ತಾಜಾ ಸುದ್ದಿ

ಕಾರ್ಕಳ: ಹೆಡ್‌ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಶರಣು

ಕಾರ್ಕಳ: ಕಾರ್ಕಳ ನಗರ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ಮಿಯ್ಯಾರು ನಿವಾಸಿ ಎಚ್. ಸಿ. ಪ್ರಶಾಂತ್ (49) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮಿಯ್ಯಾರು ಗ್ರಾಮದ ಕಾಜರಬೈಲು ನಿವಾಸಿಯಾಗಿದ್ದ ಅವರು ಅವಿವಾಹಿತರಾಗಿದ್ದರು. ನಗರ ಠಾಣೆಯಿಂದ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು. ಸೇರಿಕೊಳ್ಳದೆ ರಜೆ ಮೇಲೆ ತೆರಳಿದ್ದರು. ಜುಲೈ 16ರಂದು ಮುಂಜಾನೆ ತಾನು ವಾಸವಿದ್ದ ಮನೆಯ ಹಿಂಬದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು …

Read More »

ಮಂಗಳೂರು: ನಕಲಿ‌ ದಾಖಲೆ ಸೃಷ್ಟಿಸಿ ಪ್ಲ್ಯಾಟ್ ಮಾರಾಟದ ಆರೋಪ – ಪ್ರಕರಣ ದಾಖಲು

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಫ್ಲ್ಯಾಟ್ ಮಾರಾಟ ಮಾಡಿರುವ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀತ್ ಶರಣ್, ಶೆರ್ವಿನ್ ಡಿಸೋಜ, ಶಂತನು ಮಲ್ನಾಡರ್, ಸುಕೇತ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಪೆನಿಯ ಆಸ್ತಿಯಂತೆ ನಗರದ ಮಲ್ಲಿಕಟ್ಟೆ, ಕದ್ರಿ ಕಂಬಳದಲ್ಲಿ ಫ್ಲಾಟ್‌ಗಳಿದೆ. ಈ ಕಂಪೆನಿಯ ಅಧಿಕಾರಿ ರವೀಂದ್ರ ಬೆಳೆಯೂರು ಸಾಲಗಳನ್ನು ಪರಿಶೀಲಿಸುವ ವೇಳೆ ಫ್ಲಾಟ್‌ಗಳನ್ನು ನೀತ್ ಶರಣ್ ಎಂಬಾತ ಉಳಿದ ಮೂವರೊಂದಿಗೆ ಸೇರಿಕೊಂಡು ಮಾರಾಟ ಮಾಡಿರುವುದು ತಿಳಿದು ಬಂದಿದೆ. ಇವರು 2022ರ ಮಾರ್ಚ್‌ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಮದಾಸ್ ಮತ್ತು ಶ್ರೀಲತಾ …

Read More »

ಭಾರತೀಯ ಸೇನೆ ಕುರಿತು ISIಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯ ಬಂಧನ..!

ಲಕ್ನೋ: ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನ ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ರಹಸ್ಯವಾಗಿ ತಲುಪಿಸುತ್ತಿದ್ದ ಆರೋಪದ ಮೇಲೆ ಭಾನುವಾರ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶಂಕಿತ ಐಎಸ್‌ಐ ಏಜೆಂಟ್‌ನನ್ನ ಬಂಧಿಸಿದೆ. ಶಂಕಿತ ISI ಏಜೆಂಟ್‌ನನ್ನ ಮೊಹಮ್ಮದ್ ರಯೀಸ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಗೊಂಡಾದ ತರಬ್‌ಗಂಜ್ ಪ್ರದೇಶದ ನಿವಾಸ ಮೊಹಮ್ಮದ್ ರಯೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಮಾನ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಾನೆ. ನಂತರ ಭಾರತದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅರ್ಮಾನ್ ತನ್ನನ್ನ ಪ್ರಚೋದಿಸಲು ಪ್ರತ್ನಿಸಿರುವುದಾಗಿ ರಯೀಸ್ ಎಂದು ತಿಳಿಸಿದ್ದಾರೆ. ವಿಚಾರಣೆಯಲ್ಲಿರಯೀಸ್ಹೇಳಿದ್ದೇನು? …

Read More »

ಕಾಪು: ಕಾರ್ಮಿಕರಿಬ್ಬರ ನಡುವಿನ ಜಗಳ, ಕೊಲೆಯಲ್ಲಿ ಅಂತ್ಯ..!

ಕಾಪು: ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಕೊನೆಗೊಂಡಿರುವ ಘಟನೆ ಕಟಪಾಡಿ ಪೇಟೆಯಲ್ಲಿ ಜು.17ರಂದು ಸಂಜೆ ನಡೆದಿದೆ. ಮೃತರನ್ನು ಒರಿಸ್ಸಾ ಮೂಲದ ಕಾರ್ಮಿಕ ಗಣೇಶ್(50) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಟಪಾಡಿ -ಶಿರ್ವ ರಸ್ತೆಯಲ್ಲಿರುವ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಇವರಿಬ್ಬರ ಮಧ್ಯೆ ಕೆಲಸದ ವಿಚಾರವಾಗಿ ನಡೆದ ಹೊಡೆದಾಟದಲ್ಲಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರ ಕಾರ್ಮಿಕರು ಗಣೇಶ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಗಣೇಶ್ ಮೃತಪಟ್ಟರೆಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಎಸ್ಪಿ ಅಕ್ಷಯ್ …

Read More »

ಉಡುಪಿ :ಟಿಪ್ಪರ್ ಲಾರಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಎಳೆದೊಯ್ದ ಚಾಲಕ- ಭಯಾನಕ ವಿಡಿಯೋ ವೈರಲ್

ಉಡುಪಿ : ಟಿಪ್ಪರ್ ಲಾರಿಯೊಂದರ ಡಂಪರ್ ಗೆ ಸ್ಯಾಂಟ್ರೋ ಕಾರು ಸಿಲುಕಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದೀಗ ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ. ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ. ಈ ವೇಳೆ ಹೆದರಿಕೆಯಿಂದ ಟಿಪ್ಪರ್ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿದ್ದಾನೆ. ಆದರೆ ಟಿಪ್ಪರ್ ನ ಹಿಂಬದಿಗೆ ಕಾರು ಸಿಲುಕಿರುವ ವಿಚಾರ ಚಾಲಕನಿಗೆ ಗೊತ್ತಿಲ್ಲ, ಈ ನಡುವೆ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಟಿಪ್ಪರ್ ಚಾಲಕನಿಗೆ ಬೈದು ನಿಲ್ಲಿಸಿದ ಸಾರ್ವಜನಿಕರು. ಬಳಿಕ ಟಿಪ್ಪರನ್ನು …

Read More »

ಉಡುಪಿ: ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆ್ಯಪ್ – ಜಾಗ್ರತೆ ವಹಿಸಲು ಎಸ್‌ಪಿ ಸೂಚನೆ

ಉಡುಪಿ: ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಅಪ್ಲಿಕೇಷನ್‌ಗಳ ಕುರಿತು ಸಾರ್ವಜನಿಕರು ಎಚ್ಚರ ವಹಿಸುವಂತೆ ಉಡುಪಿ ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ರೀತಿಯ ನಕಲಿ ಅಪ್ಲಿಕೇಷನ್‌ಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್‌ನ್ನು ಬಳಸಬಾರದು. ಈ ರೀತಿಯಾದ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ಯಾವುದೇ …

Read More »

ಅಸ್ವಸ್ಥಳಾಗಿದ್ರೂ ಎಕ್ಸಾಂ ಬರೆಸಿದ ಶಾಲೆ ಶಿಕ್ಷಕರು: ಮರುದಿನ ಬಾಲಕಿ ಸಾವು

ಫರಿದಾಬಾದ್: ಹರ್ಯಾಣದ ಫರಿದಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಅಸ್ವಸ್ಥಳಾಗಿದ್ದರೂ ಪರೀಕ್ಷೆಗಾಗಿ ಶಾಲೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ ಮರುದಿನದ ನಂತರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಲಕಿಯನ್ನು 11 ವರ್ಷದ ಆರಾಧ್ಯ ಖಂಡೇಲ್ವಾಲ್ ಎಂದು ಗುರುತಿಸಲಾಗಿದ್ದು, ಫರಿದಾಬಾದ್‌ನ ಸಿಬಿಎಸ್‌ಇ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಜುಲೈ 13 ರಂದು ಆಕೆ ಸಾವನ್ನಪ್ಪಿದ್ದಾಳೆ. ಜುಲೈ 12 ರಂದು ಶಾಲೆಯಲ್ಲಿ ಆರೋಗ್ಯ ಸರಿಯಿಲ್ಲ ಎಂದು ತನ್ನ ತರಗತಿಯ ಶಿಕ್ಷಕರಿಗೆ ತಿಳಿಸಿದ್ದರೂ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಲೆಯು ಎಕ್ಲಸಾಂ ಬರೆಸಿದೆ ಎಂದು ಆರಾಧ್ಯ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆರಾಧ್ಯ ಸಹಪಾಠಿಯ …

Read More »

ಜಿಲ್ಲಾಧಿಕಾರಿ ಕೂರ್ಮಾರಾವ್ ವರ್ಗಾವಣೆ; ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ

ಉಡುಪಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ವರ್ಗಾವಣೆಗೊಂಡಿದ್ದು, ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ರವರು ಜಿಲ್ಲಾಧಿಕಾರಿಯವರ ತಾಳ್ಮೆ, ಕರ್ತವ್ಯ ನಿಷ್ಠೆ,ನಾಯಕತ್ವ ಗುಣವನ್ನು ಶ್ಲಾಘನೆ ಮಾಡಿ ಶುಭ ಹಾರೈಸಿದರು. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪೂರ್ಣಿಮಾ, ಸಹಾಯಕ ನಿರ್ದೇಶಕಿ ಕನ್ನಡ ಸಂಸ್ಕೃತಿ ಇಲಾಖೆ, ನರಸಿಂಹ ಮೂರ್ತಿ ರಾವ್, ಭುವನಪ್ರಸಾದ ಹೆಗ್ಡೆ,ರಾಮಾಂಜಿ ಉಪಸ್ಥಿತರಿದ್ದರು.

Read More »

ಪೊಲೀಸ್, ವಕೀಲನಂತೆ ಪೋಸ್: ‘ವೇಷಧಾರಿ’ ಪತಿ ವಿರುದ್ಧ ದೂರು ದಾಖಲಿಸಿದ ಮಹಿಳೆ

ನೋಯ್ಡಾ: ಗ್ರೇಟರ್ ನೋಯ್ಡಾದ ಗೌರ್ ಸಿಟಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಪೊಲೀಸ್ ಸಿಬ್ಬಂದಿ ಮತ್ತು ವಕೀಲನಂತೆ ಪೋಸ್‌ ಕೊಡುತ್ತಾ ಇತರರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಿಶಾ ಎಂದು ಗುರುತಿಸಲಾದ ಮಹಿಳೆ, ತನ್ನ ಪತಿ ತನುಜ್ ಸಿಂಗ್ ಈ ನಕಲಿ ಗುರುತನ್ನು ಇತರರನ್ನು ಬೆದರಿಸಲು ಬಳಸಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.   ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯ ಮನೆಯಿಂದ ಪೊಲೀಸ್ ಸಮವಸ್ತ್ರ, ಐ-ಕಾರ್ಡ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಿಶಾ ಸಿಂಗ್ ಕೂಡ ತನ್ನ ಪತಿಯನ್ನು ಕೌಟುಂಬಿಕ ದೌರ್ಜನ್ಯದ ಆರೋಪ …

Read More »

ಬೆಳ್ತಂಗಡಿ: ಉಯ್ಯಾಲೆ ಹಗ್ಗ ಸಿಲುಕಿ ಬಾಲಕ ಸಾವು….!!

ಬೆಳ್ತಂಗಡಿ : ಬಾಲಕನೋಬ್ಬ ಉಯ್ಯಾಲೆಯಲ್ಲಿ ಆಡುತ್ತಿದ್ದ ವೇಳೆ ಉಯ್ಯಾಲೆಯ ಹಗ್ಗ ಸಿಲುಕಿ ಮೃತಪಟ್ಟ ಘಟನೆ ದಿಡುಪೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಪುತ್ರ 8ನೇ ತರಗತಿ ವಿದ್ಯಾರ್ಥಿ ಶ್ರೀಷಾ (14) ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಅದರ ಹಗ್ಗ ಸಿಲುಕಿ ಕೆಲಗೆ ಬಿದ್ದಿದ್ದು, ಅದನ್ನು ನೋಡಿದ ಬಾಲಕನ ತಂಗಿ ತಂದೆಗೆ ತಿಳಿಸಿದ್ದು, ತಕ್ಷಣ ಬಾಲಕನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮದ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

Read More »

You cannot copy content of this page.