ತಾಜಾ ಸುದ್ದಿ

ಉಡುಪಿ ಡ್ರಗ್ಸ್ ಜಾಲದ ವಿರುದ್ದ ಸಮರ ಸಾರಿದ ಎಸ್‌ಪಿ ಅಕ್ಷಯ್..!

ಉಡುಪಿ: ಶಿಕ್ಷಣ ಮತ್ತು ವೈದ್ಯಕೀಯ ವಿಚಾರದಲ್ಲಿ ಏಜ್ಯುಕೇಶನ್ ಹಬ್‌ ಜೊತೆಗೆ ದೇಶ ವಿದೇಶದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್​ ನಲ್ಲಿರುವ ಡ್ರಗ್ ಮಾಫಿಯಾ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ. ದಿಟ್ಟ ಎಸ್‌ಪಿ ಅಕ್ಷಯ್ ಯುವ ಜನತೆ ಅದರಲ್ಲೂ ದೇವರಂತೆನೇ ಜನ ಭಾವಿಸುವ ವೈದ್ಯಕೀಯ ಕಾಲೇಜುಗಳ ಕ್ಯಾಂಪಸ್‌ ಗಳಲ್ಲಿ ಬೇರಿರುವ ಡ್ರಗ್ ಮತ್ತು ಸೆಕ್ಸ್‌ ಜಾಲದ ವಿರುದ್ದ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಮಣಿಪಾಲ ವಿವಿ ಪೊಲೀಸ್ ಇಲಾಖೆಯ ಶಿಫಾರಾಸಿನ ಮೇರೆಗೆ 42 ವಿದ್ಯಾರ್ಥಿಗಳಿಗೆ ಅಮಾನತು ಮಾಡಿ ಗೇಟ್ ಪಾಸ್ ನೀಡಿದೆ. ಇದೇ …

Read More »

ಪತಿ ಸಹೋದರಿಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ..!

ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ ಎಂಬ 32 ವರ್ಷದ ಮಹಿಳೆ ತನ್ನ ಅತ್ತಿಗೆ ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಕೆ 10 ವರ್ಷಗಳ ಹಿಂದೆ ಪ್ರಮೋದ್ ದಾಸ್ ಎಂಬುವವನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ದಶಕದ ಕಾಲ ಪುರುಷನೊಂದಿಗೆ ಇದ್ದ ನಂತರ ಈಗ 18 ವರ್ಷದ ಅತ್ತಿಗೆಯನ್ನೇ ವರಿಸಿದ್ದಾಳೆ ! ನಾವು ಪರಸ್ಪರ ಪ್ರೀತಿಸಿದ್ದರಿಂದ ಮದುವೆಯಾಗಿದ್ದೇವೆ. ನನಗೆ ಅತ್ತಿಗೆಯ ಮೇಲೆ ಮೋಹ ಹುಟ್ಟಿತು. ಅದಕ್ಕಾಗಿಯೇ ಗಂಡನನ್ನು ಬಿಟ್ಟು ಅತ್ತಿಗೆಯನ್ನು ಮದುವೆಯಾಗಿದ್ದೇನೆ ಎಂದು ಶುಕ್ಲಾ ದೇವಿ ಹೇಳಿದ್ದು, ಮದುವೆಯಾದ ನಂತರ ನಾವು ತುಂಬಾ …

Read More »

ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು; ಮುಕ್ತವಾಗಿ ಓಡಾಡಲು ಸಾಧ್ಯವಾಯ್ತು: ಯು.ಟಿ ಖಾದರ್

ಬೆಂಗಳೂರು: ಇಂದು ವಿಧಾನಸಭೆ ಕಲಾಪದಲ್ಲಿ ಬಿ.ಎಸ್‌ ಯಡಿಯೂರಪ್ಪ ಕೊನೆಯ ಅಧಿವೇಶದ ಭಾಷಣ ಮಾಡಿದ್ದರು. ಇದಕ್ಕೆ ಯು.ಟಿ.ಖಾದರ್​ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು ಎಂದು ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಬಿ.ಎಸ್‌ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರಿಂದ ಮುಕ್ತವಾಗಿ ಓಡಾಡಲು ಸಾಧ್ಯವಾಯ್ತು. ಜನರ ಕೆಲಸ ಫುಟ್​​ಬಾಲ್ ರೀತಿ ಆಗಬಾರದು. ಆಧಿಕಾರಿಗಳು ಕೆಲಸ ಮಾಡಬೇಕು, ನಾವು ನೇರಾನೇರ ಇರಬೇಕು. ಎಲ್ಲವನ್ನೂ ಗಳಿಸಿ ಪರಿಸ್ಥಿತಿ ವಿಷಮವಾದರೆ ಪ್ರಯೋಜನ ಆಗಲ್ಲ. ಟೆನ್ಷನ್ ರಹಿತ ರಾಜಕಾರಣ ಆಗಬೇಕು ಎಂದು ಯು.ಟಿ.ಖಾದರ್​ ಹೇಳಿದರು. ಇತ್ತ, …

Read More »

ಪ್ರವೀಣ್ ನೆಟ್ಟಾರು ಹತ್ಯೆ : ಏ.15ರೊಳಗೆ ಕುಟುಂಬದ ಸ್ವಂತ ಮನೆ ಕಾಮಗಾರಿ ಪೂರ್ಣ|

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು  ಹತ್ಯೆಗೀಡಾದ ಯುವಕನ ಕುಟುಂಬದ ಸ್ವಂತ ಮನೆಯ ಕಾಮಗಾರಿಯೂಏ.15ರೊಳಗೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದನು. ಈತನೆ ಮನೆಗೆ ಆಧಾರ ಸ್ಥಂಭವಾಗಿದ್ದು, ಮನೆ ಕಟ್ಟುವ ನಿರೀಕ್ಷೆಯನ್ನು ಹೊಂದಿದ್ದರು, ಮನೆ ಕಟ್ಟಲು ಪ್ಲಾನ್‌ ಮಾಡುತ್ತಿದ್ದಂತೆ ಮನೆಯ ಮಗನೇ ಹತ್ಯೆಗೀಡಾದನು. ಈತ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದನು. ಈತನ ಕೊಲೆಗೆ ರಾಜ್ಯದ ಜನರೇ ಬೇಸರಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು.ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು …

Read More »

ಕಾರ್ಕಳ: ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ

ಕಾರ್ಕಳ : ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆಗೈದಿರುವ ಪ್ರಕರಣ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ಬೈದಾಳ್ ಎಂಬಲ್ಲಿ ಬಂದಿದೆ. ಕೈಲಾಜೆ ಪಾದೆಮನೆ ಬೈದಾಳ್ ನ ಸಾವಿತ್ರಿ ರಾಘವೇಂದ್ರ ಭಟ್ ಅವರ ಮನೆಯಲ್ಲಿ ಗುರುವಾರ (ಫೆಬ್ರವರಿ 23 ) ಮನೆಯಲ್ಲಿ ಯಾರು ಇಲ್ಲದಿದ್ದ ವೇಳೆ ಬೆಳಿಗ್ಗೆ 10.30 ರಿಂದ 11.30ರ ಅವಧಿಯಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಗಿನ ಕೊಠಡಿಯಲ್ಲಿರಿಸಿದ್ದ ಕಪಾಟಿನ ಬಾಗಿಲನ್ನು ತೆರೆದು 164 ತೂಕದ 4,92,000 ರೂ. ಮೌಲ್ಯದ ಚಿನ್ನಾಭರಣಗಳು …

Read More »

ಕಡಬ: ಅಧಿಕಾರಿ ವಾಹನಗಳ ಮೇಲೆ ದಾಳಿ ಪ್ರಕರಣ – 7 ಆರೋಪಿಗಳ ಬಂಧನ

ಕಡಬ: ಕೊಂಬಾರು ಗ್ರಾಮದ ಮಂಡೆಕರ ಅರಣ್ಯಪ್ರದೇಶದಲ್ಲಿ ಫೆ.23ರಂದು ಸಂಜೆ ಕಾಡಾನೆ ಸೆರೆ ಸಿಕ್ಕಿದ ಬಳಿಕ ಅರಣ್ಯ ಹಾಗೂ ಪೊಲೀಸ್ ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ ಆರೋಪದಲ್ಲಿ 7 ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಫೆ.23ರಂದು ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾಡಾನೆಯು ಸೆರೆಸಿಕ್ಕಿದ್ದು ರಾತ್ರಿ 9 ಗಂಟೆ ವೇಳೆಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಸ್ಥಳದಲ್ಲಿದ್ದ ಕೆಲವು ಜನರು ಸ್ಥಳಕ್ಕೆ ಬಂದು ಕಾಡಾನೆ ತುಂಬಿಸಿದ ಲಾರಿಯನ್ನು ತಡೆದು ನಿಲ್ಲಿಸಿ ಹಿಡಿದಿರುವ ಆನೆಯನ್ನು ಇಲ್ಲಿಯೇ …

Read More »

ಕಡಬ: ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ ಹಿಡಿದು ಸಾಗಿಸುತ್ತಿದ್ದಾಗ ಅಧಿಕಾರಿ ವಾಹನಗಳ ಮೇಲೆ ದಾಳಿ- ವಾಹನಗಳು ಪುಡಿಪುಡಿ..!

ಕಡಬ: ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿದ ಬಳಿಕ ಆನೆಯನ್ನು ಸಾಗಿಸುತ್ತಿರುವಾಗ ಅಧಿಕಾರಿಗಳು ಮತ್ತು ಪೋಲಿಸ್ ಸಿಬಂದಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗುರುವಾರ ರಾತ್ರಿ ನಡೆದಿದೆ.  ಘಟನೆಯಲ್ಲಿ ಅರಣ್ಯಾಧಿಕಾರಿಗಳ ಮತ್ತು ಪೊಲೀಸರ ವಾಹನಗಳು ಜಖಂಗೊಂಡಿದ್ದು, ಡಿವೈಎಸ್‌ಪಿ ಸಹಿತ ಮೂವರಿಗೆ ಗಾಯಗಳಾಗಿವೆ. ಸೆರೆ ಹಿಡಿದ ನಂತರ ಉಳಿದ ಆನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಿಡಿಗೇಡಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಜೀಪ್ ಗೆ ಹಾನಿಗೈದಿದ್ದಾರೆ. …

Read More »

5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ 5 ಮತ್ತು 8ನೇ ತರಗತಿಯ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ವೇಳಾಪಟ್ಟಿಯಂತೆ ಮಾರ್ಚ್ 13ರಿಂದ 5 ಮತ್ತು 8ನೇ ತರಗತಿಯ ಪರೀಕ್ಷೆಗಳು ಆರಂಭಗೊಳ್ಳಲಿವೆ. ದಿನಾಂಕ 06-03-2023ಯ ಸೋಮವಾರದಿಂದ ದಿನಾಂಕ 10-03-2023ರ ಶುಕ್ರವಾರದವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶ್ತೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದು ದು ತಿಳಿಸಿದೆ. ಉಳಿದಂತೆ ಮಾ.13ರಿಂದ 18ರವರೆಗೆ ವಿಷಯವಾರು ಪರೀಕ್ಷೆಗಳು ನಡೆಯಲಿವೆ ಎಂದು …

Read More »

ಕಡಬ: ಅಭಿಮನ್ಯು ಪಡೆಯಿಂದ ಆಪರೇಷನ್ ಕಾಡಾನೆ ಯಶಸ್ವಿ

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಕೊನೆಗೂ ಯಶಸ್ಸು ಕಂಡಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ. ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇ ಮೈಸೂರು ದುಬಾರೆಯಿಂದ ಅಭಿಮನ್ಯು ಸೇರಿ 5ಆನೆಗಳನ್ನು ತರಲಾಗಿದ್ದು, ಫೆ.21 ರಂದು ಡ್ರೋನ್ …

Read More »

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವರ್ಗಾವಣೆ

ಮಂಗಳೂರು;ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸೇರಿ 6 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆಯ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ ಬೆಂಗಳೂರು ಪಶ್ವಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿದ್ದ ಡಿ.ಕಿಶೋರ್ ಬಾಬು ಅವರನ್ನು ಗುಪ್ತದಳ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ, ಕೆಎಸ್ ಆರ್ ಪಿ ಬೆಂಗಳೂರು ಕಮಾಂಡೆಂಟ್ ಆಗಿರುವ ಕೆ.ವಂಶಿಕೃಷ್ಣ ಅವರನ್ನು ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿ ವರ್ಗಾವಣೆ …

Read More »

You cannot copy content of this page.