ತಾಜಾ ಸುದ್ದಿ

ಉಪ್ಪಿನಂಗಡಿ: ಹೆರಿಗೆ ವೇಳೆ ತೀವ್ರ ರಕ್ತಸ್ರಾವದಿಂದ ಆಶಾ ಕಾರ್ಯಕರ್ತೆ ಮೃತ್ಯು..!!

ಉಪ್ಪಿನಂಗಡಿ: ಮಹಿಳೆಯೋರ್ವರು ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ. ಮೃತರನ್ನು ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರಕರ್ತೆ ಭವ್ಯ (28 ವ.) ಎನ್ನಲಾಗಿದೆ. ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ. ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾಗುತ್ತಲೇ ತೀವ್ರ ರೀತಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ಇದನ್ನು …

Read More »

ವೇಣೂರು: KSRTC ಬಸ್ಸಿಗೆ ಬೈಕ್ ಢಿಕ್ಕಿ: ಹುಟ್ಟುಹಬ್ಬದ ದಿನದಂದೇ ಯುವಕ ಮೃತ್ಯು

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ಸಂಭವಿಸಿದೆ. ಮೃತ ಯುವಕ ಓಡೀಲು ನಿವಾಸಿಯಾಗಿರುವ ದೀಕ್ಷಿತ್ ಎಂದು ಗುರುತಿಸಲಾಗಿದೆ. ಇಂದು ದೀಕ್ಷಿತ್ ನ ಹುಟ್ಟುಹಬ್ಬವಾಗಿದ್ದು ಈ ಹಿನ್ನಲೆಯಲ್ಲಿ ಬೆಳಿಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವೇಣೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

26/11 ದಾಳಿಯ ಮಾಸ್ಟರ್ ಮೈಂಡ್ ‘ಸಾಜಿದ್ ಮಿರ್’ ಕಪ್ಪುಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆ ಪ್ರಸ್ತಾವಕ್ಕೆ ‘ಚೀನಾ’ ತಡೆ

ನವದೆಹಲಿ : 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಉಗ್ರ ಸಾಜಿದ್ ಮಿರ್’ನನ್ನ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ಎಂದು ಅಮೆರಿಕ ಮತ್ತು ಭಾರತ ವಿಶ್ವಸಂಸ್ಥೆಯಲ್ಲಿ ಮಾಡಿದ ಪ್ರಸ್ತಾಪವನ್ನ ಚೀನಾ ಮಂಗಳವಾರ ತಡೆದಿದೆ.

Read More »

ದ.ಕ. ನೂತನ ಎಸ್‌ಪಿಯಾಗಿ ಸಿಬಿ ರಿಷ್ಯಂತ್ ನೇಮಕ

ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‌ಪಿ) ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್ ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. 2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಿಷ್ಯಂತ್ ಅವರು ಈ ಹಿಂದೆ ದಾವಣಗೆರೆಯ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು. ಬೆಂಗಳೂರಿನವರಾದ ರಿಷ್ಯಂತ್ ಅವರು ಈ ಹಿಂದೆ ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ …

Read More »

‘ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರದಿರಲಿ’ – ಮಂಗಳೂರು ಪೊಲೀಸರ ಕಾರು ಬ್ಯಾನರ್‌ ವೈರಲ್..!

ಮಂಗಳೂರು: ಜೂ.11ರಂದು ಅಪಘಾತಕ್ಕೀಡಾದ ನ್ಯಾನೊ ಕಾರೊಂದನ್ನು ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಕಾರಿನಲ್ಲಿ ಅಳವಡಿಸಲಾದ ಬ್ಯಾನರ್ ನಲ್ಲಿ ವಿಮೆ ಮಾಡುವುದರ ಮಹತ್ವದ ಕುರಿತು ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾರಿಗೆ ವಿಮೆ ನವೀಕರಣದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್ ಹಾಕಲಾಗಿದ್ದು, ‘ನನ್ನ ಮಾಲಿಕ ನನಗೆ ಇನ್ಸುರೆನ್ಸ್ ಮಾಡಿಸಿಲ್ಲ. ಜೂ.11ರಂದು ಯೆಯ್ಯಾಡಿಯಲ್ಲಿ ಮಾಲಿಕನು ನಿರ್ಲಕ್ಷ್ಯದಿಂದ ನನ್ನನ್ನು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ. ವಿಮೆ ಇಲ್ಲದ ಕಾರಣ ನನ್ನನ್ನು …

Read More »

ಮಂಗಳೂರು: ಜಾಗ ಕೊಡಿಸುವುದಾಗಿ ನಂಬಿಸಿ 35 ಲಕ್ಷ ವಂಚನೆ..!

ಮಂಗಳುರು : ಜಾಗ ಕೊಡಿಸುವುದಾಗಿ ನಂಬಿಸಿದ ರಿಯಲ್ ಎಸ್ಟೇಟ್‌ ಏಜೆಂಟರು ಎಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು ಎರಡು ಹಂತಗಳಲ್ಲಿ ಒಟ್ಟು 35 ಲಕ್ಷ ಮೊತ್ತ ಪಡೆದು ವ್ಯಕ್ತಿಯನ್ನು ವಂಚಿಸಿರುವುದರ ಬಗ್ಗೆ ಕೇಂದ್ರ ಅ‍‍ಪರಾಧ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರೋಕರ್ ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ಎಂದು ಹೇಳಿಕೊಂಡ ತಿಪ್ಪೇಸ್ವಾಮಿ ಮತ್ತು ಹರ್ಷವರ್ಧನ ಗೌಡ ಉಳ್ಳಾಲದಲ್ಲಿ ಜಾಗ ಮಾರಾಟಕ್ಕೆ ಇದ್ದು ಅದನ್ನು ಕೊಡಿಸುವುದಾಗಿ ಹೇಳಿ ದೂರುದಾರ ವ್ಯಕ್ತಿಯಿಂದ ಮೊದಲು ಆರ್‌ಟಿಜಿಎಸ್ ಮೂಲಕ 25 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದರು. ಮತ್ತೊಂದು ದಿನ 10 ಲಕ್ಷ ನಗದು ಪಡೆದುಕೊಂಡಿದ್ದರು. …

Read More »

ಅಕ್ರಮ ಗೋ ಫಾರ್ಮ್ ಕಟ್ಟಡ ರಚನೆ- ಹಿಂದೂ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ

ವಿಟ್ಲ ಸಮೀಪದ 20 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಹೊಂದಿ ಬಿ.ಜೆ.ಪಿ ಯ ಆಡಳಿತವಿರುವ ಪುಣಚ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಬರುವ ಕೋಡಂಚಡ್ಕ ಬೈರಿಕಟ್ಟೆ ಎಂಬಲ್ಲಿ ಅನ್ಯಮತೀಯ ವ್ಯಕ್ತಿ ಅಬ್ದುಲ್ಲ ಮಾದುಮೂಲೆ ಎಂಬಾತ ಅಕ್ರಮವಾಗಿ ಕಟ್ಟಡ ಕಟ್ಟಿ ಅದರಲ್ಲಿ ಗೋ ಫಾರ್ಮ್ (ಭವಿಷ್ಯದ ಕಸಾಯಿಖಾನೆ) ಮಾಡಲು ಪ್ರಯತ್ನ ಮಾಡುತ್ತಿದ್ದಾನೆ, ಈ ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸಲು ಪರವಾನಿಗೆ ನೀಡಲಾಗುತ್ತದೆ,ಈ ಅಕ್ರಮ ಕಟ್ಟಡಕ್ಕೆ ಪರವಾನಿಗೆ ನೀಡಲು ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಹುನ್ನಾರವಿದೆ, ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಅವಕಾಶವಿದ್ದರೂ ಕೂಡ ಯಾವುದೇ ಕ್ರಮವನ್ನು ಪಂಚಾಯತ್ ಕೈಗೊಳ್ಳಲಿಲ್ಲ, ಇದರ …

Read More »

ಮಂಗಳೂರು: ಕೆನಡಾದಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿ ವಂಚನೆ

ಮಂಗಳೂರು: ಕೆನಡಾದಲ್ಲಿ ಉದ್ಯೋಗ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ವ್ಯಕ್ತಿಯೋರ್ವರು ವಿದೇಶದಲ್ಲಿ ಉದ್ಯೋಗಾವಕಾಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಮಾ. 28ರಂದು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಲಿಯಂ ಪೌಲ್‌ ಆಯಂಟನಿಯ ಪರಿಚಯವಾಗಿತ್ತು. ಆತ ತಾನು ಕೆನಡಾ ದೇಶದ ಪ್ರಜೆಯಾಗಿದ್ದು, ಇಮಿಗ್ರೇಷನ್‌ ಅಧಿಕಾರಿಯಾಗಿರುವುದಾಗಿ ಪರಿಚಯಿಸಿಕೊಂಡು ಕೆನಡಾ ದೇಶದಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ನಂಬಿಸಿದ್ದ. ಅನಂತರ ವಾಟ್ಸ್‌ಆಯಪ್‌ ಮೂಲಕ ನಿರಂತರ ಸಂಪರ್ಕದಲ್ಲಿದ್ದ. ಉದ್ಯೋಗ ನೇಮಕಾತಿಯ ಬಗ್ಗೆ ವಿವಿಧ ದಾಖಲೆಗಳನ್ನು ಕಳುಹಿಸುತ್ತಿದ್ದ. ನೇಮಕಾತಿಯ ಬಗ್ಗೆ ವಿವಿಧ ಕಾರಣಗಳನ್ನು ನೀಡಿ ಮಾ. 28ರಿಂದ ಜೂ. 9ರ …

Read More »

ಮತಾಂತರ – ಗೋಹತ್ಯೆ ನಿಷೇಧ ಹಿಂಪಡೆಯುವುದಕ್ಕೆ ಪೇಜಾವರ ಶ್ರೀಗಳ ವಿರೋಧ

ರಾಜ್ಯ ಸರ್ಕಾರ, ಮತಾಂತರ ನಿಷೇಧ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಮುಂದಾಗಿರುವುದಕ್ಕೆ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ಈ ಕ್ರಮ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ಮತಾಂತರದ ಕಾರಣಕ್ಕೆ ಕುಟುಂಬಗಳು ಛಿದ್ರವಾಗುತ್ತಿರುವುದನ್ನು ಮನಗಂಡು ಈ ಹಿಂದಿನ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಗೋ ಹತ್ಯೆ ತಡೆಯುವ ಸಲುವಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ಈ ಎರಡೂ ಕಾಯ್ದೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ …

Read More »

ಅಂತರ್ ಧರ್ಮೀಯ ಜೋಡಿಯ ವಿವಾಹ, ವಧುವನ್ನು ದೇವಸ್ಥಾನದಿಂದ ಎಳೆದುಕೊಂಡು ಹೋದ ಪೊಲೀಸರು..!

ಕೇರಳ; ಕೇರಳದ ಕಾಯಂಕುಲಂ ಪೊಲೀಸರು ಅಂತರ್ಧರ್ಮೀಯ ಜೋಡಿಯನ್ನು ಮದುವೆಯಾಗುವುದನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದೂ ಯುವಕನೊಂದಿಗೆ ಮದುವೆಯಾಗಲು ಹೊರಟ ಮುಸ್ಲಿಂ ಯುವತಿಗೆ ತಾಳಿ ಕಟ್ಟುವ ನಿಮಿಷಗಳ ಮೊದಲು ಕೋವಲಂನ ದೇವಸ್ಥಾನದಿಂದ ಪೊಲೀಸರು ಯುವತಿನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಖಿಲ್ ಮತ್ತು ಅಲ್ಫಿಯಾ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದರು. ವರದಿಗಳ ಪ್ರಕಾರ, ಇವರಿಬ್ಬರು ಭಾನುವಾರ ಸಂಜೆ 5 ಗಂಟೆಗೆ ಕೋವಲಂನ ಕೆಎಸ್ ರಸ್ತೆಯಲ್ಲಿರುವ ಮಲವಿಲಾ ಪನಮೂಟ್‌ನಲ್ಲಿರುವ ಶ್ರೀ ಮದನ್ ತಂಪುರಾನ್ ದೇವಸ್ಥಾನವನ್ನು ತಲುಪಿದ್ದಾರೆ ಕಾಯಂಕುಲಂ ಪೊಲೀಸರು ಸ್ಥಳಕ್ಕೆ ಆಗಮಿಸಿ …

Read More »

You cannot copy content of this page.