರಾವಕ ಘಟನೆ; ಶಾಲೆಯಲ್ಲಿಯೇ ಕುಸಿದು ಬಿದ್ದ ಬಾಲಕ- 6ನೇ ತರಗತಿ ವಿದ್ಯಾರ್ಥಿ ಮೃತ್ಯು

ಹುಬ್ಬಳ್ಳಿ: 6ನೇ ತರಗತಿಯ ಬಾಲಕನೊಬ್ಬ ಶಾಲೆಯಲ್ಲಿಯೇ  ಕುಸಿದುಬಿದ್ದಿದ್ದು, ಹೃದಯಾಘಾದಿಂದ ಸಾವನ್ನಪ್ಪಿರುವ ಘಟನೆ ಧಾರವಾಡ  ಜಿಲ್ಲೆಯ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕಲಘಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ  ಮಕ್ತುಮ್ ಮಹ್ಮದ್ ರಫಿ ಮನಿಯಾರ್ (13) ಮೃತ ಬಾಲಕನಾಗಿದ್ದು, ಆತ ಕೆಲ ವರ್ಷಗಳಿಂದಲೇ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಶಾಲೆಯಲ್ಲಿ ಬಾಲಕ ಕುಸಿದುಬಿದ್ದ ತಕ್ಷಣವೇ ಆತನನ್ನು ಶಿಕ್ಷಕರು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Read More »

ಗಂಗೊಳ್ಳಿ: ನದಿಗೆ ಬಿದ್ದ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರು ಬಳಿ ಬೋಟಿನಿಂದ ಬೋಟಿನಿಂದ ಮೀನು ಖಾಲಿ ಮಾಡುವಾಗ ಅಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಒರಿಸ್ಸಾ ಮೂಲದ ಪ್ರಮೋದ ಮಿನ್ಜ್(32) ಎಂದು ಗುರುತಿಸ ಲಾಗಿದೆ. ಇವರು ಗಂಗೊಳ್ಳಿ ಮೂಲದ ಪ್ರಭಾಕರ ಖಾರ್ವಿ ಎಂಬವರ ಶ್ರೀ ಯಕ್ಷೇಶ್ವರಿ ಎಂಬ ಬೋಟಿನಲ್ಲಿ ಇತರ ಮೀನುಗಾರರೊಂದಿಗೆ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ನ.30ರಂದು ಗಂಗೊಳ್ಳಿ ಬಂದರು ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ ರಾತ್ರಿ 9.30ಕ್ಕೆ ಬೋಟಿನಿಂದ ಮೀನು ಖಾಲಿ ಮಾಡುತ್ತಿರುವಾಗ …

Read More »

ಸುಬ್ರಹ್ಮಣ್ಯ ಷಷ್ಟಿ ಮಹೋತ್ಸದಲ್ಲಿ ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನಿಗೆ ಸುಬ್ರಹ್ಮಣ್ಯ ಪೋಲಿಸ್ ಸಿಬ್ಬಂದಿಯಿಂದ ಹಲ್ಲೆ

ಕಡಬ : ಸುಬ್ರಹ್ಮಣ್ಯ ಷಷ್ಠಿ ಮಹೋತ್ಸದಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ ನೀಡುವಂತೆ ಒತ್ತಾಯಿಸಿ ಪೋಲಿಸ್ ವಸತಿ ಗೃಹದಲ್ಲಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಯೂಸ್ ಐಸ್ ಕ್ರೀಂ ವ್ಯಾಪಾರಿ ಕುಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಆರೋಪ ಮಾಡುತ್ತಿದ್ದಾನೆ. ಪಂಚಮಿಯ ರಾತ್ರಿ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ಹಣಕ್ಕಾಗಿ ಒತ್ತಾಯಿಸಿದರು. ನಾನು ಒಂದು ಸಾವಿರ ರೂಪಾಯಿ ನೀಡಿದೆ. ಐದು ಸಾವಿರ ರೂಪಾಯಿ ನೀಡುವಂತೆ ಹೇಳಿದರು. ನಾನು ನೀಡದಿದ್ದಾಗ …

Read More »

ಕಾರ್ಕಳ: ವಿದೇಶದಿಂದ ಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತ್ಯು

ಕಾರ್ಕಳ: ವಿದೇಶದಿಂದ ಬಂದಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪಿದ ಘಟನೆ ನಡೆಸಿದೆ.ರಿತೇಶ್ ನೀಲ್ ಮೊಂತೆರೋ(35) ಮೃತಪಟ್ಟ ಯುವಕ. ರಿತೇಶ್ ದುಬೈನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತೀಚೆಗೆ ಊರಿಗೆ ಬಂದಿದ್ದರು. ಕೆಲ ದಿನಗಳ ಹಿಂದೆ ಮೂಡುಬಿದಿರೆಯಲ್ಲಿ ನಾದಿನಿಯ ಮನೆಯ ಅಂಗಳದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಬಳಿಕ‌ ಚಿಕಿತ್ಸೆ ಪಡೆದು ಬೆಳ್ಮನ್ ನ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ದಿನಾಂಕ ನ.30ರಂದು ಊಟ ಮಾಡಿ ಮಲಗಿದವರು ಬೆಳ್ಳಿಗ್ಗೆ ಎಬ್ಬಿಸಿದಾಗ ಅವರು ಮಾತನಾಡದೇ ಇದ್ದುದರಿಂದ ಅವರನ್ನು ಉಪಚರಿಸಿ ಬೆಳ್ಮಣನಿನ ವೈದ್ಯರನ್ನು ಮನೆಗೆ ಕರೆಸಿ ತೋರಿಸಿದಾಗ ರಿತೇಶ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ …

Read More »

BREAKING NEWS : ಮಾಜಿ ಸಿಎಂ ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ದಾಖಲು

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ 4 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಈಗಷ್ಟೇ ಬಂದ ಸುದ್ದಿ, ಹೆಚ್ಚಿನ ಮಾಹಿತಿಯನ್ನು ಇನ್ನಷ್ಟು ಅಪ್‌ಡೇಟ್‌ ಮಾಡಲಾಗುತ್ತದೆ

Read More »

ಉಡುಪಿ :ಹೆಜಮಾಡಿ ಟೋಲ್‌ಗೇಟ್‌ ಪರಿಷ್ಕೃತ ದರ ಸಂಗ್ರಹ ದಿನ ನಿಗದಿಯಾಗಿಲ್ಲ- ಕೂರ್ಮಾರಾವ್‌

ಉಡುಪಿ: ಕೇಂದ್ರ ಸರಕಾರದ ಗೆಜೆಟ್‌ ನೋಟಿಫಿಕೇಶನ್‌ ಪ್ರಕಾರ ಸುರತ್ಕಲ್‌ನಲ್ಲಿದ್ದ ಟೋಲ್‌ ಅನ್ನು ಹೆಜಮಾಡಿ ಟೋಲ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಪರಿಷ್ಕೃತ ದರ ಪಡೆಯುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೋರಿಕೆಯಂತೆ ಹೆಜಮಾಡಿ ಗೇಟ್‌ಗೆ ಸೂಕ್ತ ಭದ್ರತೆ ಕಲ್ಪಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.   ಟೋಲ್‌ ದರ ಹೆಚ್ಚಳಕ್ಕೆ ಜನಪ್ರತಿನಿಧಿ ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಅವರ ಸಭೆ ಕರೆಯಲಾಗುತ್ತದೆ. ಸಾರ್ವಜನಿಕರು ಅಥವಾ ಯಾವುದೇ ಸಂಘಟನೆಗಳಿಂದ ಈ ಸಂಬಂಧ ದೂರು ಅಥವಾ ಆಕ್ಷೇಪಣೆಗಳು ಬಂದಿಲ್ಲ. ಬಂದಲ್ಲಿ ಪರಿಶೀಲಿಸಲಾಗುವುದು. ಪರಿಷ್ಕೃತ ದರ ಸಂಗ್ರಹ ಆರಂಭಿ ಸುವ …

Read More »

ಸುಳ್ಯ: ವಿವಿಧೆಡೆ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಪತ್ತೆ

ಸುಳ್ಯ: ತಾಲೂಕಿನ ಉಬರಡ್ಕ, ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವುದು ಪತ್ತೆಯಾಗಿದೆ. ಈ ಜಾನುವಾರುಗಳ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಬಂದು ಬಳಿಕವಷ್ಟೇ ಚರ್ಮ ಗಂಟು ರೋಗವೇ ಎಂದು ತಿಳಿಯಲಾಗುವುದು. ಅಲ್ಲಿಯವರೆಗೆ ಇದು ಶಂಕಿತ ಪ್ರಕರಣ. ಈಗ ಕಂಡು ಬಂದಿರುವ ಪ್ರಕರಣಗಳು ಮೇಲ್ನೋಟಕ್ಕೆ ಚರ್ಮ ಗಂಟು ರೋಗದಂತೆ ಇದೆ ಎಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ. ಸುಳ್ಯದ ಉಬರಡ್ಕ ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಒಂದೊಂದು ಜಾನವಾರುಗಳಲ್ಲಿ …

Read More »

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಲ್ ಬಸ್‌ನಲ್ಲೇ ಅತ್ಯಾಚಾರವೆಸಗಿದ ಚಾಲಕ‌

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಲ್ ಬಸ್‌ನಲ್ಲೇ ಚಾಲಕ‌ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಕುಮಾರ್ ಬಂಧಿತ ಸ್ಕೂಲ್ ಬಸ್ ಚಾಲಕನಾಗಿದ್ದು, ಶಾಲಾ ಮಕ್ಕಳನ್ನು ಡ್ರಾಪ್ ಮಾಡಿ ನಾಯಂಡಹಳ್ಳಿ ಬಳಿ ಹೋಗುತ್ತಿರುವಾಗ ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾನೆ ಎನ್ನಲಾಗಿದ್ದು, ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ರೇಪ್‌ ಮಾಡಿದ್ದಾನೆ ಎನ್ನಲಾಗಿದೆ. ಇದಲ್ಲದೇ ಘಟನೆ ನಡೆದ ಬಳಿಕ ಮಹಿಳೆಯು ಬಸ್ ಪೋಟೋ ಹಿಡಿದುಕೊಂಡು ತಮ್ಮ ಮಗನಿಗೆ ಪೋನ್ ಮಾಡಿ ತಿಳಿಸಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಮಗ ಬಸ್‌ ಚಾಲಕನನ್ನು ಪತ್ತೆ ಹಚ್ಚಿ ಥಳಿಸಿ …

Read More »

You cannot copy content of this page.