ತಾಜಾ ಸುದ್ದಿ

ಮಂಗಳೂರು:ಬ್ಯಾಂಕ್ ಖಾತೆಯಿಂದ 72.86 ಲಕ್ಷ ರೂ.ವಂಚನೆ

ಮಂಗಳೂರು: ಅಪರಿಚಿತ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕ ಸಾಧಿಸಿದ ವಂಚಕರು ವ್ಯಕ್ತಿಯೊಬ್ಬರಿಗೆ ಲಾಟರಿ ಹಣ ಬಂದಿರುವುದಾಗಿ ಹೇಳಿ ಆ ಬಳಿಕ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ 72.86 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಅಪರಿಚಿತರಿಬ್ಬರು ವಾಟ್ಸ್‌ ಆ್ಯಪ್ ಮೂಲಕ ತನ್ನೊಂದಿಗೆ ಮಾತನಾಡಿ ನಿರಂತರವಾಗಿ ಸಂಪರ್ಕದಲ್ಲಿದ್ದರು. ಒಂದು ದಿನ ತನಗೆ ಲಾಟರಿ ಹಣ ಬಂದಿರುವುದಾಗಿ ಹೇಳಿ ಆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ ತಿಳಿಸಿ ಒಂದು ಮೊಬೈಲ್ …

Read More »

ಪುತ್ತೂರು: ಕಲ್ಲೇಗ ಟೈಗರ್ಸ್ ನ ಅಕ್ಷಯ್‌ ಬರ್ಬರ ಹತ್ಯೆ- ಇಬ್ಬರು ಠಾಣೆಗೆ ಶರಣು

ಪುತ್ತೂರು: ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಸಾರಥ್ಯ ವಹಿಸಿದ್ಧ ಅಕ್ಷಯ್‌ ಕಲ್ಲೇಗ(24) ಅವರನ್ನು ನೆಹರೂ ನಗರದಲ್ಲಿ ನ.6ರ ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಅಕ್ಷಯ್‌ ಕಲ್ಲೇಗ ಕಳೆದ 6 ವರ್ಷಗಳಿಂದ ಇವರು ಟೈಗರ್ಸ್ ಕಲ್ಲೇಗ ಎಂಬ ಹುಲಿ ವೇಷ ತಂಡವನ್ನು ಮುನ್ನಡೆಸುತ್ತಿದ್ದರು. ಈ ತಂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್‌ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ …

Read More »

ಕುಂದಾಪುರ: ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ದೇವಸ್ಥಾನದ ಕೆರೆಯಲ್ಲಿ ಪತ್ತೆ

ಕುಂದಾಪುರ: ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಮೃತದೇಹವು ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಜಿ.ಸುರೇಂದ್ರ(70) ಎಂದು ಗುರುತಿಸಲಾಗಿದೆ. ಇವರು ಅನಾರೋಗ್ಯದಿಂದ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಬಳಿಕ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಎಲ್ಲ ಕಡೆ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ.ಕೊನೆಗೆ ಕೋಟೇಶ್ವರ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಇವರು ವೈಯಕ್ತಿಕ ಕಾರಣಕ್ಕೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಪಾಂಡಿಚೇರಿಯಲ್ಲಿ ಸಮುದ್ರಪಾಲಾದ ಸುಳ್ಯದ ಯುವಕ..!

ಸುಳ್ಯ: ಪಾಂಡಿಚೇರಿಯಲ್ಲಿ  ಪಂಜದ ಯುವಕನೊಬ್ಬ ಸಮುದ್ರ ಪಾಲಾದ ಘಟನೆ ನಡೆದಿದೆ. ಮೃತರನ್ನು ಪಂಜ ಸಮೀಪದ ಕೂತ್ಕುಂಜ ಬಿಪಿನ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಗೆಳೆಯರೊಂದಿಗೆ ಶನಿವಾರ ಪಾಂಡಿಚೇರಿಗೆ ಹೋಗಿದ್ದ. ರವಿವಾರ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರ ಪಾಲಾಗಿದ್ದಾನೆ. ಮೃತದೇಹ ಪತ್ತೆಯಾಗಿದ್ದು, ಊರಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ.

Read More »

ಕಾಪು: ಅಡಿಕೆ ಕೊಯ್ಯುತ್ತಿದ್ದ ವೇಳೆ ಕರೆಂಟ್ ಶಾಕ್ ಗೆ ಯುವಕ ಸಾವು

ಕಾಪು : ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯುವ ವೇಳೆ ಕರೆಂಟ್ ಹೊಡೆದು ಯುವಕ ಸಾವನಪ್ಪಿದ ಘಟನೆ ಕಾಪು ತಾಲೂಕು ಕುರ್ಕಾಲು ಗ್ರಾಮದಲ್ಲಿ ನಡೆದಿದೆ.ಮೃತ ಯುವಕನನ್ನು ಮಹಾರಾಷ್ಟ ಮೂಲದ ಪವನ್ ಶ್ರವಣ್ ಸೇವಂತ್ (20) ಎಂದು ಗುರುತಿಸಲಾಗಿದೆ. ಈತ ಅಡಿಕೆ ತೆಗೆಯಲು ಹೋಗಿದ್ದ ಯುವಕ ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯಲು ಮುಂದಾಗಿದ್ದ ಈ ವೇಳೆ ವಿದ್ಯುತ್ ತಂತಿಗೆ ರಾಡ್ ತಗಲಿ ಯುವಕನ ಸಾವಿಗೆ ಕಾರಣವಾಗಿದೆ. ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More »

ಉಡುಪಿ : ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ..! ಯಲ್ಲೋ ಅಲರ್ಟ್ ಘೋಷಣೆ

ಉಡುಪಿ : ಕರಾವಳಿಯಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಗುಡುಗು ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್‌ ಘೋಷಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ಮಳೆಯಾಗುತ್ತಿದೆ. ರಾತ್ರಿ ಲಘುವಾಗಿ ಭಾನುವಾರ ಮಧ್ಯಾಹ್ನ ಕಾವು ಮತ್ತು ಕಾರ್ಕಳ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಬತ್ತದ ಬೆಳೆ ಬಲಿತಿದ್ದು ಕೊಯ್ಲಿಗೆ ಸಿದ್ಧವಾಗಿದೆ. ಆರಂಭದಲ್ಲಿ ಮಳೆಯ ಕೊರತೆಯಿಂದ ಸಂಕಷ್ಟಕ್ಕೊಳಗಾಗಿದ್ದ ರೈತರು ಈಗ ತಯಾರಿ ನಡೆಸುತ್ತಿರುವಾಗಲೇ ಅಕಾಲಿಕವಾಗಿ …

Read More »

ಸುಳ್ಯ: ಓಮ್ನಿ ಢಿಕ್ಕಿ, ಆಟೋಚಾಲಕ ಮೃತ್ಯು

ಸುಳ್ಯ: ಆಟೋರಿಕ್ಷಾಕ್ಕೆ ಓಮ್ನಿ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನ.5ರಂದು ರಾತ್ರಿ ಸಂಭವಿಸಿದೆ. ಮೃತರನ್ನು ಜಾಲ್ಸೂರು ಗ್ರಾಮದ ಅರಿಯಡ್ಕದ ಬಾಬು ಪಾಟಾಳಿ ಎಂದು ಗುರುತಿಸಲಾಗಿದೆ.ಜಾಲ್ಸೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಬಾಬು ಪಾಟಾಳಿ ಚಲಾಯಿಸುತ್ತಿದ್ದ ಅಟೋರಿಕ್ಷಾ ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಮುಂಭಾಗದಿಂದ ಬರುತ್ತಿದ್ದ ಓಮ್ನಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಚಾಲಕ ಬಾಬು ಪಾಟಾಳಿ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಸಹ ಪ್ರಯಾಣಿಕ ಗಣಪತಿ ಭಟ್ ಎಂಬವರು …

Read More »

ಬೆಳ್ತಂಗಡಿ: ಕಾರು ಮೇಲೆ ಕುಸಿದು ಬಿದ್ದ ವಿದ್ಯುತ್ ಟವರ್ – ಸಂಪೂರ್ಣ ವಿದ್ಯುತ್ ಸ್ಥಗಿತ

ಬೆಳ್ತಂಗಡಿ: ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಬೆಳ್ತಂಗಡಿ – ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಭಾನುವಾರ ಸಂಜೆ ಜಡಿಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತ ಭಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗಕ್ಕೆ ಮಾಹಿತಿ ನೀಡಿದರು. ಕೂಡಲೇ ಮೆಸ್ಕಾಂ ಅಧಿಕಾರಿಗಳು ದೊಂಡೋಲೆಯ ಪವರ್ …

Read More »

ಉಡುಪಿ: ರಾಜಕೀಯ ವೈಷಮ್ಯ; ಅರ್ಧಕ್ಕೆ ಮೊಟಕುಗೊಂಡ ಮಕ್ಕಳ ಯಕ್ಷಗಾನ

ಉಡುಪಿ: ರಾಜಕೀಯ ವೈಷಮ್ಯಕ್ಕೆ ಮಕ್ಕಳ ಯಕ್ಷಗಾನ ಪ್ರದರ್ಶನವು ಅರ್ಧಕ್ಕೆ ನಿಂತು ಹೋದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 10:30 ರ ವರೆಗೆ ಯಕ್ಷಗಾನ ನಡೆಸಲು ಸಮಿತಿ ಅನುಮತಿ ಪಡೆದಿದ್ದರು. ಆದರೆ, ನಿಗದಿತ ಅವಧಿಕ್ಕಿಂತ ಹೆಚ್ಚಿನ ಸಮಯದವರೆಗೂ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. …

Read More »

ಮಂಗಳೂರು: ಸರಗಳವು ಪ್ರಕರಣದ ಕುಖ್ಯಾತ ಆರೋಪಿ‌ ಸಿಸಿಬಿ ಬಲೆಗೆ – 2.41 ಲಕ್ಷದ ಸೊತ್ತು ವಶಕ್ಕೆ

ಮಂಗಳೂರು: ಸರಗಳ ಕಳವುಗೈದ ಕುಖ್ಯಾತ ಆರೋಪಿಯನ್ನು ‌ ಹೆಡೆಮುರಿಕಟ್ಟಿ ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು 2.41 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ‌ ಜಿಲ್ಲೆಯ ಬಿಡದಿಯ ಚಂದ್ರಶೇಖರ (29) ಬಂಧಿತ ಆರೋಪಿ. ಮಂಗಳೂರು ನಗರದ ಬಿಜೈ ಚರ್ಚ್ ಮೈನ್ ರೋಡ್ ನಲ್ಲಿ ಅ.21ರ ಮುಂಜಾನೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಆಗ ಇಬ್ಬರು ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದ ಸರ ಎಳೆದೊಯ್ದು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ ಪೊಲೀಸ್ ಘಟಕದಿಂದ ವಿಶೇಷ ತಂಡವನ್ನು …

Read More »

You cannot copy content of this page.