ತಾಜಾ ಸುದ್ದಿ

ಉಳ್ಳಾಲ: ನಿಷೇಧಿತ ಡ್ರಗ್ಸ್‌ ಮಾರಾಟಕ್ಕೆ ಯತ್ನ – ಓರ್ವನ ಬಂಧನ

ಉಳ್ಳಾಲ: ಖಾಸಗಿ ಕಾಲೇಜು ವಸತಿಗೃಹದ ಸಮೀಪ ಡ್ರಗ್ಸ್‌ ಮಾರಾಟ ನಡೆಸಲು ಮನೆಯ ಬಳಿಯಿರುವ ಶೆಡ್‌ ನಲ್ಲಿ ದಾಸ್ತಾನಿರಿಸಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ರೂ.3, 60, 000 ಮೌಲ್ಯದ 72 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಗಂಬಿಲ ವೈದ್ಯನಾಥ ನಗರ ನಿವಾಸಿ ಅಕ್ಷತ್‌ ಕುಮಾರ್‌ (32) ಎಂಬಾತನನ್ನು ಬಂಧಿಸಲಾಗಿದೆ. ಕೋಟೆಕಾರು ಗ್ರಾಮದ ಖಾಸಗಿ ಕಾಲೇಜಿನ ಪುರುಷರ ವಸತಿ ಗೃಹದ ಸಮೀಪದ ತನ್ನ ಮನೆಯ ಶೆಡ್‌ ನಲ್ಲಿ ಪ್ಲಾಸ್ಟಿಕ್‌ ಲಕೋಟೆ ಹಾಗೂ ಪ್ಲಾಸ್ಟಿಕ್‌ ಡಬ್ಬದಲ್ಲಿ ಎಂಡಿಎಂಎ …

Read More »

ಉಡುಪಿ: ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ- ಶಾಸಕ ಯಶ್ ಪಾಲ್‌ ಸುವರ್ಣ

ಉಡುಪಿ: ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ಬಗ್ಗೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರವೇ ಮಳೆಯಾದಲ್ಲಿ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದರು. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ನಗರಸಭೆ ವ್ಯಾಪ್ತಿಯಲ್ಲಿ ರೇಶನಿಂಗ್ ವ್ಯವಸ್ಥೆಯಡಿ ನೀರು ಕೊಡುವ ವ್ಯವಸ್ಥೆ 5 ದಿನಕ್ಕೊಮ್ಮೆ ನಡೆಯುತ್ತಿದೆ. ಬಜೆ ಡ್ಯಾಂನಲ್ಲಿ ಇನ್ನು 3-4 ದಿನಕ್ಕೆ ಬೇಕಾಗುವಷ್ಟು ನೀರಿನ ಪ್ರಮಾಣವಿದೆ. ಸಮಸ್ಯೆ ಇರುವಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾರ್ಕಳ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಹರಿವು ಆರಂಭಗೊಂಡಿದೆ ಎಂಬ ಮಾಹಿತಿ …

Read More »

1 ರೂಪಾಯಿಗೆ ಬಿರಿಯಾನಿ ಇದೆಯೆಂದು ಜಾಹೀರಾತು ಕೊಟ್ಟ ಹೊಟೇಲ್ ಮಾಲಕ, ಬಿರಿಯಾನಿಗಾಗಿ ನೂಕುನುಗ್ಗಲು, ಬಿರಿಯಾನಿ ಖಾಲಿ, ಮುಂದೆ ಆಗಿದ್ದೆಲ್ಲ ಅನಾಹುತ

ತೆಲಂಗಾಣ: ಉದ್ಯಮಿಯೊಬ್ಬ ಹೊಸ ಹೋಟೆಲ್​ ಆರಂಭಿಸಿ ತನ್ನ ಹೋಟೆಲ್​ ಬಗ್ಗೆ ಜನಕ್ಕೆ ತಿಳಿಯಲೆಂದು 1 ರೂಪಾಯಿ ನೋಟ್​ಗೆ ಒಂದು ಬಿರಿಯಾನಿ ಕೊಡುವುದಾಗಿ ಪ್ರಚಾರ ನಡೆಸಿದ್ದ ಇದರಿಂದ ಜನರು ಬಿರಿಯಾನಿಗೆ ಮುಗಿಬಿದ್ದಿದ್ದು ಹೊಟೇಲ್ ಬಳಿ ಹೈಡ್ರಾಮವೇ ನಡೆದಿದೆ‌ಕರೀಂನಗರದ ಹೊಟೇಲ್‌ ವೊಂದರಲ್ಲಿ ಉದ್ಘಾಟನಾ ಕೊಡುಗೆಯಾಗಿ ಒಂದು ರೂಪಾಯಿಗೆ ಬಿರಿಯಾನಿ ಘೋಷಿಸಿದ್ದು ಜನರ ದಂಡೇ ಬಿರಿಯಾನಿ ಕೊಂಡೊಯ್ಯಲು ಹರಿದು ಬಂದಿತ್ತು. ಜನರು ವಾಹನಗಳಲ್ಲಿ ಬಂದ ಕಾರಣ ಸಂಚಾರ ದಟ್ಟನೆಯೂ ಉಂಟಾಗಿತ್ತು. ಒಂದು ರೂಪಾಯಿಯ ಬಿರಿಯಾನಿ ಪ್ರಚಾರದ ಎಫೆಕ್ಟ್‌ನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್​ಗೆ ಆಗಮಿಸಲು ಪ್ರಾರಂಭಿಸಿದರು. ಹೋಟೆಲ್​ ಮಾಲೀಕರ …

Read More »

ಕಾರ್ಕಳ: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಶೋಕ್‌ ಶೆಟ್ಟಿಯವರ ಮಗ ಅಮೃತ್‌ ಶೆಟ್ಟಿ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವ್ಯಾಸಾಂಗ ಮಾಡುತ್ತಿದ್ದ. ಮನನೊಂದು ಜೋಡುರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‌ಮೃತ ವಿದ್ಯಾರ್ಥಿ ತಂದೆ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Read More »

ಉಡುಪಿ : ‘ಡ್ರಗ್ಸ್’ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಬಂಧನ

ಉಡುಪಿ : ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಮೂಲದ ನಿಭೀಷ್ (23) ಅಮಲ್ (22) ಎಂದು ಗುರುತಿಸಲಾಗಿದೆ. ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿ ಗಾಂಜಾ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 35 ಸಾವಿರ ಮೌಲ್ಯದ ಮೆಥಾಂಪೆಟಮೆನ್ ಮಾದಕ ದ್ರವ್ಯ, 2 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ . ಈ ಸಂಬಂಧ ಮಣಿಪಾಲ ಪೊಲೀಸ್ …

Read More »

ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಕಿರುತೆರೆ ನಟನಿಗೆ ವಂಚನೆ- ನಟಿ ಅರೆಸ್ಟ್‌

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಕಿರುತೆರೆ ನಟನಿಗೆ ವಂಚಿಸಿದ್ದ ನಟಿ ಉಷಾ ರವಿಶಂಕರ್ ಅವರನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ನಟಿ ಉಷಾ ರವಿಶಂಕರ್ ಕಿರುತೆರೆ ನಟ ಶರವಣನ್ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದರು. ಈ ಸಂಬಂಧ ನಟಿ ವಿರುದ್ಧ ಕೋರ್ಟ್ ನಲ್ಲಿ ಶರವಣನ್ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ನಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆ ವೇಳೆ ಕೋರ್ಟ್ ನಟಿ ಗೈರಾಗಿದ್ದರಿಂದ ಆಕೆಯ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ಕೋರ್ಟ್ ಆದೇಶದಂತೆ ನಟಿಯನ್ನು ಬಂಧಿಸಿರುವ …

Read More »

BREAKING NEWS: ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಬೋರ್ಡ್ ಕಡ್ಡಾಯ

ಬೆಂಗಳೂರು: ಪೊಲೀಸ್ ಠಾಣೆಗೆ ಬರುವಂತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಠಾಣೆಗಳಲ್ಲಿ ದಾಖಲಾಗುವಂತ ದೂರುಗಳ ಸಂಬಂಧ ಯಾರನ್ನು ಸಂಪರ್ಕಿಸಬೇಕು ಎನ್ನುವ ಬಗ್ಗೆ ಬೋರ್ಡ್ ಗಳಲ್ಲಿ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಡಿಜಿ ಮತ್ತು ಐಜಿಪಿ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಪಿ, …

Read More »

BIG NEWS: ಇಂಫಾಲದಲ್ಲಿ ಕೇಂದ್ರ ಸಚಿವ ʻಆರ್ ಕೆ ರಂಜನ್ ಸಿಂಗ್ʼ ಮನೆಗೆ ಬೆಂಕಿ

ನವದೆಹಲಿ: ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ಇತ್ತೀಚಿನ ಘಟನೆಯಲ್ಲಿ ಕಳೆದ ರಾತ್ರಿ ಮಣಿಪುರದಲ್ಲಿ ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ ಮನೆ ಮೇಲೆ 1,000 ಕ್ಕೂ ಹೆಚ್ಚು ಜನರ ಗುಂಪೊಂದು ದಾಳಿ ಮಾಡಿದೆ. ಘಟನೆಯ ವೇಳೆ ಆರ್‌ಕೆ ರಂಜನ್ ಸಿಂಗ್ ಅವರು ಇಂಫಾಲ್‌ನ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಫಾಲದಲ್ಲಿ ಕರ್ಫ್ಯೂ ಇದ್ದರೂ ಜನಸಮೂಹ ಕೊಂಗ್ಬಾದಲ್ಲಿರುವ ಸಚಿವರ ಮನೆಗೆ ತಲುಪುವಲ್ಲಿ ಯಶಸ್ವಿಯಾಯಿತು. ಘಟನೆಯ ವೇಳೆ ಸಚಿವರ ನಿವಾಸದಲ್ಲಿ ಒಂಬತ್ತು ಭದ್ರತಾ …

Read More »

ಸಿಎಂ ಸಿದ್ದು ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ 5 ಮಹತ್ವದ ನಿರ್ಧಾರ ; ಇಲ್ಲಿದೆ ಡಿಟೈಲ್ಸ್

ಬೆಂಗಳೂರು : ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದ್ದು, ಬಿಜೆಪಿ ಸರ್ಕಾರದ ಬಹುತೇಕ ಕಾಯ್ದೆಗಳಿಗೆ ಕೊಕ್ ನೀಡಲಾಗಿದೆ. ಅದ್ರಂತೆ, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.   ಇನ್ನು ಶಾಲಾ ಪಠ್ಯ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಇತರರ ಶಾಲಾ ಪಠ್ಯಪುಸ್ತಕ ಪಾಠಗಳನ್ನ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿದೆ. ಇನ್ನು ಇನ್ನೊಂದು ಮಹತ್ವದ ನಿರ್ಧಾರ ಎನ್ನುವಂತೆ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು …

Read More »

BREAKING NEWS : ಕರ್ನಾಟಕದಲ್ಲಿ ‘ಮತಾಂತರ ನಿಷೇಧ ಕಾಯ್ದೆ’ ರದ್ದು

ಬೆಂಗಳೂರು : ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇನ್ನು ಪಠ್ಯ ಪರಿಷ್ಕರಣೆಯ ಅಂತಿಮ ವರದಿ ಸಿದ್ಧವಾಗಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಮತ್ತು ಇತರರ ಶಾಲಾ ಪಠ್ಯಪುಸ್ತಕ ಪಾಠಗಳನ್ನ ತೆಗೆದುಹಾಕಲು ಕ್ಯಾಬಿನೆಟ್ ನಿರ್ಧರಿಸಿದೆ.   ಇನ್ನು ಇನ್ನೊಂದು ಮಹತ್ವದ ನಿರ್ಧಾರ ೆನ್ನುವಂತೆ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದನ್ನ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

Read More »

You cannot copy content of this page.