ತಾಜಾ ಸುದ್ದಿ

ವಿಟ್ಲ: ಮಹಿಳೆಗೆ ಚಾಕು ತೋರಿಸಿ ಚಿನ್ನ ಕಳ್ಳತನಕ್ಕೆ ಯತ್ನಿಸಿ ಪರಾರಿ

ವಿಟ್ಲ: ಕುಳ ಗ್ರಾಮದ ನೀರಪಳಿಕೆಯಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ನಡೆದಿದೆ. ನೀರಪಳಿಕೆ ಮಹಮ್ಮದ್ ಕುಂಞ ಅವರ ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಇರುವ ಸಂದರ್ಭ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಗೆ ಚಾಕು ತೋರಿಸಿ, ಕಿವಿಯಲ್ಲಿರುವ ಚಿನ್ನ ಕೊಡುವಂತೆ ಕೇಳಿದ್ದಾನೆ.ಇನ್ನು ಬೆದರಿದ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾಗಿದ್ದಾನೆ.112ಕ್ಕೆ …

Read More »

ಬೆಳ್ತಂಗಡಿ: ಮನೆಯ ಶೆಡ್‌ ನಲ್ಲಿ ನಿಲ್ಲಿಸಿದ್ದ ಕಾರು ಕಳವು- ನಾಲ್ವರ ಬಂಧನ

ಬೆಳ್ತಂಗಡಿ: ಮನೆಯ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನಡೆದಿದೆ. ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಉಮಾ ಅಜಯ್‌ ಶೆಟ್ಟಿ(32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್‌ ಶೆಟ್ಟಿ(23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ (30) ಮತ್ತು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪರೆಕಲ್‌ ನಿವಾಸಿ ಕಿಶೋರ್‌ ಟಿ.(32) ಬಂಧಿತ ಆರೋಪಿಗಳು.ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಇಸಾಕ್‌ ಅವರ ಅಕ್ಕನ ಮಗ ನೌಫಾಲ್‌ ತನ್ನ ಕಾರ್‌ಶೆಡ್ಡಿನಲ್ಲಿ …

Read More »

ಕಂಠಪೂರ್ತಿ ಕುಡಿದು ರೈಲ್ವೇ ಹಳಿ ಮೇಲೆ ಟ್ರಕ್ ನಿಲ್ಲಿಸಿದ ವ್ಯಕ್ತಿಯ ಬಂಧನ

ದೆಹಲಿ: ವ್ಯಕ್ತಿಯೊಬ್ಬ ಮಧ್ಯದ ಅಮಲಿನಲ್ಲಿ ಕಂಠಪೂರ್ತಿ ಕುಡಿದು ರೈಲ್ವೇ ಹಳಿಮೇಲೆ ಟ್ರಕ್ ನಿಲ್ಲಿಸಿದ್ದು ದೊಡ್ಡ ಅಪಘಾತವೊಂದು ಲೋಕೋ ಪೈಲಟ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ. ಅಧಿಕಾರಿಗಳು ತಿಳಿಸಿದ ಮಾಹಿತಿ ಮೇರೆಗೆ ಟ್ರಕ್​ ಕಂಡು ರೈಲನ್ನು ನಿಧಾನಗೊಳಿಸಿದ್ದರು, ಮತ್ತು ಟ್ರಕ್​ನಿಂದ ಕೆಲವು ಮೀಟರ್​ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ. ದೆಹಲಿಯ ಲುಧಿಯಾನ ರೈಲ್ವೇ ಹಳಿಯಲ್ಲಿ ಟ್ರಕ್ ಚಲಾಯಿಸಿದ್ದಾನೆ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರ್ಯಾಕ್‌ನಲ್ಲಿ ಟ್ರಕ್ ಅನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ಹೇಳಿದರು. ರೈಲು ನಿಂತ ಬಳಿಕ …

Read More »

ಕೋಟ್ಯಾಂತರ ರೂ. ಬೆಲೆಬಾಳುವ ಅಂಬರ್ ಗ್ರೀಸ್ ಮಾರಾಟ- ಮೂವರ ಬಂಧನ

ಮಂಗಳೂರು : ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 1,62,80,000 ರೂ ಮೌಲ್ಯದ ಸೊತ್ತು ವಶ ಪಡೆಯಲಾಗಿದೆ.ಚಿಕ್ಕಮಗಳೂರು ತಮಿಳ್ ಕಾಲನಿಯ ಪ್ಯಾರೇಜಾನ್ ಸೇಟು(37), ವಿಟ್ಲದ ಬದ್ರುದ್ದೀನ್ ಬದ್ರು(28 ), ತಮಿಳುನಾಡಿನ ರಾಜೇಶ್.ಆರ್(22) ಬಂಧಿತ ಆರೋಪಿಗಳು.ನ. 25 ರಂದು ಮಂಗಳೂರು ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ …

Read More »

ಕುಂದಾಪುರ: ಸಿಡಿಲು ಬಡಿದು ಕಾರ್ಮಿಕ ಮೃತ್ಯು

ಕುಂದಾಪುರ: ಶನಿವಾರ ಸಂಜೆ ಇದ್ದಕ್ಕಿದ್ದಂತೆ ಸುರಿದ ಮಳೆ ಗಾಳಿ ಹಾಗೂ ಸಿಡಿಲಿಗೆ ಕುಂದಾಪುರ ದಂಗಾಗಿದ್ರೆ ತಾಲೂಕಿನ ಕಂಡ್ಲೂರು ಸಮೀಪ ಹಳ್ನಾಡ್ ಹೊಳೆಯಲ್ಲಿ ಹೊಯ್ಗೆ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರ್ಮಿಕನನ್ನು ಉತ್ತರ ಪ್ರದೇಶದ ಮೂಲದ ದೀಪ್ ಚಂದ್ (38) ಎಂದು ಗುರುತಿಸಲಾಗಿದೆ. ಹಳ್ನಾಡ್ ಹೊಳೆಯ ಹೊಯ್ಗೆ ಧಕ್ಕೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ದೋಣಿಯಿಂದ ಹೊಯ್ಗೆ ಖಾಲಿ ಮಾಡುತ್ತಿದ್ದ ಸಂದರ್ಭ ಸಂಜೆ 5 ಗಂಟೆಗೆ ಸಿಡಿಲು ಬಡಿದ ಪರಿಣಾಮ ದೀಪ್ ಚಂದ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. …

Read More »

ಪುತ್ತೂರು: ಮಹಿಳೆಗೆ ಅಮಲು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ..!

ಪುತ್ತೂರು: ಮಹಿಳೆಯೋರ್ವಳಿಗೆ ಅಮಲು ಬರಿಸುವ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ರಸ್ತೆಯ ಬಳಿ ಬಿಟ್ಟು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರ ಎಂಬಲ್ಲಿ  ನ.24ರ ರಾತ್ರಿ ಅಂದರೆ ನಿನ್ನೆ ನಡೆದಿದೆ. ಇಂದು ಬೆಳಗ್ಗೆ ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಚೇತರಿಸುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಚೆನ್ನರಾಯಪಟ್ಟಣ ಮೂಲದವರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಪುತ್ತೂರು ಬಸ್ ನಿಲ್ದಾಣದ ಬಳಿ ಇದ್ದ ಈ ಮಹಿಳೆಗೆ ಆರೋಪಿ …

Read More »

ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವ; ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನ

ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಜ.1 ರಿಂದ 15 ರ ತನಕ ನಡೆಯಲಿದ್ದು ನ.27 ರಂದು ಆಯೋಧ್ಯೆಯಿಂದ ಬರಲಿರುವ ಅಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಚಾಲಕ ಡಾ.ಕೃಷ್ಣ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಭಿಯಾನದ …

Read More »

9 ತಿಂಗಳ ಮಗುವಿಗೆ ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿದ ಅಜ್ಜಿ

9 ತಿಂಗಳ ಮಗುವಿಗೆ ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿದ ಆರೋಪ ಅಜ್ಜಿ ವಿರುದ್ದ ಕೇಳಿ ಬಂದಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಮಗುವಿನ ತಾಯಿ ನಾಗರತ್ನ ಅತ್ತೆ ಸರೋಜಾ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿರುವ ದೂರಿನಲ್ಲಿ ನವೆಂಬರ್ 22 ರಂದು ನನ್ನ ನವೆಂಬರ್ 22 ರಂದು ನನ್ನ ಅತ್ತೆ ಸರೋಜಾ ಲೆ, ಅಡಿಕೆ ತಿನ್ನಿಸಿ ಅಜ್ಜಿ ಕೊಲೆ ಮಾಡಿದ್ದಾರೆ ಅಂಥ ಆರೋಪಿಸಿದ್ದಾರೆ.ನ.22ರಂದು ಮಗುವಿನ ಅಂತ್ಯಸಂಸ್ಕಾರ ನೇರವೇರಿದ್ದು, ಘಟನೆ ಸಂಬಂಧ …

Read More »

ನವೆಂಬರ್ 27 ರಂದು ಕಾಂತಾರ ಸಿನೆಮಾ ಪ್ರೀಕ್ವೆಲ್‌ ಫಸ್ಟ್‌ ಲುಕ್‌ ರಿಲೀಸ್

ಬೆಂಗಳೂರು :ಕೊನೆಗೂ ಕಾಂತಾರ ಸಿನೆಮಾದ ಮುಂದಿನ ಭಾಗದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ನವೆಂಬರ್ 27 ರಂದು ಕಾಂತಾರ ಸಿನೆಮಾದ ಮುಂದಿನ ಭಾಗದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಇಡೀ ವಿಶ್ವವನ್ನೇ ತಿರುಗಿ ನೋಡುವಂತೆ ಮಾಡಿದ್ದ ಕಾಂತಾರ ಸಿನೆಮಾದ ಎರಡನೇ ಭಾಗ ಅಥವಾ ಪ್ರೀಕ್ವೇಲ್ ನ ಬಗ್ಗೆ ಇದೀಗ ಒಂದು ಶುಭ ಸುದ್ದಿ ಸಿಕ್ಕಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ನೀಡಿರುವ ಹೊಂಬಾಳೆ ನವೆಂಬರ್ 27 ರಂದು ಫಸ್ಟ್ ಲುಕ್ ರೀಲಿಸ್ ಆಗಲಿದೆ ಎಂದಿದೆ. ರಿಷಬ್‌ ಶೆಟ್ಟಿ ಬರೆದು ನಿರ್ದೇಶನ ಮಾಡಿರುವ ‘ಕಾಂತಾರ’ …

Read More »

ಇಂದು,ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಕಂಬಳ

ಬೆಂಗಳೂರು:ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ನಾಳೆ ಐತಿಹಾಸಿಕ ಕಂಬಳ ಪಂದ್ಯ ನಡೆಯಲಿದೆ. ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕಂಬಳದ ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆಗೆ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ಅರಮನೆ ಮೈದಾನದ ಗೇಟ್ ನಂ.1, 2, 3, 4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ತುಳುನಾಡಿನ ಕಂಬಳದ ಇತಿಹಾಸದಲ್ಲಿಯೇ ಅತಿ ಉದ್ದದ ಟ್ರ್ಯಾಕ್ …

Read More »

You cannot copy content of this page.