ತಾಜಾ ಸುದ್ದಿ

ಬಂಟ್ವಾಳ: ಯುವಕನಿಗೆ ಚೂರಿ ಇರಿತ

ಯುವಕನಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಪಾಣೆಮಂಗಳೂರು ನೆಹರೂ ನಗರ ನಿವಾಸಿ ಸುಲೈಮಾನ್ ಎಂಬುವವರಿಗೆ ನಿಸಾರ್ ಎಂಬ ವ್ಯಕ್ತಿ ಚೂರಿ ಇರಿದು ಪರಾರಿಯಾಗಿದ್ದಾನೆ. ಇವರಿಬ್ಬರು ನೆಹರೂ ನಗರದ ಬಳಿ ಬಂದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ನಿಸಾರ್ ಸುಲೈಮಾನ್ ಗೆ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ ಎಂದು ಆರೋಪಿಸಲಾಗಿದೆ. ಸುಲೈಮಾನ್ ರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು-ತಾಯಿ ಮಾಡಿದ್ದೇನು ಗೊತ್ತಾ…?

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ನಡೆದದ್ದು ಮಾರಿಹಬ್ಬ… ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ …

Read More »

ಮಕ್ಕಳನ್ನು ಶಾಲೆಗೆ ಕಳುಹಿಸಿ, ಇಲ್ಲದಿದ್ದರೆ ಸಮಾಜದಿಂದಲೇ ಆಚೆಗುಳೀರಿ!

ಚಾಮರಾಜನಗರ : ʼಮಕ್ಕಳನ್ನು ಶಾಲೆಗೆ ಕಳುಹಿಸಿ, ಇಲ್ಲವೇ ಸಮುದಾಯದಿಂದಲೇ ಆಚೆ ಉಳಿಸಿರಿʼ ಎಂಬ ವಿಶಿಷ್ಟ, ಕಠಿಣ ಎಚ್ಚರಿಕೆಯೊಂದನ್ನು ಚಾಮರಾಜನಗರದ ಉಪ್ಪಾರ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಉಪ್ಪಾರ ಸಮುದಾಯದ ಮಕ್ಕಳೇ ಹೆಚ್ಚಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯ ಉಪ್ಪಾರ ಸಮಾಜ ಮುಖಂಡರು ಈ ಕಠಿಣ ನಿರ್ಣಯ ಕೈಗೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಅಂಥ ಪಾಲಕರಿಗೆ ಕಠಿಣ ದಂಡನೆ ಎದುರಾಗಲಿದೆ. ಮಕ್ಕಳನ್ನು ಶಾಲೆಗೆ ಕಳಿಸದಿದ್ದರೆ ಅಂತಹ ಕುಟುಂಬವನ್ನು ಸಮಾಜದಿಂದಲೇ ದೂರ ಇಡುವ ನಿರ್ಣಯವನ್ನು ಉಪ್ಪಾರ ಸಮಾಜ ಗಡಿ ಯಜಮಾನರು ಕೈಗೊಂಡಿದ್ದಾರೆ. …

Read More »

ಕಾರ್ಕಳ: ಗಿಫ್ಟ್ ಆಸೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

ಕಾರ್ಕಳ: ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳದ ವ್ಯಕ್ತಿಯೊಬ್ಬರಿಗೆ ಫೆಲಿಕ್ಸ್ ಡಯಸ್ ಎಂಬ ಹೆಸರಿನ ಫೇಸ್‌ಬುಕ್ ಖಾತೆದಾರ ಪರಿಚಯವಾಗಿದ್ದು, ಆಕೆ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿರುವುದಾಗಿ ನಂಬಿಸಿದ್ದಳು. ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ತಿಳಿಸಿ ಅದರ ಫೋಟೋ ಹಾಗೂ ಮೆಸೇಜ್‌ಗಳನ್ನು ಆಕೆ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಫೆ.13ರಂದು ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಕರೆ ಮಾಡಿ …

Read More »

ಮಲ್ಪೆ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರ ದಾಳಿ- ಐವರು ಮಹಿಳೆಯರ ಸಹಿತ 6 ಜನರ ಬಂಧನ

ಮಲ್ಪೆ: ವೇಶ್ಯಾವಾಟಿಕೆ ನಡೆಯುತ್ತಿದ್ದ ಬಾಡಿಗೆ ಮನೆಯೊಂದಕ್ಕೆ ಮಲ್ಪೆ ಠಾಣಾ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಗುರುವಾರ ರಾತ್ರಿ ದಾಳಿ ನಡೆದಿದೆ. ತೆಂಕನಿಡಿಯೂರು ಗ್ರಾಮದ ಹಂಪನ್ ಕಟ್ಟೆಯ ಬಾಡಿಗೆ ಮನೆಯಲ್ಲಿ ಹಲವಾರು ಸಮಯಗಳಿಂದ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಸ್ಥಳೀಯರು ದೂರಿದ್ದರು. ಇಂದು ಖಚಿತ ಮಾಹಿತಿ ಮೇರೆಗೆ ಮಲ್ಪೆ ವೃತ್ತ ನಿರೀಕ್ಷಕ ಸುರೇಶ್ ಕೆ.ಎಸ್ ನೇತೃತ್ವದ ತಂಡ ದಾಳಿ ನಡೆಸಿದಾಗ ಮನೆಯಲ್ಲಿ ಐವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದರು ಎನ್ನಲಾಗಿದೆ. ದಾಳಿ ಸಂದರ್ಭದಲ್ಲಿ ಇಬ್ಬರು ಯುವಕರು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Read More »

ಮಾತನಾಡುವ ಬಾ ಎಂದು ಕರೆಸಿ ಅಪ್ರಾಪ್ತೆಯ ಮೇಲೆ ಆ್ಯಸಿಡ್ ದಾಳಿ!

ರಾಮನಗರ: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಕನಕಪುರದ ಬೈಪಾಸ್ ರಸ್ತೆಯ ನಾರಾಯಣಪ್ಪ ಕೆರೆ ಬಳಿ ನಡೆದಿದೆ. ಕನಕಪುರದ ಕುರುಪೇಟೆ ನಿವಾಸಿ ಸುಮಂತ್ ಅಲಿಯಾಸ್ ಅಪ್ಪು ಎಂಬಾತ 17 ವರ್ಷದ ಅಪ್ರಾಪ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಅಪ್ರಾಪ್ತೆಯ ಬಳಿ ಮಾತನಾಡುವ ಬಾ ಎಂದು ಕರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ತಮ್ಮನ ಜೊತೆ ಬೈಪಾಸ್ ರಸ್ತೆಗೆ ಬಂದಿದ್ದಳು. ಈ ವೇಳೆ ಸುಮಂತ್ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಸುಮಂತ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೇ ಸುಮಂತ್ …

Read More »

ಎದೆಹಾಲು ಕುಡಿಯುವಾಗ ಅಸ್ವಸ್ಥಗೊಂಡು ಮಗು ಸಾವು..!

ಬದಿಯಡ್ಕ;ಎದೆಹಾಲು ಕುಡಿಯುವಾಗ ಉಸಿರುಕಟ್ಟಿ 25 ದಿನದ ಮಗು ಸಾವಿಗೀಡಾಗಿರುವ ಘಟನೆ ಉಕ್ಕಿನಡ್ಕದಲ್ಲಿ ನಡೆದಿದೆ. ಅಬ್ದುಲ್‌ ರಹ್ಮಾನ್‌-ತಾಹಿರಾ ದಂಪತಿಯ 25 ದಿನದ ಮಗು ಸಾವಿಗೀಡಾಗಿದೆ. ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಮಗು ಅಸ್ವಸ್ಥಗೊಂಡಿದೆ‌.ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ.ಆದರೆ ಮಗು ಮೃತಪಟ್ಟಿದೆ‌. ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಕೆಸ್ ದಾಖಲಾಗಿದೆ

Read More »

ಭಕ್ತರ ತೊಂದರೆಯನ್ನು ತ್ರಿಶೂಲದಿಂದ ಬರೆಯುತ್ತಾಳೆ ಚೌಡೇಶ್ವರಿ ತಾಯಿ!

ಹಾಸನ: ಭಾರತ ಸಾಂಸ್ಕೃತಿಕ ದೇಶ ಭವ್ಯ ಪರಂಪರೆ ಹೊಂದಿರುವ ದೇಶ ದೈವರಾದನೇ ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಭೂಮಿಗಾಳಿ ಆಕಾಶ ಪ್ರತಿಯೊಂದು ಕೂಡ ನಾವು ದೈವವನ್ನು ಕಾಣುತ್ತೇವೆ ಅದೇ ರೀತಿ ನಮ್ಮಲ್ಲಿ ದೇವಾಲಯಗಳು ಅತಿ ಹೆಚ್ಚಾಗಿ ಇದ್ದು ಹಲವಾರು ಪವಾಡಗಳನ್ನು ನಾವು ಕಾಣುತ್ತಿದ್ದೇವೆ. ವೈಜ್ಞಾನಿಕತೆಯಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದಲ್ಲಿ ಹಿಂದೂ ಕೂಡ ದೈವ ನಂಬಿಕೆ ಇದೆ ಎಂಬುದಕ್ಕೆ ಸಾಕ್ಷಿಯೇ ಈ ಚೌಡೇಶ್ವರಿ ಶಕ್ತಿ ಮಠ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಿಂದ ಸರಿಸುಮಾರು 13 ಕಿಲೋ ಮೀಟರ್ ದೂರದಲ್ಲಿ ಇರುವ ಹೊಸಕೊಪ್ಪಲು ಗ್ರಾಮದಲ್ಲಿ ನೆಲೆಸಿರುವ ತಾಯಿ ಚೌಡೇಶ್ವರಿ …

Read More »

BREAKING NEWS : ಕ್ರಿಕೆಟ್ ಆಡುವಾಗ ಚಾಕುವಿನಿಂದ ಇರಿದು ಇಬ್ಬರ ಹತ್ಯೆ

ಬೆಂಗಳೂರು : ಕ್ರಿಕೆಟ್ ಆಡುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಳ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ ನಂತರ ಪರಾರಿಯಾಗಿದ್ದಾರೆ. ಕೊಲೆಯಾದವರನ್ನು ಭರತ್, ಪ್ರತೀಕ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ. ದೊಡ್ಡ ಬೆಳವಂಗಳ …

Read More »

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ನಿಧನ

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪತ್ನಿ ನಿಧನರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಾಲಿ ಶಾಸಕ ಕೆ. ಆರ್ ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ(69) ಇಂದು (ಶುಕ್ರವಾರ) ಮಧ್ಯಾಹ್ನ ಮೃತಪಟ್ಟಿದ್ದಾರೆ. ವಿಜಯಮ್ಮ ಅವರು ಕಳೆದ 2 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎರಡು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ, ಓರ್ವ ಮಗಳು, ಮಗ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Read More »

You cannot copy content of this page.