ತಾಜಾ ಸುದ್ದಿ

ಮಂಗಳೂರು : ಆರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು : ಹಳೇ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಉಳ್ಳಾಲದ ಕೊಣಾಜೆ ಬೆಳ್ಮದಿಂದ ಮಂಗಳೂರು ನಗರದ ಬಂದರು ಪೊಲೀಸರು ಬಂಧಿಸಿದ್ದಾರೆ. ಕೊಣಾಜೆ ಬೆಳ್ಮದ ಸಿರಾಜ್ ಮಂಝಿಲ್ ನ ಇಮ್ಮಿಯಾಜ್ ಬಂಧಿತ ಆರೋಪಿಯಾಗಿದ್ದಾರೆ. ಕೊಣಾಜೆ ಪೊಲೀಸರ ಸಹಕಾರದಿಂದ ಮಂಗಳೂರು ನಗರ ಉತ್ತರ ಠಾಣಾ ಪೊಲೀಸರು ಆರೋಪಿ ಇಮ್ತಿಯಾಜ್‌ನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. 2017 ರ ಪ್ರಕರಣದಲ್ಲಿ ಇಮ್ತಿಯಾಜ್ ಪೊಲೀಸರಿಗೆ ಬೇಕಾಗಿದ್ದು ಆತ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More »

ಮಂಗಳೂರು: ನಾಗಾರಾಧನೆಗೆ ಸ್ವಂತ ಸ್ಥಳವನ್ನು ದಾನ ಮಾಡಿದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ರಾಜ್ಯ ವಿಧಾನಸಭೆ ಸಭಾಪತಿ ಯು.ಟಿ ಖಾದರ್ .ಖಾದರ್ ಅವರು ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿರುವ ತಮ್ಮ ಜಮೀನಿನಲ್ಲಿರುವ ನಾಗನ ಸಾನಿಧ್ಯದ ಜಾಗವನ್ನು ಅದರ ವಾರಸುಧಾರರಿಗೆ ಉಚಿತವಾಗಿ ನೀಡಿದ್ದಾರೆ. ಹಿಂದಿನ ಹಿರಿಯರ ಕಾಲದಲ್ಲಿ ಖಾದರ್ ಅವರ ಸೊತ್ತು ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಪಾಲು ಮಾಡುವಾಗ ಪಿತ್ರಾರ್ಜಿತ ಸೊತ್ತಾಗಿ ಖಾದರ್ ಪಾಲಾಯಿತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ …

Read More »

ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಾಯಾ ಸಂಸ್ಕ್ರತಿ ವಿಶೇಷ ಕಾರ್ಯಕ್ರಮ

ಸೀಮಿತ ವರ್ತಮಾನಕ್ಕೆ ಮಾತ್ರವಲ್ಲ, ಎಂದೆಂದಿಗೂ ಛಾಯಾಗ್ರಹಣದ ಪ್ರಾಮುಖ್ಯತೆ ನಿರಂತರವಾಗಿರುತ್ತದೆ. ಎಲ್ಲರ ಬದುಕಿನಲ್ಲಿ ಛಾಯಾಚಿತ್ರದ ಪಾತ್ರ ಬಹು ಮುಖ್ಯ. ಛಾಯಚಿತ್ರ ಕಲಾವಿದ ದಾಖಲೆಗಾರನು ಹೌದು ಎಂದು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಆಶಯ ವ್ಯಕ್ತಪಡಿಸಿದ್ದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗು ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಕೆಮೆರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಛಾಯಾ ಹಾಗು ಮಾಧ್ಯಮ ಗೋಷ್ಠಿಯಲ್ಲಿ ಆಸ್ಟ್ರೋ ಮೋಹನ್, ಛಾಯಾ -ನೃತ್ಯ ಗೋಷ್ಠಿಯಲ್ಲಿ ಡಾ। …

Read More »

ಮಂಗಳೂರು: ಪೊಲೀಸ್ ಅಧಿಕಾರಿ ಎಂದು ವಂಚಿಸುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್..!

ಮಂಗಳೂರು: ತಾನೊಬ್ಬ ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ ವಂಚನೆಗೆತ್ನಿಸುತ್ತಿದ್ದ ನಗರದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ, ಇಡುಕ್ಕಿ ಜಿಲ್ಲೆಯ ಅಂಬಚ್ಚಾಲ್, ಪಳ್ಳಿವಾಸಿಲ್ ನಿವಾಸಿ, ನರ್ಸಿಂಗ್ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು (22) ಎಂಬಾತ ಬಂಧಿತ ಆರೋಪಿ. ಆರೋಪಿ ಬಳಿಯಿಂದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್, ಕೇರಳ ಸ್ಟೇಟ್ ಪೊಲೀಸ್ ಮತ್ತು ಅಗ್ರಿಕಲ್ಟರ್ ಡಿಪಾರ್ಟೆಂಟ್ ಅಂಡ್ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್ ಕೇರಳ ಹೆಸರಿನಲ್ಲಿ ನಕಲಿ ಐಡಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಪಿಎಸ್‌ಐ ಸಮವಸ್ತ್ರ, ಪೊಲೀಸ್‌ ಲೋಗೊ, ಮೆಡಲ್, ಬೆಲ್ಟ್ ಕ್ಯಾಪ್, …

Read More »

ಚಂದ್ರಯಾನ – 3 ಬಗ್ಗೆ ಭಾರಿ ಅಪಮಾನ – ‘ಚಾಯ್‌ವಾಲಾ’ನ ಫೋಟೋ ಹಾಕಿ ಚಂದ್ರನಿಂದ ಬಂದ ಮೊದಲ ಚಿತ್ರ ಎಂದ ಪ್ರಕಾಶ್ ರಾಜ್

ಶತಕೋಟಿ ಭಾರತೀಯರ ಕನಸಿನ ಕೂಸಾಗಿದ್ದ ಚಂದ್ರಯಾನ-3 ಬಹುತೇಕ ಚಂದ್ರನ ಮೇಲ್ಮೈ ಸಮೀಪಕ್ಕೆ ತೆರಳಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನಂಗಳಕ್ಕೆ ತಲುಪುವ ವಿಶ್ವಾಸ ಇಮ್ಮಡಿಸಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಎನಿಸಿಕೊಳ್ಳಲು ಭಾರತ ಕಾತರಗೊಂಡಿದೆ. ಅಲ್ಲದೇ ಇಡಿ ವಿಶ್ವವೇ ಇಸ್ರೋದ ಸಾಧನೆ ನೋಡಲು ಕಾತರಗೊಂಡಿದೆ. ವಿಶ್ವದಾದ್ಯಂತ ಭಾರತದ ಚಂದ್ರಯಾನ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶ ವಾಸಿಗಳು ಕೂಡಾ ಚಂದ್ರಯಾನ – 3 ಯಶಸ್ಸಿನ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನು, ಎರಡೇ ದಿನಗಳಲ್ಲಿ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ನೌಕೆ ಸಾಫ್ಟ್ …

Read More »

ಮಂಗಳೂರು : ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗದಿದಲ್ಲಿ ನಮಗೆ ಕಸಿದುಕೊಳ್ಳಲು ಗೊತ್ತಿದೆ – ತಿಮರೋಡಿ

ಮಂಗಳೂರು : ಈ ದೇಶದಲ್ಲಿ ಅತ್ಯಾಚಾರಿಗಳಿಗೊಂದು, ಕೊಲೆಗಡುಕರಿಗೊಂದು ಕಾನೂನು. ಸೌಜನ್ಯಾ ಪ್ರಕರಣದಲ್ಲಿ 11 ವರ್ಷಗಳಲ್ಲಿ ನಿತ್ಯ ನಿರಂತರವಾಗಿ ಶವಗಳಂತೆ ಬದುಕಿ ನ್ಯಾಯ ಕೊಡಿ ಎಂದು ಶಾಂತಿಯುತ ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಮಾಂಧರ ಕೃತ್ಯಕ್ಕೆ ಪ್ರತಿಯಾಗಿ ಕ್ರಾಂತಿಯಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳಿಗೆ ಹಕ್ಕಿದೆ. ಮರ್ಯಾದೆಯಲ್ಲಿ ನಮ್ಮ ಹಕ್ಕನ್ನು ನಮಗೆ ಕೊಡದಿದ್ದರೆ, ನಿಮ್ಮಿಂದ ಹೇಗೆ ಕಸಿದುಕೊಳ್ಳಬೇಕೆಂದು ಗೊತ್ತಿದೆ. ದಯವಿಟ್ಟು ಅದಕ್ಕೆ ಆಸ್ಪದ ಕೊಡಬೇಡಿ. ಆದ್ದರಿಂದ ಕಾನೂನಿನ ಸುಪರ್ದಿಯಲ್ಲಿ ಒಂದು ಒಳ್ಳೆಯ ತನಿಖಾ ತಂಡವನ್ನು ರಚಿಸಿ ಕಾನೂನಡಿಯಲ್ಲಿ ಮರು ತನಿಖೆಯಾಗಬೇಕು ಎಂದು ಬೆಳ್ತಂಗಡಿ ಪ್ರಜಾಪ್ರಭುತ್ವ …

Read More »

Chandrayaan-3 ಲ್ಯಾಂಡಿಂಗ್ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಘೋಷಿಸಿದ ಇಸ್ರೋ

ನವದೆಹಲಿ: ಆಗಸ್ಟ್ 23, 2023 ರಂದು (ಬುಧವಾರ) ಭಾರತೀಯ ಕಾಲಮಾನ 18:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೋ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಬಾಹ್ಯಾಕಾಶ ನೌಕೆಯು ಈಗ ತನ್ನ ಅಂತಿಮ ಗಮ್ಯಸ್ಥಾನವಾದ ಚಂದ್ರನ ದಕ್ಷಿಣ ಧ್ರುವದಿಂದ ಕೇವಲ ಮೂರು ದಿನಗಳ ದೂರದಲ್ಲಿದೆ. ಚಂದ್ರನ ಮೇಲೆ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಬಿಡ್ಡಿಂಗ್ ನಡೆಸುತ್ತಿದೆ, ಇದು ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವಾಗಿದೆ. ಚಂದ್ರಯಾನ -3 ಆಗಸ್ಟ್ 23, …

Read More »

ಮಂಗಳೂರು:ಆಸ್ಪತ್ರೆಯಿಂದ ತಪ್ಪಿಸಿ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಅರೆಸ್ಟ್..!

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಯಲ್ಲಿದ್ದ ವೇಳೆ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಜೀವನಡು ನಿವಾಸಿ ಎಸ್.ಎಮ್ ನೌಫಾಲ್(32) ಬಂಧಿತ ಆರೋಪಿ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಪುಕರಣಕ್ಕೆ ಸಂಬಂಧಿಸಿದಂತೆ ಎಸ್.ಎಮ್ ನೌಫಾಲ್ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದನು. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಈತನನ್ನು ಪೊಲೀಸ್ ಭದ್ರತೆಯಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನೌಫಾಲ್ ಆಗಸ್ಟ್ 16ರಂದು 5.06ಕ್ಕೆ ವೆನ್ಲಾಕ್ ಆಸ್ಪತ್ರೆಯಿಂದ ಪೊಲೀಸ್ ಭದ್ರತೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಆರೋಪಿಯ ಗಾರ್ಡ್ ಕರ್ತವ್ಯದಲ್ಲಿದ್ದ …

Read More »

ಮಂಗಳೂರು : ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಬಿಕಾಂ ವಿದ್ಯಾರ್ಥಿ ಸೇರಿದಂತೆ ಮೂವರು ಅರೆಸ್ಟ್

ಮಂಗಳೂರು : ನಗರದ ಜಪ್ಪು ಕಿಂಗ್ಸ್ ಗಾರ್ಡನ್ ಬಳಿಯ ಜಪ್ಪು ಮಜಿಲ ರಸ್ತೆಯಲ್ಲಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಬಿಕಾಂ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ತಲಪಾಡಿ ನಿವಾಸಿ ಅಬ್ದುಲ್ ರವೂಫ್(30) ಕೇರಳ ರಾಜ್ಯದ ಕಣ್ಣೂರು ನಿವಾಸಿ, ಕೂಳೂರು ಯೇನೆಪೋಯಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಉಬೈದ್ ಕುಲುಮಾನ್(21) ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ, ಚಿಕನ್ ಶಾಪ್ ಉದ್ಯೋಗಿ ಮೊಹಮ್ಮದ್ ಇರ್ಷಾದ್(21) ಬಂಧಿತ ಆರೋಪಿಗಳು. ಆಗಸ್ಟ್ 18 ರಂದು ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ …

Read More »

ಶೌಚಾಲಯಕ್ಕೆ ತೆರಳಿದ್ದ ಶಾಲಾ ಬಾಲಕಿಯನ್ನು ಅಪಹರಿಸಲು ಯತ್ನ

ಮೈಸೂರು : ಎರಡನೇ ತರಗತಿಯ ಶಾಲಾ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನ ನಡೆಸಿ ವಿಫಲರಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ನಿನ್ನೆ ಶೌಚಾಲಯಕ್ಕೆ ಕೇಳಿದ ವೇಳೆ ಇಬ್ಬರು ಅಪರಿಚಿತರಿಂದ ಈ ಅಪಹರಣ ಘಟನೆ ನಡೆದಿದ್ದು ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆಶಾಲೆ ಮುಖ್ಯ ಶಿಕ್ಷಕರಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ. ಅಲ್ಲದೆ ಕಳೆದ ತಿಂಗಳು ಬೆಳಗಾವಿಯಲ್ಲಿ ಕೂಡ ಇದೇ …

Read More »

You cannot copy content of this page.