ತಾಜಾ ಸುದ್ದಿ

ಯುವತಿಗೆ ‘ಚಾಕಲೇಟ್ ಬೇಕಾ’ಎಂದು ಕೇಳಿದ ವಿಚಾರ – ವಿದ್ಯಾರ್ಥಿಗೆ ಹಲ್ಲೆ ಆರೋಪ – ದೂರು ದಾಖಲು

ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಾರೆಂದು ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವ ಕುರಿತು ವಿಟ್ಲದಲ್ಲಿ ವರದಿಯಾಗಿದೆ. ಮಂಗಳಪದವು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್‌ ಶಾಕೀರ್‌ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ವಿಟ್ಲ ಠಾಣೆಗೆ ದೂರು ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್‌, ರೋಹಿತ್‌ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಾಕೀರ್‌ ಕಾಲೇಜಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ತೋರಿಸಿದ್ದಾನೆಂದು ಆರೋಪಿಸಿ ಕೆಲಿಂಜ ಎಂಬಲ್ಲಿಗೆ ಬಸ್ …

Read More »

ಸುರತ್ಕಲ್‌: ಗುಡ್ಡ ಕುಸಿತ; ಓರ್ವ ಕಾರ್ಮಿಕ ಮೃತ್ಯು, ಮತ್ತೋರ್ವ ಗಂಭೀರ

ಸುರತ್ಕಲ್‌ : ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರಮಾಡುತ್ತಿದ್ದ ಸಂದರ್ಭ ಕಾರ್ಮಿಕರು ಕೆಳಭಾಗದಲ್ಲಿ ಗುಡ್ಡ ಅಗೆಯುತ್ತಿದ್ದರು. ಈ ವೇಳೆ ರೈಲೊಂದು ಏಕಾಏಕಿ ಬಂದ ಹಾದುಹೋದ ಪರಿಣಾಮ ಮಣ್ಣು ಕುಸಿದು ಗುಡ್ಡದ ಕೆಳಭಾಗದಲ್ಲಿ ಅಗೆಯುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಈ ವೇಳೆ ಆರೇಳು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಈ ಪೈಕಿ …

Read More »

ಉಪ್ಪಿನಂಗಡಿ: ಟ್ಯಾಂಕರ್‌ ಚಲಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಚಾಲಕ ಬಲಿ

ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಕಿಶೋರ್ ಕುಮಾರ್ (63) ಎಂಬವರು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಮೂಲತಃ ಮಂಗಳೂರಿನ ಕಾವೂರು, ನಿವಾಸಿಯಾಗಿದ್ದ ಕಿಶೋರ್ ಕುಮಾರ್ ಚಲಾಯಿಸುತ್ತಿದ್ದಾಗ ಹೃದಯಾಘಾತಕ್ಕೀಡಾದರು. ಕೂಡಲೇ ಟ್ಯಾಂಕರ್‌ ನಲ್ಲಿದ್ದ ಸಹ ಚಾಲಕ ಟ್ಯಾಂಕ‌ರ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ, ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ..!

ಮಂಗಳೂರು: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಎಂದು ವಿಶ್ವ ಹಿಂದೂ ಪರಿಷತ್ ಬ್ಯಾನರ್ ಅಳವಡಿಸಿದೆ. ಇಂದಿನಿಂದ ಕಾವೂರು ಜಾತ್ರೆ ಆರಂಭಗೊಂಡಿದೆ. ಈ ಜಾತ್ರೆಯಲ್ಲಿ ವಿವಿಧ ಮತ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಗಳು ಭಾಗವಹಿಸುವುದು, ಸಂತೆ ವ್ಯಾಪಾರ ಮಾಡುತ್ತಿರುವುದು ಹಿಂದಿನಿಂದಲೂ ನಡೆದುಬಂದಿದೆ. ಆದರೆ ಜ.10ರಂದು ‘ಮುಸ್ಲಿಮ್ ಧರ್ಮದವರು ಸಂತೆ ವ್ಯಾಪಾರ ಮಾಡುವುದಕ್ಕೆ ಬಹಿಷ್ಕಾರ ಹಾಕಲಾಗಿದೆ’ ಎಂಬ ಜನಾಂಗೀಯ ನಿಂದನೆಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ, ಎಸಿಪಿಯವರ ಗಮನಕ್ಕೆ ತಂದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಆದರೆ ನಿನ್ನೆ …

Read More »

ತಂದೆಯ ಸಾಲಕ್ಕೆ ಮಗನೇ ಹೊಣೆಗಾರ – ಹೈಕೋರ್ಟ್

ಬೆಂಗಳೂರು: ತಂದೆಯ ಸಾಲಕ್ಕೆ ಭದ್ರತೆಯಾಗಿ ಚೆಕ್ ನೀಡಿದ ಮಗ ಸಾಲಕ್ಕೆ ಬಾಧ್ಯಸ್ಥ ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ. ಪ್ರಸಾದ್ ಅವರಿಂದ ದಿನೇಶ್ ತಂದೆ ಭರಮಪ್ಪ 2.6 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸುವ ಮೊದಲೇ ಭರಮಪ್ಪ ಮೃತಪಟ್ಟಿದ್ದರು. ಸಾಲ ಹಿಂತಿರುಗಿಸುವಂತೆ ಪುತ್ರನ ಬಳಿ ಕೇಳಿದಾಗ ಚೆಕ್ ನೀಡಿದ್ದರು. ಬಡ್ಡಿ ಸಹಿತ 4.5 ಲಕ್ಷ ರೂಪಾಯಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಸಾಲ ಪಡೆದವರು ಮೃತಪಟ್ಟಿದ್ದರಿಂದ ತಾನು ಬಾಧ್ಯಸ್ಥನಲ್ಲವೆಂದು ಮಗ ವಾದ ಮಂಡಿಸಿದ್ದರು. ಪುತ್ರನ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಕೆ. ನಟರಾಜನ್ …

Read More »

ಸುರತ್ಕಲ್: ಗುಡ್ಡ ಕುಸಿತ, ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ಸುರತ್ಕಲ್: ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಓಬಲೇಶ್ವರ ಮೃತ ದುರ್ದೈವಿ.ಇವರು ರೈಲ್ವೇ ಸೇತುವೆಯ ಬಳಿ ಕೆಲಸ ಮಾಡುತ್ತಿದ್ದಾಗ ಗುಡ್ಡ ಕುಸಿದು ಮಣ್ಣು ಮೈಮೇಲೆ ಬಿದ್ದಿದೆ. ಘಟನೆಯಲ್ಲಿ ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ ಅವರ ಮೇಲೂ ಮಣ್ಣು ಬಿದ್ದು ಗಾಯಗಳಾಗಿವೆ ಎನ್ನಲಾಗಿದೆ. ಗೋವಿಂದಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ‌. ಘಟನೆಗೆ ಸಂಬಂಧಿಸಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Read More »

ಕಾರ್ಕಳ: ಬೋನಿನಲ್ಲಿ ಸೆರೆಯಾದ ಚಿರತೆ

ಕಾರ್ಕಳ: ತಾಲ್ಲೂಕಿನ ಕಣಜಾರು ಪರಿಸರದಲ್ಲಿ ಚಿರತೆ ಹಾವಳಿ ತಪ್ಪಿಸಲು ಸಾರ್ವಜನಿಕರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಪರಿಸರದ ಜಡ್ಡಿನಕಟ್ಟ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರ ಮನೆಯ ಸಮೀಪ ಬೋನನ್ನು ಇರಿಸಲಾಗಿತ್ತು. ಅದರಲ್ಲಿ ಚಿರತೆಯು ಸೆರೆಯಾಗಿದ್ದು, ಚಿರತೆಯನ್ನು ಪಶುವೈದ್ಯರಿಂದ ತಪಾಸಣೆ ನಡೆಸಿ, ಕುದುರೆಮುಖ ರಾಷ್ಟೀಯ ಉದ್ಯಾನವನಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಜಯರಾಮ ಎ., ಗಸ್ತು ವನಪಾಲಕರಾದ ಶ್ರೀಧರ್ ನರೇಗಲ್, ಮಹಾಂತೇಶ ಗೋಡಿ, ಅರಣ್ಯ ವೀಕ್ಷಕರಾದ ಸಂಜೀವ ಪಿ., …

Read More »

ರಾಜ್ಯದಲ್ಲಿ ಎರಡ್ಮೂರು ದೊಡ್ಡ ತಲೆಗಳು ಉರುಳುತ್ತೆ: ಕೋಡಿಮಠದ ಶ್ರೀ ಭವಿಷ್ಯ

ವಿಜಯನಗರ : ಈ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ, ಕೊರೊನಾ ಬಂದರೂ ಕೂಡ ಅಂತಹ ತೊಂದರೆಯಾಗಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮಾತನಾಡಿದ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ 2023 ರ ಕುರಿತು ಭವಿಷ್ಯ ನುಡಿದಿದ್ದಾರೆ.   ಏನದು ಭವಿಷ್ಯ ‘ಒಲೆ ಹೊತ್ತಿ ಉರಿದರೆ,ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು’ ಎಂದು ಮಾರ್ಮಿಕವಾಗಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ . ಈ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ, ಕೊರೊನಾದಿಂದ ಯಾವುದೇ ಅಂತಹ ತೊಂದರೆಯಾಗಲ್ಲ. …

Read More »

ವಿಟ್ಲ: ಕನ್ಯಾನದಲ್ಲಿ 2ಕೋಟಿ 28 ಲಕ್ಷ ರೂ.ಗಳ ಕಾಮಗಾರಿ ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್

ವಿಟ್ಲ: ಕನ್ಯಾನ ಗ್ರಾಮದ 2ಕೋಟಿ 28ಲಕ್ಷ ರೂ.ಗಳ ಕಾಮಗಾರಿಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿ ಇವರು ಉದ್ಘಾಟಿಸಿದರು. ಬದಿಕೋಡಿ-ಶಿರಂಕಲ್ಲು ಎಂಬಲ್ಲಿ 1.40ಕೋಟಿ ರೂ.ಗಳ ಕಿಂಡಿ ಅಣೆಕಟ್ಟು. ಬನಾರಿ ಗೋಪಾಲಕೃಷ್ಣ ದೇವಸ್ಥಾನ ರಸ್ತೆಗೆ 25ಲಕ್ಷ, ಮಾಡದಾರು-ಅಶ್ವತ್ಥಕೋಡಿ ರಸ್ತೆಗೆ 25ಲಕ್ಷ, ಮುದ್ಕುಂಜ ರಸ್ತೆಗೆ 10ಲಕ್ಷ, ಪನೆಯಡ್ಕ ರಸ್ತೆಗೆ 10ಲಕ್ಷ, ಕಾಣಿಚ್ಚಾರು ಧೂಮಾವತಿ ದೈವಸ್ಥಾನದ ರಸ್ತೆಗೆ 10ಲಕ್ಷ, ಬಾಲ್ತ್ರೋಡಿ ರಸ್ತೆಗೆ 10ಲಕ್ಷ, ಪರಕ್ಕಜೆ ರಸ್ತೆಗೆ 10ಲಕ್ಷ, ಹಾಗೂ ಶ್ರೀ ಸರಸ್ವತಿ ವಿದ್ಯಾಲಯದ ರಸ್ತೆಗೆ 3.5ಲಕ್ಷ ರೂ.ಗಳ ಕಾಮಗಾರಿಗಳನ್ನು ಉದ್ಘಾಟಿಸಿದರು. ಅದರೊಂದಿಗೆ ಕನ್ಯಾನ ಗ್ರಾಮದ ಬಿ.ಜೆ.ಪಿ. ಬೂತ್ ಸಮಿತಿಯ …

Read More »

BIG NEWS ಸ್ಯಾಂಟ್ರೋ ರವಿ ಬಂಧನ

ಬೆಂಗಳೂರು: ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಸುಮಾರು 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ದೊರಕಿದೆ. ಮೂಲತಃ ಮೈಸೂರಿನವನಾಗಿರುವ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ಈ ಹಿಂದೆ ಹಲವೆಡೆ ಪ್ರಕರಣ ದಾಖಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇದೆ ಎನ್ನಲಾಗುತ್ತಿದೆ.

Read More »

You cannot copy content of this page.