ತಾಜಾ ಸುದ್ದಿ

ಜು.27ರವರೆಗೆ ಭಾರಿ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೊಷಿಸಲಾಗಿದೆ. ಹಾಸನ, ಯಾದಗಿರಿ, ಕಲಬರಗಿ, ಧಾರವಾಡ, ಬೆಳಗಾವಿ, ಬೀದರ್​ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು, ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕ್ಯಾಸಲ್​ರಾಕ್, ಯಲ್ಲಾಪುರ, ಕಾರ್ಕಳ, ಸಿದ್ದಾಪುರ,ಕದ್ರಾ, ಮಂಚಿಕೆರೆ, ಜೋಯಿಡಾ, ಲೋಂಡಾ, ಶೃಂಗೇರಿ, ಕೊಪ್ಪ, ಕೊಲ್ಲೂರು, …

Read More »

ಉಡುಪಿ : ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರುಪಾಲು

ಕೊಲ್ಲೂರು: ಯುವಕನೊಬ್ಬ ಜಲಪಾತದ ನೀರಿಗೆ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ,ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈ ಯುವಕ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂಡೆಕಲ್ಲೊಂದರ ಮೇಲೆ ಯುವಕ ನಿಂತಿದ್ದಾಗ ,ಅಕಸ್ಮಾತ್ತಾಗಿ ಕಾಲುಜಾರಿ ಬಿದ್ದಿದ್ದಾನೆ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು , ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ …

Read More »

ಮದ್ಯ ಖರೀದಿಗೆ ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿದ ದಂಪತಿ

ಪ.ಬಂಗಾಳ; ಪಾನಿಹಟಿಯಲ್ಲಿ ಮದ್ಯ ಖರೀದಿಗೆ ಬೇಕಾದ ಹಣಕ್ಕಾಗಿ ತಮ್ಮ ಆರು ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವು ಶಾಮೀಲಾಗಿರುವ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರಾಟ ಮಾಡಿರುವ ಮಗು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಂದೆ ಜೈದೇವ್ ಚೌಧುರಿ ತಾಯಿ ಸತಿ ಚೌಧುರಿ ಹಾಗೂ ತಾತ ಕನಾಯಿ ಚೌಧುರಿ ಎಂಬವರ ಬಂಧನ ನಡೆದಿದೆ. ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು …

Read More »

ಉಡುಪಿ ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ ,ಹಳ್ಳ  ಕೊಳ್ಳಗಳಲ್ಲಿ ಹೆಚ್ಚಿನ ನೀರು ಅರಿವು ಹಾಗೂ  ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ವರದಿ ಇರುವ ಹಿನ್ನೆಲೆ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Read More »

ಮುಕುಂದಕೃಪ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ಇದರ ಸ್ಥಾಪಕರ ದಿನಾಚರಣೆ ಮತ್ತು ಸುವರ್ಣ ಮಹೋತ್ಸವ

ಮುಕುಂದಕೃಪ ಇಂಗ್ಲೀಷ್ ಮೀಡಿಯಂ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ಇದರ ಸ್ಥಾಪಕರ ದಿನಾಚರಣೆ ಮತ್ತು ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸಮಾರಂಭವನ್ನು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಪರಮ ಪೂಜ್ಯ ಶ್ರೀ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಗಣ್ಯರಾದ ಶ್ರೀ ವರದರಾಯ ಪೈ, ಡಾ. ಪಿ. ವಿ. ಭಂಡಾರಿ, ಶ್ರೀ ಟಿ. ರಂಗ ಪೈ, ಶ್ರೀ ಗಿರೀಶ್ ಭಟ್, …

Read More »

ಬಂಟ್ವಾಳ: ಮುಳುಗಿದ ಸೇತುವೆಯಲ್ಲಿ ಸಿಲುಕಿದ ಪಿಕಪ್ ವಾಹನ

ಬಂಟ್ವಾಳ: ಭಾರೀ ಮಳೆಗೆ ಮುಳುಗಿದ ಸೇತುವೆಯಲ್ಲಿ ಪಿಕಪ್ ವಾಹನ ಸಿಲುಕಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ನಡೆದಿದೆ. ಕೆದಿಲ ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಪಿಕಪ್ ವಾಹನ ಸಿಲುಕಿಕೊಂಡಿದ್ದು, ಸ್ಥಳೀಯರಿಂದ ವಾಹನದಲ್ಲಿದ್ದವರ ರಕ್ಷಣಾ ಕಾರ್ಯ ನಡೆಯಿತು. ಸೇತುವೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿತ್ತು. ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕರೋರ್ವರು ತಮ್ಮ ವಾಹನವನ್ನು‌ ಚಲಾಯಿಸಿಕೊಂಡು ಬಂದಿದ್ದರು. ಆದರೆ ನೀರು ಹೆಚ್ಚಾಗಿ ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ. ತಕ್ಷಣ ಸ್ಥಳೀಯರು ಅದರೊಳಗಡೆ ಸಿಲುಕಿದವವರನ್ನು ರಕ್ಷಣೆ ಮಾಡಿದ್ದಾರೆ. ಪ್ರತೀ‌ ವರ್ಷ ಮಳೆ ಬಂದಾಗ …

Read More »

ಮಟ್ಕಾ ಅಡ್ಡೆಗೆ ದಾಳಿ-ಐವರು ಬಂಧನ..!

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ಬಳಿ ಖಾಸಗಿ ಜಾಗದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಲ್ಯಾನ್ಸಿ ವೇಗಸ್, ನವಾಝ್ , ಸತೀಶ್ ಗಟ್ಟಿ, ನಾಸೀರ್ ಮತ್ತು ಮಧು ಯಾನೆ ಮನು ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ  7040ರೂ. ನಗದು, ಐದು ಮೊಬೈಲ್ ಹಾಗೂ ಜೂಜಾಟ ಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ದಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರ ನಿರ್ದೇಶನದಂತೆ, …

Read More »

ಉಡುಪಿ: ಕಟಪಾಡಿ ವಾರದ ಸಂತೆ ಸ್ಥಳದಲ್ಲಿ ಉರುಳಿ ಬಿದ್ದ ಮರ- ವಾಹನಗಳು ಜಖಂ

ಉಡುಪಿ: ಉಡುಪಿ ಕಟಪಾಡಿಯಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ವಾರದ ಸಂತೆ ನಡಿತಾ ಇದ್ದ ಸ್ಥಳದಲ್ಲಿದ್ದ ಬೃಹತ್ ಗಾತ್ರ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ಮರ ಬಿದ್ದ ರಭಸಕ್ಕೆ ಮರದಡಿ ಇದ್ದ ಹಲವು ವಾಹನಗಳು ಜಖಂಗೊಂಡಿವೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ಇದರಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕಾಪು ಠಾಣೆಯ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Read More »

ವಾಹನ ಸವಾರರ ಪರದಾಟ: ಕಳಸದಿಂದ ಉಡುಪಿಯ ರಾಷ್ಟ್ರೀಯ ಹೆದ್ದಾರಿ 169 ಬಂದ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೆಲ್ಲೀಬಿಡು ಸೇತುವೆ ಮುಳುಗಡೆಯಾಗಿದೆ. ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ ಎಂದು ತಿಳಿದು ಬಂದಿದೆ. ಕಳಸ ದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಬಂದ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರವಾಹದ ಮಟ್ಟ ಮೀರಿ ಜಾಂಬಳೆ ಹೊಳೆ ಹರಿಯುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

Read More »

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ಸಿಎಂಗೆ ಶಾಸಕ ಹರೀಶ್‌ ಪೂಂಜಾ ಮನವಿ

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮತ್ತು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್‌ 9ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳನ್ನು ಬರ್ಬರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಹಲವು ರೀತಿಯ ತನಿಖೆ ನಡೆದಿದ್ದು, ಶಂಕಿತ ಆರೋಪಿಯನ್ನು ಇತ್ತೀಚೆಗೆ ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ. ಆದರೆ ಕೃತ್ಯವೆಸಗಿದ ತಪ್ಪಿತಸ್ಥರನ್ನು ಕಾನೂನಿನ ಚೌಕಟ್ಟಿನೊಳಗೆ …

Read More »

You cannot copy content of this page.