ತಾಜಾ ಸುದ್ದಿ

ದುಬೈಯಲ್ಲಿ ಅಪಘಾತ : ಮಂಗಳೂರು ಮೂಲದ ಯುವತಿ ‘ವಿದಿಶಾ’ ಮೃತ್ಯು.!

ಮಂಗಳೂರು : ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ.ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿಯಾಗಿರುವ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ದುಬೈಗೆ ತೆರಳಿ ಎಕ್ಸ್‍ಕ್ಯೂಜೆಟ್‍ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರುಷಗಳಿಂದ ಕಾರ್ಯನಿರ್ವಹಿಸಿದ್ದರು. ಪ್ರತೀ ದಿನ ಕಂಪೆನಿಯ ಕ್ಯಾಬ್‍ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಗುರುವಾರ ತಡವಾಯಿತು ಎಂದು …

Read More »

ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ನಡೆಸುವಂತೆ ಸಲಹೆ- ಡಾ. ಅರುಣ್ ಕೆ ಐಪಿಎಸ್

ಉಡುಪಿ: ಸಶಸ್ತ್ರ ಮೀಸಲು ಪೊಲೀಸ್ ಉಡುಪಿ 1999ರ ತಂಡ ಇವರ ರಜತ ಸಂಭ್ರಮದ ಪ್ರಯುಕ್ತ, ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಡಿಎಆರ್ ಕೇಂದ್ರ ಕಛೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ರಕ್ತದಾನದ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ಡಾ. ಅರುಣ್ ಕೆ ಐಪಿಎಸ್ ರವರು ಉದ್ಘಾಟನಾ ಮಾತನಾಡಿ, ರಕ್ತ ಸಂಗ್ರಹ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಹೇಳಿದರು.ಮಾತ್ರವಲ್ಲದೇ ಪ್ರತಿ ಆರು ತಿಂಗಳಿಗೊಮ್ಮೆ ಇಲಾಖಾ ವತಿಯಿಂದ ರಕ್ತದಾನ ಶಿಬಿರ ನಡೆಸುವಂತೆ ಸಲಹೆ ನೀಡಿದರು‌‌ . ರಕ್ತದಾನ ಮಾಡುವದರಿಂದ ಯಾವುದೇ …

Read More »

ಫೆ. 24ರಂದು ಉಡುಪಿಯಲ್ಲಿ ಆಜಾದ್‌ ಹಿಂದ್‌

ಉಡುಪಿ: ಫೆ24ರಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆಜಾದ್‌ ಹಿಂದ್‌ ಕಾರ್ಯಕ್ರಮ ನಡೆಯಲಿದೆ ಎಂದು ಕೂರ್ಮ ಫೌಂಡೇಶನ್ ಇದರ ಶ್ರೀಕಾಂತ್ ಶೆಟ್ಟಿ ತಿಳಿಸಿದರು. ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಹೋದವರು “ಶಿವಾಜಿ” ಎಂಬ ಇತಿಹಾಸದ ಸತ್ಯವನ್ನು ದಾಖಲೆ ಸಮೇತ ತಿಳಿಸಿದವರು ಸಂದೀಪ್ ಮಹಿಂದ್. ಉತ್ತಮ ವಾಗ್ಮಿ ಗಳಾಗಿರುವ ಇವರು ರಾಷ್ಟ್ರೀಯ ಏಕತೆಯ ಉಳಿವಿಗಾಗಿ ದುಡಿಯುತ್ತಿದ್ದಾರೆ. ಅಜಿತ್ ಹನುಮಕ್ಕನವರ್:- ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯ ಮುಖ್ಯಸ್ಥರು ಮತ್ತು ನಿರೂಪಕರಾಗಿ ಜನ ಮನ್ನಣೆ ಗಳಿಸಿರುವ ಇವರು ತನ್ನ ವಿಭಿನ್ನ ಚರ್ಚಾ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ತುಂಬ ಮನೆಮಾತಾಗಿರುತ್ತಾರೆ. …

Read More »

ಉಡುಪಿ: ವಿದ್ಯಾರ್ಥಿಗಳು ಆರೋಗ್ಯಕರ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಳ್ಳಬೇಕು- ಅಪರ ಜಿಲ್ಲಾಧಿಕಾರಿ ಡಾ| ಮಮತಾ ದೇವಿ

ಉಡುಪಿ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಸರಕಾರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜಂಕ್ ಫುಡ್ ನಂತಹ ಸತ್ವರಹಿತ ಆಹಾರದ ದಾಸರಾಗದೇ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಡಾ| ಮಮತಾ ದೇವಿಯವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಗಿ ಹೆಲ್ತ್ ಮಿಕ್ಸ್ ಯುತ ಹಾಲಿನ ವಿತರಣೆಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಳೆದು ಹೋದ ಸಮಯ ಮತ್ತೆ ಬರಲಾರದು. ಉಡುಪಿ ಜಿಲ್ಲೆಯ …

Read More »

ಬೆಳ್ತಂಗಡಿ: 12 ವರ್ಷದ ಬಳಿಕ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ವೇಣೂರಿನ ತಿಮ್ಮಣ್ಣ ಅಜಿಲರು 1604ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು. ಗುರುವಾರ ಸಂಜೆ 7 ಗಂಟೆಗೆ 108 ಕಲಶಗಳ ಅಭಿಷೇಕ ಆರಂಭಗೊಂಡಿತು. ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, 12 ವರ್ಷದ ಬಳಿಕ ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ಹತ್ತಿ ಅಭಿಷೇಕ ಮಾಡುತ್ತಿದ್ದಾರೆ. 12 ವರ್ಷದ ಬಳಿಕ ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ …

Read More »

ಮಕ್ಕಳು ಓದಿದ್ದೆಲ್ಲವೂ ಮರೆತು ಬಿಡಲು ಈ ರೀತಿಯ ಅಭ್ಯಾಸವೇ ಕಾರಣ, ಹೆತ್ತವರೇ ಒಮ್ಮೆ ಗಮನಿಸಿ

ಈಗಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಗ್ನಿಪರೀಕ್ಷೆ. ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಪರೀಕ್ಷೆ ತಯಾರಿಯು ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ತಾಯಂದಿರು ಓದು ಓದು ಎಂದು ಮಕ್ಕಳ ಹಿಂದೆಯೇ ಸುತ್ತುತ್ತಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ. ಕೆಲ ಮಕ್ಕಳಂತೂ ಚೆನ್ನಾಗಿ ಓದಿಕೊಂಡಿದ್ದರೂ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣವೇ ಬ್ಲಾಂಕ್ ಆಗಿ ಬಿಡುತ್ತಾರೆ. ಓದಿದ್ದೆಲ್ಲವು ಮರೆತು ಹೋಗಲು ಕಾರಣಗಳು ಹಲವಾರಾಗಿದ್ದರೂ, ಆರಾಮದಾಯಕವಾಗಿ ಪರೀಕ್ಷೆ ಎದುರಿಸುವತ್ತ ಗಮನ ಹರಿಸಬೇಕು.ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತದೆ. …

Read More »

ಉಡುಪಿ: ಸವಿತಾ ಎರ್ಮಾಳ್ ರಾಯಭಾರಿಯಾಗಿ ಆಯ್ಕೆ

ಉಡುಪಿ: ಸವಿತಾ ಎರ್ಮಾಳ್, ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇವರನ್ನು “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ” (ಭೇಟಿ ಬಚಾವೊ ಭೇಟಿ ಪಡಾವೊ) ಮತ್ತು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ರಾಯಭಾರಿಯಾಗಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ ಡಾ.ಕೆ.ವಿದ್ಯಾಕುಮಾರಿ (ಭಾ.ಆ. ಸೇ.) ಆಯ್ಕೆ ಮಾಡಿರುತ್ತಾರೆ. ಇವರು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬ್ರಹ್ಮಾವರ ಇದರ ಕಾರ್ಯದರ್ಶಿ ಯಾಗಿರುವರು. ಶ್ರೀ ಶಾಂಕರತತ್ವ ಪ್ರಸಾರ ಸಮಿತಿ …

Read More »

ಉಡುಪಿ: ಕರಿಮಣಿ ಸರ ಮಾಲಕಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ- ನಿರ್ವಾಹಕ

ಉಡುಪಿ: ಕರಿಮಣಿ ಮಾಲೀಕ ನೀನಲ್ಲ ಅನ್ನುವ ಹಾಡು ಎಲ್ಲಾ ಕಡೆ ವೈರಲ್ ಆಗುತ್ತಿದ್ದರೆ, ಇಲ್ಲೊಬ್ಬ ಪ್ರಾಮಾಣಿಕ ವ್ಯಕ್ತಿ ಕರಿಮಣಿ ಕಳೆದುಕೊಂಡ ಮಾಲೀಕರನ್ನು ಹುಡುಕಿ ತಲುಪಿಸಿದ್ದಾರೆ. ಅದು ಕೂಡ…ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿ ಅನ್ನೋದು ವಿಶೇಷ!! ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸು ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ. ಬಸ್ ನಲ್ಲಿ ಕಳೆದುಕೊಂಡ ಸತ್ತುಗಳನ್ನು ಮರಳಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

Read More »

ಮಂಗಳೂರು : DYFI  ರಾಜ್ಯ ಸಮ್ಮೇಳದ ಪ್ರಚಾರಕ್ಕೆ  ಕೋಟಿ ಚೆನ್ನಯರ ಭಾವಚಿತ್ರ ಬಳಕೆ- ಬಿಜೆಪಿ ಖಂಡನೆ

ಮಂಗಳೂರು : DYFI  ರಾಜ್ಯ ಸಮ್ಮೇಳದ ಪ್ರಚಾರಕ್ಕೆ  ಕೋಟಿ ಚೆನ್ನಯರ ಭಾವಚಿತ್ರ ಬಳಕೆ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಾಮಪಂಥೀಯ ರಾಜಕೀಯ ಸಂಘಟನೆಯಾಗಿರುವ ಡಿ.ವೈ.ಎಫ್.ಐ. ಯವರ ರಾಜ್ಯ ಸಮ್ಮೇಳನದ ಪ್ರಚಾರ ಬ್ಯಾನರ್ ನಲ್ಲಿ ತುಳುನಾಡಿನ ಆಸ್ಥಿಕ ಬಾಂಧವರು ಭಕ್ತಿ ಶ್ರದ್ಧೆಯಿಂದ ಆರಾಧಿಸುವ ದೈವಸಂಭೂತರಾದ ಕೋಟಿ ಚೆನ್ನಯರ ಭಾವಚಿತ್ರವನ್ನು ಬಳಸುವುದರ ಮೂಲಕ ರಾಜಕೀಯ ದುರುದ್ದೇಶ ಸಾಧಿಸಲು ಹೊರಟಿರುವುದು ವೀರಪುರುಷರಿಗೆ ಮಾಡಿದ ಅಪಚಾರವಾಗಿದೆ ಎಂದು ಬಿಜೆಪಿ  ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ಇದನ್ನು ಖಂಡಿಸುತ್ತದೆ ಎಂದು ಮಂಗಳೂರು ಮಂಡಲದ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಆಳ್ವ, …

Read More »

ಸೌಜನ್ಯಾ ಅತ್ಯಾಚಾರ, ಕೊಲೆ ಕೇಸ್‌: ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ನೇಮಕಕ್ಕೆ ಹೈಕೋರ್ಟ್ ನೋಟಿಸ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ‌ 2012ರಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಸೌಜನ್ಯಾ ತಂದೆ ಚಂದಪ್ಪ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ ಹಾಗೂ ಸಿಬಿಐ ತನಿಖಾ ತಂಡಕ್ಕೆ ನೋಟಿಸ್ ಜಾರಿಗೊಳಿಸಿದೆ. ರಾಜ್ಯ ಪೊಲೀಸ್‌ ಇಲಾಖೆಯ ಮುಖ್ಯಸ್ಥ ಡಿಜಿಪಿ, ಅಪರಾಧ ವಿಭಾಗದ ಎಡಿಜಿಪಿ ಮತ್ತು ಐಜಿಪಿ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಬೆಳ್ತಂಗಡಿ ಠಾಣೆ ಇನ್ ಸ್ಪೆಕ್ಟರ್ ಅವರಿಗೂ ನೋಟಿಸ್ ಗೊಳಿಸಿದೆ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ …

Read More »

You cannot copy content of this page.