ಸ್ವಂತ ಮನೆ ಕಟ್ಟುವವರಿಗೆ ಶುಭ ಸುದ್ದಿ – ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೋಂದಣಿ ಆರಂಭ – ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ವಿವರ

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಮೋದಿ ನೇತ್ರತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿ ಸರ್ಕಾರವು ಈಗ ಹೆಚ್ಚುವರಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಈ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿ ರೂ.ಮೀಸಲು ಇಡಲಾಗಿದೆ. ಮಾಸಿಕ 15,000 ರೂ. ಆದಾಯ ಇರುವವರೂ ಯೋಜನೆಗೆ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡುವ ಉದ್ದೇಶ ಹೊಂದಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಮೋದಿ ನೇತ್ರತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿ ಸರ್ಕಾರವು ಈಗ ಹೆಚ್ಚುವರಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಈ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿ ರೂ.ಮೀಸಲು ಇಡಲಾಗಿದೆ. ಮಾಸಿಕ 15,000 ರೂ. ಆದಾಯ ಇರುವವರೂ ಯೋಜನೆಗೆ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡುವ ಉದ್ದೇಶ ಹೊಂದಿದೆ.

ಅರ್ಹತೆ ಈ ಮೊದಲು, ಮಾಸಿಕ ಆದಾಯ 10,000 ರೂ.ವರೆಗಿನ ಜನರು ಈ ಯೋಜನೆಗೆ ಅರ್ಹತೆ ಹೊಂದಿದ್ದರು.  ಈಗ ತಿಂಗಳ ಆದಾಯದ ಮಿತಿಯನ್ನು 15,000 ರೂ.ಗೆ ಹೆಚ್ಚಿಸಲಾಗಿದೆ.

 ಈ ಹಿಂದೆ ಎರಡು ಕೋಣೆಗಳ ಕಚ್ಚೆ ಮನೆ, ಫ್ರಿಜ್ ಅಥವಾ ದ್ವಿಚಕ್ರ ವಾಹನ ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರಲಿಲ್ಲ. ಆದರೆ ಈಗ ಈ ಹೊಸ ಯೋಜನೆಯಲ್ಲಿ ಈ ಷರತ್ತುಗಳನ್ನು ಸಡಿಲಿಸಲಾಗಿದೆ.

 ಅರ್ಹ ವ್ಯಕ್ತಿಗಳನ್ನು ಗ್ರಾಮ ಮಟ್ಟದಲ್ಲಿ ಬಹಿರಂಗ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

 ಅರ್ಹ ವ್ಯಕ್ತಿಗಳಿಗೆ ಕೇವಲ 90 ದಿನಗಳಲ್ಲಿ ಅವರ ಮನೆಗಳನ್ನು ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ನಾಲ್ಕು ವಿಭಾಗಈ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ನಾಗರಿಕರಿಗೆ ವಿಸ್ತರಿಸಲು, ಸರ್ಕಾರವು ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದೆ, ಅವುಗಳು ಕೆಳಕಂಡಂತಿವೆ:ಆರ್ಥಿಕವಾಗಿ ದುರ್ಬಲ ವಿಭಾಗ (EWS): ಇದು ಅತ್ಯಂತ ಕಡಿಮೆ ಆದಾಯದ ವರ್ಗವಾಗಿದೆ. ಈ ವರ್ಗಕ್ಕೆ ಸೇರುವ ಕುಟುಂಬಗಳು ವಸತಿ ಯೋಜನೆಯಡಿಯಲ್ಲಿ ಹೆಚ್ಚಿನ ಸಹಾಯವನ್ನು ಪಡೆಯುತ್ತವೆ.

ಕಡಿಮೆ ಆದಾಯದ ಗುಂಪು (LIG): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು EWS ವರ್ಗಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಅವರಿಗೂ ವಸತಿ ಯೋಜನೆಯಡಿ ಸಾಕಷ್ಟು ನೆರವು ಸಿಗುತ್ತದೆ.

ಮಧ್ಯಮ ಆದಾಯ ಗುಂಪು-1 (MIG-I): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು LIG ವರ್ಗಕ್ಕಿಂತ ಹೆಚ್ಚಾಗಿರುತ್ತದೆ.

ಮಧ್ಯಮ ಆದಾಯ ಗುಂಪು-2 (MIG-II): ಇದು ಅತ್ಯಧಿಕ ಆದಾಯ ವರ್ಗವಾಗಿದೆ. ಇತರ ವರ್ಗಗಳಿಗೆ ಹೋಲಿಸಿದರೆ ಈ ವರ್ಗದಲ್ಲಿ ಬೀಳುವ ಕುಟುಂಬಗಳು ಕಡಿಮೆ ಸಹಾಯವನ್ನು ಪಡೆಯುತ್ತವೆ.ಸರ್ಕಾರ ಶೀಘ್ರದಲ್ಲೇ ಸಮೀಕ್ಷೆ ಪ್ರಾರಂಭಿಸಲಿದ್ದು, ಆರ್ಹ ಫಲಾನುಭವಿಗಳನ್ನು ಗುರುತಿಸಲಿದೆ.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

• ಆಸಕ್ತರು ಪಿಎಂ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ

•ವೆಬ್ಸೈಟ್ನಲ್ಲಿನ ‘ನಾಗರಿಕರ ಮೌಲ್ಯಮಾಪನ’ ಮೆನುವಿನಲ್ಲಿ ‘ಇತರ 3 ಘಟಕಗಳ ಅಡಿಯಲ್ಲಿ ಪ್ರಯೋಜನಗಳು’ ಆಯ್ಕೆಯನ್ನು ಆಯ್ಕೆಮಾಡಿ.

• ಆಧಾರ್ ಕಾರ್ಡ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.

• ಬಳಿಕ ಅರ್ಜಿಯ ಪುಟವು ತೆರೆದುಕೊಳ್ಳುತ್ತದೆ.ಅಲ್ಲಿ ಅರ್ಜಿದಾರರು ಅಗತ್ಯ ಮಾಹಿತಿಯನ್ನು ತುಂಬ ಬೇಕು ನಂತರ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ‘ಉಳಿಸು’ ಬಟನ್ ಕ್ಲಿಕ್ ಮಾಡಿ.

•ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಭವಿಷ್ಯದ ಅಗತ್ಯಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

• ಬಳಿಕ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಬ್ಯಾಂಕ್ಗೆ ಹೋಗಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.

• ನೀವು ಅಸೆಸ್ಮೆಂಟ್ ಐಡಿ ಅಥವಾ ಹೆಸರು, ತಂದೆಯ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಮೂಲಕ ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಯಾರು ಅರ್ಜಿ ಸಲ್ಲಿಸಬಹುದು?

• ಕುಟುಂಬದಲ್ಲಿ ಕೇವಲ ಪುರುಷ ಸದಸ್ಯರಿದ್ದರೆ, ಅವರು ಅರ್ಜಿ ಸಲ್ಲಿಸಬಹುದು.

• ಅಭ್ಯರ್ಥಿಯ ವಯಸ್ಸು 70 ವರ್ಷಕ್ಕಿಂತ ಕಡಿಮೆ ಇರಬೇಕು•

ಅರ್ಜಿದಾರರ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಈಗಾಗಲೇ ಯಾವುದೇ ಮನೆ ಇರಬಾರದು.

• ಫಲಾನುಭವಿಯು ಈ ಹಿಂದೆ ಯಾವುದೇ ಸರ್ಕಾರಿ ವಸತಿ ಯೋಜನೆಯ ಲಾಭವನ್ನು ಪಡೆದಿರಬಾರದು.

• ಮನೆಯ ಒಡೆತನ ಮಹಿಳೆಯ ಹೆಸರಿಗೆ ಆಗಬೇಕು ಎಂಬುದು ಸರ್ಕಾರದ ಉದ್ದೇಶ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ ಇದಾಗಿದೆ.

Check Also

ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.