ತಾಜಾ ಸುದ್ದಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ ಪಿಎಂ ನರೇಂದ್ರ ಮೋದಿ ಕುರಿತ ಚಿತ್ರಣವುಳ್ಳ ಪುಸ್ತಕ

ನವದೆಹಲಿ: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷ ಇರುವವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ಆ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ ಹೊರತರಲಾಗಿದೆ. ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ …

Read More »

ಭಟ್ಕಳ​​ದಲ್ಲಿ ಸಾವರ್ಕರ್ ವೃತ್ತ, ಭಗವಾಧ್ವಜ ತೆರವು..! ಗ್ರಾಮಸ್ಥರ ಪ್ರತಿಭಟನೆ

ಭಟ್ಕಳ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜ ತೆರವುಗೊಳಿಸಿರುವ ಪ್ರಕರಣ ಮಾಸುವ ಮುನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ತರಹದ ಮತ್ತೊಂದು ಘಟನೆ ನಡೆದಿದೆ. ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿನ ಸಮುದ್ರ ದಡದಲ್ಲಿದ್ದ ಸಾವರ್ಕರ್ ವೃತ್ತ ಮತ್ತು ಭಗವಾಧ್ವಜವನ್ನು ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೆಂಗಿನಗುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದ್ ನಾಯ್ಕ್, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಾವರ್ಕರ್ ನಾಮಫಲಕ ಅಳವಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಈಗ ಗ್ರಾಮ ಪಂಚಾಯಿತಿ ಪಿಡಿಒ …

Read More »

ಕೃತಿ ಆರ್ ಸನಿಲ್ ಗೆ ‘ಹೊಯ್ಸಳ ಕೆಳದಿ ಚೆನ್ನಮ್ಮ’ ಪ್ರಶಸ್ತಿ

ಕರ್ನಾಟಕ ಸರಕಾರದ ವತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೃತಿ ಆರ್ ಸನಿಲ್ ಆಯ್ಕೆಯಾಗಿದ್ದಾರೆ. ಜನವರಿ 26ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ …

Read More »

ಬಿಜೆಪಿ ಮುಖಂಡನ ಹತ್ಯೆ: ಕೇರಳದ 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

 ಕೇರಳ: ಬಿಜೆಪಿ ಮುಖಂಡ ಹಾಗೂ ವಕೀಲ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ 15 ಪಿಎಫ್‌ಐ ಕಾರ್ಯಕರ್ತರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ (ಒಂದು) ವಿ.ಜಿ.ಶ್ರೀದೇವಿ ಶಿಕ್ಷೆ ಪ್ರಕಟಿಸಿದ್ದು, ಆರೋಪಿಗಳು ಯಾವುದೇ ರೀತಿಯ ಕರುಣೆಗೂ ಅರ್ಹರಲ್ಲ ಎಂದು ತೀರ್ಪು ನೀಡಿದರು. ಆರೋಪಿಗಳ್ಯಾರು..? ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ನಿಸಾಮ್, ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಮಣ್ಣಂಜೇರಿ ಞರವೇಲಿ ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರಫುದ್ದೀನ್, ಮನ್ಷಾದ್, ಜಸೀಬ್ ರಾಜ, ನವಾಸ್, ಸಮೀರ್, ನಸೀರ್, ಝಕೀರ್ ಹುಸೈನ್, …

Read More »

ಮಲ್ಪೆ: ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದ ಬ್ಯಾಂಕ್‌ ಉದ್ಯೋಗಿಯ ಮೃತದೇಹ ಪತ್ತೆ..!

ಮಲ್ಪೆ: ಶನಿವಾರದಂದು ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಸಮುದ್ರದ ಅಲೆಯಲ್ಲಿ ಕೊಚ್ಚಿಕೋಗಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತೀನ್(35) ಎಂಬವರ ಮೃತದೇಹವು ಸಮುದ್ರದಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತಿನ್, ಅಪರಾಹ್ನ 3.30ರ ಸುಮಾರಿಗೆ ಡೆಲ್ವಾ ಬೀಚ್ ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋದ ನಿತಿನ್ ನಾಪತ್ತೆಯಾಗಿದ್ದರು. ಇವರ ಮೃತದೇಹಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ತೆರಳಿ …

Read More »

ವಿಟ್ಲ : ಹೃದಯಾಘಾತದಿಂದ ಯುವಕ ಮೃತ್ಯು

ವಿಟ್ಲ : ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪ ಕುದ್ದುಪದವು ನಲ್ಲಿ ನಡೆದಿದೆ. ನವೀನ್ ಕಿಶೋರ್ ಮೃತ ಯುವಕ ನವೀನ್ ಕಿಶೋರ್ ಅವರು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಯುಟ್ಯೂಬ್ ಚಾನೆಲ್ ಗೆ ಜಾಹೀರಾತು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಜ.29ರ ಸಂಜೆ ಮನೆಗೆ ಹೋದವರು ರಾತ್ರಿ ಶೌಚಾಲಯಕ್ಕೆ ಹೋದವರು ಅಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕಿಶೋರ್ ಅವರು ಶೌಚಾಲಯದಲ್ಲಿ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ …

Read More »

ಉಡುಪಿ: ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್ ಡಿಕ್ಕಿ..!

ಉಡುಪಿ: ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರೊಂದು ರಸ್ತೆ ಬದಿ ಕಸಗುಡಿಸುವ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಬ್ರಹ್ಮಾವರ ಚರ್ಚ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ನಡೆದಿದೆ. ಮಂಗಳೂರಿನಿಂದ ಕುಂದಾಪುರ ಕಡೆ ಹೋಗುತ್ತಿದ್ದ ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ನವಯುಗ ಕಂಪೆನಿಯ ಕಸಗುಡಿಸುವ ವಾಹನಕ್ಕೆ ಡಿಕ್ಕಿಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಏರಿ ಚರಂಡಿ ಸಮೀಪ ಬಂದು ನಿಂತಿದೆ. ಎರಡು ಅಡಿ ಮುಂದೆ ಸಾಗುತ್ತಿದ್ದರೆ ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮುಂದೆ ಇದ್ದ …

Read More »

ಬೆಳ್ತಂಗಡಿ: ಸ್ಪೋಟ ಪ್ರಕರಣವನ್ನು NIA ಗೆ ವಹಿಸಲು ಹಿಂದೂ ಜಾಗರಣ ವೇದಿಕೆ ಆಗ್ರಹ

ಬೆಳ್ತಂಗಡಿ ಕುಕ್ಕೇಡಿ ಸ್ಪೋಟ ಪ್ರಕರಣವನ್ನು ಎನ್.ಐ‌.ಎ ಗೆ ವಹಿಸಲು ಹಿಂದೂ ಜಾಗರಣ ವೇದಿಕೆ ಆಗ್ರಹ ಮಾಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಹಿಂಜಾವೇ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಅವರು ಕುಕ್ಕೇಟಿಯಲ್ಲಿ ಭಾನುವಾರ ನಡೆದ ಸ್ಫೋಟದ ತೀವೃತೆ ಅತೀ ಹೆಚ್ಚಾಗಿತ್ತು. ಕೇವಲ ಪಟಾಕಿ ತಯಾರಿಕಾ ಘಟಕದಲ್ಲಿ ಇಂಥಹ ತೀವೃತೆ ಇರಲು ಸಾಧ್ಯವಿಲ್ಲ ಮತ್ತು ಸ್ಫೋಟದ ತೀವೃತೆ 4 ಕಿಲೋಮೀಟರ್ ವರೆಗೂ ವ್ಯಾಪಿಸಿತ್ತು. ಸ್ಪೋಟಕ್ಕೆ ಸಿಲುಕಿದ ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಮತ್ತು ಕೇರಳದ ಚರ್ಚ್ ನಲ್ಲಿ ನಡೆದ …

Read More »

HSRP ನಂಬರ್ ಪ್ಲೇಟ್ ಇಲ್ಲದ ವಾಹನ ಮಾಲೀಕರಿಗೆ ಫೆ. 17 ರಿಂದ ದಂಡಾಸ್ತ್ರ ಪ್ರಯೋಗ

ಬೆಂಗಳೂರು: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲದ ವಾಹನಗಳಿಗೆ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್.ಎಸ್.ಆರ್.ಪಿ.) ಅಳವಡಿಸಲು ಗಡುವು ಸಮೀಪಿಸುತ್ತಿದೆ. ಹೀಗಿದ್ದರೂ ವಾಹನ ಮಾಲೀಕರು ಆಸಕ್ತಿ ತೋರಿಸುತ್ತಿಲ್ಲ. ಇಂತಹ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಫೆಬ್ರವರಿ 17 ರಿಂದ ದಂಡಾಸ್ತ್ರ ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದೆ. HSRP ನಂಬರ್ ಪ್ಲೇಟ್ ಹಾಕಿಸಲು ಸಾರಿಗೆ ಇಲಾಖೆ 2023ರ ನವೆಂಬರ್ 17ರ …

Read More »

ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕ ಸ್ಪೋಟ ಪ್ರಕರಣ – ಮಾಲೀಕ ಸೈಯದ್ ಬಶೀರ್ ಅರೆಸ್ಟ್..!

ಬೆಳ್ತಂಗಡಿ: ಮೂವರು ಕಾರ್ಮಿಕರನ್ನು ಬಲಿ ಪಡೆದ ಪಟಾಕಿ ತಯಾರಿಕಾ ಘಟಕದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ತಯಾರಿಕಾ ಘಟಕದ ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿಸುಡುಮದ್ದು ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಪೋಟ ಸಂಭವಿಸಿ ಮೂವರು ಕಾರ್ಮಿಕರು ಸಾವನಪ್ಪಿದರು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲೀಕ ಬಶೀರ್‌ ಮೇಲೆ ಎಫ್ಐಆರ್ ದಾಖಲಾಗಿದೆ‌.ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ …

Read More »

You cannot copy content of this page.