ತಾಜಾ ಸುದ್ದಿ

ಇಟಲಿಗೆ ಓದಲು ಹೋಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ; ಕಾರಣ ನಿಗೂಢ

ಭಾರತ ಮೂಲದ ವಿದ್ಯಾರ್ಥಿಯೊಬ್ಬ ಇಟಲಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ರಾಮ್ ರಾವುತ್ ಶವವಾಗಿ ಪತ್ತೆಯಾದ ವಿದ್ಯಾರ್ಥಿ. ರಾಮ್ ರಾವುತ್ ಜ.2 ರಂದು ಸಾವನ್ನಪ್ಪಿದ್ದು, ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.   ರಾವುತ್ ಎಂಬಿಎ ಓದಲು ಇಟಲಿಗೆ ಹೋಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಮಗ ಫೋನ್ ಸ್ವೀಕರಿಸಲಿಲ್ಲ. ಆ ಬಳಿಕ ಪೋಷಕರು …

Read More »

ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ಬೀಚ್‌ ನಿರ್ವಹಣ ಸಮಿತಿಯ ಲೈಫ್‌ ಗಾರ್ಡ್‌ಗಳು ರಕ್ಷಿಸಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕೋಟೆಪುರಂನ ಕಾಲೇ ಜೊಂದರ ಸುಮಾರು 20-25 ಮಂದಿ ವಿದ್ಯಾರ್ಥಿಗಳ ತಂಡ ಕರಾವಳಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ಶನಿವಾರ ಬೆಳಗ್ಗೆ ಕಾಪು ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಸಮುದ್ರ ಸ್ನಾನಕ್ಕೆಂದು ಇಳಿದಿದ್ದ ವಿದ್ಯಾರ್ಥಿಗಳ ಪೈಕಿ ಬಾಬು (20) ಸಮುದ್ರದ ಅಲೆಯ ಸುಳಿಗೆ ಸಿಲುಕಿ ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು ಎನ್ನಲಾಗಿದೆ. ತಮ್ಮ ತಂಡದ ಸದಸ್ಯ ಸಮುದ್ರದಲ್ಲಿ ಮುಳುಗೇಳುತ್ತಿದ್ದಂತೆಯೇ ಜತೆಗಾರರು ಬೊಬ್ಬೆ ಹಾಕಿದ್ದು, ಬೊಬ್ಬೆಯನ್ನು …

Read More »

ಮೂಡುಬಿದಿರೆ: ಹೃದಯಾಘಾತ: ಗ್ರಾ.ಪಂ. ಸಿಬಂದಿ ಸಾವು

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾ.ಪಂ. ಸಿಬಂದಿ ಚಂದ್ರಹಾಸ (29) ಶನಿವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲು ಪಂಚಾಯತ್‌ ಕಚೇರಿಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಬರ್ಕಬೆಟ್ಟು ನಿವಾಸಿ ದಿ| ದಾದು ಅವರ ಪುತ್ರ. ಮನೆಯಿಂದ ನೂರು ಮೀಟರ್‌ ದೂರದಲ್ಲಿ ಕುಸಿದು ಬಿದ್ದ ಚಂದ್ರಹಾಸ ಅವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಕೊನೆಯುಸಿರೆಳೆದಿದ್ದರು. ಉತ್ತಮ ಆಟಗಾರ ಕಳೆದ 10 ವರ್ಷಗಳಿಂದ ಪಂಚಾ ಯತ್‌ನಲ್ಲಿ ಸಿಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ಯುತ್ತಮ ಕ್ರಿಕೆಟ್‌ ಆಟಗಾರರಾಗಿದ್ದ ಚಂದ್ರಹಾಸ್‌ ಅವರು ಸ್ಥಳೀಯ ಕೆಎಫ್‌ಸಿ ತಂಡದ ಸದಸ್ಯರಾಗಿದ್ದರು. …

Read More »

ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಬ್ಯಾನರ್ ಹರಿದು ಹಾಕಿದ ದುಷ್ಕರ್ಮಿಗಳು

ಸುಳ್ಯದ ಖಾಸಗಿ‌ ಬಸ್‌ ನಿಲ್ದಾಣದ ಸಮೀಪ ಹಾಕಲಾಗಿದ್ದ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ವಿಚಾರದ ಬ್ಯಾನರನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಶ್ರೀರಾಮನ ಫೋಟೊ ಹರಿದಿ ಹಾಕಿದ್ದಾರೆ, ನಾಲ್ಕು ದಿನಗಳ ಹಿಂದೆ ಬ್ಯಾನರ್ ಅಳವಡಿಸಲಾಗಿದ್ದು ಶುಕ್ರವಾರ ರಾತ್ರಿ ಬ್ಯಾನರ್ ನಲ್ಲಿದ್ದ ಅಯೋಧ್ಯೆ ಶ್ರೀರಾಮನ ಭಾವಚಿತ್ರ ಹರಿಯಲಾಗಿದೆ. ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ವಿವರ ಪಡೆದಿದ್ದಾರೆ. ಇನ್ನು ಬ್ಯಾನರ್ ಹರಿದಿರುವ ಕುರಿತು ತನಿಖೆ ನಡೆಸಿ, ನ್ಯಾಯಕೊಡಿಸುವುದಾಗಿ ಎಸ್.ಐ. ಈರಯ್ಯರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆ. ಹಿಂದೂಗಳ …

Read More »

ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗೃಹದ ಮೇಲೆ ಪೊಲೀಸರ ದಾಳಿ- ಇಬ್ಬರು ವಶಕ್ಕೆ

ಉಡುಪಿ: ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗೃಹದ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಉಡುಪಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬಂಧಿತರನ್ನು ಮಧು ಹಾಗೂ ರೂಂ ಬಾಯ್ ಸುಕುಮಾರ್ ಎಂದು ಗುರುತಿಸಲಾಗಿದೆ. ಮೂಡನಿಡಂಬೂರು ಗ್ರಾಮದ ಮೀನು ಮಾರ್ಕೆಟ್ ಬಳಿ ವಾಣಿಜ್ಯ ಕಟ್ಟಡದಲ್ಲಿರುವ ಲಾಡ್ಜ್ ರೂಂಗೆ ಮಹಿಳೆಯರನ್ನು ಕರೆಸಿ ಅಕ್ರಮವಾಗಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2024 , ಕಲಂ: 370 ಐಪಿಸಿ & 3,4,5,6,7 …

Read More »

₹ 2000 ನೋಟು ಇದ್ದವರಿಗೆ ʻRBIʼ ಬಿಗ್‌ ರಿಲೀಫ್ : ʻಅಂಚೆ ಕಚೇರಿʼಗಳ ಮೂಲಕವೂ ನೋಟು ಬದಲಾವಣೆಗೆ ಅವಕಾಶ

ಮುಂಬೈ. 2,000 ಮುಖಬೆಲೆಯ ನೋಟುಗಳನ್ನು ಅಂಚೆ ಕಚೇರಿಗಳ ಮೂಲಕವೂ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೇಳಿದೆ. ಜನರು ಆನ್ಲೈನ್ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಇಂಡಿಯಾ ಪೋಸ್ಟ್ನ ಯಾವುದೇ ಸೌಲಭ್ಯದಿಂದ ನೋಟುಗಳನ್ನು ಆರ್ಬಿಐ ಕಚೇರಿಗೆ ಕಳುಹಿಸಬೇಕು. ಈ ಫಾರ್ಮ್ ಆರ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿದೆ. ವಾಸ್ತವವಾಗಿ, ಜನರು ಇನ್ನೂ 2,000 ರೂ.ಗಳ ನೋಟುಗಳನ್ನು ಬದಲಾಯಿಸಲು ಆರ್ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆರ್ಬಿಐನ ಎಫ್‌ಎಕ್ಯೂ ಪ್ರಕಾರ, ಅಂಚೆ ಕಚೇರಿಯ ಸೌಲಭ್ಯದೊಂದಿಗೆ ರಿಸರ್ವ್ ಬ್ಯಾಂಕಿನ 19 ಕಚೇರಿಗಳಲ್ಲಿ …

Read More »

ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಿಸಿ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಸರ್ಕಾರಿ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ‘ಶಕ್ತಿ ಯೋಜನೆ’ಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಕರ್ನಾಟಕ  ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಎರಡು ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.  ‘ಶಕ್ತಿ ಯೋಜನೆ’ಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು …

Read More »

ಮಂಗಳೂರು: ಯುವನಿಧಿ ಯೋಜನೆ: ಜ.8, 9ರಂದು ನೋಂದಣಿ – ಜಿಲ್ಲಾಧಿಕಾರಿ

ಮಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಯುವನಿಧಿ” ಯೋಜನೆಯ ಪದವೀಧರರಿಗೆ ರೂ. 3000 ಹಾಗೂ ಡಿಪ್ಲೋಮಾ ಪಡೆದಿರುವವರಿಗೆ ರೂ. 1500 ನಿರುದ್ಯೋಗ ಭತ್ಯೆ ನೀಡುವ ನೋಂದಣಿ ತೀವ್ರಗೊಳಿಸಲು ಜಿಲ್ಲಾಧಿಕಾರಿ ಎಂಪಿ ಮುಲ್ಲೈಮುಗಿಲನ್ ಸೂಚಿಸಿದ್ದಾರೆ. ಅವರು ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ದ.ಕ ಜಿಲ್ಲೆಯ ಎಲ್ಲಾ ಪದವಿ ಕಾಲೇಜು ಹಾಗೂ ಡಿಪ್ಲೋಮಾ ಶಿಕ್ಷಣ ಸಂಸ್ಥೆಗಳಲ್ಲಿ ಜನವರಿ 8 ಮತ್ತು 9 ರಂದು ನೋಂದಣಿ ಮೇಳವನ್ನು ನಡೆಸಲು ಅವರು ತಿಳಿಸಿದರು. 2023ರಲ್ಲಿ ಪದವಿ, ಡಿಪ್ಲೊಮಾ ಪಡೆದವರು ಇದಕ್ಕೆ ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಯುವ ನಿಧಿಗೆ ನೋಂದಣಿ ಮಾಡಲು ಹೆಚ್ಚಿನ …

Read More »

ಬೆಳ್ತಂಗಡಿ: ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ..!

ಬೆಳ್ತಂಗಡಿ: 8ನೇ ತರಗತಿ ವಿದ್ಯಾರ್ಥಿಯೊರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಗಳ ಪುತ್ರ ಉಜಿರೆ ಖಾಸಗಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಯಕ್ಷಿತ್ ಆತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಯಾವುದೋ ಕಾರಣಕ್ಕೆ ಜೀವನದಲ್ಲಿ ನೊಂದು  ಮನೆಯಲ್ಲಿ ಯಾರೂ ಇಲ್ಲದ ಸಮಯ ತಾಯಿಯ ಸೀರೆಯನ್ನು ಬಿದಿರಿನ ಅಡ್ಡಕ್ಕೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ತಿಳಿದುಬಂದಿದೆ. ಈ ಸಂಬಂಧ ಯಕ್ಷಿತ್‌ ಅವರ ತಾಯಿ ನೀಡಿದ ದೂರಿನಂತೆ ಬೆಳ್ತಂಗಡಿ …

Read More »

ಮಂಗಳೂರು : ಪೊಲೀಸರೊಂದಿಗೆ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ- ಮದುವೆ ಮಂಟಪದಲ್ಲೇ ನಡೆಯಿತು ಹೈಡ್ರಾಮಾ..!

ಮಂಗಳೂರು : ಮದುವೆಯ ವೇಳೆ ಮದುಮಗನ ಮಾಜಿ ಪ್ರೇಯಸಿ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಹೈಡ್ರಾಮಾ ಕ್ರಿಯೆಟ್ ಮಾಡಿದ ಘಟನೆ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ. ಆರೋಪಿ ಕೇರಳ ಮೂಲದ ಅಕ್ಷಯ್ ಎಂದು ಗುರುತಿಸಲಾಗಿದೆ. ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಹೈಡ್ರಾಮ ನಡೆಸಿದ್ದಾಳೆ. ಇತ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ದೈಹಿಕ …

Read More »

You cannot copy content of this page.