ತಾಜಾ ಸುದ್ದಿ

ಮಾ.16ರಂದು ಮಂಗಳೂರಿಗೆ ಸಿಎಂ ಭೇಟಿ

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಇದೇ ಮಾ.16ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಗೌರವ ಉಪಸ್ಥಿತಿ ವಹಿಸುವರು. …

Read More »

ಪೊಲೀಸ್ ಕಾನ್ಸ್‌ಟೇಬಲ್ ಹೆಂಡ್ತಿ ಜೊತೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ ಎಸ್‌ಪಿ- ಕೊಲೆ ಬೆದರಿಕೆ..!!?

ಕಲಬುರಗಿ :  ಕಲಬುರಗಿ ಐಎಸ್​​ಡಿ ವಿಭಾಗದ ಎಸ್​​ಪಿ ಆಗಿರುವ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ವಿರುದ್ಧ ಹೆಡ್‌ ಕಾನ್ಸ್‌ಟೇಬಲ್‌ ಕಂಟೆಪ್ಪ ಗಂಭೀರ ಆರೋಪ ಮಾಡಿದ್ದಾರೆ. ಆಂತರಿಕ ಭದ್ರತಾ ವಿಭಾಗದಲ್ಲಿ ಎಎಸ್​​ಐ ಆಗಿರುವ ನನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಕಲಬುರಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್​​ನಲ್ಲಿ ಮಹಿಳಾ ಅಧಿಕಾರಿ ಹಾಗೂ ಐಪಿಎಸ್​​ ಅಧಿಕಾರಿ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕಾನ್ಸ್​​ಟೇಬಲ್​​ ಕಂಟೆಪ್ಪನಿಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದಾರೆ. ರೆಡ್ ಹ್ಯಾಂಡ್ …

Read More »

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಕಬ್ಬಿಣದ ಕಂಬ, ತಾಯಿ-ಮಗಳು ಸಾವು

ಮುಂಬೈ (ಮಹಾರಾಷ್ಟ್ರ) : ಮುಂಬೈನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಕಬ್ಬಿಣದ ಕಂಬವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಆಟೋದಲ್ಲಿದ್ದ ಮಹಿಳೆ ಮತ್ತು ಆಕೆಯ ಏಳು ವರ್ಷದ ಮಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮುಂಬೈನ ಜೋಗೇಶ್ವರಿ (ಪೂರ್ವ) ನಲ್ಲಿರುವ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿರುವ ಸ್ಟೇಷನ್ ರಸ್ತೆಯಲ್ಲಿರುವ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕಬ್ಬಿಣದ ಕಂಬವೊಂದು ಮಹಿಳೆ ಮತ್ತು ಅವರ ಮಗಳನ್ನು ಹೊತ್ತೊಯ್ಯುತ್ತಿದ್ದ ಆಟೋ ಮೇಲೆ ಬಿದ್ದಿದೆ. ಘಟನೆಯಲ್ಲಿ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. …

Read More »

ಕಾಪು: ಬಸ್ ಢಿಕ್ಕಿ – ವಿದ್ಯಾರ್ಥಿನಿಗೆ ಗಂಭೀರ ಗಾಯ

ಕಾಪು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕಾಪು ಮಹಾದೇವಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಶೇರ್ವೆಗಾರ (13) ಗಾಯಾಳು ವಿದ್ಯಾರ್ಥಿನಿ. ಶನಿವಾರ ಬೆಳಗ್ಗೆ ಶಾಲೆಗೆ ಬರುತ್ತಿದ್ದ ಆಕೆ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬಾಲಕಿಯ ತಲೆಗೆ ಗಂಭೀರ ಏಟಾಗಿದ್ದು ಗಂಭೀರ ಗಾಯಗೊಂಡಿರುವ ಆಕೆಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು …

Read More »

BREAKING NEWS : ಸಂಸದ ಆರ್. ಧ್ರುವನಾರಾಯಣ ನಿಧನ

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಆರ್. ಧ್ರುವ ನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್​ಎಂಎಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನನಿಸಿದ್ದ ಧ್ರುವನಾರಾಯಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್​​ಸಿ ಕೃಷಿ ಪದವಿ ಪಡೆದುಕೊಂಡಿದ್ದರು. ನಂತರ ಸ್ನಾತಕೋತ್ತರ ಪದವಿ ಪಡೆದು, 1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ …

Read More »

ಕಸಾಯಿಖಾನೆಗೆ ತರುತ್ತಿದ್ದ ವೇಳೆ ರೊಚ್ಚಿಗೆದ್ದ ಎಮ್ಮೆ; ಕೊಂಬಿನಿಂದ ತಿವಿದು ಯುವಕ ಬಲಿ

ಕಾಸರಗೋಡು: ಕಸಾಯಿಖಾನೆಗೆಂದು ತಂದ ಎಮ್ಮೆಯೊಂದು ರೊಚ್ಚಿಗೆದ್ದು ಯುವಕನನ್ನು ತಿವಿದು ಬಲಿ ಪಡೆದುಕೊಂಡ ಘಟನೆ ಗುರುವಾರ ಸಂಜೆ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೃತನನ್ನು ಮೊಗ್ರಾಲ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಸಾದಿಕ್ (22) ಎಂದು ಗುರುತಿಸಲಾಗಿದೆ. ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಹಗ್ಗ ತುಂಡಾಗಿ ಎಮ್ಮೆ ತಪ್ಪಿಸಿಕೊಂಡಿದೆ. ಓಡುತ್ತಿರುವ ಎಮ್ಮೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ ಕೊಂಬಿನಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದೆ. ಗಂಭೀರ ಗಾಯಗೊಂಡ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಎಮ್ಮೆ ಮೊಗ್ರಾಲ್‌ …

Read More »

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಶಾರೀಕ್ ಟಾರ್ಗೆಟ್!

ಮಂಗಳೂರು: ಕದ್ರಿ ದೇವಸ್ಥಾನವೇ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್‍ನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಹೌದು.ಮಂಗಳೂರಿನ ಪಂಪ್‍ವೆಲ್, ರೈಲ್ವೇ ನಿಲ್ದಾಣ, ಆರ್‌ಎಸ್‌ಎಸ್ ಕಚೇರಿ ಶಾರೀಕ್‍ನ ಟಾರ್ಗೆಟ್ ಆಗಿರಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಈಗ ಕದ್ರಿ ದೇವಸ್ಥಾನವೇ ಆತನ ಟಾರ್ಗೆಟ್ ಆಗಿತ್ತು ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳದ ಮೂಲಗಳಿಂದ ತಿಳಿದು ಬಂದಿದೆ. ಎರಡೂವರೆ ತಿಂಗಳ ಚಿಕಿತ್ಸೆಯ ಬಳಿಕ ಶಾರೀಕ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾರ್ಚ್ 6 ರಂದು ಬಿಡುಗಡೆಯಾಗಿದ್ದ. ಸದ್ಯ ಎನ್‍ಐಎ ಕಸ್ಟಡಿಯಲ್ಲಿರುವ ಶಾರೀಕ್‍ನನ್ನು ಅಧಿಕಾರಿಗಳು …

Read More »

ಭಾರತದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ! ಹೆಸರೇನು ಗೊತ್ತಾ?

ಕೇರಳ: ತೃತೀಯಲಿಂಗಿ ದಂಪತಿಯ ಪುರುಷ ಸಂಗಾತಿಯು ದೇಶದಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ತೃತೀಯಲಿಂಗಿ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡುವ ಮೂಲಕವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೇರಳದ ಕೋಝಿಕ್ಕೋಡ್ನ ಉಮ್ಮಲತ್ತೂರ್ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದು ಇದೀಗ ದಂಪತಿ ಮಗುವಿಗೆ ನಾಮಕರಣ ಮಾಡಿದ್ದಾರೆ. ಬುಧವಾರ ಸಂಜೆ ಕೋಝಿಕ್ಕೋಡ್ ಜಿಲ್ಲೆಯ ತೆರೆದ ಸ್ಥಳದಲ್ಲಿ ನಡೆದ ಈ ಸಮಾರಂಭದಲ್ಲಿ ಮಗುವಿಗೆ ಜಬಿಯಾ ಜಹದ್ ಎಂದು ನಾಮಕರಣ ಮಾಡಲಾಗಿದೆ. ಈ ಸಂಭ್ರಮದಲ್ಲಿ ಹಲವಾರು ಟ್ರಾನ್ಸ್‌ಜೆಂಡರ್ ಸಮುದಾಯದ ವ್ಯಕ್ತಿಗಳು, ಕುಟುಂಬಸ್ಥರು, ಹಿತೈಷಿಗಳು …

Read More »

ಈ ದೇಶದಲ್ಲಿ ಮದುವೆಯಾಗದೆ ಮಕ್ಕಳ ಜನನಕ್ಕೆ ಅವಕಾಶ

ಕುಸಿಯುತ್ತಿರುವ ಜನಸಂಖ್ಯೆಯಿಂದ ತೊಂದರೆಗೀಡಾದ ಚೀನಾ ದಿನದಿಂದ ದಿನಕ್ಕೆ ಹೊಸ ಕಾನೂನುಗಳನ್ನು ಮಾಡಲು ಪ್ರಾರಂಭಿಸಿದೆ. ಈಗ ಚೀನಾ ‘ಬ್ರೈಡ್ ಪ್ರೈಸ್’ ಎಂಬ ಸಂಪ್ರದಾಯವನ್ನು ರದ್ದುಗೊಳಿಸಿದೆ, ಇದರಿಂದಾಗಿ ಜನರು ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಬಹುದು ಮತ್ತು ಜನರು ಸುಲಭವಾಗಿ ಮದುವೆಯಾಗಬಹುದು. ಹುಡುಗರು ಹುಡುಗಿಯರಿಗೆ ವರದಕ್ಷಿಣೆ ನೀಡುವ ಸಂಪ್ರದಾಯ ಇಲ್ಲಿದೆ. ಇಲ್ಲಿ ಮದುವೆಯ ಆಚರಣೆಗಳು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತವೆ. ಇದಲ್ಲದೆ, ಮದುವೆಯಲ್ಲಿ ಸಾಕಷ್ಟು ವೆಚ್ಚವೂ ಇದೆ. ಈ ಕಾರಣದಿಂದಾಗಿ, ಅನೇಕ ಜನರು ಮದುವೆಯಾಗುವುದಿಲ್ಲ. ಈಗ ಚೀನಾ ಸರ್ಕಾರವು ಈ ಸಂಪ್ರದಾಯವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಇದಲ್ಲದೆ, ಕೆಲವು ದಿನಗಳ …

Read More »

ಯುವಕನ ಮೇಲೆ ರಾಡ್‌ನಿಂದ ಹಲ್ಲೆ; ಅಟ್ಟಹಾಸ ಮೆರೆದ ಚಿಗುರು ಮೀಸೆ ಯುವಕರು!

ವಿಟ್ಲ: ಕ್ಷುಲ್ಲಕ ಕಾರಣಕ್ಕೆ ರಸ್ತೆಬದಿಯಲ್ಲಿ ಫೋನ್‌ನಲ್ಲಿ ಮಾತಾನಾಡುತ್ತಿದ್ದ ಯುವಕನ ಮೇಲೆ ಹಲ್ಲೆಗೈದ ಘಟನೆ ವಿಟ್ಲದ ಕಂಬಳಬೆಟ್ಟು ದರ್ಗಾದ ಬಳಿ ನಡೆದಿದೆ. ಮಹಮ್ಮದ್ ಅನ್ವರ್ ಎಂಬ ಯುವಕ ಕಂಬಳಬೆಟ್ಟು ದರ್ಗಾದ ಬಳಿ ಫೋನ್ ನಲ್ಲಿ ಮಾತನಾಡುವಾಗ ಸಿನಾನ್, ರಾಬಿ, ಸಿಯಾನ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ರಾತ್ರಿ 10.30 ಗಂಟೆಗೆ ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಮೂರು ದ್ವಿ ಚಕ್ರ ವಾಹನದಲ್ಲಿ ಬಂದ ಸಿನಾನ್‌ ಯಾನೆ ಚಿನ್ನು , …

Read More »

You cannot copy content of this page.