ತಾಜಾ ಸುದ್ದಿ

ಮಂಗಳೂರು: ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 20 ಲಕ್ಷ ರೂ. ವಶಕ್ಕೆ ಓರ್ವನ ಬಂಧನ

ಮಂಗಳೂರು : ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 20 ಲಕ್ಷ ರೂ. ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ 20 ಲಕ್ಷ ರೂ. ಕರೆನ್ಸಿ, ಐದು ಲಕ್ಷ ರೂ. ಮುಖ ಬೆಲೆಯ ಅಮೆರಿಕನ್ ಡಾಲರ್ ಹಾಗೂ ದಿರ್‌ಹಂ ಪತ್ತೆಯಾಗಿದೆ. ಎರಿಯಾಲ್ ನಿವಾಸಿ ಮುಸ್ತಫ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More »

ನಾಪತ್ತೆಯಾಗಿದ್ದ ಅರ್ಚಕ ಶವವಾಗಿ ಪತ್ತೆ: ಕಣ್ಣುಗಳಿಲ್ಲ, ಜನನಾಂಗ ಕಟ್‌, ಬಿಹಾರದಲ್ಲಿ ಉದ್ವಿಗ್ನತೆ

ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಅರ್ಚಕರನ್ನು ಗುಂಡಿಟ್ಟು ಹತ್ಯೆಗೈದು, ಆತನ ಕಣ್ಣುಗಳನ್ನು ಕಿತ್ತು, ಜನನಾಂಗಗಳನ್ನು ಕತ್ತರಿಸಿರುವ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಘಟನೆಯು ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು, ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.   ಜಿಲ್ಲೆಯ ದಾನಾಪುರ ಗ್ರಾಮದ ಶಿವ ದೇವಸ್ಥಾನದ ಅರ್ಚಕ ಮನೋಜ್ ಕುಮಾರ್ ಎಂಬಾತ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ. ಅವರ ಸಹೋದರ ಅಶೋಕ್ ಕುಮಾರ್ ಶಾ ಬಿಜೆಪಿಯ ಮಾಜಿ ವಿಭಾಗೀಯ ಅಧ್ಯಕ್ಷರಾಗಿದ್ದಾರೆ. ಮನೋಜ್ ಕುಮಾರ್ ಮನೆಯಿಂದ ದೇವಸ್ಥಾನಕ್ಕೆ ಹೋದಾಗ ನಾಪತ್ತೆಯಾಗಿದ್ದಾರೆ …

Read More »

ವಿಟ್ಲ: ಬಸ್-ಬೈಕ್ ಡಿಕ್ಕಿ ಯುವಕ ಮೃತ್ಯು

ವಿಟ್ಲ: ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕಬಕ ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ. ಮೃತರನ್ನು ಬಿ.ಸಿ.ರೋಡ್‌ ಕೈಕಂಬ ನಿವಾಸಿ ಅಹ್ಮದ್ ಆಶಿಕ್ ಅಕ್ಮಲ್ (18) ಎಂದು ಗುರುತಿಸಲಾಗಿದೆ. ಈತ ಕಬಕ ಕಡೆಯಿಂದ ಬಿ.ಸಿ.ರೋಡ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿದ ಬಂದ ಬಸ್ ಢಿಕ್ಕಿ ಹೊಡೆದಿದ್ದು ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಅಕ್ಮಲ್‌ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಉಡುಪಿ: ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ

ಉಡುಪಿ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧೆಡೆ ಧಿಡೀರ್ ದಾಳಿ ಹಾಗೂ ತಪಾಸಣೆ ಕೈಗೊಂಡು ಕ್ಲಿನಿಕ್ ಹಾಗೂ ಲ್ಯಾಬ್‌ಗಳ ನ್ಯೂನ್ಯತೆ ಕಂಡು ಬಂದ ಹಿನ್ನೆಲೆ, ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲ್ಯಾಬ್ ಹಾಗೂ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ. ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡವು ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್‌ನಲ್ಲಿ ಡಾ. ಎ.ಆರ್ ಆಚಾರ್ಯ ರವರು ಆಯುರ್ವೇದ ಕ್ಲಿನಿಕ್‌ನ ನೋಂದಣಿ ಹೊಂದಿ ಅಲೋಪತಿಕ್ ಪದ್ಧತಿಯ …

Read More »

ಕೇರಳದಲ್ಲಿ ಭಯ ಹುಟ್ಟಿಸಿದ ಕೊರೊನಾದ ಹೊಸ ತಳಿ; ತುರ್ತು ಸಭೆ ಕರೆದ ಕರ್ನಾಟಕ ಸರ್ಕಾರ..!

ಕೇರಳದಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಆತಂಕದ ಕಾರ್ಮೋಡ ಕವಿಯ ತೊಡಗಿದೆ. ಕೇರಳದಲ್ಲಿ ಕೇಸ್​ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವರು, ತುರ್ತು ಸಭೆ ಕರೆದು. ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಕೇರಳದಲ್ಲಿ ಕೋವಿಡ್ ಹೊಸ​​ ವಂಶಾವಳಿ ಪತ್ತೆ ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ ವಕ್ಕರಿಸುವಂತಿದೆ. ದೇಶದಲ್ಲಿ ಮತ್ತೆ ಕೊರೊನಾ ಕೇಸ್‍ಗಳ ಸಂಖ್ಯೆ ಉಲ್ಬಣಗೊಂಡಿದೆ. ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಹೊಸ ಸಬ್ ವೇರಿಯಂಟ್ ಜೆಎನ್-1 ಇದೀಗ ಭಾರತದಲ್ಲೂ ಪತ್ತೆಯಾಗಿದ್ದು, ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ. …

Read More »

ಚಲಿಸುತ್ತಿದ್ದ ಬಸ್​ನಲ್ಲೇ ದಲಿತ ಮಹಿಳೆ ಮೇಲೆ ಅತ್ಯಾಚಾರ

ಜೈಪುರ: ಚಲಿಸುತ್ತಿದ್ದ ಬಸ್​ನಲ್ಲಿ ದಲಿತ ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ. 20 ಮಹಿಳೆ ಉತ್ತರ ಪ್ರದೇಶ ಕಾನ್ಪುರದಿಂದ ಜೈಪುರಕ್ಕೆ ಬರುವ ವೇಳೆ ಚಾಲಕರು ಅತ್ಯಾಚಾರವೆಸಗಿದ್ದಾರೆ. ಡಿಸೆಂಬರ್​ 9ರಂದು ಮಧ್ಯರಾತ್ರಿ ಖಾಸಗಿ ಬಸ್​ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆ ಕ್ಯಾಬಿನ್​ನಲ್ಲಿ ಕುಳಿತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್​ನೊಳಗಿದ್ದ ಆರಿಫ್​ ಮತ್ತು ಲಲಿತ್​ ಎಂಬ ಚಾಲಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಆರಿಫ್​ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಲಾಗಿದೆ. ಮತ್ತೋರ್ವ ಆರೋಪಿ ಲಲಿತ್​ ತಪ್ಪಿಸಿಕೊಂಡಿದ್ದು, …

Read More »

ಪುತ್ತೂರು : ಹಿಂ.ಜಾ.ವೇ ಕಾರ್ಯಕರ್ತ, ಮುಡ್ನೂರಿನ ಪ್ರವೀಶ್ ಕುಮಾರ್ ಗೆ ಗಡಿಪಾರು ನೋಟಿಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಪರ ಸಂಘಟನೆಯ ನಾಯಕರಿಗೆ ಮತ್ತೊಂದು ಶಾಕ್ ನೀಡಿದ ಜಿಲ್ಲಾಡಳಿತ, ಇದೀಗ ಮತ್ತೋರ್ವ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್ ಜಾರಿ ಮಾಡಲಾಗಿದೆ. ನೆಟ್ಟಣಿಗೆ ಮುಡ್ನೂರು ನಿವಾಸಿ ಪ್ರವೀಶ್ ಕುಮಾರ್ ನಾಯರ್ ವಿರುದ್ಧ ಪುತ್ತೂರು ಸಹಾಯಕ ಆಯುಕ್ತರು ಗಡಿಪಾಡು ಯಾಕೆ ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪ್ರಸ್ತುತ ಅಯ್ಯಪ್ಪ ಮಾಲಾಧಾರಿಯಾಗಿರುವ ಪ್ರವೀಶ್ ಕುಮಾರ್ ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತನಾಗಿದ್ದು ಎರಡು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಡಿಸೆಂಬರ್ 20 ರಂದು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ …

Read More »

ಕಡಬ: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ- ಬಾಲಕ ಮೃತ್ಯು

ಕಡಬ: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ಕಡಬ ಇಲ್ಲಿನ ಕಳಾರ ಸಮೀಪದಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ಪುಟಾಣಿ ತಂಗಿ ಗಂಭೀರ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸರಸ್ವತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್‌ ಆಗುತ್ತಿದ್ದ ವೇಳೆ ಬಾಲಕ ತಮ್ಮ ನಿವಾಸಕ್ಕೆ ತಲುಪುವ …

Read More »

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಐವರು ಆರೋಪಿಗಳ ಪತ್ತೆಗೆ ಎನ್ ಐಎ ಮನವಿ

ಸುಳ್ಯ: 2022ರ ಜುಲೈ ತಿಂಗಳಿನಲ್ಲಿ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಎನ್ ಐಎ ಮನವಿ ಮಾಡಿದೆ. ಆರೋಪಿಗಳಾದ ಎಂ.ಡಿ.ಮುಸ್ತಫ, ಮಸೂದ್ ಅಗ್ನಾಡಿ, ಮಸೂದ್ ಕೆ.ಎ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಆರ್. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಈ ಎಲ್ಲಾ ಆರೋಪಿಗಳು ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್ ಲಿಸ್ಟ್ ಪಟ್ಟಿಯಲ್ಲಿದ್ದಾರೆ. ಒದಗಿಸಿದ ವಾಟ್ಸಾಪ್ (9497715294) ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಈ ಆರೋಪಿಗಳು ಕಂಡುಬಂದಲ್ಲಿ ಅಥಾವ ಅವರ ಇರುವಿಕೆಯ …

Read More »

ಪುತ್ತೂರು: KSRTCಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡರಾದ ಶಾಂತರಾಮ ವಿಟ್ಲ ಇವರು ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಪ್ರಮೀಶಾ ಎಸ್‌ ಶೆಟ್ಟಿ, ಮಕ್ಕಳಾದ ಶ್ರೇಯಾ ಹಾಗೂ ಸ್ನೇಹಾ ಶೆಟ್ಟಿ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಗ್ಗೆ ಮಾಡುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಶಾಂತರಾಮ ವಿಟ್ಲ ಅವರು ಜನಪರ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಅಶಕ್ತರ ಬಾಳಿಗೆ ಬೆಳಕಾಗಿದ್ದರು.

Read More »

You cannot copy content of this page.