ತಾಜಾ ಸುದ್ದಿ

ಮಂಗಳೂರು: ಬೈಕ್ ಅಪಘಾತ- ವಿಟ್ಲ ನಿವಾಸಿ ಯುವಕ ಮೃತ್ಯು..!

ವಿಟ್ಲ: ಮಂಗಳೂರಿನ ಅಡ್ಯಾರ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮಾಣಿಲ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾಣಿರವರ ಪುತ್ರ ಕಾರ್ತಿಕ್ (24) ಮೃತ ದುರ್ದೈವಿ. ಕಾರ್ತಿಕ್ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ.

Read More »

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಢಿಕ್ಕಿ-ಯುವತಿಗೆ ಗಂಭೀರ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಢಿಕ್ಕಿಯಾದ ಪರಿಣಾಮ ಓರ್ವ ಪ್ರಯಾಣಿಕ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸೆಲಿನಾ ಬಸ್ ಅಪಘಾತದ ವೇಳೆ ಬಸ್ ನ ಮುಂಭಾಗದ ಗಾಜು ಒಡೆದು ಯುವತಿ ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ.ಯುವತಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳಿದಂತೆ ಅನೇಕ ಪ್ರಯಾಣಿಕರಿಗೂ ಗಾಯವಾಗಿದೆ. ಜಾಯಿಂಟ್ ವೀಲ್ ಕಡಿತಗೊಂಡು ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳುತ್ತಿದ್ದಾನೆ.ಆದರೆ ಅತಿಯಾದ ವೇಗದಿಂದ …

Read More »

BREAKING NEWS : ಅಲ್​ಖೈದಾ ಜೊತೆ ನಂಟು – ಶಂಕಿತ ಉಗ್ರ `ಆರೀಫ್’ ಬಂಧನ

ಬೆಂಗಳೂರು : ಬೆಂಗಳೂರಿನಲ್ಲಿ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಧಣಿಸಂದ್ರದ ಮಂಜುನಾಥ ನಗರದಲ್ಲಿ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕ ಆರೀಫ್ ನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.  ಶಂಕಿತ ಉಗ್ರ ಆರೀಫ್ ಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಸದ್ಯ ಐಎಸ್ ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ಆರೀಫ್ ನನ್ನು ಬಂಧಿಸಿ …

Read More »

ಅಮಿತ್ ಶಾ ದಕ್ಷಿಣ ಕನ್ನಡ ಜಿಲ್ಲೆ ಭೇಟಿ ಹಿನ್ನೆಲೆ;ಪ್ಯಾರಾ ಮಿಲಿಟರಿ, ಎಸ್ ಪಿಜಿ ಸೇರಿ ಹೇಗಿದೆ ಭದ್ರತಾ ಸಿದ್ದತೆ ಗೊತ್ತಾ..?

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು  ದ.ಕ ಜಿಲ್ಲೆಗೆ ಆಗಮನದ ಹಿನ್ನೆಲೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಕಣ್ಣೂರಿಗೆ ವಿಮಾನದ ಮೂಲಕ ಆಗಮಿಸುವ ಅಮಿತ್ ಶಾ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಈಶ್ವರಮಂಗಲಕ್ಕೆ ಆಗಮಿಸಿ, ಹನುಮಗಿರಿಯಲ್ಲಿ ಭಾರತ ಮಾತಾ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ.ಬಳಿಕ ಕ್ಯಾಂಪ್ಕೊದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನೆಲೆ ಜಿಲ್ಲೆಯಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ರಾಜ್ಯದ ನಾನಾ ಭಾಗದ 1,600 ಪೊಲೀಸ್‌ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.7 ಮಂದಿ ಎಸ್‌ಪಿ, 22 …

Read More »

ಗಮನಿಸಿ :ಮಂಗಳೂರಿಗೆ ಅಮಿತ್ ಶಾ ಭೇಟಿ ಹಿನ್ನಲೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಂಗಳೂರು ನಗರಕ್ಕೆ ಆಗಮಿಸಿ ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಜೆ ಸುಮಾರು 4 ಗಂಟೆಯಿಂದ 9 ಗಂಟೆಯವರೆಗೂ ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇದ್ದು, ಸಂಚಾರ ವ್ಯತ್ಯಯ ಆಗಬಹುದಾದ ಕಾರಣ ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ ಮುಲ್ಕಿ …

Read More »

ಸರ್ಕಾರದಿಂದ ʼವೈದ್ಯರಿಗೆ ಹೊಸ ಡ್ರೆಸ್ ಕೋಡ್‌ʼ : ಶಾರ್ಟ್ಸ್, ಜೀನ್ಸ್, ಸ್ಕರ್ಟ್, ಮೇಕಪ್ ನಿಷೇಧ

ಹರಿಯಾಣ : ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಹರಿಯಾಣ ಸರ್ಕಾರ ಹೊಸ ಡ್ರೆಸ್ ಕೋಡ್ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಏಕರೂಪತೆಯನ್ನು ತರಲು ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ. ‘ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿಗಳ …

Read More »

BREAKING NEWS: ನಂದಿನಿ ಹಾಲಿನ ದರ 3 ರೂ ಹೆಚ್ಚಳ

ಬೆಂಗಳೂರು: ಈಗಾಗಲೇ ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೂ ಹಾಲಿನ ದರವನ್ನು  3 ರೂ ಹೆಚ್ಚಳ ಮಾಡಿ ಆದೇಶಿಸಿದೆ. ಈ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕೆಎಂಎಫ್, ಜಂಬೂ ಪ್ಯಾಕೇಟ್ ಹಾಲಿನದ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ನಾಳೆಯಿಂದ 231ರಿಂದ 234 ರೂಗೆ ಏರಿಕೆಯಾಗಲಿವೆ ಎಂದು ಹೇಳಿದೆ. ಅಂದಹಾಗೇ …

Read More »

ಬೆತ್ತಲೆ ವಿಡಿಯೋಗಳನ್ನು ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ – ನಟಿ ರಾಖಿ ಆರೋಪ

ಪತಿ ಆದಿಲ್ ಖಾನ್ ಬಗ್ಗೆ ಮತ್ತೊಂದು ಗುರುತರ ಆರೋಪಗಳನ್ನು ಮಾಡಿದ್ದಾರೆ ನಟಿ ರಾಖಿ ಸಾವಂತ್. ತನ್ನ ಬೆತ್ತಲೆ ವಿಡಿಯೋಗಳನ್ನು ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ.  ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ಬೆತ್ತಲೆ ವಿಡಿಯೋ ಅವರ ಹೊಸ ಆರೋಪವಾಗಿದೆ. ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲು ಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು …

Read More »

ಕೆಕೆಆರ್​ಟಿಸಿ ನೇಮಕಾತಿ: ಚಾಲಾಕಿಗಳು ತೂಕ ಹೆಚ್ಚಳಕ್ಕೆ ಒಳ ಉಡುಪಿನಲ್ಲಿ ಇಟ್ಟದ್ದೇನು ಗೊತ್ತಾ..?

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಿಂದ ಸುದ್ದಿಯಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಇದೀಗ ಕೆಕೆಆರ್‌ಟಿಸಿ ನೇಮಕಾತಿಗಾಗಿ ಕೆಲವು ಅಭ್ಯರ್ಥಿಗಳು ಅಕ್ರಮ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತೂಕ ಹೆಚ್ಚಳಕ್ಕಾಗಿ ಒಳ ಉಡುಪಿನಲ್ಲಿ ಕಬ್ಬಿಣದ ಕಲ್ಲುಗಳನ್ನು ಇಟ್ಟುಕೊಂಡು ನೇಮಕಾತಿ ಪರೀಕ್ಷೆಗೆ ಹಾಜರಾಗಿರುವುದು ಪತ್ತೆಯಾಗಿದೆ. ನೇಮಕಾತಿಗೆ ನಿರ್ದಿಷ್ಟ ತೂಕ ನಿಗದಿ ಮಾಡಲಾಗಿದೆ. ಅಗತ್ಯ ತೂಕ ಇಲ್ಲದ ನಾಲ್ವರು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ಮಾಡಿ ಅಕ್ರಮವಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ವಾಮಮಾರ್ಗದಿಂದ ಇಕ್ಕಟ್ಟಿಗೆ ಸಿಲುಕಿದ ಅಭ್ಯರ್ಥಿಗಳು.. ಕೆಕೆಆರ್‌ಟಿಸಿಯಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆ ಬರ್ತಿಗೆ …

Read More »

ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲ: ಬಿಎಸ್‌ವೈ ಪತ್ರ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡಲು ತೀರ್ಮಾನ ಮಾಡಿರುವ ನಿರ್ಧಾರ ಕೈಬಿಟ್ಟು ರಾಜ್ಯ, ರಾಷ್ಟ್ರ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡುವಂಥ ಮಹನೀಯರ ಹೆಸರನ್ನು ಇಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಪತ್ರ ಬರೆದು ಮನವಿ ಮಾಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡುವುದಾಗಿ ನೀವು ಘೋಷಣೆ ಮಾಡಿರುತ್ತೀರಿ. ನೀವು ನನ್ನ ಮೇಲಿಟ್ಟಿರುವ ಈ ವಿಶೇಷ ಪ್ರೀತಿ, ಅಭಿಮಾನಕ್ಕೆ ಧನ್ಯವಾದ. ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಘ-ಸಂಸ್ಥೆಗಳಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ಈ …

Read More »

You cannot copy content of this page.