ತಾಜಾ ಸುದ್ದಿ

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಕೇವಲ 250 ರೂಪಾಯಿಯಲ್ಲಿ ಪ್ರಯಾಣಿಸಲು ಬಯಸುವಿರಾ? : ಈ ಸುವರ್ಣಾವಕಾಶದ ಮಾಹಿತಿ ಇಲ್ಲಿದೆ

ಪ್ರವಾಸಿಗರೇ ಶುಭಸುದ್ಧಿ, ಲಕ್ಷದ್ವೀಪಕ್ಕೆ ಹೋಗುವ ಪ್ಲಾನ್ ನಲ್ಲಿದ್ದರೆ ಸಂತಸದ ವಿಷಯ. ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಆರಂಭ ಮಾಡಲು ಮುಂದಾಗಿದೆ. ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಲಕ್ಷದ್ವೀಪದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಹಲವು ಮಂದಿ ಲಕ್ಷದ್ವೀಪಕ್ಕೆ ಹಾರಲು ಅಣಿಯಾಗುತ್ತಿದ್ದಾರೆ. ಕೇರಳದ ಮೂಲಕ ತೆರಳುವ ಮಂದಿ ಕೊಚ್ಚಿಯಿಂದ ಹಡಗಿನ ಮೂಲಕ ತೆರಳಬಹುದು. ಆದರೆ, ಮಂಗಳೂರು ಬಂದರಿಗೆ ಲಕ್ಷದ್ವೀಪ ಕೊಚ್ಚಿಗಿಂತ ಸಮೀಪವಾಗಿದೆ. ಲಕ್ಷದ್ವೀಪಕ್ಕೆ ಮಂಗಳೂರು ಬಂದರು ಮೂಲಕವೇ ಹಣ್ಣು, ತರಕಾರಿ ಹಾಗೂ ಇತರೆ ಸರಕುಗಳು ಹೋಗುತ್ತವೆಯಾಗಿದೆ. ಕೆಲವು ವರ್ಷಗಳ …

Read More »

ಮಂಗಳೂರು: ನಟೋರಿಯಸ್ ರೌಡಿ ಆಕಾಶಭವನ ಶರಣ್ ಗೆ ಆಶ್ರಯ – 7 ಮಂದಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ಪೊಲೀಸ್ ಮೇಲೆಯೇ ದಾಳಿಗೆತ್ನಿಸಿ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟೋರಿಯಸ್ ರೌಡಿ ಆಕಾಶಭವನ ಶರಣ್ (37)ಗೆ ಆಶ್ರಯ ನೀಡಿರುವ ಆರೋಪದಲ್ಲಿ 7 ಮಂದಿಯ ವಿರುದ್ಧ ವಿವಿಧ ಠಾಣೆಗಳಲ್ಲಿ 5 ಪ್ರಕರಣ ದಾಖಲಾಗಿದೆ. ಸುಮಾರು 21ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆಕಾಶಭವನ ಶರಣ್ ಪತ್ತೆಗೆ ಸಿಸಿಬಿ ಪೊಲೀಸರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು‌. ಈ ವೇಳೆ ತಲೆಮರೆಸಿಕೊಳ್ಳಲು ವಿವಿಧ ಕಡೆಗಳಲ್ಲಿ ಆತನಿಗೆ ಹಲವರು ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆಶ್ರಯ ನೀಡಿದ ಏಳು ಮಂದಿಯ …

Read More »

ಬಂಟ್ವಾಳ: KSRTC ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ- ವಿದ್ಯಾರ್ಥಿನಿಗೆ ಗಂಭೀರ ಗಾಯ

ಬಂಟ್ವಾಳ: ಸರಕಾರಿ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ವಿದ್ಯಾರ್ಥಿನಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ವಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿ ಅಲ್ಲಿಪಾದೆ ಪೆರಿಯಾರ್ ದೋಟ ನಿವಾಸಿ ಗೋಪಾಲ ಸಫಲ್ಯ ಅವರ ಪುತ್ರಿ, ವಾಮದಪದವು ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಸರಕಾರಿ ಬಸ್ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಲಭಾಗದಲ್ಲಿ ಬಂದು ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ಫಾದರ್ ಮುಲ್ಲರ್ …

Read More »

‘ಮುಜರಾಯಿ ಇಲಾಖೆ’ಯ ‘ದೇವಸ್ಥಾನದ ಹುಂಡಿ ಹಣ’ ಆ ದೇವಸ್ಥಾನಕ್ಕೆ ಬಳಕೆ – ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣವನ್ನು ಆ ದೇಗುಲಕ್ಕೆ ಬಳಕೆ ಮಾಡೋದಾಗಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಮುಜರಾಯಿ ವ್ಯಾಪ್ತಿಯ ದೇವಸ್ಥಾನದ ಹುಂಡಿಯಲ್ಲಿ ಸೇರಿದ ಹಣವನ್ನು ಅದೇ ದೇವಸ್ಥಾನಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಬೇರೆ ದೇಗುಲಗಳ ಅಭಿವೃದ್ಧಿಗೂ ಈ ಹಣವನ್ನು ವರ್ಗಾವಣೆ ಮಾಡಲು ಬರೋದಿಲ್ಲ ಅಂತ ತಿಳಿಸಿದ್ದಾರೆ. ಒಟ್ಟಾರೆಯಾಗಿ ಒಂದು ದೇವಸ್ಥಾನದ ಹುಂಡಿ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಅನ್ಯ ಉದ್ದೇಶಕ್ಕಾಗಲಿ, ಬೇರೆ ದೇವಸ್ಥಾನದ ಅಭಿವೃದ್ಧಿಗೂ ಈ ಹಣವನ್ನು ವರ್ಗಾವಣೆ ಮಾಡೋದಿಲ್ಲ …

Read More »

ಉಡುಪಿ : ಹೊಟೇಲ್ ಮ್ಯಾನೇಜರ್ ಹೃದಯಾಘಾತದಿಂದ ನಿಧನ

ಉಡುಪಿ: ಆತ್ರಾಡಿ ಪರೀಕ ನಿವಾಸಿ, ಹೊಟೇಲ್ ಮ್ಯಾನೇಜರ್ ಓರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಂಗಳೂರಿನ ಹೆಸರಾಂತ ಹೊಟೇಲ್ ಒಂದರ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಶೆಟ್ಟಿ(28) ಅವರಿಗೆ ಸೋಮವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ಮಹೇಶ್ ಶೆಟ್ಟಿ ಮೃತಪಟ್ಟರು. ಮಹೇಶ್ ಶೆಟ್ಟಿ ಆತ್ರಾಡಿಯಲ್ಲಿ ಡ್ಯಾನ್ಸ್ ಕ್ರಿವ್ ಎಂಬ ನೃತ್ಯ ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಇತ್ತೀಚೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ ಮಹೇಶ ಶೆಟ್ಟಿ ಉಡುಪಿ, ಮಂಗಳೂರಿನ ಹೊಟೇಲ್ ಮ್ಯಾನೇಜರ್ ಆಗಿ ಕರ್ತವ್ಯ …

Read More »

ಯುವಕ-ಯುವತಿಯರಿಗೆ ಸಿಹಿ ಸುದ್ದಿ- ಯುವ ನಿಧಿ ಬೆನ್ನಲ್ಲೇ ಇನ್ನೊಂದು ಯೋಜನೆ ಜಾರಿ…!

ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿ ಯೋಜನೆಯು ಒಂದಾಗಿದೆ. ಈ ಯೋಜನೆಯನ್ನು ಡಿಸೆಂಬರ್‌ 26 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 5 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ ಭತ್ಯೆ ನೀಡಲಾಗುತ್ತದೆ. ಯುವ ನಿಧಿ ಫಲಾನುಭವಿಗಳಿಗೆ ಶುಭ ಸುದ್ದಿ ಈ ಯೋಜನೆ ಲಾಭ ಪಡೆಯಲು 2022-23 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಕಳೆದ 6 ತಿಂಗಳಿನಿಂದ ಉದ್ಯೋಗ ಇಲ್ಲದೆ ಮನೆಯಲ್ಲೇ ಇದ್ದವರಿಗೆ ಮಾತ್ರ ಯುವ ನಿಧಿ ನೀಡಲಾಗುತ್ತದೆ. ಇನ್ನೆರಡು ವರ್ಷ ಅವರು ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. …

Read More »

ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಕೀರ್ತನಾ ಕಾಮತ್ ತೇರ್ಗಡೆ

ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನವಂಬರ್ 2023 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಕೀರ್ತನಾ ಕಾಮತ್ ತೇರ್ಗಡೆ ಗೊಂಡಿದ್ದಾರೆ. ಇವರು ಉಡುಪಿಯ ಕೇಶವ ಕಾಮತ್ ಮತ್ತು ಮುಕ್ತಾ ಕಾಮತ್ ರವರ ಪುತ್ರಿ. ಇವರು ತಮ್ಮ ಆರ್ಟಿಕಲ್ ಶಿಪ್ ತರಭೇತಿಯನ್ನು ಮಂಗಳೂರಿನ ಸಿಎ ಕೃಷ್ಣಕುಮಾರ್ ಮತ್ತು ಶ್ರೀರಾಮುಲು ನಾಯ್ಡು ಕಂಪನಿಯಲ್ಲಿ ಪಡೆದ್ದಿದ್ದಾರೆ.

Read More »

ಮುಸ್ಲಿಮರು 4-5 ಮಕ್ಕಳು ಮಾಡುವಾಗ, ಹಿಂದುಗಳು ಒಂದೆರಡು ಮಾಡ್ಕೊಂಡ್ರೆ ಸಾಕಾಗಲ್ಲ – ಶಾಸಕ ಹರೀಶ್ ಪೂಂಜಾ

ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಭಾಷಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರೀಶ್ ಪೂಂಜಾ ಹೇಳಿಕೆ ವೈರಲ್ ಆಗಿದೆ. ಮುಸ್ಲಿಮರ ಜನಸಂಖ್ಯೆ 80 ಕೋಟಿ ಆಗಿ, ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತೆ..? ಹಿಂದೂಗಳೆಲ್ಲಾ ಮನೆಯಲ್ಲಿ ಕುಳಿತು ಯೋಚನೆ ಮಾಡಿ ಎಂದಿದ್ದಾರೆ. ಮುಸ್ಲಿಮರು ನಾಲ್ಕೈದು ಮಕ್ಕಳು ಹೆರುತ್ತಿದ್ದಾರೆ. ನಮ್ಮಲ್ಲಿ ಒಂದು ಅಥವಾ ತಪ್ಪಿದ್ರೆ ಎರಡು ಮಕ್ಕಳನ್ನು ಹೆರಲಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ …

Read More »

Reels ಮಾಡುವುದನ್ನು ನಿಲ್ಲಿಸು ಎಂದಿದ್ದಕ್ಕೆ ಪ್ಲ್ಯಾನ್‌ ಮಾಡಿ ಪತಿಯನ್ನೇ ಮುಗಿಸಿದ ಪತ್ನಿ

 ರೀಲ್ಸ್‌ ಮಾಡಲು ಬಿಡದ್ದಕ್ಕೆ ಪತ್ನಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಸೇರಿಕೊಂಡು ಪತ್ನಿಯನ್ನೇ ಕೊಲಗೈದಿರುವ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ಭಾನುವಾರ (ಜನವರಿ 7) ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೊಲೆಯಾದ ಮಹೇಶ್ವರ್ ಕೂಲಿ ಕೆಲಸ ಮಾಡಿಕೊಂಡಿದ್ದ. ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 6 ರಿಂದ 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು. ಕೋಲ್ಕತ್ತಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಇರುತ್ತಿದ್ದ ಮಹೇಶ್ವರ್‌ ಇತ್ತೀಚೆಗೆ ತನ್ನ ಅತ್ತೆಯ ಮನೆಯಿರುವ ಫಪೌತ್‌ ಗೆ ಬಂದಿದ್ದರು. ಈ ವೇಳೆ ಪತ್ನಿ ರಾಣಿ ಕುಮಾರಿ …

Read More »

‘ನಾನು ಯಾರಿಗೂ ಮೋಸ ಮಾಡಿಲ್ಲ, ಮಿಸ್ ಯೂ ಫ್ರೆಂಡ್ಸ್’ : ಡೆತ್ ನೋಟ್ ಬರೆದಿಟ್ಟು ‘ದ್ವಿತೀಯ PUC’ ವಿದ್ಯಾರ್ಥಿನಿ ಆತ್ಮಹತ್ಯೆ

 ಡೆತ್ ನೋಟ್ ಬರೆದಿಟ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತ್ಯಾಗರಾಜನಗರದಲ್ಲಿ ನಡೆದಿದೆ. ಮೃತಳನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಝಾನ್ಸಿ ಎಂದು ಗುರುತಿಸಲಾಗಿದೆ, ಕಾಲೇಜಿನಿಂದ ಬಂದವಳೇ ‘ನಾನು ಯಾರಿಗೂ ಮೋಸ ಮಾಡಿಲ್ಲ, ಬುಜ್ಜಿ, ಆಲ್ ಫ್ರೆಂಡ್ಸ್ ಮಿಸ್ ಯೂ’ ಎಂದು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.   ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

You cannot copy content of this page.