ತಾಜಾ ಸುದ್ದಿ

ಉಡುಪಿ: ಮಿಸ್ ವರ್ಲ್ಡ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಉಡುಪಿ ಮೂಲದ ಸಿನಿ ಶೆಟ್ಟಿ

ಉಡುಪಿ: ಮುಂಬರುವ 71ನೇ ಆವೃತ್ತಿಯ ಮಿಸ್ ವರ್ಲ್ಡ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲು ಉಡುಪಿ ಮೂಲದ 21 ವರ್ಷದ ಸಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ’ ಕಿರೀಟವನ್ನು ಅಲಂಕರಿಸಿದ ನಂತರ ಈ ಘೋಷಣೆ ಹೊರ ಬಿದ್ದಿದೆ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶೆಟ್ಟಿ, ಭರತನಾಟ್ಯದಲ್ಲೂ ಪ್ರವೀಣರು. ಮೂರು ದಶಕಗಳ ವಿರಾಮದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ ಚಾಂಪಿಯನ್‌ಶಿಪ್ ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ …

Read More »

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಕುರಿತು ಬಿಎಸ್​ವೈ ಪ್ರತಿಕ್ರಿಯೆ

ಚಿಕ್ಕಮಗಳೂರು: ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಇನ್ನು ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೊಂದಲವಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ಇನ್ನೂ ಎರಡು ಮೂರು ದಿನಗಳಲ್ಲಿ ಎಲ್ಲಾ ಗೊಂದಲ ಬಗೆಹರಿಯಲಿದೆ. ಮೂರು ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗುವ ಮೂಲಕ ಎಲ್ಲಾ ಗೊಂದಲಕ್ಕೂ ತೆರೆ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರಣಕ್ಕೆ ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾಗಿ ವಾತಾವರಣವಿದೆ ಎಂದರು. ಹೀಗಾಗಿ ಕರ್ನಾಟಕದ …

Read More »

ಕಸ ಎಸೆಯಲು ಹೋದ ಯುವತಿಗೆ ‘ಲೈಂಗಿಕ ಕಿರುಕುಳ’ : ಖಾಸಗಿ ಭಾಗ ಮುಟ್ಟಿ, ಕಿಡಿಗೇಡಿಗಳಿಂದ ಹಲ್ಲೆ

ಸ್ನೇಹಿತನೊಂದಿಗೆ ರಾತ್ರಿಯ ವೇಳೆ ಯುವತಿಯವರು ಕಸ ಎಸೆಯಲು ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ಯುವತಿಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಗಲದಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಬ್ಬಿಕೊಂಡು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ.ಫೆ.18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೊರಮಂಗಲ ಆಟೋ ಸ್ಟಾಂಡ್ …

Read More »

ಲೋಕಸಭೆ ಚುನಾವಣೆ : ಚುನಾವಣಾ ಆಯೋಗದಿಂದ ಇಲ್ಲಿದೆ ಮಹತ್ವದ ಸ್ಪಷ್ಟನೆ

ನವದೆಹಲಿ : ಭಾರತದ ಚುನಾವಣಾ ಆಯೋಗ (ECI) ಲೋಕಸಭಾ ಚುನಾವಣೆ 2024 ವೇಳಾಪಟ್ಟಿ ಘೋಷಿಸಲು ಸಜ್ಜಾಗುತ್ತಿದೆ. ಚುನಾವಣಾ ಆಯೋಗದ ತಂಡಗಳು ಪ್ರಸ್ತುತ ವಿವಿಧ ರಾಜ್ಯಗಳ ಚುನಾವಣಾ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುತ್ತಿವೆ. ಚುನಾವಣಾ ಆಯೋಗದ ಮೌಲ್ಯಮಾಪನವು ಮಾರ್ಚ್ 13 ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಏತನ್ಮಧ್ಯೆ, ಚುನಾವಣಾ ದಿನಾಂಕಗಳ ಬಗ್ಗೆ ಮಾಹಿತಿ ನೀಡುವ ನಕಲಿ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಚಿತ್ರದ ಪ್ರಕಾರ, ಮಾರ್ಚ್ 12 ರಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಮೇ 22 …

Read More »

ಮಂಗಳೂರು: ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್: ಅನ್ಯಕೋಮಿನ ಯುವಕನ ಜೊತೆ ಪರಾರಿ

ಮಂಗಳೂರು: ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸ್ ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯಕೋಮಿನ ಯುವಕ ಶಾರೂಕ್ ಶೇಕ್ ಜೊತೆ ಚೈತ್ರಾ ಹೆಬ್ಬಾರ್ ಪರಾರಿಯಾರಿದ್ದಾರೆಂದು ಮಾಹಿತಿ ಲಭಿಸಿದೆ. ಬಂಟ್ವಾಳದ ನೇರಳಕಟ್ಟೆಯ ಶಾರೂಕ್ ಶೇಕ್, ಸದ್ಯ ಪುತ್ತೂರಿನ ಕೂರ್ನಡ್ಕದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಇದೀಗ ಇವರಿಬ್ಬರು ಬೆಂಗಳೂರಿಗೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಐಟಿಐ ವಿದ್ಯಾಭ್ಯಾಸ ಮಾಡಿರುವ ಶಾರೂಕ್ ಶೇಖ್ ಸೌದಿ ಅರೇಬಿಯಾ, ದುಬೈ ಹಾಗೂ ಕತಾರ್ ನಲ್ಲಿ ಕೆಲಸದಲ್ಲಿದ್ದ. ಕತಾರ್ ನಲ್ಲಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದ, ಈತನೆ …

Read More »

ಉಡುಪಿ: ಸ್ಕೂಟರ್ ಸಮೇತ ಹೊಳೆ ನೀರಿಗೆ ಬಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿದ ಮುಳುಗು ತಜ್ಞ ಈಶ್ವರ್ ಮಲ್ಪೆ

ಉಡುಪಿ: ಸ್ಕೂಟರ್ ಸಮೇತ ಹೊಳೆ ನೀರಿಗೆ ಬಿದ್ದ ವ್ಯಕ್ತಿಯನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೇಲೆತ್ತಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟ ಬಳಿಕ ಧಕ್ಕೆಯಲ್ಲಿ ರಾತ್ರಿ ಸಂಭವಿದೆ. ಬೋಟೊಂದರ ಲೆಕ್ಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ನಿಖಿಲ್ ಸುಮಾರು 8 ಗಂಟೆ ವೇಳೆಗೆ ತನ್ನ ಡಿಯೋ ಸ್ಕೂಟರಿನಲ್ಲಿ ಧಕ್ಕೆ ಬಳಿ ನಿಲ್ಲಿಸಲಾಗಿದ್ದ ಬೋಟ್‌ನ ಸಮೀಪಕ್ಕೆ ಬಂದಿದ್ದು ಈ ವೇಳೆ ನಿಯಂತ್ರಣ ತಪ್ಪಿ ಸ್ಕೂಟರ್ ಸಹಿತ ನೀರಿಗೆ ಬಿದ್ದಿದ್ದರು. ತತ್‌ಕ್ಷಣ ಈಶ್ವರ್ ಮಲ್ಪೆ ಮತ್ತು ಸ್ಥಳೀಯರು ಸೇರಿ ನಿಖಿಲ್ ಅವರನ್ನು ನೀರಿನಿಂದ ಮೇಲೆತ್ತಿ ಪ್ರಾಣಾಪಾಯದಿಂದ …

Read More »

ಮಂಗಳೂರು: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಕೂಲ್ ಬಸ್‌ ಅಡಿಗೆ ಬಿದ್ದು ಗಾಯ..!

ಮಂಗಳೂರು: ಶಾಲೆಯಿಂದ ಮನೆಗೆ ವಾಪಾಸಾಗಿದ್ದ ವಿದ್ಯಾರ್ಥಿಯೊಬ್ಬ ತನ್ನದೇ ಸ್ಕೂಲ್ ಬಸ್‌ ಅಡಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರು ಹೊರವಲಯದ ಕುಳಾಯಿಯಲ್ಲಿ ನಡೆದಿದೆ. ನಿರ್ಲಕ್ಷ್ಯ ಹಾಗೂ ನಿರ್ವಾಹಕ ಇಲ್ಲದೆ ಬಸ್ ಚಲಾಯಿಸಿದಕ್ಕೆ ಡ್ರೈವರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಸುರತ್ಕಲ್‌ನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಲಿಯತ್ತಿದ್ದ ವಿದ್ಯಾರ್ಥಿ ಮನೆಗೆ ವಾಪಾಸಾದಾಗ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ ವ್ಯವಸ್ಥೆಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿ ಎಂದಿನಂತೆ ಶುಕ್ರವಾರ ಮನೆಯ ಬಳಿ ಬಸ್ ಇಳಿದಿದ್ದಾನೆ. ಆದರೆ ಬಸ್ ಹಿಂಬಾಗದಿಂದ ರಸ್ತೆ ದಾಟುವ ಬದಲಾಗಿ ಬಸ್‌ ಮುಂಭಾಗದಿಂದ ರಸ್ತೆ …

Read More »

25 ವಯಸ್ಸಿಗೆ ಜಡ್ಜ್‌ ಹುದ್ದೆಗೇರಿದ ಬಂಟ್ವಾಳದ ಅನಿಲ್‌ ಜಾನ್‌ ಸಿಕ್ವೆರಾ

ಮಂಗಳೂರು: 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ 25 ವರ್ಷದ ಯುವಕ ಅನಿಲ್‌ ಜಾನ್‌ ಸಿಕ್ವೆರಾ ಉತ್ತೀರ್ಣಗೊಂಡು ರಾಜ್ಯದಲ್ಲಿಯೇ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ ಅನಿಲ್‌ ಜಾನ್‌ ಸಿಕ್ವೆರಾ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್ ಬಿ ಪೂರೈಸಿದ್ದರು. ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಇವರು ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ …

Read More »

ಸುರತ್ಕಲ್: ಸ್ಕೂಟರ್‌ಗೆ ಲಾರಿ ಢಿಕ್ಕಿ- ಶಿಕ್ಷಕಿ ಸಾವು..!

ಸುರತ್ಕಲ್: ಸ್ಕೂಟರ್‌ಗೆ ರೆಡಿಮಿಕ್ಸ್‌ ವಾಹನ ಢಿಕ್ಕಿ ಹೊಡೆದು ಸವಾರೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ನಡೆದಿದೆ. ಪೂರ್ಣಿಮಾ (29) ಮೃತಪಟ್ಟವರು. ರೆಹನಾ ಇಂಟರ್‌ನ್ಯಾಶ‌ನಲ್‌ ಶಾಲೆಯ ಶಿಕ್ಷಕಿಯಾಗಿದ್ದ ಪೂರ್ಣಿಮಾ ಸ್ಕೂಟರ್ ನಲ್ಲಿ ಸಹೋದರಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಲಾರಿ ಸ್ಕೂಟರ್  ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಮೃತಪಟ್ಟಿದ್ದಾರೆ.

Read More »

ವೇಣೂರು ಬಾಹುಬಲಿ ಮಸ್ತಕಾಭಿಷೇಕ ಹಿನ್ನೆಲೆ ವಾಹನ ಸಂಚಾರದಲ್ಲಿ ಬದಲಾವಣೆ ; ಇಲ್ಲಿದೆ ವಿವರ

ಮಂಗಳೂರು : ವೇಣೂರು ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕದ ಮಹೋತ್ಸವ -2024 ಆರಂಭಗೊಂಡಿರುವುದರಿಂದ ಅತ್ಯಂತ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಆಗುವ ಸಾಧ್ಯತೆ ಇದೆ.ಆದ್ದರಿಂದ ಫೆಬ್ರವರಿ 22 ರಿಂದ ಮಾರ್ಚ್ 1 ರವೆರೆಗ ಮೂಡಬಿದ್ರೆ ಕಡೆಯಿಂದ ಬಂದು ವೇಣೂರು ಮೇಲಿನ ಪೇಟೆಯ ಮುಖಾಂತರ ಬೆಳ್ತಂಗಡಿ ಸಂಪರ್ಕಿಸುವ ಲಘು ವಾಹನಗಳು ಪಡ್ಯಾರಬೆಟ್ಟು, ಹೊಕ್ಕಾಡಿಗೋಳಿ, ಕೂಡುರಸ್ತೆ, ಬಜಿರೆ, ಮುದ್ದಾಡಿ, ನೈನಾಡು ಮೂಲಕ ಗೋಳಿಯಂಗಡಿ ಆಗಿ ಬೆಳ್ತಂಗಡಿ ರಸ್ತೆಗೆ ಸಂಪರ್ಕಿಸಬೇಕು. ಬೆಳ್ತಂಗಡಿ ಕಡೆಯಿಂದ ಬಂದು ವೇಣೂರು ಪೇಟೆ ಮುಖಾಂತರ ಮೂಡಬಿದ್ರೆ ಕಡೆಗೆ ಹೋಗುವ ಲಘು ವಾಹನಗಳನ್ನು ಗೋಳಿಯಂಗಡಿಯಿಂದ ಪಥ …

Read More »

You cannot copy content of this page.