ತಾಜಾ ಸುದ್ದಿ

‘ಮದ್ಯ’ ಸೇವಿಸಿ ಮುತ್ತು ಕೊಡಲು ಬಂದ ಪತಿಯ ನಾಲಗೆ ಕತ್ತರಿಸಿ ಪತ್ನಿ..!

ಕರ್ನೂಲ್: ಮದ್ಯ ಸೇವಿಸಿದ ನಂತರ ಚುಂಬಿಸಲು ಯತ್ನಿಸಿದ ಪತಿಯ ನಾಲಿಗೆಯನ್ನು ಮಹಿಳೆಯೊಬ್ಬಳು ಕಚ್ಚಿದ ವಿಚಿತ್ರ ಘಟನೆ ಕರ್ನೂಲ್ ನಲ್ಲಿ ನಡೆದಿದೆ. ಕರ್ನೂಲ್ ಜಿಲ್ಲೆಯ ಜೊನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತುಗ್ಗಲಿ ಮಂಡಲದ ಯಲ್ಲಮ್ಮಗುಟ್ಟ ತಾಂಡಾದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ. ಚಂದು ನಾಯ್ಕ್ ತನ್ನ ಪತ್ನಿ ಪುಷ್ಪಾವತಿಗೆ ಮುತ್ತಿಡಲು ಪ್ರಯತ್ನಿಸಿದ್ದಾನೆ ಎಂದು ಜೊನ್ನಗಿರಿ ಸಬ್ ಇನ್ಸ್ಪೆಕ್ಟರ್ ರಾಮಾಂಜನೇಯಲು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವನು ಅವಳ ಮೇಲೆ ಮುತ್ತು ನೀಡುವ ಸಲುವಾಗಿ ಬಲವಂತ ಮಾಡುವುದನ್ನು ಮುಂದುವರಿಸಿದನು, …

Read More »

ಮಂಗಳೂರು: ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ‌ -ಇಬ್ಬರು ಅರೆಸ್ಟ್

ಮಂಗಳೂರು: ಪಣಂಬೂರು ಬೀಚ್ ಗೆ ಹೋಗಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ‌ಬಂಧಿಸಿದ್ದಾರೆ. ನಗರದ ಅಳಪೆ ಮಠದ ಬಳಿಯ ನಿವಾಸಿ ದೀಕ್ಷಿತ್ (32) ಮತ್ತು ಅಳಪೆ ಬಜಾಲ್ ನಿವಾಸಿ ಲಾಯ್ಡ್ ಪಿಂಟೋ (32) ಬಂಧಿತ ಆರೋಪಿಗಳು. ಮಂಗಳೂರಿನಲ್ಲಿ ಬ್ಯಾಚುಲರ್ ಆಫ್ ಹಾಸ್ಪಿಟಲ್ ಆ್ಯಡ್ಮೀಸ್ಟ್ರೇಷನ್ ವ್ಯಾಸಂಗ ಮಾಡುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಜುಲೈ 21ರಂದು ಪಣಂಬೂರು ಬೀಚ್ ಗೆ ಹೋಗಿ ವಾಪಸ್ ಆಗುವ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಿಜೈ ಕಾಪಿಕಾಡ್ ನಲ್ಲಿ ವಿದ್ಯಾರ್ಥಿಗಳನ್ನು …

Read More »

ಮಣಿಪಾಲ : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ – 5 ಯುವತಿಯರ ರಕ್ಷಣೆ

ಮಣಿಪಾಲ: ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಭವಾನಿ ಎಂಬ ಹೆಸರಿನ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ ಮಾಡಿ ಅನೈತಿಕ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್‌ ಸಲಾಮತ್‌, ಚಂದ್ರಹಾಸ ಎಂಬುವರನ್ನು ವಶಕ್ಕೆ ಪಡೆದು,5 ಜನ ನೊಂದ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. 3 ಯುವತಿಯರು ಬೆಂಗಳೂರು ಮೂಲದ ನಿವಾಸಿಗಳಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್‌ ಹಾಗೂ ಮುಂಬೈ ವಾಸಿಗಳಾಗಿದ್ದಾರೆ. ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ 4 ಮೊಬೈಲ್‌ ಫೋನ್‌, 1 ಕಾರು , 2 ಮೋಟಾರ್‌ ಸೈಕಲ್‌ ಹಾಗೂ …

Read More »

ಇಲ್ಲಿತನಕ ನಾವು ಪೋಲೀಸರಿಗೆ ಮಾಹಿತಿ ನೀಡುತ್ತಿದ್ದೆವು, ಇನ್ಮುಂದೆ ನಾವೇ ನೇರವಾಗಿ ಅಕ್ರಮ ತಡೆಯುತ್ತೇವೆ: ಬಜರಂಗದಳ

ಮಂಗಳೂರು: ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರ ಗಡಿಪಾರು ವಿಚಾರವಾಗಿ ಮಾತನಾಡಿರುವ ಭಜರಂಗದಳದ ಪುನೀತ್ ಅತ್ತಾವರ, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಲ್ಲಿ ತನಕ ಪೊಲೀಸರಿಗೆ ಸೂಚನೆ ನೀಡಿ ನಡೆಯುತ್ತಿದ್ದೆವು. ಇನ್ಮುಂದೆ ನಾವೇ ನೇರವಾಗಿ ಅಕ್ರಮ ತಡೆಯುತ್ತೇವೆ. ಇನ್ನು ಪೊಲೀಸರಿಗೆ ಯಾವುದೇ ಮಾಹಿತಿ ನೀಡೋದಿಲ್ಲ. ಬಜರಂಗದಳ ಮುಖಂಡ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ತುಷ್ಟಿ ಕರಣ ನೀತಿ ಮಾಡುತ್ತಿದೆ ಮೊದಲು ಬಜರಂಗದಳದ ನಿಷೇಧದ ಬಗ್ಗೆ ಮಾತಾಡ್ತಿತ್ತು ಈಗ ಬಜರಂಗದಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ಆರೋಪ …

Read More »

ಪುತ್ತೂರು: ಜಪಾನ್ ಮೂಲದ ವ್ಯಕ್ತಿ ಗಡಿಯಾರ ಸಮೀಪ ಪತ್ತೆ..! ವಶಕ್ಕೆ ಪಡೆದ ಪೊಲೀಸರು

ಪುತ್ತೂರು : ಜಪಾನ್ ಮೂಲದ ವ್ಯಕ್ತಿಯೋರ್ವ ಗಡಿಯಾರ ಸಮೀಪ ಪತ್ತೆಯಾದ ಘಟನೆ ನಡೆದಿದೆ. ಜಪಾನ್ ನ ಸುಯೋಷಿ ಎಂಬ ವ್ಯಕ್ತಿ ಗಡಿಯಾರ ಸಮೀಪ ಪತ್ತೆಯಾಗಿದ್ದು ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಿದು ಬಳಿಕ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಆತ ಹೇಗೆ ಇಲ್ಲಿಯವರೆಗೆ ಬಂದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿಯಬೇಕಿದೆ.

Read More »

ಉಡುಪಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ 3 ವಿದ್ಯಾರ್ಥಿನಿಯರ ಅಮಾನತು

ಉಡುಪಿ: ನಗರದ ಖಾಸಗಿ ನೇತ್ರ ಚಿಕಿತ್ಸಾಲಯ ಹಾಗೂ ನರ್ಸಿಂಗ್ ಹೋಂನ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ವಿಡಿಯೊ ಚಿತ್ರೀಕರಣ ಮಾಡಿದ  ಆರೋಪದ ಸಂಬಂಧ ಎರಡು ಕೋಮಿನ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ಕೋಮಿನ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು, ಇನ್ನೊಂದು ಕೋಮಿನ ವಿದ್ಯಾರ್ಥಿನಿಯರು ಶೌಚಕ್ಕೆ ಹೋದಾಗ ವಿಡಿಯೊ ಚಿತ್ರೀಕರಿಸಿದ್ದರು. ಅದನ್ನು ವಾಟ್ಸ್‌ಆಯಪ್‌ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಇನ್ನೊಂದು ಕೋಮಿನ ವಿದ್ಯಾರ್ಥಿನಿಯರು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಇವರ ಮಧ್ಯೆ ತೀವ್ರತರದ ವಾಗ್ವಾದ ನಡೆದಿತ್ತು. ಆಸ್ಪತ್ರೆಯ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ …

Read More »

ನಂದಿನಿ ಹಾಲಿನ ದರ ಏರಿಕೆ- ಆ. 1 ರಿಂದ ಲೀಟರ್ ಹಾಲಿಗೆ 3 ರೂ. ಹೆಚ್ಚಳ

ಬೆಂಗಳೂರು: ನಂದಿನಿ ಹಾಲಿನ ದರ ಲೀಟರ್‌ ಒಂದಕ್ಕೆ 3 ರೂ. ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್‌ ಅಧ್ಯಕ್ಷರ ಸಭೆಯ ಬಳಿಕ ಕೆಎಂಎಫ್‌ ನಿರ್ದೇಶಕ ಎಚ್‌.ಡಿ.ರೇವಣ್ಣ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ನಿರ್ಣಯ ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ. ಆದರೆ 3 ರೂ. ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಹೆಚ್ಚಳವಾದ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯದಲ್ಲಿನ …

Read More »

ಒಡಿಶಾ ಭೀಕರ ತ್ರಿವಳಿ ರೈಲು ದುರಂತದ ಹಿಂದಿನ ರಹಸ್ಯ ಬಯಲು – 293ಕ್ಕೂ ಹೆಚ್ಚು ಜನರ ಬಲಿಗೆ ಕಾರಣವಾಗಿದ್ದು ಏನು?

ನವದೆಹಲಿ : ಕಳೆದ ಜೂನ್‌ನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ʻಭೀಕರ ತ್ರಿವಳಿ ರೈಲು ಅಪಘಾತದ ಹಿಂದಿನ ರಹಸ್ಯ ಬಯಲಾಗಿದೆ. ರೈಲು ಸಚಿವಾಲಯ 293 ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಘಟನೆ ಕುರಿತು ಸಮಗ್ರ ವರದಿಯನ್ನು ಬಿಡುಗಡೆ ಮಾಡಿದೆ. ಹೌದು, ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ‘ಸಿಗ್ನಲ್ ದೋಷ ಕಾರಣʼ ಎಂದು ರೈಲ್ವೇ ಸಚಿವಾಲಯ ಮೊದಲ ಬಾರಿಗೆ ರೈಲ್ವೆ ಸುರಕ್ಷತಾ ಆಯುಕ್ತರ ವರದಿಯನ್ನು ಬಿಡುಗಡೆ ಮಾಡಿದೆ. ಈ ಭೀಕರ ದುರಂತದಲ್ಲಿ 293 ಕ್ಕೂ ಹೆಚ್ಚು ಸಾವುಗಳು ಮತ್ತು 1,000 ಕ್ಕೂ …

Read More »

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್‌: ರಾಜ್ಯ ಸರ್ಕಾರದ ವಿರುದ್ಧ ಸುನಿಲ್‌ ಕುಮಾರ್‌ ಆಕ್ರೋಶ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್‌ ನೀಡಿರುವುದಕ್ಕೆ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನೀಲ್‌ ಕುಮಾರ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಜಿ ಸಚಿವ ಸುನೀಲ್‌ ಕುಮಾರ್‌ ಟ್ವೀಟರ್‌ ಮಾಡಿದ್ದು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೋಮು ಗಲಭೆ ನಿಯಂತ್ರಣದ ಹೆಸರಿನಲ್ಲಿ ಹಿಂದುಗಳು ಹಾಗೂ ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ದ್ವೇಷದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಇವರಿಗೆ …

Read More »

ಕಾರ್ಕಳ: ತೆಂಗಿನ ಮರ ಬಿದ್ದು ಮನೆಗೆ ಹಾನಿ, ಅಪಾರ ನಷ್ಟ..!

ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಕಾರ್ಕಳದ ಭುವನೇಂದ್ರ ಕಾಲೇಜು ಸಮೀಪದ ಮನೆಯೊಂದಕ್ಕೆ ತೆಂಗಿನ ಮರ ಬಿದ್ದು ಹಾನಿ ಉಂಟಾದ ಘಟನೆ ಜು.21ರಂದು ನಡೆದಿದೆ. ಕಾರ್ಕಳ ನಗರದ ಭುವನೇಂದ್ರ ಕಾಲೇಜು ಸಮೀಪದ ನಿವಾಸಿ ಜಯರಾಜ್ ರವರ ಮನೆಗೆ ತೆಂಗಿನ ಮರ ಬಿದ್ದು, ಹಾನಿಯುಂಟಾಗಿದೆ. ವಾಸದ ಮನೆಗೆ ತೆಂಗಿನಮರ ಮುರಿದು ಬಿದ್ದು ಅಂಶಿಕ ಹಾನಿ ಉಂಟಾಗಿದೆ.ಇದರಿಂದ 50,000 ರೂ. ಅಂದಾಜು ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಆಗಮಿಸಿ ಪರಿಹಾರ ಕಾರ್ಯ ನಡೆಸುತ್ತಿದ್ದಾರೆ.

Read More »

You cannot copy content of this page.