ತಾಜಾ ಸುದ್ದಿ

ಪಡುಬಿದ್ರಿ : ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ಸಾವು..!

ಉಡುಪಿ :ವಾಹನವೊಂದು ಅಪರಿಚಿತ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನಪ್ಪಿದ ಘಟನೆ ಎರ್ಮಾಳು ಕಲ್ಸಂಕ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ರಾತ್ರಿ ವೇಳೆ ಈ ಅಪಘಾತ ಸಂಭವಿಸಿದ ಕಾರಣ ಅಪಘಾತದ ನಡೆದ ಬಳಿಕ ಇನ್ನಷ್ಟು ವಾಹನಗಳು ರಸ್ತೆ ಮಧ್ಯದಲ್ಲಿದ್ದ ಈ ವ್ಯಕ್ತಿಯ ಮೇಲೆ ಚಲಿಸಿದ್ದರಿಂದ ದೇಹವಿಡೀ ಜರ್ಝರಿತಗೊಂಡು ಮಾಂಸದ ಮುದ್ದೆಯಂತಾಗಿದ್ದು ಗುರುತೂ ಸಿಗದಂತಾಗಿದೆ. ಇನ್ನು ಈ ಬಗ್ಗೆ ಪಡುಬಿದ್ರಿ ಪಿಎಸ್ ಐ ಪ್ರಸನ್ನ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

Read More »

ಗೃಹಲಕ್ಷ್ಮಿ ಯೋಜನೆ 2000 ರೂ. : ತಕ್ಷಣ ಹಣ ಬರಲು ಈ ಕೆಲಸ ಮಾಡಿ

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣವನ್ನು ಕೂಡ ಫೆಬ್ರವರಿ ಆರನೇ ತಾರೀಖಿನಿಂದ ಬಿಡುಗಡೆ ಮಾಡಲಾಗಿದೆ. ಎಲ್ಲ ಮಹಿಳೆಯರ ಖಾತೆಗೆ 6ನೇ ಕಂತಿನ ಹಣ ಬಿಡುಗಡೆ ಆಗುವ ಹೊತ್ತಿಗೆ ಫೆಬ್ರವರಿ ತಿಂಗಳ ಕೊನೆ ತಲುಪಬಹುದು. ನಿಮ್ಮ ಖಾತೆಗೆ ಹಣ ಬರಬೇಕು ಅಂದ್ರೆ ತಕ್ಷಣ ಬ್ಯಾಂಕ್ ಗೆ ಹೋಗಿ ಇ-ಕೆವೈಸಿ ಪ್ರಕ್ರಿಯೆ ಹಾಗೂ NPCI ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಇದನ್ನು ನೀವು ಸರಿ ಮಾಡಿಸಿಕೊಳ್ಳದಿದ್ರೆ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ.

Read More »

ಮಂಗಳೂರು ಮೂಲದ ಪ್ರಯಾಣಿಕರ ಮೇಲೆ ಟೋಲ್ ಸಿಬಂದಿಯಿಂದ ಹಲ್ಲೆ..!

ಕಾರವಾರ : ಕಾರು ಪ್ರಯಾಣಿಕರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ ಪ್ಲಾಝಾದಲ್ಲಿ ನಡೆದಿದ್ದು ಘಟನೆಯಲ್ಲಿ ಮಂಗಳೂರು ಮೂಲದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಹಲ್ಲೆಯಿಂದ ಮಹಿಳೆ ಸೇರಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಮುಜೀಝ್ ಎಂಬವರ ಕುಟುಂಬ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು. ಈ ವೇಳೆ ಕುಮಟಾ ಹೊಳೆಗದ್ದೆ ಟೋಲ್ ಗೇಟ್​ನಲ್ಲಿ ಫಾಸ್ಟ್ ಟ್ಯಾಗ್​ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರಿಂದ ಗಲಾಟೆಯಾಗಿದ್ದು, ಮಾತಿಗೆ …

Read More »

ಮಂಗಳೂರು: ಜೆರೋಸಾ ಶಾಲೆಯ ಪ್ರಕರಣದ ವಿಶೇಷ ತನಿಖೆಗೆ ಐಎಎಸ್ ಅಧಿಕಾರಿ ನೇಮಕ

ಮಂಗಳೂರು: ಜೆರೋಸಾ ಶಾಲೆಯ ಶಿಕ್ಷಕಿಯಿಂದ ಫಾಠ ಮಾಡುವಾಗ ಹಿಂದೂ ಧರ್ಮದ ನಿಂದನೆ ಹಾಗೂ ಆ ಬಳಿಕದ ಬೆಳವಣಿಗೆಗಳ ಬಗ್ಗೆ ವಿಶೇಷ ತನಿಖೆಯ ಹೊಣೆಯನ್ನು ಐಎಎಸ್ ಅಧಿಕಾರಿ, ಶಾಲಾ ಶಿಕ್ಷಣ ಇಲಾಖೆಯ ಗುಲ್ಬರ್ಗ ವಿಭಾಗದ ಅಪರ ಆಯುಕ್ತರಿಗೆ ಆಕಾಶ್ ಶಂಕರ್ ರಿಗೆ ವಹಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಅವರು ನಡೆದುಕೊಂಡ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಜನ ತಲೆತಗ್ಗಿಸುವಂತೆ ಆಗಿದೆ. ಮಕ್ಕಳನ್ನು, ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿರುವುದು ಒಳ್ಳೆಯದಲ್ಲ. ಎಫ್ಐಆರ್ …

Read More »

ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ..!

ಕಾಸರಗೋಡು: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಞಿಂಗಾಡ್ ನಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸೂರ್ಯ ಪ್ರಕಾಶ್ (55), ಪತ್ನಿ ಗೀತಾ (48) ಮತ್ತು ಸೂರ್ಯ ಪ್ರಕಾಶ್ ರವರ ತಾಯಿ ಲೀಲಾ (90) ಮೃತ ಪಟ್ಟವರು. ಸೂರ್ಯ ಪ್ರಕಾಶ್ ಕಾಞಿಂಗಾಡ್ ನಲ್ಲಿ ವಾಚ್ ವರ್ಕ್ಸ್ ಮಳಿಗೆ ನಡೆಸುತ್ತಿದ್ದರು. ರೈಲ್ವೆ ನಿಲ್ದಾಣ ಪರಿಸರದ ಅವಿಕ್ಕರೆಯಲ್ಲಿರುವ ವಸತಿ ಗೃಹದಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸೂರ್ಯ ಪ್ರಕಾಶ್ ರವರ ಪುತ್ರ ಅಜಯ್ ಉದ್ಯೋಗ ನಿಮಿತ್ತ ಎರ್ನಾಕುಲಂಗೆ ತೆರಳಿದ್ದರು. …

Read More »

ಮಣಿಪಾಲ: ಕಾಲೇಜು ಕಟ್ಟಡದ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಉಡುಪಿ: ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸಿದ ಕಾರಣಕ್ಕೆ ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿಯೋರ್ವ ಆರನೇ  ಮಹಡಿಯಲ್ಲಿರುವ ತರಗತಿ ಕೊಠಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಣಿಪಾಲದ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ಬಿಹಾರ ಮೂಲದ ವಿದ್ಯಾರ್ಥಿ ಸತ್ಯಂ ಸುಮನ್(20) ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ಮಾಹೆಯ ಎಂಸಿಎಚ್ ಪಿ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಯಾಗಿದ್ದರು. ಮಧ್ಯಾಹ್ನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಸತ್ಯಂ ಸುಮನ್ ಮೊಬೈಲ್ ಫೋನ್ ಬಳಸುತ್ತಿರುವುದನ್ನು ಪರೀಕ್ಷಾ ಮೇಲ್ವಿಚಾರಕರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮನ್ ರನ್ನು ಪರೀಕ್ಷಾ ಮೇಲ್ವಿಚಾರಕರು …

Read More »

ಗಾಂಜಾ ಮತ್ತಿನಲ್ಲಿ ಯುವಕನ ದಾಂಧಲೆ -ತಡೆಯಲು ಹೋದ ವ್ಯಕ್ತಿಯ ಮೇಲೆ ಹಲ್ಲೆ..!!

ಉಳ್ಳಾಲ: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲೆಸೆದು ದಾಂಧಲೆ ನಡೆಸಿದ್ದು, ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದ ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ. ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ ಮದ್ಯಾಹ್ನದ ವೇಳೆ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ ಹಳಿಯಲ್ಲಿ ನಿಂತು ಹಳಿಗಳಲ್ಲಿದ್ದ ಜಲ್ಲಿ ಕಲ್ಲುಗಳನ್ನ ರಸ್ತೆಗೆ ಎಸೆಯಲಾರಂಭಿಸಿದ್ದಾನೆ. ಸಾರ್ವಜನಿಕರು, ಶಾಲಾ ಮಕ್ಕಳು ತೆರಳುತ್ತಿದ್ದ ರಸ್ತೆಗೆ ಕಲ್ಲೆಸೆಯುತ್ತಿದ್ದುದನ್ನು ಪ್ರಶ್ನಿಸಿ, ತಡೆಯಲು ಮುಂದಾದ ಸ್ಥಳೀಯ …

Read More »

ಶೋಭಾ ಕರಂದ್ಲಾಜೆಗೆ ಮೀನುಗಾರ ಮುಖಂಡರಿಂದ ತೀವ್ರ ಆಕ್ರೋಶ

ಉಡುಪಿ: ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮೀನುಗಾರ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಮೀನುಗಾರ ಮುಖಂಡ ಕಿಶೋರ್ ಡಿ.ಸುವರ್ಣ, ಕೋಟ್ಯಂತ ರೂ. ಆದಾಯ ಬರುವ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಕೇಂದ್ರವಾಗಿರುವ ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸರ್ವೆ, …

Read More »

ಕಾಪು : ವಿಷ್ಣುಮೂರ್ತಿ ದೇವಸ್ಥಾನ ಕೆರೆಯಲ್ಲಿ ಯುವಕನ ಶವ ಪತ್ತೆ..!

ಉಡುಪಿ ಜಿಲ್ಲೆಯ ಕಾಪು ಸಮೀಪದ ಇನ್ನಂಜೆ ವಿಷ್ಣುಮೂರ್ತಿ ದೇವಸ್ಥಾನ ಕೆರೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಡುಬಿದ್ರಿ ನಿವಾಸಿ ವಿನಯ ರಾವ್(27) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಈತ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅಥಿತಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತ ನಿನ್ನೆಯ ದಿನ ದೇವಳದ ಪಕ್ಕದಲ್ಲಿ ಸುತ್ತಾಡಿಕೊಂಡಿದ್ದು ಸ್ಥಳೀಯ ನಾಯಿಯೊಂದಿಗೆ ಆಟವಾಡಿಕೊಂಡಿದ್ದ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.ಇಂದು ಮುಂಜಾನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೆರೆಯ ದಡದಲ್ಲಿ ಲ್ಯಾಪ್‌ಟಾಪ್ ಸಹಿತ ಕೆಲ ಪರಿಕರಗಳು ಪತ್ತೆಯಾಗಿದೆ. ದೇವಳದ ಸಿಸಿ …

Read More »

ಹೊಸ ರೇಷನ್‌ ಕಾರ್ಡ್‌ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್; ಸಿದ್ದರಾಮಯ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ ಬಿಪಿಎಲ್ ಕಾರ್ಡ್ ಕೊಡಲಾಗಿದೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ‌ ಮಾತ್ರ ತಕ್ಷಣ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದಿದ್ದಾರೆ. ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿದ 2.95 ಲಕ್ಷ ಅರ್ಜಿ ಇನ್ನೂ ಬಾಕಿ‌ ಇವೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಕಾರ್ಡ್‌ಗೆ ಅರ್ಜಿ‌ ಸಲ್ಲಿಕೆ ಸ್ಥಗಿತವಾಗಿತ್ತು. ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೂ 57 ಸಾವಿರ ಹೊಸ ಕಾರ್ಡ್‌ಗಳನ್ನು …

Read More »

You cannot copy content of this page.