ತಾಜಾ ಸುದ್ದಿ

ಶಿವಮೊಗ್ಗ ಈದ್​ ಮಿಲಾದ್ ಗಲಾಟೆ ಪ್ರಕರಣ : ಮೂವರು ಕಾನ್ಸ್​ಟೇಬಲ್​ಗಳ ಅಮಾನತು

ಶಿವಮೊಗ್ಗ:ಈದ್​ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾನ್ಸ್​ಟೇಬಲ್​ಗಳನ್ನು ಅಮಾನತ್ತು ಮಾಡಿ ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕ ಅಭಯ ಪ್ರಕಾಶ್ ಆದೇಶಿಸಿದ್ದಾರೆ. ಶಿವಮೊಗ್ಗ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್​​ ವರದಿ ಆಧರಿಸಿ ಕಾಶಿನಾಥ್, ರಂಗನಾಥ, ಶಿವರಾಜ್ ಅಮಾನತುಗೊಳಿಸಲಾಗಿದೆ.   ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 60 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.ವಾಹನಗಳನ್ನು ತಪಾಸಣೆ ಮಾಡಲಾಯಿತು. ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ದುಷ್ಕರ್ಮಿಗಳಿಂದ …

Read More »

ಆತ್ಮಹತ್ಯೆ ಯತ್ನದ ಆರೋಪದಡಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‍ಐಆರ್

ಬೆಂಗಳೂರು :ತಮ್ಮ ವಿರುದ್ಧ ರೌಡಿಪಟ್ಟಿ ತೆರೆದಿರುವುದಕ್ಕೆ ಸರಕಾರ ಸ್ಪಷ್ಟೀಕರಣ ನೀಡುವವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಪುನೀತ್ ಕೆರೆಹಳ್ಳಿ, ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯದೇ ಹಠ ಮಾಡುತ್ತಿದ್ದು, ಅವರ ವಿರುದ್ಧ ಆತ್ಮಹತ್ಯೆ ಯತ್ನದ ಆರೋಪದಡಿ ಉಪ್ಪಾರಪೇಟೆ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಲಾಗಿದೆ.ಸರಕಾರದ ವಿರುದ್ಧ ನಗರದ ಫ್ರೀಡಂ ಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದ ಪುನೀತ್ ಕೆರೆಹಳ್ಳಿ, ತನ್ನ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ,ರೌಡಿಪಟ್ಟಿ ತೆರೆಯಲಾಗಿದೆ. ಸರಕಾರ ಇದಕ್ಕೆ ಸೂಕ್ತ ಕಾರಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.2013ರಿಂದ 2023ರ ವರೆಗೆ ಪುನೀತ್ ಕೆರೆಹಳ್ಳಿ …

Read More »

ಸುಳ್ಯ: ವಿದ್ಯುತ್ ಶಾಕ್‌ ಹೊಡೆದು‌ ಮಹಿಳೆ ಮೃತ್ಯು

ಸುಳ್ಯ: ಮನೆಯಲ್ಲಿ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ‌ ಗ್ರಾಮದ ಬೊಮ್ಮಾರಿನಿಂದ‌ ವರದಿಯಾಗಿದೆ. ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಪ್ರಾಯ) ಎಂಬವರೇ ಮೃತ ಪಟ್ಟ ಮಹಿಳೆಯಾಗಿದ್ದಾರೆ. ಲಲಿತಾರವರು ದಿನಂಪ್ರತಿ ಮಲಗುವ ಸಮಯದಲ್ಲಿ‌ ಇನ್ವರ್ಟರ್ ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್ ಅನ್ನು ತೆಗೆದು ಮಲಗುತ್ತಿದ್ದರೆನ್ನಲಾಗಿದೆ. ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು …

Read More »

ಉಡುಪಿ: ಗಾಂಜಾ ನಶೆಯಲ್ಲಿದ್ದ ಯುವಕರಿಂದ ದಾಂಧಲೆ

ಉಡುಪಿ: ಗಾಂಜಾ ನಶೆಯಲ್ಲಿದ್ದ ಯುವಕರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿ ನಗರದ ಸಿಟಿ ಸೆಂಟರ್ ಮಾಲ್ ಬಳಿ‌ ನಡೆದಿದೆ. ನಶೆಯಲ್ಲಿದ್ದ ಯುವಕರು ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿದ್ದಾರೆ.

Read More »

ಮಂಗಳೂರು:ಪದವಿ ವಿದ್ಯಾರ್ಥಿಗಳಿಗೂ ದಸರಾ ರಜೆ ನೀಡುವಂತೆ – ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಮಂಗಳೂರು: ನವರಾತ್ರಿ ಸಡಗರ ಹಾಗೂ ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ಶಾಲೆಗಳಿಗೆ ದಸರಾ ರಜೆ ಈಗಾಗಲೇ ಘೋಷಣೆಯಾಗಿದೆ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ದಸರಾ ರಜೆ ಇನ್ನೂ ಅಂತಿಮವಾಗಿಲ್ಲ. ಶಾಸಕ ವೇದವ್ಯಾಸ ಕಾಮತ್ ಅವರು ಈ ಬಗ್ಗೆ ಸರಕಾರದ ಗಮನಸೆಳೆದಿದ್ದು, ‘ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಸಂಬಂಧಪಟ್ಟವರನ್ನು ಆಗ್ರಹಿಸುವಂತೆ ಹಲವಾರು ಪೋಷಕರು ಈಗಾಗಲೇ ಮನವಿ ಮಾಡಿದ್ದಾರೆ. ಹೀಗಾಗಿ ಮಂಗಳೂರು ವಿ.ವಿ., ಜಿಲ್ಲಾಡಳಿತ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಹಿಂದಿನಬಿಜೆಪಿಸರಕಾರದ ಅವಧಿಯಲ್ಲಿದಸರಾ …

Read More »

ಮಂಗಳೂರು: ನಕಲಿ ಭೂ ದಾಖಲೆ ಪತ್ರ ಸಲ್ಲಿಸಿ ವಂಚನೆ ಆರೋಪ – ಯೂತ್ ಕಾಂಗ್ರೆಸ್ ಮುಖಂಡ ಸೆರೆ

ಮಂಗಳೂರು: ಜಮೀನಿನ ನಕಲಿ ದಾಖಲು ಪತ್ರಗಳನ್ನು ಸಲ್ಲಿಸಿ ಕೆಎಸ್‌ಎಫ್‌ಇಯ ಮಾಲಕಲ್ಲು ಶಾಖೆಯಿಂದ 70 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸದುರ್ಗ ಚಿತ್ತಾರಿ ಪಿ.ವಿ. ರಸ್ತೆಯ ಕೆ.ವಿ.ಹೌಸ್ ನ ಎಂ. ಇಸ್ಮಾಯಿಲ್(37)ನನ್ನು ಗಡಿ ಭಾಗದ ಕಾಸಗೋಡು ಜಿಲ್ಲೆಯ ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಸ್ಮಾಯಿಲ್ ಸಹಿತ 8 ಮಂದಿ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಗ್ರಾಮದ ಐದು ಎಕ್ರೆ ಜಮೀನಿನ ದಾಖಲು ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅದಕ್ಕೆ ಗ್ರಾಮಾಧಿಕಾರಿಯ ಡಿಜಿಟಲ್‌ …

Read More »

ನಿರ್ವಹಣೆ ಕೊರತೆಯಿಂದ ವೆನ್ಲಾಕ್ ಆಸ್ಪತ್ರೆಯ 9 ಡಯಾಲಿಸಿಸ್ ಯಂತ್ರಗಳ ಕಾರ್ಯ ಸ್ಥಗಿತ

ಮಂಗಳೂರು:ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಸಾವಿರಾರು ರೂ. ಖರ್ಚು ಮಾಡಿ ಬಡ ರೋಗಿ ಗಳು ಡಯಾಲಿಸಿಸ್ ಮಾಡುವುದು ಕಷ್ಟ ಸಾಧ್ಯ. ಅದಕ್ಕಾಗಿ ದ.ಕ. ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳು ನೆಚ್ಚಿಕೊಂಡಿರುವುದು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು, ಆದರೆ ಜಿಲ್ಲಾಸ್ಪತ್ರೆಯ ಒಂಬತ್ತು ಡಯಾಲಿಸಿಸ್‌ ಯಂತ್ರಗಳು ಸದ್ಯ ಕಾರ್ಯ ಸ್ಥಗಿತಗೊಳಿಸಿವೆ. ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ವ್ಯವಸ್ಥೆ ಸಿಗಬೇಕೆಂಬ ನಿಟ್ಟಿನಲ್ಲಿ ಸರಕಾರವು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಯಂತ್ರಗಳು ವ್ಯವಸ್ಥೆ ಮಾಡಿದೆ. ಹಲವು ಕಡೆ …

Read More »

ಬಂಟ್ವಾಳ: ಗಾಂಜಾ ಮಾರಾಟ ಪ್ರಕರಣ- 9 ವರ್ಷ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 9 ವರ್ಷ ಹಿಂದಿನ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೆ‌. ಮಂಗಳೂರು ಮಂಜನಾಡಿ ಗ್ರಾಮದ ನಾಟೆಕಲ್ ನಿವಾಸಿ ಅಶ್ರಫ್ ಬಂಧಿತ ಆರೋಪಿ. 2015 ರಲ್ಲಿ ಗಾಂಜಾ ಮಾರಾಟ‌ ಮಾಡಿದ್ದ ಆರೋಪದ ಮೇಲೆ ಬಂಧನವಾಗಿ , ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ಅಶ್ರಫ್ ಅ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೋಲಿಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ನೇತ್ರತ್ವದ ಎಸ್.ಐ.ಹರೀಶ್, ಮತ್ತು …

Read More »

ಉಳ್ಳಾಲ: ಕಡಿಮೆ ಅಂಕ ಕೊಟ್ಟ ಶಿಕ್ಷಕಿಯ ನೀರಿನ ಬಾಟಲ್‌ನಲ್ಲಿ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು – ಇಬ್ಬರು ಶಿಕ್ಷಕಿಯರು ಅಸ್ವಸ್ಥ

ಉಳ್ಳಾಲ: ಅಕ್ಟೋಬರ್ 6 ಗಣಿತ ಪರೀಕ್ಷೆಯಲ್ಲಿ‌ ಕಳಪೆ ಫಲಿತಾಂಶ ಪಡೆದಿದ್ದ‌ ಆರನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಸಹಪಾಠಿಯೊಂದಿಗೆ ಸೇರಿ ಪೇಪರ್ ತಿದ್ದಿದ್ದ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದಿದ್ದ ಮಾತ್ರೆಗಳನ್ನ ಹಾಕಿ ಸೇಡು ತೀರಿಸಿದ್ದರ ಪರಿಣಾಮ ನೀರನ್ನ ಕುಡಿದಿದ್ದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಉಳ್ಳಾಲ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದ್ದು ಘಟನೆಗೆ ಕಾರಣರಾದ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಶಾಲಾ ಯುನಿಟ್ ಟೆಸ್ಟ್‌ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಪೇಪರ್ ತಿದ್ದಿದ್ದ ಗಣಿತ ಶಿಕ್ಷಕಿ …

Read More »

ಮಂಗಳೂರು: ಆಧಾರ್, ರೇಷನ್ ಕಾರ್ಡ್, ಅಂಕಪಟ್ಟಿ ಸೇರಿದಂತೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಖದೀಮ ಸಿಸಿಬಿ ಬಲೆಗೆ

ಮಂಗಳೂರು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ ಸೇರಿದಂತೆ ವಿವಿಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಖದೀಮನೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಮಂಗಳೂರಿನ ಬಿರ್ಕನಕಟ್ಟೆ, ಬಜ್ಜೋಡಿಯ ಇನ್ ಪ್ಯಾಂಟ್ ಮೇರಿ ಚರ್ಚ್ ಹತ್ತಿರದ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೆನಸ್(41) ಬಂಧಿತ ಆರೋಪಿ. ಮಂಗಳೂರು ನಗರದ ಕಂಕನಾಡಿ – ಪಂಪ್ ವೆಲ್ ಹಳೆಯ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್ ಮೆಂಟ್ ನ ನೆಲಮಹಡಿಯ ಕೊಠಡಿಯಲ್ಲಿ ‘ಹೆಲ್ಪ್ ಲೈನ್ ಮಂಗಳೂರು’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ. ಈತ ಆಧಾರ್ ಕಾರ್ಡ್, ಪಡಿತರ ಚೀಟಿ(ರೇಶನ್ ಕಾರ್ಡ್), ಅಂಕಪಟ್ಟಿ …

Read More »

You cannot copy content of this page.