
ಮಂಗಳೂರು ನಗರದ ಅತ್ತಾವರ ಪ್ರದೇಶದಲ್ಲಿ ನೂರಾರು ವರ್ಷಗಳ ಹಿಂದೆ ಸ್ಥಾಪಿತಗೊಂಡಿದ್ದ ಶ್ರೀ ಅಯ್ಯಪ್ಪ ಗುಡಿಯ ಜೀರ್ಣೋದ್ದಾರ ಕಾರ್ಯವು ಭರದಿಂದ ನಡೆಯುತ್ತಿದ್ದು ಎಪ್ರಿಲ್ 24ರಂದು ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ನಡೆಯಲಿದೆ. ಅದಕ್ಕೆ ಪೂರಕವಾಗಿ ಇಂದು ಶ್ರೀ ಅಯ್ಯಪ್ಪ ದೇವರ ಪ್ರಧಾನ ಗುಡಿಯ ಮರದ ಛಾವಣಿಗೆಯ ಕೆಲಸಕ್ಕೆ ಉತ್ತರ ಮುಹೂರ್ತವು ನಡೆಯಿತು. ಶ್ರೀ ಅಯ್ಯಪ್ಪ ದೇವರಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ ಮರದ ಶಿಲ್ಪಿಗಳಾದ ಶ್ರೀ ಪುಷ್ಪರಾಜ್‌ರವರು ನಡೆಸಿ ಉತ್ತರ ಪೂಜೆಯನ್ನು ನಡೆಸಿ ಪ್ರಧಾನ ಗುಡಿಯಲ್ಲಿ ಮರದ ಜಂತಿಯನ್ನು ಅಳವಡಿಸಿ ಕಾಮಗಾರಿಯನ್ನು ಆರಂಭಿಸಿದರು.

ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ 20.04.2026ರಿಂದ ಸಕಲ ಧಾರ್ವಿಕ ಕಾರ್ಯಕ್ರಮಗಳು ನಡೆದು 23.04.2026ರ ಗುರುವಾರದಂದು ಸುಮೂಹರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ದುರ್ಗಾದೇವಿಯರಿಗೆ ಪ್ರತಿಷ್ಠಾ ಬ್ರಹ್ಮ ಕಲಶಾಭಿಷೇಕವು ನಡೆಯಲಿದ್ದು ಪ್ರತಿದಿನವೂ ಅನ್ನಪ್ರಸಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಭಕ್ತಜನರು ಸಕ್ರಿಯರಾಗಿ ಸಹಕರಿಸಬೇಕೆಂದು ಕ್ಷೇತ್ರ ಸಮತಿಯು ವಿನಂತಿಸಿಕೊಂಡಿದೆ.
