

ಕೊಲ್ಲೂರು:ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ಅಡಿಗ(64) ಇಂದು ಸ್ವಗೃಹದಲ್ಲಿ ನಿಧನರಾದರು. ಮೂಕಾಂಬಿಕಾ ಸನ್ನಿಧಿಯ ಪ್ರಧಾನ ಅರ್ಚಕ ಹಾಗೂ ಪ್ರಧಾನ ತಂತ್ರಿಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.
ಇಂದು ಸ್ನಾನಗೃಹದಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ಮಂಜುನಾಥ ಅಡಿಗ, ಹೃದಯಾಘಾತದಿಂದ ನಿಧನರಾದರು.ಇವರು ಕಳೆದ ಹದಿನೆಂಟು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.ಇವರ ಪುತ್ರ ನಿತ್ಯಾನಂದ ಅಡಿಗ ಕೂಡ ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಮಂಜುನಾಥ ಅಡಿಗ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.