ತಾಜಾ ಸುದ್ದಿ

ಮಂಗಳೂರು: ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದ ಬೈಕ್..! ಸವಾರನಿಗೆ ಗಾಯ

ಮಂಗಳೂರಿನ ಪ್ರಮುಖ ರಸ್ತೆಯಾದ ಕೆಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಸಮೀಪ ಭೂಗತ ಕೆಬಲ್ ಆಳಡಿಸಲು ತೋಡಿದ್ದ ಗುಂಡಿಗೆ ಬೈಕ್ ಸವಾರನೊಬ್ಬ ಬೈಕ್ ಸಮೇತ ಬಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ. ಸ್ಮಾರ್ಟ್ ಸಿಟಿಯಾದ ಮಂಗಳೂರಿನಲ್ಲಿ ರೋಡ್ ಗಳು ಸ್ಮಾರ್ಟ್ ಆದರೂ ಇನ್ನೂ ಕಾಂಕ್ರಿಟ್ ರಸ್ತೆ ಅಗೆದು ಕೇಬಲ್ ಆಳವಡಿಸುವ ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಅವರ ಭೂಗತ ಕೇಬಲ್ ಆಳವಡಿಸುವ ಕಾರ್ಯ ನಗರಾದ್ಯಂತ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದು ಯಾವುದೇ ಸುರಕ್ಷತೆ ಇಲ್ಲದೆ ಹಾಗೆ ಬಿಟ್ಟಿದ್ದಾರೆ. ಅಂತಹುದೇ ಒಂದು ಗುಂಡಿ ಮಂಗಳೂರಿನ …

Read More »

ಮೂಡಬಿದ್ರಿ: ಹಾಸ್ಟೆಲ್’ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು..!

ಮೂಡಬಿದ್ರಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಇಂದು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮನೋಜ್(18) ಎಂಬ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. ಮೃತ ಮನೋಜ್ ಗದಗ ಜಿಲ್ಲೆಯ ಮುಂಡರಗಿ ತಾಲೂಕಿ ತರ್ಚಿಹಾಳ ಗ್ರಾಮದ ಮಲ್ಲಪ್ಪ ಎಂಬುವರ ಪುತ್ರ ಎಂಬುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಪೋಷಕರು ನಾವು ಸ್ಥಳಕ್ಕೆ ಆಗಮಿಸೋವರೆಗೆ ಪುತ್ರನ ಶವವನ್ನು ಇಳಿಸದಂತೆ ಆಗ್ರಹಿಸಿದ್ದಾರೆ. …

Read More »

ಉಡುಪಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಲೈನ್‌ಮ್ಯಾನ್ ಸಾವು

ಉಡುಪಿ: ಟ್ರಾನ್ಸ್ ಫಾರ್ಮರ್ ರಿಪೇರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೆಸ್ಕಾಂ ಲೈನ್ ಮನ್ ಬೆಳಗಾವಿಯ ಗೋಕಾಕ ತಾಲೂಕಿನ ಉಮೇಶ್ (29) ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಮೇಶನ ತಂದೆ ಮಾಂತೇಶ್ ಶಿವಲಿಂಗಪ್ಪ ಅಂಗಡಿ ದೂರಿನ ಪ್ರಕಾರ, ಉಮೇಶ್ ಕಳೆದ ಎಂಟು ವರ್ಷಗಳಿಂದ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಜೂನಿಯರ್ ಲೈನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೈರಾಳಿ, ಗುಡ್ಡೆಯಂಗಡಿ, ಹಿರಿಯಡ್ಕ ಬಳಿ ವಿದ್ಯುತ್ ಪರಿವರ್ತಕ ನಿರ್ವಹಣೆ ಕಾಮಗಾರಿ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿ. 22 ರಂದು ವಿದ್ಯುತ್ …

Read More »

ಮಂಗಳೂರು :ಬೈಕ್ ಗೆ ಬಸ್ ಡಿಕ್ಕಿ- ಸವಾರ ಮೃತ್ಯು, ಮಹಿಳೆ ಮತ್ತು ಮಗು ಅಪಾಯದಿಂದ ಪಾರು

ಮಂಗಳೂರು :ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಮತ್ತು ಮಗು ಅಪಾಯದಿಂದ ಪಾರಾಗಿದ್ದು, ಫರಂಗೀಪೇಟೆ ಸಮೀಪದ ಅರ್ಕುಳ ದ್ವಾರದ ಬಳಿ ಇಂದು ನಡೆದಿದೆ. ಕುಕ್ಕಾಜೆ ನಿವಾಸಿ ಹಂಝ ಯಾನೆ ರಮ್ಲಾನ್ ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರು ಮಂಗಳೂರು ಕಡೆಯಿಂದ ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಂಝ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇದೇ ಬೈಕ್ …

Read More »

ಬಂಟ್ವಾಳ: ಕುತ್ತಿಗೆಯಿಂದ ಚಿನ್ನದ ಸರ ಕಸಿದ ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿಯ ಅಂಗಡಿಯೊಂದರಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಕಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ‌ಬೈಕಂಪಾಡಿಯ ಅಶೋಕ, ಮಂಗಳೂರು ದಂಬೇಲ್ ನಿವಾಸಿ ಸಚಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದೂವರೆ ಪವನಿನ ಚಿನ್ನದ ಸರ ಮತ್ತು ಬೈಕನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.14 ರಂದು ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿರುವ ಅಂಗಡಿಯೊಂದಕ್ಕೆ ಬಂದ ಆರೋಪಿಗಳು ಅಂಗಡಿ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಚೈನ್ ಎಗರಿಸಿ …

Read More »

ಡೆತ್ ನೋಟ್ ನಲ್ಲಿ ಹೆಸರಿದ್ದ ಮಾತ್ರಕ್ಕೆ ಆರೋಪಿ ಎಂಬ ತೀರ್ಮಾನ ಸಲ್ಲ: ಹೈಕೋರ್ಟ್ ಮಹತ್ವದ ಆದೇಶ

ಆತ್ಮಹತ್ಯೆ ನೋಟ್ ನಲ್ಲಿ ವ್ಯಕ್ತಿಯ ಹೆಸರಿದ್ದ ಮಾತ್ರಕ್ಕೆ ಆತ ಆರೋಪಿ ಎಂಬ ತೀರ್ಮಾನ ಸರಿಯಲ್ಲ, ನಿಜಕ್ಕೂ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎನ್ನುವುದರ ಬಗ್ಗೆ ಸಂಪೂರ್ಣ ತನಿಖೆ ಅತ್ಯಗತ್ಯವಿದೆ ಎಂದು ಹೈಕೋರ್ಟ್ ಕಲಬುರಗಿ ಪೀಠ ಮಹತ್ವದ ತೀರ್ಪು ನೀಡಿದೆ. ಇತ್ತೀಚೆಗೆ ವಿಜಯಪುರ ಜಿಲ್ಲೆಯ ಪ್ರಕರಣವೊಂದರಲ್ಲಿ ಹೈಕೋರ್ಟ್ ಕಲಬುರಗಿ ಪೀಠ ತೀರ್ಪು ನೀಡಿದೆ. ಶಿಕ್ಷಕ ಬಸವರಾಜ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಕಾರಣವೆಂಬ ಆರೋಪ ಎದುರಿಸುತ್ತಿದ್ದಾರೆ. ಹನುಮಂತರಾಯಪ್ಪ ಅವರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯಕ್ ಅವರಿದ್ದ ಏಕಸದಸ್ಯ ಪೀಠದಿಂದ …

Read More »

ಮಂಗಳೂರಿಗೆ ಬರುತ್ತಿದ್ದ ಹಡಗು ಮೇಲೆ ಡೋನ್ ದಾಳಿ

ಮಂಗಳೂರಿಗೆ ಸೌದಿ ಅರೆಬಿಯಾದಿಂದ ಕಚ್ಚಾ ತೈಲ ಹೊತ್ತು ಬರುತ್ತಿದ್ದ MV Chem Pluto ಹಡಗಿನ ಮೇಲೆ ಶನಿವಾರ ದ್ರೋನ್ ದಾಳಿ ನಡೆದಿದ್ದು ಅದರಲ್ಲಿದ್ದ 20 ಮಂದಿ ಅಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ. ಪೂರ್‌ಬಂದರ್ ಕರಾವಳಿಯಿಂದ 217ನಾಟಿಕಲಗ್ ಮೈಲ್  ದೂರದಲ್ಲಿ ದಾಳಿ ನಡೆದಿದ್ದು ಆ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಕೂಡಲೇ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆ ನೌಕೆ ನೆರವಿಗೆ ಧಾವಿಸಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಂದಿಸಲಾಗಿದೆ. ಆದರೆ ಹಡಗಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುವುದಾಗಿ ವರದಿಯಾಗಿದೆ.

Read More »

ಮಕ್ಕಳ ಕೈಗೆ ಫೋನ್ ಕೊಟ್ಟು ಊಟ ಮಾಡಿಸುವ ಪೋಷಕರು ತಪ್ಪದೇ ಇದನ್ನೊಮ್ಮೆ ಓದಿ

ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಬಳಕೆ ಮಾಡುತ್ತಾರೆ. ಆದರೆ ಚಿಕ್ಕ ಮಗು ಊಟ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಮೊಬೈಲ್‌ ಕೊಟ್ಟು ಊಟ ಮಾಡಿಸುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಊಟ ಮಾಡಿಸುವುದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಅರ್ಥಮಾಡಿಕೊಳ್ಳಲು ಅನೇಕ ಜನರು ವಿಫಲರಾಗಿದ್ದಾರೆ.   ಚಿಕ್ಕ ಮಕ್ಕಳಲ್ಲಿ ಫೋನ್ ಬಳಕೆಯ ಅಂಕಿಅಂಶಗಳು ಆತಂಕಕಾರಿಯಾಗಿವೆ. ಆಘಾತಕಾರಿ ವಿಷಯವೆಂದರೆ ಒಂದೂವರೆ ವರ್ಷದೊಳಗಿನ ಮಕ್ಕಳು ದಿನಕ್ಕೆ 5 ಗಂಟೆಗಳ ಕಾಲ ಮೊಬೈಲ್ ಸಾಧನಗಳಲ್ಲಿ …

Read More »

ಉಡುಪಿ: ಪರವಾನಿಗೆ ರಹಿತ ಮೆಹಂದಿ ಕಾರ್ಯಕ್ರಮ – ಹಲವರು ಪೊಲೀಸ್ ವಶಕ್ಕೆ

ಉಡುಪಿ: ಪರವಾನಿಗೆ ಇಲ್ಲದೆ ಮೆಹಂದಿ ಕಾರ್ಯಕ್ರಮ ನಡೆಸಿದ ಮನೆಗೆ ದಾಳಿ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಅಂಬಲಪಾಡಿಯ ಪ್ರಜ್ವಲ್ ನಗರದ ರೈಸ್ ಮಿಲ್ ಪರಿಸರದಲ್ಲಿ ಅತೀ ಕರ್ಕಶವಾದ ಶಬ್ದ ಕೇಳಿಸಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಯಾವುದೇ ಪೂರ್ವಾನುಮತಿ ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಕಂಡು ಬಂತು. ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಂಗಳೂರು: ನೈತಿಕ ಪೊಲೀಸ್ ಗಿರಿ- ಅನ್ಯಕೋಮಿನ ಜೋಡಿ ಮೇಲೆ ಹಲ್ಲೆಗೆ ಯತ್ನ

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಅನ್ಯಕೋಮಿನ ಜೋಡಿ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನಲೆ: ಅನ್ಯಕೋಮಿನ ಯುವಕನ ಜೊತೆ ಯುವತಿ ನಿಂತಿದ್ದನ್ನು ಅನ್ಯಕೋಮಿನ ಯುವಕನ ಜೊತೆ ಯುವತಿ ನಿಂತಿದ್ದನ್ನು ಪ್ರಶ್ನೆ ಮಾಡಿದ ಹಿಂದೂ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ, ಈ ನಡುವೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Read More »

You cannot copy content of this page.