
ಗುಂಪು ಸಂವಹನ, ವಸ್ತುನಿಷ್ಠ ರಚನಾತ್ಮಕ ಕ್ಲಿನಿಕಲ್ ಪರೀಕ್ಷೆ ಕುರಿತು ಕಾರ್ಯಾಗಾರ, ಸಂಶೋಧನಾ ಪ್ರಬಂಧ ಮತ್ತು ಪೋಸ್ಟರ್ ಸ್ಪರ್ಧೆಗಳು ನಡೆಯಲಿದ್ದು, 130 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
2025 ವಾರ್ಷಿಕ ಕಾಲೇಜು ನಿಯತಕಾಲಿಕೆ ಮತ್ತು ಸಂಶೋಧನಾ ಬುಲೆಟಿನ್ 2025ರ ಬಿಡುಗಡೆ ಮತ್ತು ಆಸ್ಪತ್ರೆ ಮಾಹಿತಿ ನಿರ್ವಹಣಾ ವ್ಯವಸ್ಥೆಯ ಉದ್ಘಾಟನೆಯೂ ನಡೆಯಲಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಂಜೆ 4:30ರಿಂದ 9ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 4:30 ರಿಂದ ರಾತ್ರಿ 9:00 ಕಂಕನಾಡಿಯ ಫಾದರ್ ಮುಲ್ಲರ್ ಮೈದಾನದಲ್ಲಿ ನಡೆಯಲಿದೆ.
ಈ ಉತ್ಸವವನ್ನು ದುಬೈನ ಉದ್ಯಮಿ ಮೈಕೆಲ್ ಡಿ ಸೋಜ ಉದ್ಘಾಟಿಸುವರು. ಭರತನಾಟ್ಯ ಕಲಾವಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ರೆಮೋನಾ ಎವೆಟ್ ಪೆರೇರಾ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೂಬೆನ್ ಜೇಸನ್ ಮಚಾದೊ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಫಾದರ್ ಮುಲ್ಲರ್ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ನ.15ರಂದು ಹೊರರೋಗಿಗಳು, ಒಳರೋಗಿಗಳು ಮತ್ತು ಎಫ್ ಎಂಸಿಐ ಸಿಬ್ಬಂಂದಿಯ ಮಕ್ಕಳಿಗಾಗಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಚಿತ್ರಕಲೆ ಮತ್ತು ವೇಷಭೂಷಣ ಸ್ಪರ್ಧೆ, ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವತಿಯಿಂದ ನ. 13ರಂದು ಬಜಾಲ್ ನ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ ಎಂದು ಫಾ. ಫೌಸ್ಟಿನ್ ಲ್ಯೂಕಸ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಔಷಧೀಯ ವಿಭಾಗದ ಆಡಳಿತಾಧಿಕಾರಿ ರೆವರೆಂಡ್ ಫಾದರ್ ನೆಲ್ಸನ್ ಧೀರಜ್ ಪೈಸ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ಮೈಕೆಲ್ ಸಾಂತುಮೇಯರ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ರೆವರೆಂಡ್ ಫಾದರ್ ವಿಲಿಯಂ ಡಿಸೋಜ , ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಆಂಟನಿ ಡಿ ಸೋಜ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವುಡ, ಹೆಚ್ಚುವರಿ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ, ಎನ್‌ಎಬಿಎಚ್ ಸಂಯೋಜಕ ಡಾ. ಪ್ರಥ್ವಿ ಶೆಟ್ಟಿ, ಮುಖ್ಯ ಗುಣಮಟ್ಟ ವ್ಯವಸ್ಥಾಪಕ ಡಾ. ಹೆಲೆನ್ ಗಣಲಲಂಜಿಯಂ, ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಶೆಟ್ಟಿ, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಮುಖ್ಯಸ್ಥೆ ವಿಲ್ಮಾ, ನರ್ಸಿಂಗ್ ಫ್ಯಾಕಲ್ಟಿ ಆಫ್ ನರ್ಸಿಂಗ್‌ನ ಪ್ರಿಯಾ ಎಸ್ ಪೆರೇರಾ , ಜೋಸ್ಮಿತಾ ಡಿ ಸೋಜ , ಡಾ. ಕೆಲ್ವಿನ್ ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
