ತಾಜಾ ಸುದ್ದಿ

ಕಾಪು: ಬಿರುಸಿನ ಮಳೆಗೆ ಇನ್ನಂಜೆಯ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಉಡುಪಿ: ಜಿಲ್ಲೆಯ ವಿವಿಧೆಡೆ ಕಳೆದ 4 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಗದ್ದೆಗಳಿಗೆ ನೀರು ನುಗ್ಗಿ ತೀವ್ರ ಬೆಳೆ ಹಾನಿಯಾಗಿದೆ. ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಕಲಿಯಾಲು ಎಂಬಲ್ಲಿ ಫಸಲು ಇದ್ದ ಗದ್ದೆಗೆ ನೀರು ತುಂಬಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಮರ್ಕೋಡಿ ಹೊಳೆ, ಬಾಲಟ, ಕೋಲ್ಯಾ ನದಿಗಳು ಪಾಂಗಾಳ ಹೊಳೆಗೆ ಹೊಂದಿಕೊಂಡಿದ್ದು, ಭೀಕರ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಿನ್ನಲೆ ಸ್ಥಳೀಯ ಪ್ರಧೇಶಗಳು ಜಲಾವೃತಗೊಂಡಿದ್ದು ನಾಗರೀಕರು ಭಯಭೀತರಾಗಿದ್ದಾರೆ.

Read More »

ಕುಂದಾಪುರ: ಬಸ್ , ಕ್ಯಾಂಟರ್ ಢಿಕ್ಕಿ- 8 ಮಂದಿಗೆ ಗಾಯ

ಕುಂದಾಪುರ: ಬುಧವಾರ ಸಂಜೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಆವರ್ಸೆ ಎಂಬಲ್ಲಿ ಖಾಸಗಿ ಬಸ್ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ ಸಹಿತ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ಲೋಕಲ್ ಸಂಚರಿಸುವ ದುರ್ಗಾಂಭಾ ಬಸ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದುಕೊಂಡಿವೆ. ವಿಪರೀತ ಮಳೆಯಿಂದಾಗಿ ರಸ್ತೆ ಕಾಣಿಸುತ್ತಿರಲಿಲ್ಲ ಎನ್ನಲಾಗಿದ್ದು, ಅಪಘಾತದ ಸ್ಥಳದಲ್ಲಿ ರಸ್ತೆಯ ಮೇಲೆಯೇ ಹೈ ಟೆನ್ಷನ್ ವಯರ್ ಗಳಿರುವ ವಿದ್ಯುತ್ ಕಂಬ ನೆಡಲಾಗಿರುವುದರಿಂದ ಕ್ಯಾಂಟರ್ ಚಾಲಕ ತೀರಾ ಎಡಗಡೆಗೆ ಚಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ …

Read More »

ಅಕ್ಕಿ ಬದಲು ಹಣ ಪಡೆಯುವ ನಿರೀಕ್ಷೆಯಲ್ಲಿದ್ದ `ಪಡಿತರ ಚೀಟಿದಾರ’ರಿಗೆ ಶಾಕ್!

ಬೆಂಗಳೂರು : ಪಡಿತರ ಚೀಟಿದಾರರಿಗೆ ಪಡಿತರ ವಿತರಕರು ಶಾಕ್ ನೀಡಿದ್ದು, ಜುಲೈ 13 ರವರೆಗೆ ಪಡಿತರ ಅಕ್ಕಿ ವಿತರಣೆ ಮಾಡುವುದಿಲ್ಲ ಎಂದು ಸರ್ಕಾರಿ ಪಡಿತರ ವಿತರಕರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು, ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಭೆ ನಡೆಸಿದ್ದು, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ಕೊಡುವುದಕ್ಕೆ ವಿತರಕರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಆಹಾರ ಪದಾರ್ಥಗಳ ಬದಲಾಗಿ ಪಡಿತರ ಚೀಟಿದಾರರಿಗೆ ಹಣ ನೀಡಿದರೆ ಪಡಿತರ ವಿತರಕರಿಗೆ ಕಮಿಷನ್ ಕಡಿಮೆ ಆಗಲಿದೆ. ಆದ್ದರಿಂದ …

Read More »

ವಿವಾಹವಾಗದವರಿಗೆ ಸರಕಾರದಿಂದ ಸಿಗಲಿದೆ’ಬ್ರಹ್ಮಚಾರಿ’ ಪಿಂಚಣಿ..!

ಹರ್ಯಾಣ: ಹರ್ಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬ್ಯಾಚುಲರ್‌ಗಳಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಹರಿಯಾಣದಲ್ಲಿ ಪ್ರಸ್ತುತ ವೃದ್ಧಾಪ್ಯ ವೇತನ, ವಿಧವಾ ಮತ್ತು ನಿರ್ಗತಿಕ ಪಿಂಚಣಿ, ಅಂಗವಿಕಲರ ಪಿಂಚಣಿ, ನಿರ್ಗತಿಕ ಮಕ್ಕಳಿಗೆ ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ತೃತೀಯ ಲಿಂಗಿಗಳಿಗೆ ಪಿಂಚಣಿ, ಕುಬ್ಜರಿಗೆ ಪಿಂಚಣಿ ಮತ್ತು ಪತ್ರಕರ್ತ ಪಿಂಚಣಿ ನೀಡಲಾಗುತ್ತಿದೆ. ಬ್ರಹ್ಮಚಾರಿಗಳಿಗೆ ಪಿಂಚಣಿ ಯೋಜನೆ ಜಾರಿಗೆ ತರಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಖಟ್ಟರ್​ ತಿಳಿಸಿದ್ದಾರೆ. 40 ರಿಂದ 60 ವರ್ಷ ವಯೋಮಾನದವರಿಗೆ ಈ ಯೋಜನೆಯನ್ನು ಜಾರಿಗೆ …

Read More »

ತಿರುಪತಿ ತಿರುಮಲ ಶ್ರೀ ವೆಂಕಟೇಶ ದೇವಸ್ಥಾನಕ್ಕೆ ಶಿಷ್ಯವೃಂದವರೊಂದಿಗೆ ಭೇಟಿ ನೀಡಿದ ಶೀರೂರು ಶ್ರೀಶ್ರೀ ವೇದವರ್ಧನ ತೀರ್ಥ ಶ್ರೀಪಾದರು

ತಿರುಪತಿ ಶ್ರೀ ವೆಂಕಟೇಶನ ಸನ್ನಿಧಾನದಲ್ಲಿ ಶೀರೂರು ಶ್ರೀಶ್ರೀ ವೇದವರ್ಧನ ತೀರ್ಥ ಶ್ರೀಪಾದರು. ತಿರುಪತಿ ತಿರುಮಲ ಶ್ರೀ ವೆಂಕಟೇಶ ದೇವಸ್ಥಾನಕ್ಕೆ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಮ್ಮ ಶಿಷ್ಯವೃಂದವರೊಂದಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಟಿಟಿಡಿ ವತಿಯಿಂದ ಶ್ರೀಗಳನ್ನು ಬರಮಾಡಿಕೊಂಡ ಆಡಳಿತ ಮಂಡಳಿ, ಶಿಷ್ಟಾಚಾರ ಪ್ರಕಾರ ಅವರಿಗೆ ಅದ್ದೂರಿ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನ ಸರಳತ್ತಾಯ, ಬಾಲಾಜಿ ರಾಘವೇಂದ್ರ ಆಚಾರ್ಯ, ಶ್ರೀನಿವಾಸ ಯುನಿವರ್ಸಿಟಿಯ ಚಾನ್ಸಲರ್ ರಾಘವೇಂದ್ರ ರಾವ್, ರಮೇಶ ಪೆಜತ್ತಾಯ ಮತ್ತಿತರರು ಉಪಸ್ಥಿತರಿದ್ದರು.

Read More »

ಭಾರೀ ಮಳೆ; ಉಡುಪಿಯ ಸಂತೆಕಟ್ಟೆ ಬೈಪಾಸ್ ರಸ್ತೆ ಕುಸಿಯುವ ಹಂತದಲ್ಲಿ

ಉಡುಪಿ: ಕಳೆದ ಎರಡು ದಿನಗಳಿಂದ ಸುರಿದ ರಣ ಭೀಕರ ಮಳೆಗೆ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಭಾರೀ ಮಳೆಯಿಂದ ಉಡುಪಿಯ ಸಂತೆಕಟ್ಟೆ ಬೈಪಾಸ್ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಇದರಿಂದಾಗಿ ತಮ್ಮ ದೈನಂದಿನ ಸಂಪರ್ಕಕ್ಕಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದ ಜನರಲ್ಲಿ ಸಂಪರ್ಕ ಕಡಿಯುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಉಡುಪಿ: ಜುಲೈ 5 ರತನಕ ರೆಡ್ ಅಲರ್ಟ್ -ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ

ಉಡುಪಿ : ಕರಾವಳಿ ಕರ್ನಾಟಕ ಭಾಗದಲ್ಲಿ ನಾಳೆ ಬೆಳಗ್ಗಿನವರೆಗೂ ಭಾರೀ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜುಲೈ 5ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 5ರ ಬೆಳಗ್ಗೆ 8.30 ತನಕ ರೆಡ್ ಅಲರ್ಟ್ ,ಬಳಿಕ ಜುಲೈ 6ರ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 8ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More »

ಪ್ರಿಯಕರನನ್ನು ಲೂಟಿ ಮಾಡಿ ಬೆತ್ತಲೆಯಾಗಿ ಹೆದ್ದಾರಿಯಲ್ಲಿ ಬಿಟ್ಟು ಹೋದ ಮಹಿಳೆ..!

ಥಾಣೆ: ಭೇಟಿ ಆಗಬೇಕೆಂದು ಕರೆಸಿಕೊಂಡು, ತನ್ನ ಸಹಚರರೊಂದಿಗೆ ಮಹಿಳೆಯೊಬ್ಬಳು ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದನ್ನು ಲೂಟಿ ಮಾಡಿ ನಡು ರಸ್ತೆಯಲ್ಲೇ ಬೆತ್ತಲೆ ಮಾಡಿ ಪರಾರಿ ಆಗಿರುವ ಘಟನೆ ಥಾಣೆಯ ಶಹಾಪುರ ಹೆದ್ದಾರಿಯಲ್ಲಿ ನಡೆದಿರುವುದು ವರದಿಯಾಗಿದೆ. ಘಟನೆ ಹಿನ್ನೆಲೆ: ಕಟ್ಟಡ ನಿರ್ಮಾಣ ಉದ್ಯಮ ಹೊಂದಿರುವ ಶಹಾಪುರ ನಿವಾಸಿ ಬಾಲಾಜಿ ಶಿವಭಗತ್ ಎಂಬಾತ ಶಹಾಪುರ ನಿವಾಸಿ‌ ಭಾವಿಕಾ ಭೋಯಿರ್ ಎಂಬ ಮಹಿಳೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೂ.28 ರಂದು ಭಾವಿಕಾ ಅಟ್ಗಾಂವ್ ಹೆದ್ದಾರಿಯಲ್ಲಿ ಭೇಟಿಯಾಗುವಂತೆ ಶಿವಭಾಗತ್ ಅವರನ್ನು ಕರೆದಿದ್ದಾರೆ. ಈ ವೇಳೆ ಪ್ರಿಯತಮೆ …

Read More »

ಕಾರ್ಕಳ: ಬಜಗೋಳಿಯಲ್ಲಿ ಗೃಹಿಣಿ ಆತ್ಮಹತ್ಯೆ..!

ಕಾರ್ಕಳ: ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಜಗೋಳಿ ಸಮೀಪ ಮುಟ್ರಾಲ್ ದೇವಸ್ಥಾನದ ಬಳಿ ಜು. 3 ರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಪ್ರವೀಣ್‌ ಭಂಡಾರಿ ಎಂಬವರ ಪತ್ನಿ ಭವ್ಯಾ ಭಂಡಾರಿ (31) ಎಂದು ಗುರುತಿಸಲಾಗಿದೆ. ಭವ್ಯಾ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.ಮೃತರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Read More »

ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ದ ವಾಟ್ಸಾಪ್ ಸ್ಟೇಟಸ್ ಹಾಕಿ ಪತ್ನಿ ಆತ್ಮಹತ್ಯೆ..!

ಬೆಂಗಳೂರು: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಗ್ಗನಹಳ್ಳಿ‌ ನಿವಾಸಿ ಪವಿತ್ರಾ ಡೆತ್ ನೋಟ್ ಬರೆದಿಟ್ಟು ವಾಟ್ಸಾಪ್ ಸ್ಟೇಟಸ್ ಹಾಕಿ ಬಳಿಕ ನೇಣಿಗೆ ಶರಣಾಗಿದ್ದಾಳೆ. ಜುಲೈ 2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪವಿತ್ರಾ ಮೊದಲ ಪತಿಗೆ ವಿಚ್ಚೇದನ ನೀಡಿ ಚೇತನ್ ಗೌಡರನ್ನ ಎರಡನೇ ಮದುವೆಯಾಗಿದ್ದಳು. ಚೇತನ್ ಗೌಡ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದರ ಮಾಲೀಕನಾಗಿದ್ದಾನೆ. ಗಂಡನಿಗೆ ಬೇರೊಂದು ಯುವತಿ ಜೊತೆ ಅನೈತಿಕ ಸಂಬಂಧ ಇದೆ ಎಂದು …

Read More »

You cannot copy content of this page.