ತಾಜಾ ಸುದ್ದಿ

ಮಹಿಳೆಗೆ ನಾಯಿ ಕಚ್ಚಿದ ದಿನ ನಾನು ಗುಜರಾತಿನಲ್ಲಿದ್ದೆ ಪೋಲೀಸರ ಮುಂದೆ ದರ್ಶನ್ ಹೇಳಿಕೆ

ಬೆಂಗಳೂರು: ಖ್ಯಾತ ನಟ ದರ್ಶನ್ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದರ್ಶನ್ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ಅಮಿತಾ ಜಿಂದಾಲ್​ ಎಂಬ ಮಹಿಳೆಗೆ ದರ್ಶನ್​ ಮನೆಯ ನಾಯಿ ಕಚ್ಚಿತ್ತು. ಹೀಗಾಗಿ ಅಮಿತಾ ಅವರು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬಳಿಕ ಪೊಲೀಸರು ಐಪಿಸಿ ಸೆಕ್ಷನ್​ 289ರ ಅಡಿಯಲ್ಲಿ ಕೇಸ್​ ದಾಖಲು ಮಾಡಿಕೊಳ್ಳಲಾಗಿತ್ತು. ನಟ ದರ್ಶನ್‌ ಅವರನ್ನು ಈ ಪ್ರಕರಣದಲ್ಲಿ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರು …

Read More »

ಉಡುಪಿ: ಜಯಲಕ್ಷ್ಮಿ ಸಿಲ್ಕ್ಸ್ ಮಾಲೀಕನ ದೌರ್ಜನ್ಯ : ಆಟೋ ಚಾಲಕರಿಂದ ಬೃಹತ್ ಪ್ರತಿಭಟನೆ

ಉಡುಪಿ: ಕೆಲ ದಿನಗಳ ಹಿಂದೆ ಆಟೋ ಚಾಲಕನ ಮೇಲೆ ದೌರ್ಜನ್ಯ ನಡೆಸಿದ ಜಯಲಕ್ಷ್ಮಿ ಸಿಲ್ಕ್ಸ್ ಮಾಲಕನ ವಿರುದ್ದ ಇವತ್ತು ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೂ ಮುನ್ನ ಆಟೋ ಚಾಲಕರು ಮೆರವಣಿಗೆ ನಡೆಸಿದರು.ಆಟೋ ಚಾಲಕರು ಅಜ್ಹರಕಾಡು ,ಬ್ರಹ್ಮಗಿರಿ ಮೂಲಕ ಎಸ್ಪಿ ಕಚೇರಿಗೆ ಕಾಲ್ನಡಿಗೆಯಲ್ಲೇ ಸಾಗಿದರು.ಬಳಿಕ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಡ ಆಟೋ ಚಾಲಕನ ವಿರುದ್ಧ ನಡೆದ ದೌರ್ಜನ್ಯ ಖಂಡನೀಯ.ಇಂದೇ ಆಟೋ ಚಾಲಕರ ಮೇಲಿನ ದೌರ್ಜನ್ಯ ನಿಲ್ಲಬೇಕು.ಶ್ರೀಮಂತ ಬಟ್ಟೆ ಅಂಗಡಿ ಮಾಲಕನ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು …

Read More »

ಉಡುಪಿ: ನಾಲ್ವರ ಹತ್ಯೆ ಪ್ರಕರಣ – ‘ಸಂಜೆಯೊಳಗೆ ಪೂರ್ಣ ಚಿತ್ರಣ ಸಿಗಲಿದೆ’: ಎಸ್. ಪಿ ಮಾಹಿತಿ

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ‌ನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದಿದ್ದು ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ, ಟೆಕ್ನಿಕಲ್ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಮೇರೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದೇವೆ ಸಂಜೆಯೊಳಗೆ ತನಿಖೆ ಮಾಡಿ ಪೂರ್ಣ ಚಿತ್ರಣ ಸಿಗಲಿದೆ ಎಂದರು. ಇನ್ನು …

Read More »

ಪುತ್ತೂರು: ಈಜುತ್ತಿರುವಾಗಲೇ ಯುವಕ ಹೃದಯಾಘಾತಕ್ಕೆ ಬಲಿ..!

ಪುತ್ತೂರು : ನದಿಯಲ್ಲಿ ಈಜಾಡುತ್ತಿರುವಾಗಲೇ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮೃತ ಪುತ್ತೂರಿನ ದೇವಸ್ಯ ನಿವಾಸಿ ಸುಜಿತ್ (27) ಎಂದು ಗುರುತಿಸಲಾಗಿದೆ. ಸುಜಿತ್ ರವರು ಬೆಂದ್ರ್ ತೀರ್ಥದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿರುವ ನದಿಯೊಂದಕ್ಕೆ ಈಜಾಡಲು ತೆರಳಿದ್ದರು, ಈಜಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪಿದ್ದಾರೆ.ಸುಜಿತ್ ಪುತ್ತೂರು ಬೊಳುವಾರಿನಲ್ಲಿ ಗ್ಯಾರೇಜ್ ವೊಂದರಲ್ಲಿ ಕೆಲಸಮಾಡುತ್ತಿದ್ದು,ದೀಪಾವಳಿಯ ಪ್ರಯುಕ್ತ ಸಂಬಂಧಿಕರ ಮನೆಗೆ ಹೋಗಿದ್ದರೆಂದು ತಿಳಿದು ಬಂದಿದೆ.

Read More »

ರಿಕ್ಷಾ ಚಾಲಕನಿಗೆ ಹಲ್ಲೆಗೈದು ಪರಾರಿಯಾಗಿದ್ದ ಮತ್ತೊಬ್ಬ ರಿಕ್ಷಾ ಚಾಲಕ ಅರೆಸ್ಟ್

ಮಂಗಳೂರು : ಆಟೋ ರಿಕ್ಷಾ ಚಾಲಕನಿಗೆ ಹಲ್ಲೆಗೈದು ಪರಾರಿಯಾಗಿದ್ದ ಮತ್ತೊಬ್ಬ ಆಟೋ ರಿಕ್ಷಾ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರೋಕೇಶ್(37) ಯಾನೆ ಸೈಕೋ ರೋಸ್ ಎಂದು ಗುರುತಿಸಲಾಗಿದೆ. ಈತ ಕುಂಪಲದ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಾಲಕರಾಗಿದ್ದು, ಅದೇ ಸ್ಟ್ಯಾಂಡ್ ನಲ್ಲಿದ್ದ ಮತ್ತೊಬ್ಬ ರಿಕ್ಷಾಚಾಲಕ ಸುಶಾಂತ್(31) ಎಂಬವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಆದಿತ್ಯವಾರ ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಗುದ್ದಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಸುಶಾಂತ್ …

Read More »

ಬಿಗ್‌ ಬಾಸ್‌ ಸ್ಪರ್ಧಿ ತನಿಷಾ ವಿರುದ್ಧಎಫ್‌‌ಐಆರ್‌

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಲ್ಲಿ ಸ್ಪರ್ಧಿಯಾಗಿರುವ ನಟಿ ತನಿಷಾ ಕುಪ್ಪಂಡ ಅವರ ವಿರುದ್ಧ ಜಾತಿ ನಿಂದನೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್ ಸಿ ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಅವಹೇಳನಕಾರಿ ಪದ ಬಳಕೆ ಆರೋಪಿಸಿ ಅವರು ದೂರು ನೀಡಿದ್ದಾರೆ. ಪದಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

Read More »

ಗ್ರಹಲಕ್ಷ್ಮಿ ಹಣ 2000 ಸಿಗದವರಿಗೆ ಇಲ್ಲಿದೆ ಹೊಸ ಮಾರ್ಗ

ಬೆಂಗಳೂರು: ಖಾತೆಗೆ ಹಣ ಬಾರದೇ ಇರುವ ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಲು ಮಹತ್ವದ ಕ್ರಮ ಕೈಗೊಂಡಿದೆ. ಹೌದು, ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಹೋಗಿ ತಿಳಿವಳಿಕೆ ನೀಡಿ ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರನ್ನು ಸೇರ್ಪಡೆ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಬೇಕಾಗುವ ದಾಖಲೆಗಳು ಈ ಯೋಜನೆಗೆ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ …

Read More »

ಕರ್ನಾಟಕ ಕೇರಳ ಗಡಿಭಾಗದಲ್ಲಿ ಪೋಲಿಸರೊಂದಿಗೆ ನಕ್ಸಲರ ಗುಂಡಿನ ಚಕಮಕಿ, ಶಸ್ತ್ರಾಸ್ತ್ರ ವಶ

ಕರ್ನಾಟಕದಲ್ಲಿ ನಕ್ಸಲ್ ಚಳುವಳಿ ಸಂಪೂರ್ಣ ನಿಂತು ಹೋಗಿರುವ ಈ ಸಂದರ್ಭ ಇದೀಗ ಕೇರಳದ ನಕ್ಸಲ್ ಚಟುವಟಿಕೆಯಿಂದಾಗಿ ಮತ್ತೆ ಸುದ್ದಿಯಲ್ಲಿದೆ. ಕಳೆದ ಒಂದು ವಾರದಿಂದ ಕೇರಳದಲ್ಲಿ ನಕ್ಸಲ್ ರು ಹಾಗೂ ಪೊಲೀಸರ ನಡುವೆ ಕಾಳಗ ನಡೆಯುತ್ತಿದೆ. ಇದೀಗ ಕರ್ನಾಟಕ ಗಡಿ ಸಮೀಪ ಇದ್ದ ನಕ್ಸಲ್ ತಂಡಕ್ಕೂ ಕೇರಳ ನಕ್ಸಲ್ ನಿಗ್ರಹ ಪಡೆಗೂ ತೀವ್ರತರವಾದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಲ್ಲ ನಕ್ಸಲರೂ ಪರಾರಿಯಾಗಿದ್ದಾರೆ. ಗಡಿಗ್ರಾಮ ಕುಟ್ಟಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಕೇರಳದ ಐಯಮ್ಮುನ್ ಎಂಬ ಸ್ಥಳದಲ್ಲಿ 9 ಮಂದಿಯ ನಕ್ಸಲ್ ತಂಡವು ಶಿಬಿರ ಹಾಕಿಕೊಂಡಿತ್ತು. …

Read More »

ಮಂಗಳೂರು: ಅಂದರ್ ಬಾಹರ್ ಆಡುತ್ತಿದ್ದವರ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್‌ ಆಡುತ್ತಿದ್ದ 7 ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ರಾಜಾಸಾಬ್‌ ನದಾಫ್‌, ಕಂಠೇಶ್‌ ಬಿ.ಮೇಲಿನ ಮನಿ, ತಿಮ್ಮಣ್ಣ ವಡ್ಡರ್‌, ಕಲ್ಲಪ್ಪ, ಶರಪ್ಪ, ಶಿವಾನಂದ, ವೀರೇಶ್‌ ಬಂಧಿತ ಆರೋಪಿಗಳಾಗಿದ್ದಾರೆ. ಇವರು 62 ನೇ ತೋಕೂರು ಗ್ರಾಮದ ತೋಕೂರು ರೈಲು ನಿಲ್ದಾಣದ ಸಮೀಪದ ಕಾಡುಪೊದೆಗಳ ಮಧ್ಯೆ ಅಂದರ್‌ ಬಾಹರ್‌ ಜೂಜಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 5,220 ರೂ. ನಗದು ಸೇರಿ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

Read More »

ಹೆಬ್ರಿ: ದೀಪ ಇಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು

ಹೆಬ್ರಿ: ದೀಪಾವಳಿ ಹಬ್ಬದ ಪ್ರಯುಕ್ತ ಗದ್ದೆ ಹಾಗೂ ಬಾವಿಗೆ ದೀಪ ಇಡಲು ಹೋದಾಗ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಆವರಣವಿಲ್ಲದ ಬಾವಿ ಬಳಿ ದೀಪ ಇಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸದಿ ಬಳಿ ನಿವಾಸಿ ಸಚಿನ್‌ (35) ಮೃತಪಟ್ಟಿದ್ದಾನೆ. ನ. 12ರಂದು ಸಂಜೆ ದೀಪಾವಳಿ ಸಂದರ್ಭ ಮನೆಯ ಹತ್ತಿರದ ಬಾವಿ ಬಳಿ ಘಟನೆ ನಡೆದಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

You cannot copy content of this page.