ತಾಜಾ ಸುದ್ದಿ

ಗಣೇಶ ಹಬ್ಬದ ದಿನವೇ ಸರ್ಜಾ ಕುಟುಂಬದಲ್ಲಿ ಸಂಭ್ರಮ; ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಗಣೇಶ ಹಬ್ಬದ ದಿನವಾದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಖ್ಯಾತ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದ್ದು, ಮಗು ಮತ್ತು ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯ ನಡೆದಿದ್ದು, ಇದೀಗ ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು …

Read More »

ಶಿವನ ದೇವಸ್ಥಾನದಲ್ಲಿ ನಮಾಜ್ ಮಾಡಿದ ಮುಸ್ಲಿಂ ಮಹಿಳೆಯರ ಬಂಧನ

ಲಕ್ನೋ:ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಹಳೆಯ ಶಿವ ದೇವಾಲಯದಲ್ಲಿ ನಮಾಜ್ (ಇಸ್ಲಾಮಿಕ್ ಪೂಜೆ) ಸಲ್ಲಿಸಿದ ಆರೋಪದ ಮೇಲೆ ಮುಸ್ಲಿಂ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಭೂತಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರ್‌ಪುರ ಗ್ರಾಮದ ದೇವಸ್ಥಾನದಲ್ಲಿ ನಮಾಜ್ ಮಾಡಲು ಪ್ರೇರೇಪಿಸಿದ ಆರೋಪದ ಮೇಲೆ ಅವರು ಮೌಲ್ವಿ (ಇಸ್ಲಾಮಿಕ್ ಕಾನೂನಿನ ಶಿಕ್ಷಕ) ರನ್ನು ಸಹ ಬಂಧಿಸಿದ್ದಾರೆ. ಮೌಲ್ವಿ ಚಮನ್ ಷಾ ಅವರು ನಮಾಜ್ ಮಾಡಿದರೆ ಅದೃಷ್ಟ ಬರುತ್ತದೆ ಎಂದು ಭರವಸೆ ನೀಡಿದ ನಂತರ ಆರೋಪಿಗಳಾದ ಸಜಿನಾ (45) ಮತ್ತು ಅವರ ಪುತ್ರಿ …

Read More »

ಉಡುಪಿ: ಬಾಲಮಂದಿರದಿಂದ ಬಾಲಕ ನಾಪತ್ತೆ

ಉಡುಪಿ: ಸರಕಾರಿ ಬಾಲಕ ಬಾಲಮಂದಿರದಿಂದ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ಮಣಿಪಾಲ ಸಗ್ರಿಯ ಸರಕಾರಿ ಬಾಲಕರ ಬಾಲ ಮಂದಿರದಲ್ಲಿ ನಡೆದಿದೆ.ಸುಮಾರು 14-16 ವರ್ಷ ಪ್ರಾಯದ ಶಬೀರ್ ಎಂಬ ಬಾಲಕನು ಸೆಪ್ಟಂಬರ್ 1ರಿಂದ ನಾಪತ್ತೆಯಾಗಿದ್ದಾನೆ. ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಹಿಂದಿ ಭಾಷೆ ಮಾತನಾಡುತ್ತಾನೆ. ಇವನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ದೂ. ಸಂಖ್ಯೆ: 0820-2526444, ಪಿ.ಐ ಮೊ.ನಂ:9480805458, ಪಿಎಸ್‌ಐ ಮೊ.ನಂ: 8277988949, ಮಹಿಳಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2525599 ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಪ್ರವಾಸಿಗರಿಗೆ ಮಲ್ಪೆ ಬೀಚ್‌ ಗೆ ಪ್ರವೇಶ ನಿರ್ಬಂಧ..!

ಉಡುಪಿ: ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನಲೆಯಲ್ಲಿ ಮಲ್ಪೆ ಬೀಚ್‌ ನಲ್ಲಿ ಪ್ರವಾಸಿಗರು, ಸಾರ್ವಜನಿಕರಿಗೆ ಸೆ. 25 ರವರೆಗೆ ಪ್ರವೇಶ ನಿಷೇಧಿಸಲಾಗಿದೆ. ಮೆ. 16ರಿಂದ ಸೆ.15ರವರೆಗೆ ಈ ಹಿಂದೆ ಪ್ರವೇಶ ನಿಷೇಧ ವಿಧಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸೂಚನೆಯಂತೆ ಸೆ.25ರವರೆಗೆ ನಿಷೇಧ ಮುಂದುವರಿಸಲಾಗಿದೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷ ಹಾರ್ಬರ್‌ ಕ್ರಾಫ್ಟ್‌ ನಿಯಮದಂತೆ ಮಲ್ಪೆ ಬೀಚ್‌ ಪ್ರದೇಶದಲ್ಲಿ ಮಳೆಗಾಲದಲ್ಲಿ ಎಲ್ಲಾ ಸಾಹಸ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇತ್ತೀಚೆಗೆ ಮಳೆಯಿಂದಾಗಿ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ …

Read More »

ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆ ರದ್ದು : ಜೈಲಿನಿಂದ ಬಿಡುಗಡೆಯಾದ ಪುನೀತ್ ಕೆರೆಹಳ್ಳಿ

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ‌ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿಯ ಪುನೀತ್, ನಗರದ ಜೆ.ಪಿ.ನಗರ 7ನೇ ಹಂತದಲ್ಲಿ ವಾಸವಿದ್ದ. ಪುನೀತ್ ವಿರುದ್ಧ ರಾಜ್ಯದ 11 ಠಾಣೆಗಳಲ್ಲಿ‌ ಎಫ್‌ಐಆರ್ ದಾಖಲಾಗಿತ್ತು. ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ಅಪರಾಧ ಪ್ರಕರಣಗಳಲ್ಲಿ‌ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪುನೀತ್ ಬಂಧಿಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ನಂತರ, ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಪರಪ್ಪನ …

Read More »

ಚೈತ್ರಾ ಕುಂದಾಪುರ ಕಾರು ಪತ್ತೆ ಹಚ್ಚಿದ CCB ಪೊಲೀಸರು

ಬಾಗಲಕೋಟೆ: ಇಲ್ಲಿನ ಮುಧೋಳದಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದಂತ ಕಾರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಚೈತ್ರಾ ಕುಂದಾಪುರ ಅವರ ಕಾರನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಿರಣ್ ಎಂಬುವರಿಗೆ ಸೇರಿದ್ದಂತ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಕಾರು ನಿಲ್ಲಿಸಿದ್ದರು. ಸೆಪ್ಟೆಂಬರ್.9ರಂದು ಮುಧೋಳಕ್ಕೆ ಕಾರ್ಯಕ್ರಮಕ್ಕೆ ಬಂದಂತ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತ ಕಿರಣ್ ಅವರ ಮನೆಯಲ್ಲಿ ಚೈತ್ರ ಕುಂದಾಪುರ ತಮ್ಮ ಕೆಎ-20 ಎಂಇ-7253 ನಂಬರ್ ಕಾರನ್ನು ಅಲ್ಲಿಯೇ ನಿಲ್ಲಿಸಿದ್ದರು. ಮುಧೋಳದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಂತ …

Read More »

5 ಕೋಟಿ ರೂಪಾಯಿ ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ : ಹಾಲಮಠದ ಶ್ರೀ

ವಿಜಯನಗರ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು 5 ಕೋಟಿ ರೂಪಾಯಿ ವಂಚನೆ ಪ್ರಕರಣದ A3 ಆರೋಪಿಯಾಗಿರುವ ಅಭಿನವ ಹಾಲಶ್ರೀ ವಿರುದ್ಧ ಆರೋಪಕ್ಕೆ ಸಂಬಂಧಸಿದಂತೆ ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಹಾಲಸ್ವಾಮಿ ಮಠದ ಶ್ರೀಗಳು ಹೇಳಿದ್ದಾರೆ.   ಸದ್ಗುರು ಹಾಲಶ್ರೀ ಯೋಗಿ ಸ್ವಾಮೀಜಿ ಹಾಗೂ ಸದ್ಗುರು ಸಿದ್ದೇಶ್ವರ ಶ್ರೀ ಹೇಳಿಕೆ ನೀಡಿದ್ದು, ಕೆಲ ಕಾರ್ಯಕ್ರಮಕ್ಕೆ ಹೋಗಬಾರದೆಂದು ಹಾಲಶ್ರೀ ಸ್ವಾಮೀಜಿಗಳಿಗೆ ನಾವು ಹೇಳಿದ್ದೆವು. …

Read More »

ರಾಜ್ಯದ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ವಿವಿಗಳಲ್ಲಿನ ‘RSS ಶಾಖೆ’ ಬಂದ್

 ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲಾ-ಕಾಲೇಜು, ವಿವಿಗಳನ್ನು ಆರ್ ಎಸ್ ಎಸ್ ಶಾಖೆಗಳನ್ನಾಗಿ ಮಾಡಲಾಗಿತ್ತು. ಹೀಗೆ ತೆರೆದಿದ್ದ ಆರ್ ಎಸ್ ಎಸ್ ಎಲ್ಲಾ ಶಾಖೆಗಳನ್ನು ಒಂದೊಂದಾಗಿ ಬಂದ್ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಶಾಖೆಗಳನ್ನು ತೆರೆದು ನಿಯಮ ಬಾಹಿರ ಕೆಲಸ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಅಂತಹ ಕೇಂದ್ರಗಳನ್ನು ಒಂದೊಂದಾಗಿ ಬಂದ್ ಮಾಡುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಸರ್ಕಾರಿ …

Read More »

ದ.ಕ, ಉಡುಪಿ ಜಿಲ್ಲೆಗಳಿಗೆ ಗಣೇಶ ಚತುರ್ಥಿಗೆ ಸೆ.19 ರಂದು ಸರ್ಕಾರಿ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿದ್ದು, ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಹಾಗಾಗಿ ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ.ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಒತ್ತಡ ಹಾಕಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ …

Read More »

ವಂಚನೆ ಪ್ರಕರಣ: ಕಾರ್ಕಳದಲ್ಲಿ ಗೆಳೆಯನಿಗೆ ಮನೆ ಕಟ್ಟಿಸುತ್ತಿದ್ದ ಚೈತ್ರ ಕುಂದಾಪುರ

ಉಡುಪಿ:ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಪೊಲೀಸ್‌ ವಶದಲ್ಲಿರುವ ಚೈತ್ರ ಕುಂದಾಪುರ ಹೊಸ ಮನೆಯೊಂದು ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಚೈತ್ರ ಕೋಟಿ ಲೂಟಿ ಹೊಡೆದು ಗೆಳೆಯನ ಹೆಸರಲ್ಲಿ ಮನೆ ಕಟ್ಟಿಸುತ್ತಿರುವುದು ಪತ್ತೆಯಾಗಿದೆ. ಚೈತ್ರಾ ಕಾರ್ಕಳದ ಕಣಜಾರು ಪ್ರದೇಶದಲ್ಲಿ ಜಾಗ ಖರೀದಿ ಮಾಡಿ ಶ್ರೀಕಾಂತ್‌ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೆ ಶ್ರೀಕಾಂತ್‌ನ್ನು ವಶಕ್ಕೆ ಪಡೆದ ಬಳಿಕ ಮನೆಯ ಕಾಮಗಾರಿ ಅರ್ಧದಲ್ಲೇ ನಿಂತಿದೆ ಎನ್ನಲಾಗುತ್ತಿದೆ. ಎರಡು ಎಕರೆಯಲ್ಲಿ ಎರಡು ಅಂತಸ್ತಿನ ಮನೆಯನ್ನು ಚೈತ್ರ ನೇತೃತ್ವದಲ್ಲಿ ಕಟ್ಟಿಸುತ್ತಿದ್ದ ಶ್ರೀಕಾಂತ್ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ ಉಡುಪಿಯಲ್ಲಿ …

Read More »

You cannot copy content of this page.