ತಾಜಾ ಸುದ್ದಿ

BREAKING NEWS : ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಘೋರ ಅಪಘಾತ ; 40 ಅಡಿ ಕಂದಕಕ್ಕೆ ಕಾರು ಬಿದ್ದು, 8 ಭಕ್ತರು ಸಾವು

 ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಯ್ಯಪ್ಪ ಭಕ್ತರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕಣಿವೆಗೆ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಥೇಣಿ ಜಿಲ್ಲೆಯ ಕುಮುಲಿ ಪರ್ವತ ಕಣಿವೆಯಲ್ಲಿ ಘೋರ ಘಟನೆ ನಡೆದಿದ್ದು, 40 ಅಡಿ ಆಳದ ಗುಂಡಿಗೆ ಕಾರು ಉರುಳಿಬಿದ್ದ ಪರಿಣಾಮ 8 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತೇನಿ ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್ ತಿಳಿಸಿದ್ದಾರೆ.

Read More »

BREAKING NEWS : ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ : ನಾಲ್ವರು ವಿದ್ಯಾರ್ಥಿಗಳು ಸೇರಿ 7 ಜನರಿಗೆ ಗಂಭೀರ ಗಾಯ

ಹಾಸನ : ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿದ್ದು, ನಾಲ್ವರು ವಿದ್ಯಾರ್ಥಿಗಳು ಸೇರಿದೆಂತೆ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಿಡಗೋಡು ಗ್ರಾಮದ ಬಳಿ ನಡೆದಿದೆ. ರಾಮನಗರ ಜಿಲ್ಲೆಯ ಕನಕಪುರದಿಂದ ಶಾಲಾ ಪ್ರವಾಸಕ್ಕೆ 2 ಬಸ್ ಗಳಲ್‌ಇ 71 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಿಡಗೋಡು ಗ್ರಾಮದ ಬಳಿ ಬಸ್ ಪಲ್ಟಿಯಾಗಿದ್ದು, ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರು ಗಾಯಗೊಂಡಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಬೆಳ್ಳಾರೆ: ಉದ್ಯಮಿ ನವೀನ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್‌ ; ಅತ್ತೆಯ ಮೇಲೆ ಕಳ್ಳತನ ಆರೋಪ ಹೊರಿಸಿದ ದಿವ್ಯ ಸ್ಪಂದನಾ

ಬೆಳ್ಳಾರೆ:  ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್‌ ದೊರೆತಿದ್ದು, ಸೊಸೆ ಸ್ಪಂದನರವರು ನವೀನ್ ತಾಯಿ ಮೇಲೆ ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೇಸ್‍ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರ ಪುತ್ರಿ ಸ್ಪಂದನ ನವೀನ್ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ. “ನನ್ನ ಗಂಡ ನವೀನ ಎಂ. ಅತಿಯಾದ ಮದ್ಯ ವ್ಯಸನಿಯಾಗಿದ್ದು ವೈವಾಹಿಕ ಜೀವನದಲ್ಲಿ ನೊಂದು ಬೇಸತ್ತಿದ್ದೇನ. ಕಳೆದ ಕೆಲವು ತಿಂಗಳುಗಳಿಂದ ಇವರ ಮದ್ಯವ್ಯಸನದಿಂದ ಸಹಿಸಲು ಅಸಾಧ್ಯವಾದ ಹಂತಕ್ಕೆ ತಲುಪಿದ್ದು ಇವರ ತಂದೆ ಮಾಧವ …

Read More »

ಹೊಸ ವರ್ಷದಲ್ಲಿ ಮೊಬೈಲ್ ಸುಂಕ ಹೆಚ್ಚಳ

ನವದೆಹಲಿ : ಹೊಸ ವರ್ಷದಲ್ಲಿ ಮೊಬೈಲ್ ಫೋನ್ ಸುಂಕ ಹೆಚ್ಚು ದುಬಾರಿಯಾಗಬಹುದು. ಹೊಸ ವರ್ಷ ಸಮೀಪಿಸುತ್ತಿದ್ದಂತೆ, ಎಲ್ಲಾ ಟೆಲಿಕಾಂ ಕಂಪನಿಗಳು (ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ) ಮೊಬೈಲ್ ದರಗಳನ್ನ ಶೇಕಡಾ 10ರಷ್ಟು ಹೆಚ್ಚಿಸುವುದಾಗಿ ಒಂದರ ನಂತರ ಒಂದರಂತೆ ಘೋಷಿಸಬಹುದು. ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮಾತ್ರ ಈ ದರದ ಓಟದಲ್ಲಿ ಭಾಗವಹಿಸುವಂತಿಲ್ಲ. ವಿದೇಶಿ ಬ್ರೋಕರೇಜ್ ಸಂಸ್ಥೆ ಜೆಫರೀಸ್ ವಿಶ್ಲೇಷಕರು ಭಾರತೀಯ ಟೆಲಿಕಾಂ ಕಂಪನಿಗಳ ವರದಿಯಲ್ಲಿ ಇದನ್ನು ವಿವರಿಸಿದ್ದಾರೆ. ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಪ್ರಸಕ್ತ …

Read More »

ಕರ್ನಾಟಕ ಸೇರಿದಂತೆ ಯಾವ ರಾಜ್ಯಗಳಲ್ಲಿ ‘ಕೋವಿಡ್‌ ಮಾರ್ಗಸೂಚಿ’ ಇದೇ? ಇಲ್ಲಿದೆ ನೋಡಿ ಮಾಹಿತಿ

ನವದೆಹಲಿ: ಕರೋನಾ ವೈರಸ್ ಮತ್ತೊಮ್ಮೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕರೋನಾದ ಓಮಿಕ್ರಾನ್ ರೂಪಾಂತರವು ವೇಗವಾಗಿ ಬೆಳೆಯುತ್ತಿದೆ. ಇದನ್ನು ತಡೆಗಟ್ಟಲು ದೇಶದ ವಿವಿಧ ರಾಜ್ಯಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ನಡುವೆ ಕೇಂದ್ರ ಸರ್ಕಾರವು ದೇಶದ ಎಲ್ಲಾ ಕೇಂದ್ರಡಾಳಿತ ಪ್ರದೇಶಗಳು ರಾಜ್ಯಗಳು ಪರೀಕ್ಷೆ, ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸಲು, ಸ್ಥಳೀಯ ಅಧಿಕಾರಿಗಳಿಗೆ ಜಾಗರೂಕರಾಗಿರಲು ಆದೇಶಿಸಿವೆ. ಚೀನಾದಲ್ಲಿ (ಚೀನಾ) ಕರೋನಾ ಪ್ರಕರಣಗಳ ಹೆಚ್ಚಳದ ನಂತರ ಈ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗದೆ . ಕರೋನಾ ವಿರುದ್ಧ ಮುನ್ನೆಚ್ಚರಿಕೆಗಳಿಗಾಗಿ ಯಾವ ರಾಜ್ಯವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು …

Read More »

ಯುವತಿಯನ್ನು ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

ದಾವಣಗೆರೆ: ಪ್ರೀತಿ ನಿರಾಕರಿಸಿದ್ದ ಯುವತಿಯನ್ನು ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ  ಮಾಡಿದ್ದ ಯುವಕ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ್ದ ಘಟನೆ ಗುರುವಾರ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕನೂ ಮೃತಪಟ್ಟಿದ್ದಾನೆ. ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಸಾದತ್ ಅಲಿಯಾಸ್ ಚಂದ್ ಪೀರ್ (29) ಎಂದು ಗುರುತಿಸಲಾಗಿದೆ. ಗುರುವಾರ ದಾವಣಗೆರೆ ನಗರದ ಪಿಜೆ ಬಡಾವಣೆ ಚರ್ಚ್ ಬಳಿ ಆತ ಯುವತಿ ಚಾಂದ್ ಸುಲ್ತಾನಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ಬಳಿಕ ತಾನೂ …

Read More »

ಕೊರೊನಾ ಭೀತಿ : ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ..!

ಬೆಂಗಳೂರು : ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಹಲವು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ. ಇದೀಗ ಸರ್ಕಾರದ ಆದೇಶಕ್ಕೂ ಮುನ್ನವೇ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎನ್ನಲಾಗಿದೆ. ಬೆಂಗಳೂರಿನ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಆದೇಶಕ್ಕೂ ಮುನ್ನವೇ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಿದೆ ಎನ್ನಲಾಗಿದೆ. ಇನ್ನೂ, ಬೆಂಗಳೂರು ವಿವಿ ಸೇರಿದಂತೆ ಬೆಂಗಳೂರು ನಗರದ ಹಲವು ಕಡೆ ಈಗಾಗಲೇ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮೆಟ್ರೋ , ಬೆಂಗಳೂರಿನ ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ …

Read More »

ರಾಜ್ಯದಲ್ಲಿ ಸದ್ಯಕ್ಕೆ ‘ಮಾಸ್ಕ್’ ಕಡ್ಡಾಯ ಇಲ್ಲ, ಆದರೆ ಜಾಗೃತಿ ವಹಿಸಿ : ಸಚಿವ ಸುಧಾಕರ್

ಬೆಳಗಾವಿ : ಚೀನಾ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕುರಿತು ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಮಾಸ್ಕ್ ಕಡ್ಡಾಯಗೊಳಿಸುವ ಪರಿಸ್ಥಿತಿ ಬಂದರೆ ಖಂಡಿತ ಮಾಡುತ್ತೇವೆ, ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜನರು ಇದಕ್ಕೆ ಅವಕಾಶ ಕೊಡಬಾರದು, ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸದಿದ್ದರೆ ಬೆಂಗಳೂರಿನಲ್ಲಿ ‘ಕಠಿಣ …

Read More »

ಬೆಳ್ತಂಗಡಿ: ಶಬರಿಮಲೆ ಯಾತ್ರಿಕರ ಬಸ್ ಅಪಘಾತ, ಹಲವರಿಗೆ ಗಾಯ

ಬೆಳ್ತಂಗಡಿ: ಬಳ್ಳಾರಿಯಿಂದ ಶಬರಿಮಲೆಗೆ ಹೊರಟ ಮಿನಿ ಬಸ್ ಮುಂಡಾಜೆಯ ಉಳ್ಳಾಲ್ತಿ ಕಟ್ಟೆ ಎಂಬಲ್ಲಿ ಬ್ರೇಕ್ ಫೇಲ್ ಆಗಿ ಬಸ್ ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದ ಪರಿಣಾಮ ಹಲವರಿಗೆ ಗಂಭೀರ ಗಾಯವಾದ ಘಟನೆ ಡಿ. 23ರ ಬೆಳ್ಳಿಗ್ಗೆ ಸಂಭವಿಸಿದೆ. ಕೂಡ್ಲಗಿ ತಾಲೂಕಿನ ಚಿಕ್ಕಜೋಗೆ ಹಳ್ಳಿಯ ಶಶಿ, ಜಲಧರ, ರಘು, ಬಸವರಾಜ್, ಲೋಕ ಎಂಬವರು ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ವಾಹನ ನುಗ್ಗಿದ ಸ್ಥಳದಲ್ಲಿ ಕಂದಕ ಹಾಗೂ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ತೆರಳಲಿದ್ದು, …

Read More »

BREAKIN NEWS : ಕೋವಿಡ್ ಪರಿಶೀಲನಾ ಸಭೆ : ಮಾಸ್ಕ್ ಕಡ್ಡಾಯ ರಾಜ್ಯಗಳಿಗೆ ಪ್ರಧಾನಿ ಸೂಚನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಪರಿಸ್ಥಿತಿ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಮಾಸ್ಕ್ ಧರಿಸುವುದು, ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ ಹಾಗೂ ಜೀನೋಮ್ ಅನುಕ್ರಮದ ಮೇಲೆ ಕೇಂದ್ರೀಕರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.   ಪಿಎಂ ಮೋದಿ ಅವರು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ಸಕಾರಾತ್ಮಕ ಪ್ರಕರಣಗಳ ಜೀನೋಮ್ ಅನುಕ್ರಮದ ಮೇಲೆ ಕೇಂದ್ರೀಕರಿಸಲು ರಾಜ್ಯಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಹೆಚ್ಚಿದ ಪರೀಕ್ಷೆಯ ಮೇಲೆ ಕೇಂದ್ರೀಕರಿಸುವ ಮೂಲಕ ಬಲವರ್ಧಿತ ಕಣ್ಗಾವಲು ಅಗತ್ಯವಿದೆ ಎಂದು ಕೋವಿಡ್ ಪರಿಶೀಲನಾ ಸಭೆಯಲ್ಲಿ …

Read More »

You cannot copy content of this page.