ತಾಜಾ ಸುದ್ದಿ

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!

ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ‌ಮಾಹಿತಿ ನೀಡಿದ್ದಾರೆ.ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Read More »

ಮಂಗಳೂರು: ಮನೆಗೆ ನುಗ್ಗಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬಿಜೈ ನ್ಯೂರೋಡ್‌ನ‌ ಸಂಕೈಗುಡ್ಡದಲ್ಲಿ ನಡೆದಿದೆ. ನ.24ರ ರಾತ್ರಿ 11.30ರಿಂದ ನ.25ರ ಬೆಳಗ್ಗೆ 6 ಗಂಟೆಯ ನಡುವೆ  ಈ ಘಟನೆ ನಡೆದಿದ್ದು,  ಮನೆಯ ಬೆಡ್‌ರೂಂನ ಕಿಟಕಿಯ ಗ್ರಿಲ್ಸ್‌ನ್ನು ತುಂಡರಿಸಿ ಕಳ್ಳರು ಮನೆ ಪ್ರವೇಶಿಸಿದ್ದಾರೆ. ಬೆಡ್‌ರೂಂ ಕಪಾಟಿನಲ್ಲಿದ್ದ ಅಂದಾಜು 16 ಗ್ರಾಂ ತೂಕದ ಒಂದು ಜತೆ ಕಿವಿಯ ಓಲೆ, 144 ಗ್ರಾಂ ತೂಕದ 4 ಚಿನ್ನದ ನೆಕ್ಲೆಸ್‌, 40 ಗ್ರಾಂ ತೂಕದ ಚಿನ್ನದ ಸರ, 48 ಗ್ರಾಂ ತೂಕದ …

Read More »

ಬಿಗ್ ಬಾಸ್ ಮನೆಗೆ ಹಾಟ್ ಹಾಟ್ ಬೆಡಗಿ ಪವಿ ಪೂವಪ್ಪ ಎಂಟ್ರಿ

ಬೆಂಗಳೂರು : ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ಬಾಸ್ ಕನ್ನಡ ಆವೃತ್ತಿಯ 10ನೇ ಸೀಸನ್ ನಲ್ಲಿ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ಇಬ್ಬರು ಮನೆಯೊಳಗೆ ಎಂಟ್ರಿ ಪಡೆದಿದ್ದಾರೆ, ವೈಲ್ಡ್ ಕಾರ್ಡ್ ಮೂಲಕ ಅವಿನಾಶ್ ಶೆಟ್ಟಿ ಹಾಗೂ ಪವಿ ಪೂವಪ್ಪ ಎಂಟ್ರಿ ಆಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿರುವ ಪವಿ ಪೂವಪ್ಪ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ …

Read More »

ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್!

ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರೋದಾಗಿ ವಿಚಾರಣೆ ವೇಳೆ ದಂಧೆಕೋರರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಳೆದ ಎಂಟತ್ತು ವರ್ಷಗಳಿಂದ ಮಕ್ಕಳ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ದಂಧೆ ವಿಸ್ತರಿಸಿದೆ ಎನ್ನಲಾಗಿದೆ. ಆರೋಪಿ ಏಜೆಂಟ್‌ಗಳು ನೀಡಿದ ಮಾಹಿತಿ ಮೇರೆಗೆ ಈವರೆಗೆ ಮಾರಾಟವಾಗಿರೋ 10 ಮಕ್ಕಳ ವಿಳಾಸವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. …

Read More »

ಮಂಗಳೂರು: ಸಾಕು ನಾಯಿಗಳಿಗೆ ಪಾಲಿಕೆಯಿಂದ ಡಾಗ್ ಲೆಸೆನ್ಸ್ ಪಡೆಯಲು ಸೂಚನೆ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‍ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ ಪರಿಣಾಮಗಳು ಬೀರುತ್ತಿದೆ ಹಾಗೂ ನಗರದಲ್ಲಿ ರೇಬಿಸ್ ಕಾಯಿಲೆಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ಈಗಾಗಲೇ ನಗರದಲ್ಲಿ ಸಾಕು ನಾಯಿಗಳಿಗೆ (Dog licence) ಪರವಾನಿಗೆಯನ್ನು ಪಡೆಯುವಂತೆ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ (Dog licence) ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ …

Read More »

ಮಣಿಪಾಲ: ವೇಶ್ಯಾ ವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ- ಇಬ್ಬರು ಮಹಿಳೆಯರ ರಕ್ಷಣೆ

ಉಡುಪಿ ಜಿಲ್ಲೆಯ ಮಣಿಪಾಲದ ವಸತಿ ಸಮುಚ್ಛಯವೊಂದರಲ್ಲಿ ವೇಶ್ಯಾ ವಾಟಿಕೆಗೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ರಂದು ಬಂಧಿಸಿದ್ದಾರೆ ಇವರ ಜೊತೆಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಉನ್ನತ ರೆಸಿಡೆನ್ಸಿಯ ಎರಡು ಫ್ಲ್ಯಾಟ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಾನಂದ ಕೆ. ಸಿಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ದಂಧೆ ನಡೆಸುತ್ತಿದ್ದ ಗಣೇಶ್, ಸುಧೀರ್ ಮತ್ತು ಮಾರುತಿ ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಸಂಬಂಧಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಇಬ್ಬರು …

Read More »

ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ- ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ರಿಲೀಸ್

‘ಕಾಂತಾರ 2’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರುತ್ತಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ. ‘ಕಾಂತಾರ 2 ಚಿತ್ರ ಬರಲಿದೆ ಎಂದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಒಂದು ಕುತೂಹಲ ಇತ್ತು. ಈ ಕುತೂಹಲವನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಪೋಸ್ಟ್ ಮೂಡಿಬಂದಿದೆ. ಇಂದು (ನವೆಂಬರ್ 27) ಚಿತ್ರತಂಡ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ‘ಕಾಂತಾರ ಚಾಪ್ಟರ್ 1’ (Kantara Chapter 1) ಚಿತ್ರದ ಮುಹೂರ್ತ ನೆರವೇರಿಸುವುದರ ಜೊತೆಗೆ ಮೊದಲ ಪೋಸ್ಟರ್ ಅನಾವರಣ …

Read More »

ಪುತ್ತೂರು: ಕ್ರೀಡಾಕೂಟದಲ್ಲಿ ಬಹುಮಾನ ಸಿಗದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ..!

ಪುತ್ತೂರು: ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ವಿಚಾರ ಖಿನ್ನತೆಗೊಳಗಾಗಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ . ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪಿಯುಸಿ ಕಲಿಯುತ್ತಿದ್ದ ನಿಶಾ(17) ಎಂದು ಗುರುತಿಸಲಾಗಿದೆ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಿಶಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದರೆ ರನ್ನಿಂಗ್ ರೇಸ್ ನಲ್ಲಿ ಬಹುಮಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ನಿಶಾ, ಬಳಿಕ ಖಿನ್ನತೆಗೊಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ ಸೇವಿಸಿದ್ದರು. ಈ ವೇಳೆ ತೀವ್ರ …

Read More »

ಬೆಂಗಳೂರು “ರಾಜ – ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿ ಕರಾವಳಿಯನ್ನು ಹೊರತುಪಡಿಸಿ ನಡೆದ ಅದ್ಧೂರಿ ಬೆಂಗಳೂರು ಕಂಬಳ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ. ನವೆಂಬರ್‌ 25ರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ನವೆಂಬರ್‌ 26ರ ರಾತ್ರಿ 2 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ. 159ರ ಜೋಡಿ ಕೋಣಗಳು ಭಾಗವಹಿಸಿದ ಈ ಮಹಾ ಕೂಟದಲ್ಲಿ (ರಾಜ-ಮಹಾರಾಜ ಕಂಬಳ) ಅತ್ಯಂತ ಪ್ರತಿಷ್ಠೆಯ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಸಿ ಕೋಣಗಳು ಪ್ರಥಮ ಬಹುಮಾನ ಪಡೆದರೆ ಮಾಳ ಆನಂದ ನಿಲಯ ಶೇಖರ ಎ …

Read More »

ಒಂದೇ ಕುಟುಂಬದ ಐವರು ಆತ್ಮಹತ್ಯೆ..!ಸಾವಿಗೂ ಮುನ್ನಾ ವೀಡಿಯೋದಲ್ಲಿ ಹೇಳಿದ್ದೇನು.?

ತುಮಕೂರು: ನಗರದಲ್ಲಿ ನಿನ್ನೆ ಅಕ್ಕಪಕ್ಕದ ಮನೆಯವರ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗೆ ಸಾವಿಗೆ ಮುನ್ನಾ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ತಮ್ಮ ಸಾವಿಗೆ ಕಾರಣವನ್ನು ಮನ ಮಿಡಿಯುವಂತೆ ಬಿಚ್ಚಿಟ್ಟಿದ್ದಾರೆ. ಅದೇನು ಅಂತ ಮುಂದೆ ಓದಿ. ತುಮಕೂರಿನ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮನೆ ಯಜಮಾನ ಗರೀಬ್ ಸಾವ್, ಪತ್ನಿ ಸುಮಯಾ, ಮಕ್ಕಳಾದ ಹಾಜೀರಾ, ಮೊಹಮ್ಮದ್ ಶುಭಾನ್ ಹಾಗೂ ಮಹ್ಮದ್ ಮುನೀರ್ ಎಂಬುದಾಗಿ ತಿಳಿದು ಬಂದಿದೆ. ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೇ, ಮೂವರು …

Read More »

You cannot copy content of this page.