ತಾಜಾ ಸುದ್ದಿ

ಮಂಗಳೂರು: ಗಾಂಜಾ ಮಾರಾಟ ಪ್ರಕರಣ: ಇಬ್ಬರು ಆರೋಪಿಗಳಿಗೆ 1 ತಿಂಗಳು ಜೈಲು ಶಿಕ್ಷೆ, ದಂಡ

ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಮಂಗಳೂರು 6ನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ. ನ್ಯಾಯಾಧೀಶರಾದ ಪೂಜಾಶ್ರೀ ಅವರು ಆರೋಪಿಗಳಾದ ಬೊಕ್ಕಪಟ್ಟದ ಮೋನಿಕ್ ಮತ್ತು ಕೋಡಿಕಲ್‌ನ ಅಖಲ್‌ಗೆ ಒಂದು ತಿಂಗಳ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಜನಾರ್ದನ್ ವಾದ ಮಂಡಿಸಿದರು. ಏಪ್ರಿಲ್ 17, 2021 ರಂದು, ಸುಲ್ತಾನ್ ಬತ್ತೇರಿಯಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಕೆಲವು ಮಾಹಿತಿ ಪಡೆದ ಎಸ್ಸೆ ಹಾರೂನ್ …

Read More »

ಸುಳ್ಯ: ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಸುಳ್ಯ: ಅಮರ ಮುಡ್ನೂರು ಗ್ರಾಮದ ಪೈಲೂರಿನ ರಂಜಿತ್ (24) ಎಂಬ ಯುವಕ ಕಳೆದ ಡಿ.25 ರಂದು ನಾಪತ್ತೆಯಾಗಿದ್ದು ಡಿ.30 ರಂದು ಬೆಳಗ್ಗೆ ಆತನ ಮೃತ ದೇಹ ಪೈಲಾರಿನ ರಬ್ಬರ್ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಕ್ಕುಜಡ್ಕದಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಯುವಕ ರಂಜಿತ್ ಡಿ.25 ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟು ಬಂದವನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಇದರಿಂದ ಮನೆ ಯವರು ವಿಚಲಿತರಾಗಿ ಶಾಮಿಯಾನದ ಮಾಲಕರಿಗೆ ವಿಷಯ ತಿಳಿಸಿದರು. ಕೆಲಸಕ್ಕೆಂದು ಹೊರಟು ಬಂದಿರುವ ರಂಜಿತ್ ಆ ದಿವಸ ಕೆಲಸಕ್ಕೆ …

Read More »

ಉಡುಪಿ : ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಪಿಸ್ತೂಲ್ ನಿಂದ ಮಿಸ್‌ ಫೈರಿಂಗ್‌- ಸಿಬ್ಬಂದಿಗೆ ಗಾಯ

ಉಡುಪಿ: ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್‌ನಲ್ಲಿ ಇಂದು ಮಧ್ಯಾಹ್ನ‌ ಪಿಸ್ತೂಲ್ ನಿಂದ ಮಿಸ್‌ ಫೈರಿಂಗ್‌ ಆದ ಪರಿಣಾಮ ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ ‌ ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಪಿಸ್ತೂಲ್ ಪತ್ತೆಯಾಗಿತ್ತು ಎನ್ನಲಾಗಿದೆ.ಆ ಪಿಸ್ತೂಲ್ ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಅದರ ಗುಂಡು ತಗುಲಿದೆ‌ ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಯಲಾಗಿದೆ. ಈ ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. …

Read More »

ಭಗವಾನ್ ಶ್ರೀರಾಮʼ ಹಿಂದೂಗಳಿಗೆ ಮಾತ್ರವಲ್ಲ, ವಿಶ್ವದ ಎಲ್ಲರಿಗೂ ಸೇರಿದವನು : ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಗೆ ಮುಂಚಿತವಾಗಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರು ಭಗವಾನ್ ರಾಮ ಹಿಂದೂಗಳಿಗೆ ಮಾತ್ರವಲ್ಲ, ವಿಶ್ವದ ಎಲ್ಲರಿಗೂ ಸೇರಿದವನು ಎಂದು ಹೇಳಿದ್ದಾರೆ. ಭಗವಾನ್ ರಾಮನು ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ಮಾತನಾಡಿದನು ಮತ್ತು ಜನರನ್ನು ಮೇಲಕ್ಕೆತ್ತಲು ಶ್ರೀರಾಮಚಂದ್ರ ಪ್ರಯತ್ನಿಸಿದ್ದಾರೆ ಮತ್ತು ಅವರ ಧರ್ಮದ ಬಗ್ಗೆ ಎಂದಿಗೂ ಕೇಳಲಿಲ್ಲ. ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಾಪನಾ ಸಮಾರಂಭ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತರನ್ನು ಅಭಿನಂದಿಸಿದರು ಮತ್ತು ದೇವಾಲಯಕ್ಕಾಗಿ ಪ್ರಯತ್ನ ಮಾಡಿದ ಪ್ರತಿಯೊಬ್ಬರನ್ನು …

Read More »

Job News : ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ಭೂಸೇನೆ, ವಾಯುಪಡೆ, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ನವದೆಹಲಿ : ಸೇನೆ ಸೇರಬಯಸುವವರಿಗೆ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿವಿಧ ಇಲಾಖೆಗಳಲ್ಲಿ 400 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಸಂಬಂಧ ಯುಪಿಎಸ್‌ ಸಿ ಅಧಿಸೂಚನೆಯನ್ನು ಸಹ ಹೊರಡಿಸಲಾಯಿತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ upsc.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಡಿಸೆಂಬರ್ 20 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 9, 2024ರೊಳಗೆ ಅರ್ಜಿ ಸಲ್ಲಿಸಬಹುದು. ವಯೋಮಿತಿ ಅವಿವಾಹಿತ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು …

Read More »

ಬಂಟ್ವಾಳ: ಲಾರಿ ಹರಿದು ಬೈಕ್ ನ ಸಹ ಸವಾರ ಮೃತ್ಯು

ಬಂಟ್ವಾಳ: ಲಾರಿಯೊಂದು ಡಿಕ್ಕಿಯಾಗಿ ಬೈಕ್ ನ ಹಿಂಬದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಿ.ಸಿ.ರೋಡ್ ಸರ್ಕಲ್ ಬಳಿ ನಡೆದಿದೆ. ಬೈಕ್ ಸಹಸವಾರ ಬೆಂಗ್ರೆ ನಿವಾಸಿ ರಮೀಜ್ (20) ಎಂದು ಗುರುತಿಸಲಾಗಿದೆ. ಓವರ್ ಟೆಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಸಹಸವಾರ ಡಾಮರು ರಸ್ತೆಗೆ ಬಿದ್ದಿದ್ದು, ಆತನ ಮೇಲೆ ಲಾರಿ ಹರಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದ ಲಾರಿ ಸಹಿತ ಚಾಲಕ ಪರಾರಿಯಾಗಿದ್ದು, ಬಳಿಕ ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಬೈಕ್ ಸವಾರ ತನ್ನ …

Read More »

ಉಳ್ಳಾಲ ಬೀಚಲ್ಲಿ ನೀರಾಟಕ್ಕಿಳಿದ ಯುವಕರು ನೀರುಪಾಲು: ಓರ್ವ ಸಾವು,ಮತ್ತೋರ್ವ ನೀರುಪಾಲು

ಉಳ್ಳಾಲ : ಸಮುದ್ರದಲ್ಲಿ ನೀರಾಟಕ್ಕಿಳಿದ ಮೂವರು ಯುವಕರನ್ನ ರಕ್ಕಸ ಅಲೆಗಳು ಕೊಚ್ಚಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದ್ದು,ಓರ್ವ ಯುವಕ ಮೃತ ಪಟ್ಟರೆ,ಮತ್ತೋರ್ವ ಸಮುದ್ರ ಪಾಲಾಗಿದ್ದು ಇನ್ನೋರ್ವನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಚಿಕ್ಕ ಮಂಗಳೂರು ನಿವಾಸಿ ಸಲ್ಮಾನ್(19) ಮೃತ ಪಟ್ಟ ಯುವಕನಾಗಿದ್ದು ,ಆತನ ಸಂಬಂಧಿ ಬಶೀರ್(23)ನೀರು ಪಾಲಾಗಿದ್ದು ಮತ್ತೋರ್ವ ಯುವಕ ಸೈಫ್ ಆಲಿ(27) ಆಸ್ಪತ್ರೆಯಲ್ಲಿ ಚೇತರಿಸಿದ್ದಾನೆ. ಚಿಕ್ಕ ಮಂಗಳೂರು ಮೂಲದ ಬಶೀರ್,ಸಲ್ಮಾನ್ ಮತ್ತು ಸೈಫ್ ಅಲಿ ಎಂಬವರು ಕುಟುಂಬಸ್ಥರೊಂದಿಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಇಂದು ಮಧ್ಯಾಹ್ನದ ವೇಳೆ ಉಳ್ಳಾಲ ಕಡಲ …

Read More »

ವಿಟ್ಲ: ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು..!

ವಿಟ್ಲ : ಗುಡ್ಡ ಜರಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಕಾಯರಡ್ಕ ಎಂಬಲ್ಲಿ ನಡೆದಿದೆ. ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೇಲಿನ‌ ಗುಡ್ಡ ಜರಿದು ಬಿದ್ದಿದೆ. ಈ ವೇಳೆ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ಮಣ್ಣಿನಡಿ ಸಿಲುಕಿದ ಕಾರ್ಮಿಕರನ್ನು ರಾಜೇಶ್ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಎಂದು ಗುರುತಿಸಲಾಗಿದೆ. ಕೂಡಲೇ ಸ್ಥಳೀಯರು ರಕ್ಷಣೆ ಮಾಡಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ …

Read More »

ಬಂಟ್ವಾಳ: ಕಾರು ಢಿಕ್ಕಿಯಾಗಿ ಪಾದಚಾರಿ ಯುವತಿ ಸಾವು

ಬಂಟ್ವಾಳ: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ. ಬಿಸಿರೋಡಿನ ಕೈಕಂಬ ‌ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು. ಇಲ್ಲಿನ ಸ್ಥಳೀಯ ‌ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ.ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರು ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ ಎಂದು ಆರಂಭದಲ್ಲಿ …

Read More »

ಪುತ್ತೂರು: ಕಾರು-ಲಾರಿ ಅಪಘಾತ- ಕಾರಲ್ಲಿದ್ದ ಮೆಸ್ಕಾಂ ಅಧಿಕಾರಿಗೆ ಗಂಭೀರ ಗಾಯ

ಪುತ್ತೂರು: ಇಕೋಸ್ಪೋರ್ಟ್ಸ್ ಕಾರು ಹಾಗೂ ಈಚರ್ ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೆಸ್ಕಾಂ ಅಧಿಕಾರಿ ಗಂಭೀರ ಗಾಯಗೊಂಡಿರುವ ಘಟನೆ ದ.28ರಂದು ತಡರಾತ್ರಿ 12.25ರ ಸುಮಾರಿಗೆ ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂದಿರದ ತಿರುವಿನಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಇಕೋಸ್ಪೋರ್ಟ್ಸ್ ಕಾರು (ಕೆಎ 21ಪಿ-9416)ಮತ್ತು ಎದುರುಗಡೆಯಿಂದ ಬರುತ್ತಿದ್ದ ಈಚರ್ ಲಾರಿ(ಕೆಎ 12-ಸಿ:2676)ರ ನಡುವೆ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದ್ದು ಕಾರಿನ ಹಿಂಬದಿ ಸೀಟಲ್ಲಿದ್ದ ಮೆಸ್ಕಾಂ ಅಧಿಕಾರಿ ಆನಂದ ಉಕ್ಕುಡ ಎಂಬವರು ತೀವ್ರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರು ಚಾಲಕ ಲೇಖನ್ ಬನ್ನೂರು …

Read More »

You cannot copy content of this page.