ತಾಜಾ ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ಪ್ರೈವೇಟ್ ವಿಡಿಯೋ ವೈರಲ್: ಮನನೊಂದು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಬಿಕಾಂ ವಿದ್ಯಾರ್ಥಿಗಳು

ದಾವಣಗೆರೆ: ಖಾಸಗಿ ಕ್ಷಣದ ವಿಡಿಯೋ ವೈರಲ್​ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳಿಬ್ಬರು ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಗುರುತಿಸಲಾಗಿದೆ. ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳದುಬಂದಿದೆ. ಕಾಲೇಜಿನ ಟೆರೆಸ್​ ಮೇಲೆ ಇಬ್ಬರು ಏಕಾಂತದಲ್ಲಿರುವುದನ್ನು ಗಮನಿಸಿ, ಅರಿವಿಗೆ ಬಾರದಂತೆ ಪಕ್ಕದ ಕಟ್ಟದಿಂದ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಾಟ್ಸ್​ಆಯಪ್​ಗಳಲ್ಲಿಯೂ ವಿಡಿಯೋ ಹರಿದಾಡಿತ್ತು. ಅಲ್ಲದೆ, ಕೆಲ …

Read More »

ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣದ ತನಿಖಾಧಿಕಾರಿ ಬದಲು

ಉಡುಪಿ: ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣದ ತನಿಖಾಧಿಕಾರಿ ಬದಲು ಮಾಡಿ ಆದೇಶನ್ನು ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಮಂಜುನಾಥ್ ಗೌಡ ಅವರನ್ನು ಬದಲಿಸಿ ಕುಂದಾಪುರದ ಡಿವೈಎಸ್ ಬೆಳ್ಳಿಯಪ್ಪ ಎಂಬುವರಿಂದ ತನಿಖೆಯನ್ನು ನಡೆಸಲು ನಿರ್ಧರಿಸಲಾಗಿದ್ದು, ಅವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ.   ಮಂಜುನಾಥ್ ಗೌಡ ಅವರು ತನಿಖೆಯಲ್ಲಿ ಲೋಪ ಮಾಡಿದ್ದಾರೆಂದು ಶುಕ್ರವಾರ ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು ಇದರ ಬೆನ್ನಲೇ ಎಸ್‌ಪಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಡುವೆ ಮಂಡ್ಯದಲ್ಲಿ ಪ್ರಕರಣ ಸಂಬಂಧ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ವರು ಕಾನೂನಿನ ಪ್ರಕಾರ ಕ್ರಮ ಉಡುಪಿ ಪ್ರಕರಣದ …

Read More »

ಪುತ್ತೂರು: ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ರೋಗಿಯನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು- ವಿಡಿಯೋ ವೈರಲ್

ಪುತ್ತೂರು: ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣ ರೋಗಿಯೊಬ್ಬರನ್ನು ಸಂಬಂಧಿಕರು ಚೇರ್ ಮೇಲೆ ಕುಳ್ಳಿರಿಸಿ ಆಸ್ಪತ್ರೆಗೆ ಹೊತ್ತುಕೊಂಡು ಹೋಗುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಇಚ್ಲಂಪ್ಪಾಡಿಯ ಕೆರ್ನಡ್ಕ ನಿವಾಸಿ ಸಾವಿತ್ರಿ ಗೋಪಾಲ್ ಅವರಿಗೆ ವಾರಕ್ಕೆ 2 ದಿನ ಪುತ್ತೂರು ಆಸ್ಪತ್ರೆಯಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ ಸಾವಿತ್ರಿ ಅವರ ಮನೆಗೆ ವಾಹನ ಸಂಚಾರಕ್ಕೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಹೊತ್ತೇ ಸಾಗಬೇಕಾದ ಸ್ಥಿತಿ ಇದೆ. …

Read More »

ಜೀವ ಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ಧ: ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್

ಮಂಗಳೂರು: ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಂದ ಜೀವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ದವಾಗಿದ್ದು, ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು. ಅವರು ಜು.28ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಜನರ ಜೀವ ರಕ್ಷಿಸಲು ಜಿಲ್ಲೆಯಲ್ಲಿ ನಿರ್ಬಂಧ ಹೇರಲಾದ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ತೆರಳಬಾರದು, ಈಗಾಗಲೇ ಜಿಲ್ಲೆಯ ಸಮುದ್ರ ಕಿನಾರೆಗಳು, ದೇವಸ್ಥಾನದ ಹತ್ತಿರದ ನದಿಗಳು, ಸ್ನಾನ ಘಟ್ಟಗಳು, ಚಾರಣ ತಾಣಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ, ಅದನ್ನ ಉಲ್ಲಂಘಿಸಿದ್ದಲ್ಲೀ …

Read More »

ಉಡುಪಿ ಪ್ರಕರಣ;ಬೇರೆ ಇಂತಹ ಘಟನೆ ಇದ್ದರೆ ನನ್ನ ಗಮನಕ್ಕೆ ತನ್ನಿ-ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಹಿಜಾಬ್ ಬಳಿಕ ಕಾಲೇಜಿನ ಶೌಚಾಲಯಲ್ಲಿ ನಡೆದ ಮೊಬೈಲ್‌ ವೀಡಿಯೋ ಚಿತ್ರೀಕರಣದಿಂದ ಉಡುಪಿ ಚರ್ಚೆಯಾಗುತ್ತಿದೆ. ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆಯಲ್ಲಿ ಯಾರೇ ಹೀಗೆ ಮಾಡಿದ್ರೂ ನನ್ನ ಗಮನಕ್ಕೆ ತನ್ನಿ. ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ. ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಘಟನೆ ನಡೆದ ಕಾಲೇಜಿನ ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್‌ಗಳೆಲ್ಲವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. …

Read More »

ಸಿದ್ದರಾಮಯ್ಯನವರ ಕುಟುಂಬ ಕುರಿತು ವಿವಾದಾತ್ಮಕ ಪೋಸ್ಟ್ ; ಶಕುಂತಲಾಗೆ ಜಾಮೀನು

ಬೆಂಗಳೂರು : ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಕುಂತಲಾ ನಟರಾಜ್ ಅವರಿಗೆ ಠಾಣಾ ಜಾಮೀನು ನೀಡಲಾಗಿದೆ. ಶಕುಂತಲಾ ಅವರು ಟ್ವೀಟರ್ ಅಲ್ಲಿ ಸಿಎಂ ಸಿದ್ದರಾಮಯ್ಯನವರ ಸೊಸೆ ಹಾಗೂ ಹೆಂಡತಿಯವರ ಕುರಿತು ಇದೇ ರೀತಿ ವಿಡಿಯೋ ಮಾಡಿದರೆ ಇದು ಮಕ್ಕಳ ಆಟ ಅಂತ ಒಪ್ಪಿಕೊಳ್ಳುತ್ತಾರ? ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಈ ಕುರಿದಂತೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಕುಂತಲಾ ಅವರನ್ನು ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.ನಂತರ ಶಶಿಕಲಾ ಅವರು ಪೋಲೀಸರ ಬಳಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಶಕುಂತಲಾ ಅವರನ್ನು ಸಿಎಂ …

Read More »

ಉಡುಪಿ ಕಾಲೇಜ್ ವೀಡಿಯೋ ಪ್ರಕರಣ : ಸಿಎಂ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ – ಬಿಜೆಪಿ ಕಾರ್ಯಕರ್ತೆ ಅರೆಸ್ಟ್..!

ಬೆಂಗಳೂರು: ಉಡುಪಿಯ ಕಾಲೇಜೊಂದರ ಟಾಯ್ಲೆಟ್​ನಲ್ಲಿ 3 ಮುಸ್ಲಿಂ ಯುವತಿಯರು ಹಿಂದೂ ಯುವತಿಯ ವಿಡಿಯೋ ಮಾಡಿದ ಆರೋಪದ ಸುತ್ತ ನಾನಾ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಕೆಲವರು ರಾಜ್ಯಸರ್ಕಾರದ ಮೇಲೆ ಆರೋಪ ಮಾಡಿದರೆ ಇನ್ನೂ ಕೆಲವರು ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​ ವಿರುದ್ಧ ಮಾತನಾಡುತ್ತಿದ್ದಾರೆ. ಈ ನಡುವೆ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಸಿದ್ದರಾಮಯ್ಯ ಮತ್ತು ಕುಟುಂಬ ವಿರುದ್ದ ಹಗುರವಾಗಿ ಮಾತನಾಡಿ ಜೈಲು ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್‌ನಲ್ಲಿ ಅವಾಚ್ಯ ಪದಗಳನ್ನು ಬಳಸಿ ಪೋಸ್ಟ್‌ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. …

Read More »

ಮಂಗಳೂರು : ಶಾಲೆಗೆ ರಜೆ ಕೊಟ್ಟ ದ.ಕ. ಜಿಲ್ಲಾಧಿಕಾರಿಗೆ ಮಕ್ಕಳಿಂದ ವಿಶಿಷ್ಠ ರೀತಿಯಲ್ಲಿ ಅಭಿನಂದನೆ..!

ಮಂಗಳೂರು : ದ.ಕ. ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ದ.ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಭಾರೀ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗೆ ರಜೆ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಹಲವು ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು …

Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿ ವಿಚಾರಣೆಯ ಸಿಸಿಟಿವಿ ಪರಿಶೀಲನೆಗೆ ನಿರ್ದೇಶಿಸಿದ ಹೈಕೋರ್ಟ್

ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪದಡಿ ಸಂಬಂಧ ಎಫ್‍ಎಸ್‍ಎಲ್ ಮತ್ತು ಎನ್‍ಐಎ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ತನ್ನ ಕೇಂದ್ರ ಯೋಜನಾ ಸಂಚಾಲಕರು ಮತ್ತು ತಾಂತ್ರಿಕ ತಂಡಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಜಾಬಿರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಎಫ್‍ಎಸ್‍ಎಲ್ ಮತ್ತು ಎನ್‍ಎಐ ಕಚೇರಿಗಳಲ್ಲಿ 2022ರ ನವೆಂಬರ್ ತಿಂಗಳ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‍ಗೆ ಸಲ್ಲಿಸಬೇಕು ಎಂದು ವಿಧಿ …

Read More »

ಉಡುಪಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಯ ಬಂಧನ

ಉಡುಪಿ: ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಬಂಧಿಸಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ನಿವಾಸಿ ಮುಫೀಝುಲ್ ಶೇಖ್(26) ಬಂಧಿತ ಆರೋಪಿ . ಆರೋಪಿ ಪಡುಬಿದ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾರ್ಮಿಕನಾಗಿದ್ದ ಈತ, ಅಲ್ಲೇ ದುಡಿಯುತ್ತಿದ್ದ ಅದೇ ಮುರ್ಷಿದಾಬಾದ್ ಜಿಲ್ಲೆಯ ದಂಪತಿಯ ಐದು ವರ್ಷದ ಮಗಳನ್ನು ತನ್ನ ರೂಮಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ  ಹೊಟ್ಟೆನೋವು ಎಂದು ತಿಳಿಸಿದ್ದು, ಆಕೆಯನ್ನು ಪಡುಬಿದ್ರಿಯ ಪ್ರಾ. ಆ. ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಪರಿಶೀಲಿಸಿ ಲೈಂಗಿಕ ದೌರ್ಜನ್ಯ ನಡೆದಿರುವ …

Read More »

You cannot copy content of this page.