ತಾಜಾ ಸುದ್ದಿ

ಉಡುಪಿ: ಖ್ಯಾತ ಹುಲಿವೇಷಧಾರಿ ಅಶೋಕ್‌ರಾಜ್ ಕಾಡಬೆಟ್ಟು ನಿಧನ

ಉಡುಪಿ: ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥ ಅಶೋಕ್‌ರಾಜ್ ಕಾಡಬೆಟ್ಟು (56) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಕಳೆದ ನವರಾತ್ರಿಯಂದು ಹುಲಿವೇಷ ಪ್ರದರ್ಶನ ನೀಡಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ಕುಸಿದು ಬಿದ್ದಿದ್ದರು. ಬಳಿಕ ಬೆಂಗಳೂರು, ಮಣಿಪಾಲಚಿಕಿತ್ಸೆ ಪಡೆಯುತ್ತಿದ್ದರು. ಉಡುಪಿಯ ಆದರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Read More »

ಮಸೀದಿ ಬೋರ್ಡ್ ತೆರವುಗೊಳಿಸಿ, ‘ಜ್ಞಾನವಾಪಿ ಮಂದಿರ’ವೆಂದು ಮರುನಾಮಕರಣ

ಕಾಶಿ: ಜ್ಞಾನವಾಪಿ ಪ್ರಕರಣದಲ್ಲಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಿಸುವ ಹಕ್ಕನ್ನು ನೀಡುವಂತೆ ವಾರಣಾಸಿ ಕೋರ್ಟ್ ಆದೇಶಿದ ಬೆನ್ನಲ್ಲೇ ಬುಧವಾರ ತಡ ರಾತ್ರಿ ಇಲ್ಲಿನ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಇದೀಗ ವಿವಾದಿತ ‘ಜ್ಞಾನವಾಪಿ ಮಸೀದಿ’ ಗೆ ‘ಜ್ಞಾನವಾಪಿ ಮಂದಿರ’ ಎಂದು ಮರುನಾಮಕರಣ ಮಾಡಲಾಗಿದ್ದು, ಅಲ್ಲಿದ್ದ ಹಳೆಯ ಬೋರ್ಡ್ ನ್ನು ತೆರವುಗೊಳಿಸಲಾಗಿದೆ. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ದೊಡ್ಡ ಜಯ ಸಿಕ್ಕಿದ್ದು, ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯ …

Read More »

ಕುಂದಾಪುರ: ವಿವಾಹಿತ ಮುಸ್ಲಿಂ ಮಹಿಳೆ ನಾಪತ್ತೆ – ಪೊಲೀಸ್ ದೂರು ದಾಖಲು

ಕುಂದಾಪುರ: ಕುಂದಾಪುರ ಸಮೀಪದ ವಂಡ್ಸೆ ಎಂಬಲ್ಲಿ ವಾಸ್ತವ್ಯವಿರುವ ಅಬ್ದಲ್ ರೆಹಮಾನ್ ಎಂಬಾತನ ಪತ್ನಿ ಆಪ್ಸಾನಾ (23) ಜನವರಿ 30ರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಜನವರಿ 30ರಂದು ರಾತ್ರಿ 11 ಗಂಟೆಗೆ ಮನೆಯ ರೂಮಿನಲ್ಲಿ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡುವಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೆ ಮದುವೆಯಾಗಿದ್ದ ಅಪ್ಸಾನಾಳಿಗೆ ಸಾಮಾಜಿಕ ಜಾಲತಾಣದ ಚಟವಿತ್ತು ಎನ್ನಲಾಗಿದೆ. ಬಹುತೇಕ ಸಮಯವನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಿದ್ದ ಅಫ್ಸಾನಾ ಹೆಚ್ಚಾಗಿ ಇನ್‌ಸ್ಟಾಟಾಗ್ರಾಂ ಬಳಸುತ್ತಿದ್ದಳು ಎನ್ನಲಾಗಿದೆ. ಅಫ್ಸಾನ ಪತಿ ಅಬ್ದುಲ್ ರೆಹಮಾನ್ ಗೋವಾದಲ್ಲಿ ಮೊಬೈಲ್ ಸರ್ವಿಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿಯನ್ನು ತನ್ನ ಮನೆಯಲ್ಲಿ …

Read More »

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಹೈಲೆಟ್ಸ್ ಹೀಗಿದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 6 ನೇ ಬಾರಿಗೆ ಮಧ್ಯಂತರ ಬಜೆಟ್ 2024 ಮಂಡಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ನ ಹೈಲೆಟ್ಸ್ * ಆಯುಷ್ಮಾನ್ ಭಾರತ್ ಆಯುಷ್ಮಾನ್ ಭಾರತ್ ಅಡಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಆರೋಗ್ಯ ರಕ್ಷಣೆ ಸೇವೆ ವಿಸ್ತರಿಸಲಾಗುವುದು *ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ *ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಪ್ರತ್ಯೇಕ ಮತ್ಸ ಸಂಪದ ಯೋಜನೆ …

Read More »

ಇಂದು ಮೋದಿ 2.0 ಸರ್ಕಾರದ ಕೊನೆಯ ಬಜೆಟ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಗುರುವಾರ (ಫೆಬ್ರವರಿ 1) ಸಂಸತ್​ನಲ್ಲಿ ಮಧ್ಯಂತರ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್‌ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಮೊದಲ ಮಧ್ಯಂತರ ಬಜೆಟ್ ಕೂಡ ಅವರದ್ದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ. ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು. ಎನ್​ಡಿಎ-2 ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ …

Read More »

ಹನಿಟ್ರ್ಯಾಪ್ ಪ್ರಕರಣ : ಮಹಿಳೆ ಸಹಿತ 7 ಮಂದಿಯ ಬಂಧನ..!

ಕಾಸರಗೋಡು: ನಗರದಲ್ಲಿ ಮಾಂಙಾಡ್‌ ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸಹಿತ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ. ಫೈಝಲ್‌ (37), ಪತ್ನಿ ಕುಟ್ಟಿಕ್ಕಾಟೂರ್‌ ನಿವಾಸಿ ಎಂ.ಪಿ. ಲುಬಾ° (29), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್‌. ಸಿದ್ದಿಕ್‌ (48), ಮಾಂಙಾಡ್‌ನ‌ ದಿಲಾದ್‌ (40), ಮುಟ್ಟತ್ತೋಡಿಯ ನಫೀಸತ್‌ ಮಿಸ್ರಿಯ (40), ಮಾಂಙಾಡ್‌ನ‌ ಅಬ್ದುಲ್ಲ ಕುಂಞಿ (32), ಪಡನ್ನಕ್ಕಾಡ್‌ನ‌ ರಫೀಕ್‌ (42)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಪೊಲೀಸರು ಆರೋಪಿಗಳನ್ನು ಬಂಧಿಸಿ …

Read More »

ಕಾಪು: ಮೀನುಗಾರರ ಮೇಲೆ ಹಲ್ಲೆ- ಪ್ರಕರಣ ದಾಖಲು

ಕಾಪು: ಮೀನುಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದ ವೇಳೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ಸುಲಿಗೆ ಮಾಡಿ, ಐದು ಮಂದಿ ಮೀನುಗಾರರಿಗೆ ಹಲ್ಲೆ ನಡೆಸಿರುವ ಘಟನೆ ಜ.30ರಂದು ಬೆಳಗ್ಗೆ ಉಡುಪಿ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರ ಸಮುದ್ರದ ಮಧ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಪರ್ವತಯ್ಯ, ಕೊಂಡಯ್ಯ ಎಂಬವರು ಗಂಭೀರ ಗಾಯ ಗೊಂಡಿದ್ದು, ರಘುರಾಮಯ್ಯ, ಶಿವರಾಜ್ ಹಾಗೂ ಶೀನು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಮುಹಮ್ಮದ್ ಮುಸ್ತಫ ಬಾಷಾ ಎಂಬವರ ಟ್ರಾಲ್ ಬೋಟ್ …

Read More »

ದೇವಸ್ಥಾನವು ಪ್ರವಾಸಿ ಅಥವಾ ವಿಹಾರ ತಾಣವಲ್ಲ; ಹಿಂದೂಯೇತರರಿಗೆ ದೇವಸ್ಥಾನ ಪ್ರವೇಶವಿಲ್ಲ – ಮದ್ರಾಸ್ ಹೈಕೋರ್ಟ್‌

ದೇವಸ್ಥಾನವು ಪ್ರವಾಸಿ ಅಥವಾ ವಿಹಾರ ತಾಣವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಹಿಂದೂಯೇತರರಿಗೆ ದೇವಸ್ಥಾನ ಪ್ರವೇಶವಿಲ್ಲ ಎಂದು ದೇವಾಲಯದ ಹೊರಗಡೆ ಬೋರ್ಡ್ ಹಾಕುವಂತೆ ದತ್ತಿ ಇಲಾಖೆಗೆ ಸೂಚಿಸಿದೆ. ಅರುಲ್ಮಿಗು ಪಳನಿ ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಗಳಿಗೆ ಮಾತ್ರ ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಡಿ ಸೆಂಥಿಲ್‌ಕುಮಾರ್ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಯಾವುದೇ ಹಿಂದೂ ಅಲ್ಲದವರು ದೇವಸ್ಥಾನಕ್ಕೆ ಭೇಟಿ ನೀಡಿದರೆ, ಅಧಿಕಾರಿಗಳು ಆ ವ್ಯಕ್ತಿಯಿಂದ ಅವರು ದೇವತೆಯಲ್ಲಿ ನಂಬಿಕೆ ಹೊಂದಿದ್ದಾರೆ ಮತ್ತು …

Read More »

ಮಂಗಳೂರು: ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಮಂಗಳೂರು :  ರಾಜ್ಯದ 40 ಕಡೆ ಭ್ರಷ್ಟ ಅಧಿಕಾರಿಗಳ ಮನೆ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು  ಅಧಿಕಾರಿಗಳ ನಿದ್ದೆ ಕೆಡಿಸಿದ್ದಾರೆ. ಮಂಗಳೂರಿನಲ್ಲಿ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅತ್ತಾವರ ವಿಭಾಗದ ಮೆಸ್ಕಾಂ ಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಹಿಂದುಗಳು ತಮ್ಮ ಮನೆಗಳ ಮೇಲೆ ಹನುಮ ಧ್ವಜ ಹಾರಿಸಿ: ಶಾಸಕ ಯಶ್ಪಾಲ್ ಸುವರ್ಣ ಕರೆ

ಉಡುಪಿ : ರಾಜ್ಯದ ಪ್ರತಿಯೊಬ್ಬ ಹಿಂದುವೂ ತಮ್ಮ ತಮ್ಮ ಮನೆಗಳ ಮೇಲೆ ಹನುಮ ದ್ವಜ ಹಾರಿಸಿ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಬೇಕು ಎಂದು  ಉಡುಪಿ ಶಾಸಕ ಯಶ್ಪಾಲ್ ಸುವರ್ಣ  ಕರೆ ನೀಡಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ಮೂಲಕ ಮಂಡ್ಯದಲ್ಲಿ ಹನುಮ ಧ್ವಜವನ್ನು ತೆರವುಗೊಳಿಸುವ ಮೂಲಕ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿರುವಂತೆ ಭಜರಂಗದಳ ನಿಷೇಧದ ಪೂರ್ವಭಾವಿಯಾಗಿ ರಾಜ್ಯ ಸರಕಾರ ಹನುಮ …

Read More »

You cannot copy content of this page.