ತಾಜಾ ಸುದ್ದಿ

ಬೆಳ್ತಂಗಡಿ: ಅಯೋಧ್ಯೆ ಪ್ರಾಣ ಪ್ರತಿಷ್ಠೆಯಂದು ಮಗು ಜನನ – ಶ್ರೀರಾಮನೆಂದು ಹೆಸರಿಡಲು ದಂಪತಿ ತೀರ್ಮಾನ

ಬೆಳ್ತಂಗಡಿ: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ದಿನದಂದೇ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಶ್ರೀರಾಮನೆಂದು ಹೆಸರಿಡಲು ದಂಪತಿ ತೀರ್ಮಾನ ಮಾಡಿರುವುದಾಗಿ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ್ದು, ನಿನ್ನೆ ಅಯೋಧ್ಯೆಯಲ್ಲಿ ರಾಮನ‌ ಪ್ರಾಣಪ್ರತಿಷ್ಠಾಪನೆಯ ದಿನದಂದೇ ಗಂಡು ಮಗುವಿಗೆ ಜನನವಾಗಿರುವುದರಿಂದ ಮಗುವಿಗೆ ಶ್ರೀರಾಮ ಎಂದು ಹೆಸರಿಡಲು ಯೋಚಿಸುತ್ತೇವೆ ಎಂದು ಮಗುವಿನ ತಂದೆ ತಿಳಿಸಿದ್ದಾರೆ. ಇನ್ನು ಸುಳ್ಯದ ಸುರೇಶ್ ಮತ್ತು ಪಡಂಗಡಿಯ ಪವಿತ್ರ …

Read More »

ಉಡುಪಿ: ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಸಮಾರೋಪದಲ್ಲಿ ಸಚಿವರನ್ನೆ ಮಾಯ ಮಾಡಿದ ಜಾದುಗಾರ ಕುದ್ರೋಳಿ ಗಣೇಶ್

ಉಡುಪಿಯಲ್ಲಿ ನಡೆಯುತ್ತಿರುವ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಳ್ಳಲಿದೆ. ಜನವರಿ 24 ಬುಧವಾರದಂದು ರಾತ್ರಿ 7.30 ಕ್ಕೆ ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ …

Read More »

ಮಂಗಳೂರು: ಕಾರುಡಿಕ್ಕಿ ವ್ಯಕ್ತಿ ಸಾವು – ಪೊಲೀಸ್ ಸಿಬ್ಬಂದಿ ಗಾಯ

ಮಂಗಳೂರು: ಕಾರು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ನಗರದ ಹೊರವಲಯದ ಪಡೀಲ್ ಪೊಲೀಸ್ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಒರಿಸ್ಸಾ ಮೂಲದ ಮಾಲಿಕ್ (48) ಇಂದು ಗುರುತಿಸಲಾಗಿದೆ. ಮಂಗಳೂರು ನಗರದ ಹೊರವಲಯದ ಪಡೀಲ್ ಚೆಕ್ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ಸಂದರ್ಭ ಹರೀಶ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಬಿ.ಸಿ.ರೋಡ್ ಕಡೆಯಿಂದ ತೀರಾ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಮಣ್ಣಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಶಿಕ್ಷಕಿಯ ಶವ ಪತ್ತೆ..!

ಮಂಡ್ಯ: ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಶಿಕ್ಷಕಿಯೊಬ್ಬರು ಕೆಲ ದಿನಗಳಲ್ಲೇ ಅನುಮಾನಾಸ್ಪದ ಸಾವಿಗೀಡಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಗಿರುವ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.   ಜನವರಿ 20 ರಂದು ದೀಪಿಕಾ ಶಾಲೆಗೆ ಹೋಗಿ ಬರುತ್ತೇನೆ ಎಂದು ಕೆಲಸಕ್ಕೆ ತೆರಳಿದ್ದರು. ಅದೇ ದಿನ …

Read More »

ಅಯೋಧ್ಯೆಯಲ್ಲಿ ರಾಮ‌ಲಲ್ಲಾ ಪ್ರತಿಷ್ಠೆ: ಕೊಡವೂರಿನಲ್ಲಿ ದೀಪೋತ್ಸವ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಧಾನ ಅರ್ಚಕ ಪ್ರಸಾದ್ ಭಟ್ ರವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಸದಸ್ಯರಾದ ಸುಧೀರ್ ರಾವ್ ಕೊಡವೂರು, ಪೂರ್ಣಿಮಾ ಜನಾರ್ದನ್ ಗೋವಿಂದ ಐತಾಳ್, ಉಮೇಶ್ ರಾವ್,ವಾಸುದೇವ ಉಪಾಧ್ಯಾಯ,ಕಾಳು ಸೇರಿಗಾರ ಮತ್ತು ಊರಿನ ಹತ್ತು ಸಮಸ್ತರು ದೀಪವನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದರು.

Read More »

ಶಿವಮೊಗ್ಗದಲ್ಲಿ ‘ರಾಮ ಮಂದಿರ ಉದ್ಘಾಟನೆ’ ಸಂಭ್ರಮದ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭದ ಸಂಭ್ರಮಾಚರಣೆಯ ವೇಳೆಯಲ್ಲೇ ಬುರ್ಖಾ ಧರಿಸಿದ್ದಂತ ಮಹಿಳೆಯೊಬ್ಬರು ಅಲ್ಲಾ ಬು ಅಕ್ಬರ್ ಘೋಷಣೆ ಕೂಗಿರೋ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀ ರಾಮನನ್ನು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆದಂತ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವವನ್ನು ಜೈ ಶ್ರೀರಾಮ ಘೋಷಣೆಯ ಮೂಲಕ ಭಕ್ತ ವೃಂದ ಕಣ್ ತುಂಬಿಕೊಂಡಿದೆ. ಇದೇ ಹೊತ್ತಿನಲ್ಲಿ ಶಿವಮೊಗ್ಗದಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕೆಂದ್ರೆ ರಾಮ ಮಂದಿರ ಉದ್ಘಾಟನೆ …

Read More »

“ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಆರಂಭ” : ಅಯೋಧ್ಯೆಯಲ್ಲಿ ‘ಪ್ರಧಾನಿ ಮೋದಿ’ ಮಾತು

ಆಯೋಧ್ಯೆ : ದೇಶದ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಂದಾದ ಭವ್ಯ ರಾಮಮಂದಿರದ ಕನಸು ಇಂದು ಸಾಕಾರಗೊಂಡಿದೆ. ಪ್ರಧಾನಿ ಮೋದಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು, ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯ ನಂತ್ರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘”ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಆರಂಭವಾಗುತ್ತದೆ. ಶತಮಾನಗಳ ಕಾಯುವಿಕೆ, ತಾಳ್ಮೆ ಮತ್ತು ತ್ಯಾಗದ ನಂತರ ರಾಮ ಇಂದು ಬಂದಿದ್ದಾನೆ” ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ನಮ್ಮ ರಾಮ್ ಲಲ್ಲಾ ಇನ್ನು ಮುಂದೆ ಟೆಂಟ್ನಲ್ಲಿ ವಾಸಿಸುವುದಿಲ್ಲ” ಎಂದು ಹೇಳಿದರು. …

Read More »

ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳ ದಾಳಿ; ಧ್ವಜ ಹರಿದು ಗಲಾಟೆ

ಮುಂಬೈ: ಸನಾತನ ಯಾತ್ರೆ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ದ್ವಜವನ್ನು ಹರಿದು ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈನ ಭಾಯಂದರ್ ನಲ್ಲಿ ನಡೆಯುತ್ತಿದ್ದ ಸನಾತನ ಧರ್ಮ ಯಾತ್ರೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸನಾತನ ಧರ್ಮ ಯಾತ್ರೆ ಆರಂಭವಾಗುತ್ತಿದ್ದಂತೆ ಗಲಾಟೆ ನಡೆದಿದೆ. ರಾಮ ಭಕ್ತರು ತಮ್ಮ ತಮ್ಮ ಕಾರಿನಲ್ಲಿ ರಾಮ ಹಾಗೂ ಹನುಮನ ಧ್ವಜಗಳೊಂದಿಗೆ ಸಾಗುತ್ತಿದ್ದ ವೇಳೆ ಜೈ …

Read More »

BREAKING: ‘ರಾಮಮಂದಿರ’, ‘ರಾಮಲಲ್ಲಮೂರ್ತಿ’ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ, 5 ಶತಮಾನಗಳ ‘ಕಾಯುವಿಕೆ ಅಂತ್ಯ’

ಅಯ್ಯೋಧೆ: ಕೆಲ ನಿಮಿಶಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ, ರಾಮಲಲ್ಲಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದು, ಈ ಮೂಲಕ ಐದು ಶತಮಾನಗಳ ಕಾಯುವಿಕೆ ಅಂತ್ಯವಾಗಿದೆ. ರಾಮ್ ಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಆಚರಣೆಗಾಗಿ ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದರು. ದೇವಲಾಯದ ಅವರಣದಲ್ಲಿ ನೇರವೇರಿದ ಆಚರಣೆಗಳಲ್ಲಿ ಅವರು ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ …

Read More »

ಉಡುಪಿ: ಇಂದು ಜಿಲ್ಲೆಯಾದ್ಯಂತ ಅಹಿತಕರ ನಡೆಯದಂತೆ ಕ್ರಮ – ಎಸ್ಪಿ ಡಾ.ಕೆ.ಅರುಣ್

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದ ನೂತನ ಕಟ್ಟಡದಲ್ಲಿ ಇಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಅಹಿತಕ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಮೂವರು ಡಿವೈಎಸ್ಪಿಗಳು, 10 ಪೊಲೀಸ್ ನಿರೀಕ್ಷಕರು, 47 ಪೊಲೀಸ್ ಉಪನಿರೀಕ್ಷಕರು, 670 ಪೊಲೀಸ್ ಸಿಬಂದಿ, 100 ಗೃಹ ರಕ್ಷಕ ದಳದ ಸಿಬ್ಬಂದಿ, ಮೂರು ಕೆಎಸ್‌ಆರ್‌ಪಿ, ಎಂಟು ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ …

Read More »

You cannot copy content of this page.